ಬ್ರಿಟಿಷ್ ಪ್ರಧಾನಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಸೈಕಲ್

ಇಂಗ್ಲೆಂಡಿನ ಪ್ರಧಾನಿ ಬೋರಿಸ್ ಜಾನ್ಸನ್ ಮೇಡ್-ಇನ್ ಇಂಡಿಯಾ ಹೀರೋ ಬೈಸಿಕಲ್ ಚಾಲನೆ ಮಾಡಿದ್ದಾರೆ. ಇತ್ತೀಚಿಗಷ್ಟೇ ಬೋರಿಸ್ ಜಾನ್ಸನ್ ರವರು ಹೊಸ ಜಿಬಿಪಿ 2-ಬಿಲಿಯನ್ ಸೈಕ್ಲಿಂಗ್ ಹಾಗೂ ವಾಕಿಂಗ್ ಡ್ರೈವ್ ಗಳಿಗೆ ಚಾಲನೆ ನೀಡಿದ್ದಾರೆ.

ಬ್ರಿಟಿಷ್ ಪ್ರಧಾನಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಸೈಕಲ್

ಸರ್ಕಾರದ ಯಾಂಟಿ ಒಬೆಸಿಟಿ ಅಂದರೆ ಸ್ಥೂಲಕಾಯ ವಿರೋಧಿ ಕಾರ್ಯತಂತ್ರದ ಭಾಗವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಸೈಕ್ಲಿಸ್ಟ್ ಉತ್ಸಾಹಿಯಾದ 56 ವರ್ಷದ ಬೋರಿಸ್ ಜಾನ್ಸನ್, ಹೀರೋ ವೈಕಿಂಗ್ ಪ್ರೊ ಬೈಕ್‌ ಅನ್ನು ಚಾಲನೆ ಮಾಡಿದ್ದಾರೆ.

ಬ್ರಿಟಿಷ್ ಪ್ರಧಾನಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಸೈಕಲ್

ಮಧ್ಯ ಇಂಗ್ಲೆಂಡ್‌ನ ನಾಟಿಂಗ್ ಹ್ಯಾಂನ ನಾಟಿಂಗ್ ಹ್ಯಾಂ ಹೆರಿಟೇಜ್ ಸೆಂಟರ್‌ನಲ್ಲಿ ಮಂಗಳವಾರ ಬೋರಿಸ್ ಜಾನ್ಸನ್ ಬೈಸಿಕಲ್ ಸವಾರಿ ಮಾಡಿದ್ದಾರೆ. ಇದರೊಂದಿಗೆ ಜಾನ್ಸನ್ ರವರು ಬೈಸಿಕಲ್ ತರಬೇತಿ ಯೋಜನೆಯನ್ನು ಸಹ ಪರಿಚಯಿಸಿದ್ದಾರೆ. ಜಾನ್ಸನ್ ರವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಬ್ರಿಟಿಷ್ ಪ್ರಧಾನಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಸೈಕಲ್

ಕರೋನಾ ವೈರಸ್ ಸೋಂಕಿಗೆ ತುತ್ತಾಗಿ ಗುಣಮುಖರಾದ ಬೋರಿಸ್ ಜಾನ್ಸನ್, ಜನರು ಸದೃಢರಾಗಿರಲು, ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ರೋಗ ಹರಡದಂತೆ ತಡೆಯಲು ಸೈಕ್ಲಿಂಗ್ ಮಾಡುವುದು ಒಳ್ಳೆಯದು. ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣವಾಗುವುದರ ಜೊತೆಗೆ ವಾಹನ ದಟ್ಟಣೆಯು ಸಹ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಬ್ರಿಟಿಷ್ ಪ್ರಧಾನಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಸೈಕಲ್

ಬೋರಿಸ್ ಜಾನ್ಸನ್ ರವರು ಚಾಲನೆ ಮಾಡುತ್ತಿರುವ ಹೀರೋ ವೈಕಿಂಗ್ ಪ್ರೊ ಬೈಕ್, ಭಾರತದ ಹೀರೋ ಮೋಟಾರ್ಸ್ ಕಂಪನಿಯ ಭಾಗವಾದ ಇನ್ಸಿಂಕ್ಸ್ ನ ಉತ್ಪನ್ನವಾಗಿದೆ. ಈ ಬೈಸಿಕಲ್ ಅನ್ನು ಮ್ಯಾಂಚೆಸ್ಟರ್‌ನಲ್ಲಿ ವಿನ್ಯಾಸಗೊಳಿಸಿ, ಭಾರತದಲ್ಲಿ ತಯಾರಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬ್ರಿಟಿಷ್ ಪ್ರಧಾನಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಸೈಕಲ್

ಹೀರೋ ಸೈಕಲ್ಸ್ ವೈಕಿಂಗ್, ರಿಡ್ಡಿಕ್ ಹಾಗೂ ರೀಡೆಲ್ ಗಳನ್ನು ಖರೀದಿಸಿ, ಅವುಗಳ ಸರಣಿಯನ್ನು ಇನ್‌ಸಿಂಕ್ಸ್ ಹೆಸರಿನಡಿಯಲ್ಲಿ ಮರುವಿನ್ಯಾಸಗೊಳಿಸಿದೆ. ಸದ್ಯಕ್ಕೆ 75 ಪ್ರೊ ಬೈಕ್‌ಗಳನ್ನು ಇನ್‌ಸಿಂಕ್ಸ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಬ್ರಿಟಿಷ್ ಪ್ರಧಾನಿಗೂ ಅಚ್ಚು ಮೆಚ್ಚು ಮೇಡ್ ಇನ್ ಇಂಡಿಯಾ ಸೈಕಲ್

ಈ ಬಗ್ಗೆ ಮಾತನಾಡಿರುವ ಹೀರೋ ಮೋಟಾರ್ಸ್ ಕಂಪನಿಯ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಪಂಕಜ್ ಎಂ. ಮುಂಜಾಲ್ ಇಂಗ್ಲೆಂಡಿನ ಪ್ರಧಾನಿ ಬೋರಿಸ್ ಜಾನ್ಸನ್ ನಮ್ಮ ಇನ್ಸಿಂಕ್ಸ್ ವೈಕಿಂಗ್ ಬೈಕ್ ಚಾಲನೆ ಮಾಡುತ್ತಿರುವುದು ನಮಗೆ ಖುಷಿ ತಂದಿದೆ. ಇದೊಂದು ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು.

Most Read Articles

Kannada
English summary
British PM rides made in India hero bicycle. Read in Kannada.
Story first published: Thursday, July 30, 2020, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X