Brakes Fail Control Tips: ಕಾರಿನ ಬ್ರೇಕ್ ಫೇಲ್ ಆದ್ರೆ ಭಯಪಡುವ ಅಗತ್ಯವಿಲ್ಲ.. ಇಲ್ಲಿದೆ ಸಿಂಪಲ್ ಟಿಪ್ಸ್
ದೇಶದ ರಸ್ತೆಗಳಲ್ಲಿ ಕಾರು, ಸೇರಿದಂತೆ ಇತರೆ ವಾಹನಗಳ ಬ್ರೇಕ್ ಫೇಲ್‌ನಿಂದ ಆಗಾಗ ಅಪಘಾತದ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇಂತಹ ಘಟನೆಗಳಲ್ಲಿ ಅದೆಷ್ಟೋ ಮಂದಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಕೆಲವೊಮ್ಮೆ ತಮ್ಮ ಪ್ರಾಣವನ್ನು ಕಳೆದುಕೊಂಡು ಬಿಡುತ್ತಾರೆ. ವಾಹನದ ಬ್ರೇಕ್ ವೈಫಲ್ಯಕ್ಕೆ ತಾಂತ್ರಿಕ ಸೇರಿದಂತೆ ನಾನಾ ಕಾರಣಗಳಿರಬಹುದು.
ಅನೇಕ ಚಾಲಕರು, ಬ್ರೇಕ್ ಫೇಲ್ ಆದಾಗ ಭಯಪಡುವುದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಸಿಡೆಂಟ್ ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಡ್ರೈವರ್ ಗಳು ಸ್ವಲ್ಪ ತಲೆ ಉಪಯೋಗಿಸಿದರೆ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು. ಈ ಮೂಲಕ ಇತರ ಜೀವವನ್ನು ಉಳಿಸಬಹುದು. ಒಂದೊಮ್ಮೆ ವಾಹನದ ಬ್ರೇಕ್ ವೈಫಲ್ಯಗೊಂಡರೆ ಏನು ಮಾಡಬೇಕೆಂಬುದರ ಬಗ್ಗೆ ಸಿಂಪಲ್ ಟಿಪ್ಸ್ ಇಲ್ಲಿದ್ದು, ಅವುಗಳನ್ನು ಪಾಲಿಸುವ ಮೂಲಕ ಕೆಟ್ಟ ಗಳಿಗೆಯಿಂದ ಸುಲಭವಾಗಿ ಪಾರಾಗಬಹುದು.

ಮೊದಲಿಗೆ ನಿಮ್ಮ ವಾಹನದ ವೇಗವನ್ನು ಕಡಿಮೆಗೊಳಿಸಲು ಪ್ರಯತ್ನಿಸಿ. ಬ್ರೇಕ್ ಪೆಡಲ್ ಅನ್ನು ಬಲವಾಗಿ ಒತ್ತಿರಿ. ಇದನ್ನು ಹಲವು ಸಲ ಮಾಡುವುದರಿಂದ ಅದು ಮತ್ತೆ ಸರಿ ಹೋಗಬಹುದು. ಜೊತೆಗೆ ನೀವು ಟಾಪ್ ಗೇರ್‌ನಲ್ಲಿ ಓಡುತ್ತಿದ್ದರೆ, ನಿಧಾನವಾಗಿ ಬೇರೆ (ಮೊದಲ) ಗೇರ್‌ಗೆ ಬದಲಾಯಿಸಿ, ಒಂದೊಮ್ಮೆ 1 ಗೇರ್‌ನಲ್ಲಿ ವಾಹನ ಚಲಾಯಿಸುತ್ತಿದ್ದರೆ ಭಯದಿಂದ ಅದನ್ನು 5 ಗೇರ್‌ಗೆ ಹಾಕಬೇಡಿ.
