Budget 2024: ಎಲೆಕ್ಟ್ರಿಕ್ ವಾಹನ ವಲಯಕ್ಕೆ ಏನೆಲ್ಲಾ ನಿರೀಕ್ಷೆಗಳಿವೆ?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಖರೀದಿಸುವ ಸಲುವಾಗಿ ಕೇಂದ್ರ ಸರ್ಕಾರ ಸಬ್ಸಿಡಿ ನೀಡಿ ಸಾರ್ವಜನಿಕರನ್ನು ಪ್ರೋತ್ಸಾಹಿಸಿತ್ತಿದೆ. ಆದರೆ FAME-2 ಅವಧಿಯ ನಂತರ ಸರ್ಕಾರ ನೀಡುವ ಸಬ್ಸಿಡಿಗಳಲ್ಲಿ ತೀವ್ರ ಕಡಿತದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವನ್ನು ಕಳೆದುಕೊಂಡಿದೆ. ಇದು ಹೀಗೆ ಮುಂದುವರಿದರೆ ಕಾರ್ಬನ್ ಮುಕ್ತ ದೇಶವನ್ನಾಗಿಸುವ ಸರ್ಕಾರದ ಗುರಿ ತಲುಪುವುದು ಕಷ್ಟವಾಗಲಿದೆ. ಹಾಗಾಗಿ ಈಗ FAME-3 ಘೋಷಣೆ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮೂಲ ಸೌಕರ್ಯಗಳ ಬಗ್ಗೆ ಮುಂಬರುವ ಬಜೆಟ್‌ನಲ್ಲಿ ನಿರೀಕ್ಷೆಗಳು ಹೆಚ್ಚಾಗಿದ್ದು, ಯಾವೆಲ್ಲಾ ಅಂಶಗಳಿಗೆ ಆದ್ಯತೆಯಿದೆ ಎಂಬುದನ್ನು ಇಲ್ಲಿ ನೋಡೋಣ.

ಮುಂಬರುವ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಕೆಲವು ನಿರೀಕ್ಷೆಗಳೆಂದರೆ, ಬ್ಯಾಟರಿ ಘಟಕಗಳನ್ನು ಸ್ಥಳೀಕರಿಸಲು ಪ್ರೋತ್ಸಾಹಕಗಳು, ಆದ್ಯತೆಯ ಸಾಲ ಯೋಜನೆಯ ಅನುಷ್ಠಾನ, ಫೇಮ್ -3 ನೀತಿಯ ಘೋಷಣೆ, ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ನಿಧಿ ಹಂಚಿಕೆ, ಇವಿ ಚಾರ್ಜಿಂಗ್ ಸೇವೆಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವಂತಹ ಅಂಶಗಳ ಮೇಲೆ ಹೆಚ್ಚಾಗಿ ಗಮನಹರಿಸಬಹುದು ಎನ್ನಲಾಗಿದೆ.

budget-2024-prospects-for-the-electric-vehicle-sector

ಫೇಮ್ 2 ಅವಧಿಯ ನಂತರ (ಮಾರ್ಚ್ 31, 2024) ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ವಿಭಾಗಗಳಲ್ಲಿನ ಕುಸಿತವನ್ನು ಕೇಂದ್ರ ಸರ್ಕಾರ ಪರಿಹರಿಸುವ ಅಗತ್ಯವಿದೆ ಎಂದು ಎಲೆಕ್ಟ್ರಿಕ್ ವಾಹನಗಳು (EV) ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಕರನ್ನು ಪ್ರತಿನಿಧಿಸುವ ಸೊಸೈಟಿ ಆಫ್ ಮ್ಯಾನುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (SMEV) ಅಭಿಪ್ರಾಯಪಟ್ಟಿದೆ.

ಈ ವಿಷಯವಾಗಿ ಮಾತನಾಡಿದ SMEV ಅಧ್ಯಕ್ಷ ಆರ್.ಕೆ.ಮಿಶ್ರಾ, ಎಲೆಕ್ಟ್ರಿಕ್ ಟ್ಯಾಕ್ಸಿಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಹೆಚ್ಚಿಸಲು ನಿರ್ದಿಷ್ಟ ಕ್ರಮಗಳ ಅಗತ್ಯವಿದೆ. ಇವಿ ಚಾರ್ಜಿಂಗ್ ಮತ್ತು ವಿನಿಮಯ ಮೂಲಸೌಕರ್ಯದ ತ್ವರಿತ ವಿಸ್ತರಣೆಯನ್ನು ಉತ್ತೇಜಿಸಲು ಬ್ಯಾಟರಿ ಪ್ಯಾಕ್‌ಗಳ ಮೇಲಿನ ಜಿಎಸ್‌ಟಿ ಶೇಕಡಾ 18 ರಿಂದ 5ಕ್ಕೆ ಇಳಿಸಬೇಕಿದೆ. ಹಾಗೆಯೇ ಸಾರ್ವಜನಿಕ ಚಾರ್ಜಿಂಗ್‌ಗೆ ಅನ್ವಯವಾಗುವ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಿ ಜಿಎಸ್‌ಟಿ ಅಸಮಾನತೆಯನ್ನು ಸರಿಪಡಿಸುವುದು ಅತ್ಯಗತ್ಯ ಎಂದರು.

ಉದ್ಯಮದ ಪ್ರಮುಖರು ಏನು ಹೇಳುತ್ತಾರೆ?: ಎಲೆಕ್ಟ್ರಿಕ್ ಘಟಕಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವುದು ಮತ್ತು ಬ್ಯಾಟರಿ ತಂತ್ರಜ್ಞಾನದಲ್ಲಿ ಆರ್ &ಡಿ ಅನ್ನು ಪ್ರೋತ್ಸಾಹಿಸುವುದು ಸ್ಥಳೀಯ ಉತ್ಪಾದನೆಯನ್ನು ಮತ್ತಷ್ಟು ವೇಗಗೊಳಿಸುವುದರ ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಉದ್ಯಮದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಯುನೊ ಮಿಂಡಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರ್ಮಲ್ ಕೆ. ಮಿಂಡಾ ಮಾತನಾಡಿ, ನಾವಿನ್ಯತೆಯನ್ನು ಉತ್ತೇಜಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ತೆರಿಗೆ ಪ್ರಯೋಜನದ ರೂಪದಲ್ಲಿ R&D ಪ್ರೋತ್ಸಾಹಕಗಳನ್ನು ಮರುಪರಿಚಯಿಸಬೇಕು. ಘಟಕಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ತರ್ಕಬದ್ಧಗೊಳಿಸುವುದರಿಂದ ದೇಶೀಯ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಎಂದರು.

ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷ ಮತ್ತು CII ಉತ್ತರ ಪ್ರದೇಶದ ಉಪಾಧ್ಯಕ್ಷ ಸಂಜಯ್ಜೆ. ಕಪೂರ್ ಮಾತನಾಡಿ, ಹೊಸ EV ನೀತಿಯು ಈಗಾಗಲೇ ಪ್ರಮುಖ EV ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸಿದೆ. ಆದರೆ, ಘಟಕಗಳ ಮೇಲೆ GST ದರಗಳನ್ನು ತರ್ಕಬದ್ಧಗೊಳಿಸುವುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಉದ್ಯಮವು ಆ ದಿಕ್ಕಿನಲ್ಲಿ ಕೆಲವು ಅಭಿವೃದ್ಧಿಗಳನ್ನು ನಿರೀಕ್ಷಿಸುತ್ತಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, July 18, 2024, 16:25 [IST]
English summary
Budget 2024 prospects for the electric vehicle sector
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+