ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಭಾರತೀಯ ಆಟೋ ಉದ್ಯಮವು ಹಲವಾರು ಏಳುಬೀಳುಗಳೊಂದಿಗೆ ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದ್ದು, ಆಟೋ ಉದ್ಯಮದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಹಿಂದಿಕ್ಕಿರುವ ದೇಶಿಯ ಮಾರುಕಟ್ಟೆಯ ಇತಿಹಾಸವು ರೋಚಕವಾಗಿದೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

2021ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ವಾಹನ ಉದ್ಯಮವು ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಮಾರಾಟದ ವಿಷಯದಲ್ಲಿ ಜರ್ಮನಿಯನ್ನು ಸಹ ಮೀರಿಸಿದೆ. ಪ್ರಸ್ತುತ ಭಾರತದ ವಾಹನೋದ್ಯಮವು 100 ಶತಕೋಟಿ ಯುಎಸ್‌ಡಿಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ ಮತ್ತು ದೇಶದ ಒಟ್ಟು ರಫ್ತಿನಲ್ಲಿ ಶೇ. 8ರಷ್ಟು ಕೊಡುಗೆಯನ್ನು ನೀಡುತ್ತಿದೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಭಾರತ ವಾಹನ ಉದ್ಯಮವು ದೇಶದ ಜಿಡಿಪಿಯ ಶೇ. 2.3 ರಷ್ಟಿದ್ದು, ಭಾರತದಲ್ಲಿ ಕೇವಲ ಮಧ್ಯಮ ಕ್ರಮಾಂಕದ ಕಾರುಗಳು ಮಾತ್ರವಲ್ಲದೇ ಹಲವು ಐಷಾರಾಮಿ ಕಾರು ಉತ್ಪಾದನಾ ಕಂಪನಿಗಳು ದೇಶಿಯವಾಗಿ ಉತ್ಪಾದನೆ ಮತ್ತು ರಫ್ತು ಕೈಗೊಳ್ಳುತ್ತಿವೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1897ರಲ್ಲಿ ಮೊದಲ ಕಾರು ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿನ ಆಟೋಉತ್ಪಾದನಾ ವಲಯವು ಸುಮಾರು ಒಂದೂವರೆ ಶತಮಾನಗಳಷ್ಟು ರೋಚಕ ಇತಿಹಾಸ ಹೊಂದಿದ್ದು, 1897ರಲ್ಲಿ ಭಾರತೀಯ ರಸ್ತೆಗಳಿಗೆ ಮೊದಲ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ಕಾರು ಮಾದರಿಯ ನಿಖರ ಮಾಹಿತಿಯಿಲ್ಲವಾದರೂ ಆರಂಭಿಕ ಕಾರು ಮಾದರಿಗಳು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಿಂದಲೇ ಆಮದುಗೊಳ್ಳುತ್ತಿದ್ದವು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1930ರ ತನಕ ಭಾರತದಲ್ಲಿ ಒಂದೇ ಒಂದು ಕಾರು ಉತ್ಪಾದನಾ ಘಟಕವು ಕೂಡಾ ನಿರ್ಮಾಣಗೊಂಡಿರಲಿಲ್ಲ. ಆರಂಭದಲ್ಲಿ ಫಿಯೆಟ್ ಕ್ಲೈಸರ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಭಾರತಕ್ಕೆ ವಿದೇಶಿ ಮಾರುಕಟ್ಟೆಗಳಿಂದಲೇ ಸಂಪೂರ್ಣವಾಗಿ ಉತ್ಪಾದನೆಗೊಳಿಸಿದ ಕಾರು ಮಾದರಿಗಳನ್ನು ಆಮದುಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿದ್ದವು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1940ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕಾರು ಉತ್ಪಾದನೆಗೆ ಚಾಲನೆ ನೀಡಿದ ಕೀರ್ತಿ ಹಿಂದೂಸ್ತಾನ್ ಮೋಟಾರ್ಸ್ ಮತ್ತು ಪ್ರೀಮಿಯರ್ ಕಂಪನಿಗಳಿಗೆ ಸಲ್ಲುತ್ತದೆ. 1940ರಲ್ಲಿ ಈ ಎರಡು ಕಂಪನಿಗಳು ಪ್ರತ್ಯೇಕ ಉತ್ಪಾದನಾ ಘಟಕಗಳಲ್ಲಿ ಕಾರು ಉತ್ಪಾದನೆಗೆ ಚಾಲನೆ ನೀಡುವ ಮೂಲಕ ಕಾರು ಉತ್ಪಾದನೆಯಲ್ಲಿ ಮೊದಲ ಹೆಜ್ಜೆಯಿರಿಸಿದವು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು 1940ರಲ್ಲಿಯೇ ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದರೂ ಕೂಡಾ ಅದರ ಮೊದಲ ಕಾರು ಹೊರಬಂದಿದ್ದು 1942ರಲ್ಲಿ. ಆದರೆ ಹಿಂದೂಸ್ತಾನ್ ಕಂಪನಿಯು ಜೊತೆಯಲ್ಲಿಯೇ ಕಾರು ಉತ್ಪಾದನೆಗೆ ಚಾಲನೆ ನೀಡಿದ್ದ ಪ್ರೀಮಿಯರ್ ಕಂಪನಿಯು ಮೊದಲ ಕಾರು 1944ರಲ್ಲಿ ರಸ್ತೆಗಿಳಿಯಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಪ್ರೀಮಿಯರ್ ಮತ್ತು ಹಿಂದೂಸ್ತಾನ್ ಕಂಪನಿಗಳು ಆರಂಭಕ್ಕೂ ಮುನ್ನ ಭಾರತದಲ್ಲಿ ಮಾರಾಟ ಆರಂಭಿಸಿದ್ದ ಅಮೆರಿಕದ ಕಾರು ಉತ್ಪಾದನಾ ಕಂಪನಿಗಳಾದ ಕ್ಲೈಸರ್, ಡಾಡ್ಜ್ ಮತ್ತು ಫಿಯೆಟ್ ಕಂಪನಿಗಳು 1945ರ ವೇಳೆಗೆ ಭಾರತದಲ್ಲಿಯೇ ಉತ್ಪಾದನೆ ಆರಂಭಿಸಿದವು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1945ರಲ್ಲಿಯೇ ಮತ್ತೊಂದು ಬೃಹತ್ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿ ಕೂಡಾ ವಾಣಿಜ್ಯ ವಾಹನಗಳ ಉತ್ಪಾದನೆಯನ್ನು ಆರಂಭಿಸಿತು. ಇಬ್ಬರು ಸಹೋದರಿಂದ ಆರಂಭವಾದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ವಾಣಿಜ್ಯ ವಾಹನಗಳ ಜೊತೆ ಜೀಪ್ ಸಿಜೆ 3 ಯುಟಿಲಿಟಿ ವಾಹನದ ಉತ್ಪಾದನೆ ಆರಂಭಿಸಿದವು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1946ರ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನ ನಡುವೆಯೂ ಹಲವು ಹೊಸ ವಾಹನ ಉತ್ಪಾದನಾ ಕಂಪನಿಗಳು ವ್ಯಾಪಾರ ವಹಿವಾಟಿ ಆರಂಭಿಸಿದವು. ಅದೇ ವರ್ಷದಲ್ಲಿ ಟಾಟಾ ಗ್ರೂಪ್‌ನ ಮೊದಲ ಅಧ್ಯಕ್ಷರಾದ ಜೆ.