ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ದೇಶದ ಎರಡನೇ ಅತಿ ದೊಡ್ಡ ಪೆಟ್ರೋಲಿಯಂ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲ ಸೌಕರ್ಯವನ್ನು ಸ್ಥಾಪಿಸಲು ತನ್ನ ಪೆಟ್ರೋಲ್ ಬಂಕ್ ಗಳನ್ನು ಬಳಸಲಿದೆ. ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವುದಕ್ಕಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಈ ಬಗ್ಗೆ ಬಿಪಿಸಿಎಲ್ ಅಧ್ಯಕ್ಷರಾದ ಅರುಣ್ ಕುಮಾರ್ ಸಿಂಗ್ ರವರು ಮಾಹಿತಿ ನೀಡಿದ್ದಾರೆ. ಸಾಂಪ್ರದಾಯಿಕ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮಾಡಲಿರುವ ಈ ಹೂಡಿಕೆಯು ಬಿಪಿಸಿಎಲ್‌ಗೆ ನೆರವಾಗುತ್ತದೆ ಎಂದು ಅವರು ಹೇಳಿದರು. ಬಿಪಿಸಿಎಲ್ 1000 ಮೆಗಾವ್ಯಾಟ್ ಇವಿ ಚಾರ್ಜಿಂಗ್ ನೆಟ್ ವರ್ಕ್ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ಬಿಪಿಸಿಎಲ್ ಬಯೋ ಫ್ಯೂಯಲ್ ಹಾಗೂ ಹೈಡ್ರೋಜನ್ ಮೇಲೆಯೂ ಹೂಡಿಕೆ ಮಾಡುತ್ತಿದೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಬಿಪಿಸಿಎಲ್ ದೇಶದಾದ್ಯಂತ 19,000ಕ್ಕೂ ಹೆಚ್ಚು ರಿಟೇಲ್ ಮಾರಾಟ ಮಳಿಗೆಗಳನ್ನು ಹೊಂದಿದೆ. ಈ ರಿಟೇಲ್ ಮಳಿಗೆಗಳಲ್ಲಿ ಭವಿಷ್ಯದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ, ಫ್ಲೆಕ್ಸ್ ಇಂಧನ ಹಾಗೂ ಹೈಡ್ರೋಜನ್ ಗಳನ್ನು ನೀಡುವುದರ ಜೊತೆಗೆ ಸುಮಾರು 7,000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಬಿಪಿಸಿಎಲ್ ಮುಂದಿನ ವರ್ಷಗಳಲ್ಲಿ ಸಮಗ್ರ ಹೂಡಿಕೆ ಯೋಜನೆಗಳನ್ನು ಮಾಡಲಿದೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಬಿಪಿಸಿಎಲ್ ಕಂಪನಿಯು ಗ್ರೂಪ್ ಲೆವೆಲ್ ನಲ್ಲಿ ರೂ. 1 ಲಕ್ಷ ಕೋಟಿಗಳಷ್ಟು ಹೂಡಿಕೆ ಮಾಡಲಿದೆ. ಇದು ಮುಖ್ಯವಾಗಿ ಪೆಟ್ರೋಕೆಮಿಕಲ್ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಸಂಸ್ಕರಣಾ ಸಾಮರ್ಥ್ಯವನ್ನು ಸುಧಾರಿಸಲು ರೂ. 30,000 ಕೋಟಿ, ಗ್ಯಾಸ್ ಪೂರೈಕೆಗಾಗಿ ರೂ. 20,000 ಕೋಟಿ, ಗ್ಯಾಸ್ ಪರಿಶೋಧನೆ ಹಾಗೂ ಉತ್ಪಾದನೆಗಾಗಿ ರೂ. 18,000 ಕೋಟಿ ಮತ್ತು ಮಾರ್ಕೆಟಿಂಗ್ ಮೂಲ ಸೌಕರ್ಯಕ್ಕಾಗಿ ರೂ. 18,000 ಕೋಟಿ ವೆಚ್ಚ ಮಾಡುವ ಯೋಜನೆಗಳನ್ನು ಒಳಗೊಂಡಿದೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಬಿಪಿಸಿಎಲ್ ಭಾರತದಲ್ಲಿ ಇವಿ ಅಭಿವೃದ್ಧಿಯ ಮೇಲೆ ಕಣ್ಣಿಟ್ಟಿದ್ದು, ದೇಶದಲ್ಲಿ ದ್ವಿಚಕ್ರ ವಾಹನಗಳು ಹಾಗೂ ತ್ರಿಚಕ್ರ ವಾಹನಗಳು ಎಲೆಕ್ಟ್ರಿಕ್'ಗೆ ಬದಲಾಗುವುದನ್ನು ನಿರೀಕ್ಷಿಸುತ್ತಿದೆ ಎಂದು ಬಿಪಿಸಿಎಲ್ ಅಧ್ಯಕ್ಷರು ಹೇಳಿದರು. ಇದು ಹೊಸ ವ್ಯಾಪಾರ ಅವಕಾಶವಾಗಿದ್ದು, ಆಟೋ ಇಂಧನಗಳ ಸ್ಥಳಾಂತರದ ಅಪಾಯವೂ ಇದೆ ಎಂದು ಅವರು ಹೇಳಿದರು.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಬಿಪಿಸಿಎಲ್ ಸದ್ಯಕ್ಕೆ ದೇಶದ ಪ್ರಮುಖ ನಗರಗಳ 44 ಪೆಟ್ರೋಲ್ ಬಂಕ್ ಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆಯನ್ನು 1,000 ಕ್ಕೆ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಬಿಪಿಸಿಎಲ್ ಕಂಪನಿಯು ಕೊಚ್ಚಿ ಹಾಗೂ ಲಕ್ನೋ ನಗರಗಳಲ್ಲಿ ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ಪ್ರಯೋಗಗಳನ್ನು ಆರಂಭಿಸಿದೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹೊಸ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶಾದ್ಯಂತ 69,000 ಪೆಟ್ರೋಲ್ ಬಂಕ್ ಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಈ ಯೋಜನೆಯಡಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸರ್ಕಾರಿ ಹಾಗೂ ಸರ್ಕಾರೇತರ ಪೆಟ್ರೋಲ್ ಬಂಕ್ ಗಳಲ್ಲಿ ತೆರೆಯಲಾಗುವುದು.