ಹೆಚ್ಚಿನ ಸ್ವೀಡ್ ನಲ್ಲಿರುವ ವಾಹನವನ್ನು ನ್ಯೂಟ್ರಲ್ ಗೆ ತರಬೇಡಿ. ಇದು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೂ ರಿವರ್ಸ್ ಗೇರ್‌ಗೆ ಹಾಕಬೇಡಿ, ಹಿಂಬದಿಯಿಂದ ಬರುವ ವಾಹನಗಳು ಅಪಘಾತಕ್ಕೆ ತುತ್ತಾಗಬಹುದು. ಕೇವಲ ಕ್ಲಚ್ ಬಳಕೆ ಮಾಡಿ. ಆಕ್ಸಿಲರೇಟರ್ ಉಪಯೋಗಿಸಬೇಡಿ. ಬ್ರೇಕ್ ಫೇಲ್ ಆದಾಗ ಟ್ರಾಫಿಕ್ ನಲ್ಲಿದ್ದರೆ ಹೆಚ್ಚಿನ ಅಪಘಾತಗಳಾಗುವ ಸಾಧ್ಯತೆಯಿರುತ್ತದೆ. ಆಗ ಹಜಾರ್ಡ್ ಲೈಟ್ಸ್, ಇಂಡಿಕೇಟರ್, ಹೆಡ್‌ಲ್ಯಾಂಪ್ ಡಿಪ್ಪರ್, ಹಾರ್ನ್ ಬಳಕೆ ಮಾಡುವ ಮೂಲಕ ಇತರರಿಗೆ ಸಿಗ್ನಲ್ ನೀಡಬಹುದು.

ಕೆಲ ತಜ್ಞರ ಪ್ರಕಾರ, ಬ್ರೇಕ್ ಫೇಲ್‌ಗೊಂಡಾಗ ಏರ್ ಕಂಡೀಷನ್ ಬಳಕೆ ಮಾಡಿರಿ. ಇದು ಎಂಜಿನ್ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿ, ವಾಹನದ ವೇಗವನ್ನು ಇಳಿಸುತ್ತದೆ. ಜೊತೆಗೆ ರಸ್ತೆ ಬದಿಯ ಮರಳು ಅಥವಾ ಮಣ್ಣಿನ ಮೇಲೆ ನಿಮ್ಮ ವಾಹನ ಚಾಲನೆ ಮಾಡಿ. ಇದು ವೇಗವನ್ನು ನಿಯಂತ್ರಿಸುತ್ತದೆ. ಇದಿಷ್ಟೇ ಅಲ್ಲದೆ, ಜಲ್ಲಿಕಲ್ಲಿನ ಮೇಲೆ ಓಡಿಸುವ ಮೂಲಕವು ಸ್ವೀಡ್ ಕಂಟ್ರೋಲ್ ಮಾಡಬಹುದು.
ನಿಮ್ಮ ವಾಹನವನ್ನು ಟಾಪ್ ಗೇರ್‌ನಿಂದ ಮೊದಲ ಗೇರ್‌ಗೆ ತನ್ನಿ. ಆ ಬಳಿಕ, ಟಾಪ್ ಸ್ವೀಡ್ ಗಂಟೆಗೆ 40 ಕಿಮೀ ಆಗಿದ್ದರೆ, ವೇಗವನ್ನು ನಿಯಂತ್ರಿಸಲು ಹ್ಯಾಂಡ್‌ಬ್ರೇಕ್ ಬಳಕೆ ಮಾಡಿರಿ. ಹೆಚ್ಚಿನ ಸ್ವೀಡ್ ನಲ್ಲಿದ್ದಾಗ ಹ್ಯಾಂಡ್‌ಬ್ರೇಕ್ ಹಾಕಬೇಡಿರಿ. ಇದು ರೇರ್ ವೀಲ್ಸ್ ಅನ್ನು ಲಾಕ್ ಮಾಡುತ್ತದೆ. ಜೊತೆಗೆ ವಾಹನವನ್ನು ಪಲ್ಟಿಯಾಗುವಂತೆ ಮಾಡಬಹುದು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುವ ನೂತನ ಕಾರುಗಳು ಹತ್ತು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಬ್ರೇಕ್ ಫೇಲ್ ಆಗುವ ಅಪಾಯ ತುಂಬಾ ಕಮ್ಮಿ. ಆದರೂ ಹಳೆಯ ಕಾರುಗಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಮೇಲೆ ತಿಳಿಸಲಾಗದ ಕೆಲವೊಂದು ಉಪಯುಕ್ತ ಸಲಹೆ ಪಾಲಿಸುವ ಮೂಲಕ ದೊಡ್ಡ ಮಟ್ಟದ ಅಪಘಾತವನ್ನು ಸುಲಭವಾಗಿ ತಪ್ಪಿಸಬಹುದು. ಏನೇ ಆಗಲಿ ವಾಹನ ಚಾಲಾಯಿಸುವಾಗ ನಿಮ್ಮ ಜಾಗೃತೆಯಲ್ಲಿ ನೀವಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








