ಕಾರಿನಲ್ಲಿ ಬಿಎಸ್‌ಎನ್‌ಎಲ್ ವೈ-ಫೈ ಸೇವೆ ಆರಂಭ
ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ಬಿತ್ತರಿಸುವಲ್ಲಿ ಹೆಸರುವಾಸಿಯಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇದೀಗ ಕಾರಿನಲ್ಲಿ ವೈ-ಫೈ ಸೇವೆ ಆರಂಭಿಸಿದೆ. ದೇಶದಲ್ಲೇ ಇದೇ ಮೊದಲ ಬಾರಿಯೆಂಬಂತೆ ಬಿಎಸ್‌ಎನ್‌ಎಲ್ ಇಂಧೋರ್ ವಿಭಾಗವು, ಕಾರಿನಲ್ಲಿ ವೈ-ಫೈ ತಂತ್ರಜ್ಞಾನವನ್ನು ಆಳವಡಿಸಿಕೊಂಡಿದೆ.
ಇನ್ನು ಮುಂದೆ ಗ್ರಾಹಕರು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ವೈ-ಫೈ ಬಳಕೆ ಮಾಡಬಹುದಾಗಿದೆ. ಪ್ರಸ್ತುತ ವೈ-ಫೈ ತಂತ್ರಜ್ಞಾನ ರು. 5000ದಿಂದ 6,000 ರು.ಗಳಷ್ಟು ದುಬಾರಿಯಾಗಿರುತ್ತದೆ. ಈಗಾಗಲೇ ವೈ-ಫೈ ಸಿದ್ಧಾಂತವನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಇಂಧೋರ್ ಘಟಕ ವ್ಯವಸ್ಥಾಪಕ ನಿರ್ದೇಶಕ ಜಿಸಿ ಪಾಂಡೆ ತಿಳಿಸಿದ್ದಾರೆ.
ಕಾರ್ಯ ನಿರ್ವಹಣೆ ಹೇಗೆ..?
ಕಾರಿಗೆ ಏರಿಯಲ್ ಆಳವಡಿಸಲಾಗಿದ್ದು, ಈ ಮೂಲಕ ವೈ-ಫೈ ಸಿಗ್ನಲ್ ಪಡೆಯಬಹುದಾಗಿದೆ. ಬಿಎಸ್‌ಎನ್‌ಎಲ್ ಪ್ರಕಾರ, ಇಂಟರ್‌ನೆಟ್ 3.5 ಎಂಬಿಪಿಎಸ್ ವೇಗತೆ ಹೊಂದಿರಲಿದ್ದು, ಸಿಡಿಎಂಎ ತಂತ್ರಜ್ಞಾನ ಮೂಲಕ ಕಾರ್ಯಾಚರಿಸಲಿದೆ.
ಪ್ರಸ್ತುತ ಮೊಡ್ಯುಲ್ ಜನಪ್ರಿಯಗೊಳ್ಳುತ್ತಿರುವಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಬಿಎಸ್‌ಎನ್‌ಎಲ್ ಹೊಂದಿದೆ.
ಇವನ್ನೂ ಓದಿ: 2 ಟನ್ ಭಾರತ ಪ್ರಪಂಚದ ಅತಿದೊಡ್ಡ ರೋಬೋಟ್
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ


Click it and Unblock the Notifications









