ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಚೀನಾದಲ್ಲಿ 12 ವರ್ಷದ ಬಾಲಕನೊಬ್ಬ ತನ್ನ ತಂದೆಯ ಕಾರನ್ನು ಕದ್ದು ತನ್ನ ತಂಗಿಯೊಂದಿಗೆ 200 ಕಿಲೋಮೀಟರ್ ಜಾಲಿ ರೈಡ್‌ ಹೋಗಿದ್ದಾನೆ ಎಂದು ಚೀನಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹುಝೌವ್ ಪ್ರದೇಶದ ಬಾಲಕನೊಬ್ಬ, ಕಳೆದ ಸೋಮವಾರದಂದು ಅವರ ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ತಮ್ಮ ತಂದೆಯ ಎಸ್‌ಯುವಿ ಕೀ ಕದ್ದು, ತನ್ನ ಕಿರಿಯ ಸಹೋದರಿಯೊಂದಿಗೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಕಾರಿನಲ್ಲಿ ಹೊರಟಿದ್ದಾನೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಮಕ್ಕಳ ತಂದೆ ಅದೇ ದಿನ ಮಧ್ಯಾಹ್ನ 12 ಗಂಟೆಗೆ ಮನೆಗೆ ಮರಳಿದ್ದು, ಕಾರು ಮತ್ತು ಮಕ್ಕಳು ಕಾಣೆಯಾಗಿರುವುದು ಗೊತ್ತಾಗಿದೆ. ಗಾಬರಿಗೊಂಡ ಪೋಷಕರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ ಎಂದು ಮಾದ್ಯಮ ವರದಿ ಮಾಡಿದೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಇದಾದ ಬಳಿಕ ಮಕ್ಕಳು ಹೊರಟಿದ್ದ SUV ನೆರೆಯ ಜಿಯಾಂಗ್ಸು ಪ್ರಾಂತ್ಯದ ಹೆದ್ದಾರಿಯಲ್ಲಿ 200 ಕಿ.ಮೀ ದೂರದಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಚೀನಾದ ವೀಡಿಯೋ-ಶೇರಿಂಗ್ ಪ್ಲಾಟ್‌ಫಾರ್ಮ್ ಆದ ಝೊಂಗ್‌ಬಾವೊ ಪೋಸ್ಟ್ ಮಾಡಿದೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಏಕೆಂದರೆ ಎಸ್‌ಯುವಿ ಅಡ್ಡಾದಿಡ್ಡಿ ಓಡಿಸುತ್ತಾ ಬಲದಿಂದ ಎಡಕ್ಕೆ ತಿರುವು ಮಾಡುವಾಗ ಹಿಂದಿನ ವಾಹನವು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದೆ. ಈ ದೃಷ್ಯಗಳನ್ನು ಸಿಸಿಟಿವಿ ಸೆರೆಹಿಡಿದಿದೆ. ಬಳಿಕ ಅಲ್ಲಿನ ಪೊಲೀಸರು ಮಕ್ಕಳನ್ನು ಹಿಡಿಯಲು ಬಂದಾಗ, ಭಯಬಿದ್ದು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಅಲ್ಲಿನ ಶಾಲೆಯೊಂದರ ಪಕ್ಕದಲ್ಲಿ ಕಾರ್ ಪಾರ್ಕ್‌ ಮಾಡಿದ್ದಾರೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ಮಕ್ಕಳನ್ನು ವಿಚಾರಣೆ ನಡೆಸಲಾಗಿದೆ. ಪೊಲೀಸ್ ಅಧಿಕಾರಿ ಹುಡುಗನ ವಯಸ್ಸನ್ನು ಕೇಳಿದ್ದು ಬಾಲಕ 2009 ರಲ್ಲಿ ಹುಟ್ಟಿದ್ದೇನೆ, ಈಗ ನನಗೆ 12 ವರ್ಷ ಎಂದು ಉತ್ತರಿಸುತ್ತಿದ್ದಂತೆ ಪೊಲೀಸರು ಸುಸ್ತಾಗಿದ್ದಾರೆ. ಈ ವಯಸ್ಸಿನಲ್ಲೇ ಅಷ್ಟು ದೊಡ್ಡ ಎಸ್‌ಯುವಿಯನ್ನು ಸುಮಾರು 200 ಕಿಲೋಮೀಟರ್ ಓಡಿಸಿರುವುದು ಎಲ್ಲರನ್ನು ದಿಗ್ಬ್ರಮೆಗೊಳಿಸಿದೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ನೀವು ಕೀಯನ್ನು ಕದ್ದಿದ್ದೀರಾ ಅಥವಾ ನಿಮ್ಮ ತಂದೆ ನಿಮಗೆ ಕೊಟ್ಟಿದ್ದಾರಾ? ಎಂದು ಕೇಳಿದಾಗ ನನ್ನ ತಂಗಿ ಅದನ್ನು ತೆಗೆದುಕೊಂಡು ಬಂದಳು. ಬಳಿಕ ನಾನು ಕೀ ಪಡೆದು ಕಾರನ್ನು ಹೊರ ತಂದೆ ಎಂದು ಹೇಳಿದ್ದಾನೆ. ಆದರೆ ಈ ವಯಸ್ಸಿಗೆ ಕಾರನ್ನು ಹೇಗೆ ಕಲಿತೆ ಎಂದಾಗ ಬಾಲಕ ನೀಡಿದ ಉತ್ತರಕ್ಕೆ ಎಂಥವರು ಹುಬ್ಬೇರಿಸುವುದು ಖಚಿತ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ನನ್ನ ತಂದೆ ಡ್ರೈವಿಂಗ್ ಮಾಡುವಾಗ ನಾನು ಗಮನಿಸಿದ್ದೇನೆ ಮತ್ತು ಡ್ರೈವಿಂಗ್ ಸಿಮ್ಯುಲೇಶನ್ ಆಟವನ್ನು ಆಡಿದ್ದೇನೆ. ಹಾಗಾಗಿಯೇ ನಿಜವಾದ ಕಾರನ್ನು ಓಡಿಸುವ ಹುಚ್ಚು ಹೆಚ್ಚಾಯಿತು ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಕಾಣೆಯಾದ ಕಾರಿನ್ನು ತನ್ನ ಮಗ, ಮಗಳು ಕೊಂಡೊಯ್ದಿದ್ದಾರೆ ಎಂದು ತಿಳಿದಾಗ ತಂದೆ ಆಘಾತಕ್ಕೊಳಗಾಗಿದ್ದಾರೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಸದ್ಯ ಈ ಘಟನೆಯು ಚೀನಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ವ್ಯಾಪಕವಾಗಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. "12 ವರ್ಷದ ಹುಡುಗನಿಂದ ಗಂಟೆಗೆ 120 ಕಿ.ಮೀ ವೇಗವೇ? ಆ ಬಾಲಕನಿಗೆ ಹುಚ್ಚ! ಪೋಷಕರು ಅವನನ್ನು ವಿಮಾನ ಹಾರಿಸಲು ಕಳುಹಿಸಬಹುದು ಎಂಬೆಲ್ಲಾ ಕಮೆಂಟ್‌ಗಳು ಬರುತ್ತಿವೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಪ್ಯಾರಾಚ್ಯೂಟ್ ಬಳಸಿ ಜೀವ ಉಳಿಸಿಕೊಂಡ ಪೈಲಟ್