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕಲು ಮುಖ್ಯ ಕಾರಣವೆಂದರೆ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳು ಇಲ್ಲದೇ ಇರುವುದು. ಎಲೆಕ್ಟ್ರಿಕ್ ವಾಹನ ಖರೀದಿದಾರರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ವಾಹನಗಳನ್ನು ಚಾರ್ಜ್ ಮಾಡುವುದು.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಪ್ರಯಾಣದ ಸಮಯದಲ್ಲಿ ಚಾರ್ಜ್ ಖಾಲಿಯಾದರೆ, ಸಮೀಪದಲ್ಲಿ ಯಾವುದೇ ಚಾರ್ಜಿಂಗ್ ಕೇಂದ್ರಗಳು ಇಲ್ಲದೇ ಇದ್ದರೆ ಎಲೆಕ್ಟ್ರಿಕ್ ವಾಹನ ಸವಾರರು ಸಾಕಷ್ಟು ಪರದಾಡ ಬೇಕಾಗುತ್ತದೆ. ಪ್ರತಿ ಪೆಟ್ರೋಲ್ ಬಂಕ್ ನಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದರೆ, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಅನುಕೂಲವಾಗುತ್ತದೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಭಾರತ ಮೂಲದ ರಿಲಯನ್ಸ್ ಜಿಯೋ ಕಂಪನಿಯು ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗಾಗಿ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಬ್ಯಾಟರಿ ಸ್ಥಾವರವನ್ನು ನಿರ್ಮಿಸುವ ಯೋಜನೆಯ ಬಗ್ಗೆ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲು ಇನ್ನೂ ಹಲವು ಹೊಸ ಚಟುವಟಿಕೆಗಳನ್ನು ಆರಂಭಿಸಿದೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಅದರಂತೆ, ಕಂಪನಿಯು ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಈ ಉದ್ದೇಶಕ್ಕಾಗಿ ರಿಲಯನ್ಸ್ ಜಿಯೋ ಬ್ರಿಟಿಷ್ ಪೆಟ್ರೋಲಿಯಂ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಬ್ಲೂಸ್ಮಾರ್ಟ್ ಸಹ ಈ ಕಂಪನಿಗಳ ಜೊತೆಗೆ ಮೈತ್ರಿಕೂಟಕ್ಕೆ ಸೇರಿ ಕೊಂಡಿದೆ. ಈ ಮೂರು ಕಂಪನಿಗಳು ಒಟ್ಟಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿವೆ.

ಇವಿ ಚಾರ್ಜಿಂಗ್ ಕೇಂದ್ರಗಳಿಗಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಬಿಪಿಸಿಎಲ್

ಈ ಕಂಪನಿಗಳು ಜಂಟಿಯಾಗಿ ತೆರೆಯಲಿರುವ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು ಇನ್ನು ಕೆಲವು ವರ್ಷಗಳಲ್ಲಿ ಬಳಕೆಗೆ ಬರಲಿವೆ ಎಂದು ವರದಿಯಾಗಿದೆ. ಈ ಕಂಪನಿಗಳು ಮೂಲ ಸೌಕರ್ಯ ಯೋಜನೆ, ಅಭಿವೃದ್ಧಿ ಹಾಗೂ ಕಾರ್ಯಾಚರಣೆಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆಗಳಿವೆ. ವರದಿಗಳ ಪ್ರಕಾರ ಈ ಸಹ ಭಾಗಿತ್ವವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಹಂತದ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Bpcl to invest rs 1 lakh crore to develop ev charging infrastructure details
Story first published: Wednesday, September 29, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X