ಆರ್.ಡಿ ಟಾಟಾ ಅವರು ಜಮ್ಶೆಡ್‌ಪುರದಲ್ಲಿ ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿಯನ್ನು (ಈಗಿನ ಟಾಟಾ ಮೋಟಾರ್ಸ್) ಕಂಪನಿಯನ್ನು ಸ್ಥಾಪಿಸಿದರು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1947ರಲ್ಲಿ ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಮತ್ತು ಖಾಸಗಿ ವಲಯವಾದ ಆಟೋಮೊಬೈಲ್ ಉದ್ಯಮಕ್ಕೆ ಬಿಡಿಭಾಗಗಳನ್ನು ಸರಬರಾಜು ಮಾಡಲು ಆಟೋಮೋಟಿವ್-ಘಟಕ ಉತ್ಪಾದನಾ ಉದ್ಯಮವನ್ನು ರಚಿಸಲು ಪ್ರಯತ್ನಗಳನ್ನ ಕೈಗೊಳ್ಳಲಾಯ್ತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಹಲವು ಪ್ರಯತ್ನಗಳ ನಂತರ 1953 ರಲ್ಲಿ ಆಮದು ಬದಲು ಭಾರತದಲ್ಲಿಯೇ ಉತ್ಪಾದನೆಗೆ ಕರೆ ನೀಡುವ ಮೂಲಕ ವಿದೇಶಿ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ನಿರ್ಮಿಸಲಾದ ಕಾರುಗಳನ್ನು ಭಾರತಕ್ಕೆ ಆಮದು ಮಾಡುವುದನ್ನು ನಿರ್ಬಂಧಿಸಲಾಯಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1960 ರಿಂದ 1980 ರವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಪ್ರಾಬಲ್ಯ ಹೊಂದಿತ್ತು, ಇದು ತನ್ನ ಅಂಬಾಸಿಡರ್ ಮಾದರಿಯಿಂದಾಗಿ ಹೆಚ್ಚಿನ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದಾಗ್ಯೂ 1950ರಿಂದ 1960ರವರೆಗೆ ಆಮದುಗಳ ಮೇಲೆ ವಿಧಿಸಲಾದ ವ್ಯಾಪಾರ ನಿರ್ಬಂಧಗಳಿಂದಾಗಿ ಆಟೋ ಉದ್ಯಮವು ನಿಧಾನಗತಿಯಲ್ಲಿ ಬೆಳೆಯಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಈ ದಮನಕಾರಿ ಹಂತದ ಸ್ವಲ್ಪ ಸಮಯದ ನಂತರ ಆಟೋ ಉದ್ಯಮಕ್ಕೆ ಮತ್ತೆ ಬೇಡಿಕೆ ಹೆಚ್ಚಾಯಿತು. ಈ ವೇಳೆ ಪ್ರಯಾಣಿಕರ ಕಾರುಗಳು ಮಾತ್ರವಲ್ಲದೆ ಟ್ರ್ಯಾಕ್ಟರ್ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣ ವಿವಿಧ ವಾಣಿಜ್ಯ ವಾಹನಗಳ ವಿಭಾಗವೂ ಗಮರ್ನಾಹವಾಗಿ ಬೆಳವಣಿಗೆ ಕಂಡಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1980ರ ದಶಕದಲ್ಲಿ ಪ್ರಯಾಣಿಕರ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಉತ್ತುಂಗದಲ್ಲಿದ್ದ ಹಿಂದೂಸ್ತಾನ್ ಮೋಟಾರ್ಸ್ ಮತ್ತು ಪ್ರೀಮಿಯರ್ ಎಂಬ ಎರಡು ಕಂಪನಿಗಳಿಗೂ ಹೊಸ ಪ್ರತಿಸ್ಪರ್ಧಿ ಮಾರುತಿ ಉದ್ಯೋಗ್ ಲಿಮಿಟೆಡ್ ತೀವ್ರ ಪೈಪೋಟಿ ಆರಂಭಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