ಬೆಲ್ಜಿಯನ್‌ನ ಪೈಲಟ್ ಒಬ್ಬರು ಇತ್ತೀಚೆಗೆ ವಿಮಾನ ಅಪಘಾತದಿಂದ ಬದುಕುಳಿದ್ದಾರೆ, ಟೂ ಸೀಟರ್‌ನ ಸಣ್ಣ ವಿಮಾನದಲ್ಲಿ ಹಾರಾಟ ನಡೆಸುವ ವೇಳೆ ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿ ಎದುರಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ವಿಮಾನ ಸಮೇತ ಇಲ್ಲಿನ ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್ ಎಂಬ ರಸ್ತೆಯಲ್ಲಿ ಲ್ಯಾಂಡ್ ಆಗಿದ್ದಾರೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಈ ಅಪಘಾತದ ದೃಷ್ಯಗಳನ್ನು ವೈರಲ್ ಹಾಗ್ ಚಿತ್ರೀಕರಿಸಿದೆ. ವಿಡಿಯೋದಲ್ಲಿ ವಿಮಾನದ ಎಂಜಿನ್ ಆಫ್‌ ಆಗಿ ನೇರವಾಗಿ ಭೂಮಿಯ ಕಡೆಗೆ ಬರುವುದನ್ನು ಕಾಣಬಹುದು. ಪ್ಯಾರಾಚ್ಯೂಟ್‌ನ ಅಡಿಯಲ್ಲಿ ಸಣ್ಣ ವಿಮಾನವು ನೇತಾಡುತ್ತಾ ಗಾಳಿಯಲ್ಲಿ ಅಕ್ಕಪಕ್ಕಕ್ಕೆ ತೂಗಾಡುತ್ತಿದೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ವಿಮಾನವು ಮೊದಲಿಗೆ ನಿಧಾನವಾಗಿ ಭೂಮಿಯತ್ತ ಬರುತ್ತಿರುವಂತೆ ಕಂಡುಬಂದರೂ, ನಂತರ ಅದು ನೆಲವನ್ನು ಸಮೀಪಿಸುತ್ತಿದ್ದಂತೆ ವೇಗದಿಂದ ಕೆಳಗಿಳಿಯುವುದು ಕಂಡುಬರುತ್ತದೆ. ವೀಡಿಯೊದ ಕೊನೆಯಲ್ಲಿ, ಬ್ರೂಗ್ಸ್‌ನ ಸಿಂಟ್-ಆಂಡ್ರೀಸ್‌ನಲ್ಲಿನ ರಸ್ತೆಯ ಬದಿಯಲ್ಲಿ ವಿಮಾನವು ಮೊದಲು ಪ್ರೊಪೆಲ್ಲರ್ ಅನ್ನು ಇಳಿಸಿದಾಗ ಜೋರಾಗಿ ಕ್ರ್ಯಾಶ್ ಆಗಿರುವ ಶಬ್ದ ಕೇಳುತ್ತದೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ವಿಚಿತ್ರವೇನೆಂದರೆ ಆಕಾಶಕ್ಕೆ ಹಾರುವಾಗ ಮೇಲ್ಮುಕವಾಗಿ ಹೇಗೆ ಹಾರುತ್ತದೆಯೋ ಇಳಿಯುವಾಗ ಕೂಡ ಇಳಿಮುಕವಾಗಿ ಬಂದು ತನ್ನ ಮೂಗನ್ನು ನೆಲಕ್ಕೆ ಡಿಕ್ಕಿ ಹೊಡೆದಿದೆ. ಎರಡು ಆಸನಗಳ ಈ ವಿಮಾನವು ಆ ಪ್ರದೇಶದಲ್ಲಿನ ರಸ್ತೆಗಳನ್ನು ಸೂಚಿಸುವ ಬೋರ್ಡ್ ಮತ್ತು ಬೇಲಿಗೆ ಹಾನಿಯನ್ನುಂಟುಮಾಡಿದೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಪೈಲಟ್‌ ಲ್ಯಾಂಡ್‌ ಆದ ಬಳಿಕ ಸಣ್ಣ ಪುಟ್ಟ ಗಾಯಗಳೊಂದಿಗೆ ಹೊರಬಂದಿದ್ದಾರೆ. ಸದ್ಯ ಪೈಲೆಟ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಬ್ರೂಗ್ಸ್ ಪೊಲೀಸರು ತಿಳಿಸಿದ್ದಾರೆ. ಪೈಲಟ್ ಅನುಭವಿ ಫ್ಲೈಯರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಯಾರಾಚ್ಯೂಟ್ ಉಡಾವಣೆ ಮಾಡುವ ವಿಮಾನದ ಬ್ಯಾಲಿಸ್ಟಿಕ್ ರಿಕವರಿ ಸಿಸ್ಟಮ್ (ಬಿಆರ್‌ಎಸ್) ನಿಂದ ಪೈಲೆಟ್ ಯಾವುದೇ ಹೆಚ್ಚಿನ ಗಾಯಗಳಾಗದೇ ಜೀವಂತ ಹೊರಬಂದಿದ್ದಾರೆ.

ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ರೈಡ್ ಹೊರಟ 12 ವರ್ಷದ ಬಾಲಕ

ಇಲ್ಲದಿದ್ದರೇ ವಿಮಾನ ಅಪ್ಪಳಿಸುವ ವೇಗಕ್ಕೆ ಸ್ಪೋಟವಾಗುವ ಸಾಧ್ಯತೆಗಳೇ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ವಿಮಾನಯಾನ ಅಧಿಕಾರಿಗಳು ಪತನದ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿನ ವಿಮಾನವು DynAero MCRO1 ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

Most Read Articles

Kannada
English summary
Boy in China aged 12 steals fathers car and drives with sister to adjacent province because they wer
Story first published: Saturday, July 23, 2022, 13:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X