ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಯೂಟ್ಯೂಬ್'ನಲ್ಲಿ ಆಫ್ ರೋಡ್ ಘಟನೆಗಳಿಗೆ ಸಂಬಂಧಿಸಿದ ಹಲವಾರು ವೀಡಿಯೊಗಳಿವೆ. ಈ ವೀಡಿಯೊಗಳಲ್ಲಿರುವ ಸಾಹಸಗಳನ್ನು ವೃತ್ತಿಪರರು ನಿರ್ವಹಿಸಿರುತ್ತಾರೆ. ಆದರೆ ಈ ವೀಡಿಯೊಗಳನ್ನು ನೋಡುವವರು ತಾವೂ ಏಕೆ ಈ ರೀತಿ ಮಾಡಬಾರದು ಎಂಬ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಯೂಟ್ಯೂಬ್ ವೀಡಿಯೊಗಳಿಂದ ಪ್ರೇರಿತನಾದ ಬಾಲಕನೊಬ್ಬ ಮಹೀಂದ್ರಾ ಸ್ಕಾರ್ಪಿಯೋ ಕಾರ್ ಅನ್ನು ಜಂಪ್ ಮಾಡಿಸಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ಸ್ಕಾರ್ಪಿಯೋ ಕಾರ್ ಅನ್ನು ಜಂಪ್ ಮಾಡಿಸಲು ಮುಂದಾದ ಬಾಲಕನಿಗೆ ಅದನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಸ್ಕಾರ್ಪಿಯೋ ಕಾರು ಜಂಪ್ ಆಗುವುದರೊಂದಿಗೆ ಈ ವೀಡಿಯೊ ಶುರುವಾಗುತ್ತದೆ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಮುಂದೆ ಈ ರೀತಿ ಆಗಬಹುದು ಎಂಬುದನ್ನು ಅಲ್ಲಿದ್ದವರು ನಿರೀಕ್ಷಿಸಿರಲಿಲ್ಲವೆನಿಸುತ್ತದೆ. ಸ್ಕಾರ್ಪಿಯೋ ಮುಂದಕ್ಕೆ ಜಂಪ್ ಆದ ನಂತರ ಸ್ಥಳಾವಕಾಶವಿಲ್ಲದ ಕಾರಣ ಚಾಲಕನ ಸೀಟಿನಲ್ಲಿದ್ದ ಬಾಲಕನಿಗೆ ಈ ಕಾರ್ ಅನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಸ್ಕಾರ್ಪಿಯೋ ರಸ್ತೆಯ ಮತ್ತೊಂದು ಬದಿಗೆ ಹೋಗಿ ಅಲ್ಲಿದ್ದ ಕೆರೆಯೊಳಗೆ ಬಿದ್ದಿದೆ. ಸ್ಕಾರ್ಪಿಯೋ ಅಲ್ಲಿ ಸಿಲುಕಿಕೊಂಡಿದ್ದು ಅದನ್ನು ಹೊರ ತರಲು ಬಹುಶಃ ಕ್ರೇನ್ ತರಬೇಕಾಗುತ್ತದೆ. ಈ ಕಾರು ಚಾಲನೆ ಮಾಡಿದ ಬಾಲಕನ ವಯಸ್ಸು ತಿಳಿದು ಬಂದಿಲ್ಲ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಆದರೆ ವೀಡಿಯೊದಲ್ಲಿ ಕಾಣುವಂತೆ ಆತ ಚಿಕ್ಕ ಮಗುವಿನಂತೆ ಕಾಣುತ್ತಾನೆ. ಈ ಘಟನೆ ಯಾವುದೋ ಹಳ್ಳಿಯಂತೆ ನಡೆದಿರುವಂತೆ ಕಾಣುತ್ತದೆ. ಈ ಸ್ಕಾರ್ಪಿಯೋ ಬಾಲಕನ ಕುಟುಂಬದವರಿಗೆ ಸೇರಿರುವ ಸಾಧ್ಯತೆಗಳಿವೆ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಪೋಷಕರು ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ಚಾಲನೆ ಮಾಡಲು ನೀಡುತ್ತಿರುವುದರಿಂದ ಹಲವು ದುರಂತಗಳು ಸಂಭವಿಸುತ್ತಿವೆ. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಭಾರತದಲ್ಲಿ ದೊಡ್ಡ ಅಪರಾಧವಾಗಿದೆ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

2019ರಲ್ಲಿ ಜಾರಿಗೆ ಬಂದ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಲ್ಲಿ ಅವರ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ಈ ಕಾಯ್ದೆಯ ಪ್ರಕಾರ ವಾಹನ ಚಾಲನೆ ಮಾಡುವಾಗ ಸಿಕ್ಕಿ ಬೀಳುವ ಅಪ್ರಾಪ್ತ ವಯಸ್ಕರು ಲರ್ನರ್ ಲೈಸೆನ್ಸ್ ಪಡೆಯಲು 25 ವರ್ಷ ವಯಸ್ಸಿನವರೆಗೆ ಕಾಯಬೇಕಾಗುತ್ತದೆ. ಸೆಕ್ಷನ್ 199 ಎ ಹಾಗೂ 199 ಬಿ ಪ್ರಕಾರ ರೂ.25 ಸಾವಿರ ದಂಡ ಹಾಗೂ ಪೋಷಕರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ವಾಹನಗಳನ್ನು ಜಂಪ್ ಮಾಡಿಸುವುದರಿಂದ ಅವುಗಳಲ್ಲಿರುವ ಸಸ್ಪೆಂಷನ್ ಸೆಟಪ್ ತೀವ್ರವಾಗಿ ಹಾನಿಗೊಳಗಾಗುತ್ತದೆ. ಇದರ ಜೊತೆಗೆ ಇನ್ನಿತರ ಬಿಡಿಭಾಗಗಳಿಗೂ ಸಹಹಾನಿಯಾಗುತ್ತದೆ.

ಸ್ಕಾರ್ಪಿಯೋ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿ ಅಪಾಯಕ್ಕೆ ಸಿಲುಕಿದ ಬಾಲಕ

ವೃತ್ತಿಪರರು ಮಾಡುವ ಸ್ಟಂಟ್'ಗಳಲ್ಲಿ ಬಳಸಲಾಗುವ ವಾಹನಗಳಲ್ಲಿ ಟಾಪ್ ಎಂಡ್ ಸಸ್ಪೆಂಷನ್ ಸೆಟಪ್ ಅಳವಡಿಸಲಾಗಿರುತ್ತದೆ. ಈ ರೀತಿಯ ಸಸ್ಪೆಂಷನ್'ಗಳನ್ನು ಸಾಮಾನ್ಯ ಕಾರುಗಳಲ್ಲಿ ಅಳವಡಿಸಿರುವುದಿಲ್ಲವೆಂಬುದನ್ನು ನೆನಪಿನಲ್ಲಿಡಬೇಕು.

Most Read Articles

Kannada
English summary
Boy tries to perform stunt with Mahindra Scorpio falls into lake. Read in Kannada.
Story first published: Thursday, June 10, 2021, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X