1991ರಲ್ಲಿ ಘೋಷಣೆ ಮಾಡಲಾದ ಉದಾರೀಕರಣ ಖಾಸಗೀಕರಣ ಮತ್ತು ಜಾಗತೀಕರಣ ಪರಿಣಾಮ ಸ್ವಲ್ಪ ಸಮಯದ ನಂತರ ಕಟ್ಟುನಿಟ್ಟಾದ ವ್ಯಾಪಾರ ನೀತಿಗಳಿಂದಾಗಿ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕಿದ್ದ ಕಂಪನಿಗಳಿಗೆ ಹೊಸ ವ್ಯಾಪಾರ ನೀತಿಯು ವಿಫುಲ ಅವಕಾಶಗಳನ್ನು ಮಾಡಿಕೊಟ್ಟಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಉದಾರೀಕರಣದ ನಂತರ ಮಾರುತಿ ಮತ್ತು ಸುಜುಕಿ ನಡುವಿನ ಸಹಭಾಗಿತ್ವ ಯೋಜನೆಯೂ ಭಾರತೀಯ ಮತ್ತು ವಿದೇಶಿ ಕಂಪನಿಯ ನಡುವಿನ ಮೊದಲ ಜಂಟಿ ಆಟೋ ಉದ್ಯಮವಾಗಿ ಬೆಳವಣಿಗೆ ಕಂಡಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಇದೇ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಪ್ರಯಾಣಿಕರು ಕಾರುಗಳ ಉತ್ಪಾದನೆ ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆಗೆ ಪ್ರತ್ಯೇಕ ಉದ್ಯಮ ಕಾರ್ಯಚರಣೆ ಆರಂಭಿಸಿತು. ಆರಂಭದಲ್ಲಿ ಡ್ಲೈಮರ್ ಜೊತೆ ವಾಣಿಜ್ಯ ವಾಹನಗಳನ್ನು ಉತ್ಪಾದನೆ ಮಾಡುತ್ತಿದ್ದ ಟಾಟಾ ಕಂಪನಿಯು ತದನಂತರ ಸ್ವತಂತ್ರ ಕಾರ್ಯಾಚರಣೆ ಮೂಲಕ ಕಾರು ಉತ್ಪಾದನಾ ಘಟಕವನ್ನು ಆರಂಭಿಸಿತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಹೊಸ ಆರ್ಥಿಕ ಸುಧಾರಣೆಗಳ ಪರಿಣಾಮ ಪ್ರಮುಖ ವಿದೇಶಿ ಕಾರು ಕಂಪನಿಗಳಾದ ಫೋರ್ಡ್, ಹ್ಯುಂಡೈ, ಹೋಂಡಾ, ಮರ್ಸಿಡಿಸ್ ಬೆಂಝ್, ರೆನಾಲ್ಟ್, ನಿಸ್ಸಾನ್, ಟೊಯೊಟಾ, ಆಡಿ, ಬಿಎಂಡಬ್ಲ್ಯು, ವೊಲ್ವೊ, ಮಿಟ್ಸುಬಿಷಿ ಕಂಪನಿಗಳು ನಿಧಾನವಾಗಿ ತಮ್ಮ ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಪರಿಚಯಿಸಿ ತೊಡಗಿದವು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

2000 ರಿಂದ 2010 ರವರೆಗೆ ಬಹುತೇಕ ಎಲ್ಲಾ ಪ್ರಮುಖ ವಾಹನ ಕಂಪನಿಗಳು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಹೊಸ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಿದವು. 2000ರ ದಶಕದ ಆರಂಭದಲ್ಲಿ ಉತ್ಪಾದನಾ ಪ್ರಕ್ರಿಯೆಯು ಬಲವನ್ನು ಪಡೆದುಕೊಂಡಿಯಾದರೂ ಆ ಅವಧಿಯಲ್ಲಿ ಕಾರು ರಫ್ತು ಪ್ರಮಾಣ ಸಾಕಷ್ಟು ನಿಧಾನವಾಗಿತ್ತು.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಕಳೆದ ಒಂದು ದಶಕದಲ್ಲಿ ಆದ ಕೆಲವು ಬದಲಾವಣೆಗಳು ಮತ್ತು ಭಾರತದಲ್ಲಿಯೇ ವಾಹನ ಉತ್ಪಾದನೆಗಾಗಿ ರಚಿಸಲಾದ ಕೆಲವು ಹೊಸ ನೀತಿಗಳು ಇಂದು ಉತ್ಪಾದನೆಯ ಜೊತೆ ರಫ್ತು ಪ್ರಮಾಣವನ್ನು ಹೆಚ್ಚಳಕ್ಕೆ ಕಾರಣವಾಗಿದ್ದು, ಕಳೆದ ಐದು ವರ್ಷಗಳಲ್ಲಿನ ಸತತ ವಾಹನ ಉತ್ಪಾದನಾ ಪ್ರಾಬಲ್ಯವು ಜರ್ಮನಿಯನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ವಿಶ್ವಾದ್ಯಂತ ಸದ್ಯ ವಾಹನ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಅಮೆರಿಕ, ಮೂರನೇ ಸ್ಥಾನದಲ್ಲಿ ಜಪಾನ್ ಮತ್ತು ನಾಲ್ಕನೇ ಸ್ಥಾನದಲ್ಲಿ ಭಾರತ, ಐದನೇ ಸ್ಥಾನದಲ್ಲಿ ಜಪಾನ್, ಆರನೇ ಸ್ಥಾನದಲ್ಲಿ ಮೆಕ್ಸಿಕೊ ಸ್ಥಾನಪಡೆದುಕೊಂಡಿವೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ಸದ್ಯ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಉತ್ಪಾದನೆಯಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ ಮೋಟಾರ್ಸ್, ಎಂಜಿ ಮೋಟಾರ್, ಜೀಪ್, ಟೊಯೊಟಾ, ನಿಸ್ಸಾನ್ ಮತ್ತು ರೆನಾಲ್ಟ್, ಸ್ಕೋಡಾ, ಫೋಕ್ಸ್‌ವ್ಯಾಗನ್, ಇಸುಝು ಮಿಟ್ಸುಬಿಷಿ, ಸಿಟ್ರನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಹೀರೋ ಮೋಟೊಕಾರ್ಪ್, ಹೋಂಡಾ, ಬಜಾಜ್ ಆಟೋ, ಟಿವಿಎಸ್ ಮೋಟಾರ್, ಸುಜುಕಿ ಮೋಟಾರ್‌ಸೈಕಲ್, ಯಮಹಾ, ರಾಯಲ್ ಎನ್‌ಫೀಲ್ಡ್, ಪಿಯಾಜಿಯೊ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಜಗತ್ತಿನ ನಾಲ್ಕನೇ ಅತಿದೊಡ್ಡ ಭಾರತೀಯ ಆಟೋ ಉದ್ಯಮದ ರೋಚಕ ಇತಿಹಾಸವಿದು..

ವಾಣಿಜ್ಯ ವಾಹನಗಳ ವಿಭಾಗದಲ್ಲಿ ಟಾಟಾ ಮೋಟಾರ್ಸ್, ಮಹೀಂದ್ರಾ, ಅಶೋಕ್ ಲೇಲ್ಯಾಂಡ್, ಐರಿಷ್ ಮೋಟಾರ್ಸ್, ಹಿಂದೂಸ್ತಾನ್ ಮೋಟಾರ್ಸ್, ಭಾರತ್ ಬೆಂಝ್, ಫೋರ್ಸ್ ಮೋಟಾರ್ಸ್, ಏಷಿಯಾ ಮೋಟಾರ್ಸ್ ವರ್ಕ್ಸ್, ಎಸ್ಎಂಎಲ್ ಇಸುಝು ಲಿಮಿಟೆಡ್, ವೊಲ್ವೊ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

Most Read Articles

Kannada
English summary
Brief history of the indian automobile industry 1897 to 2022 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X