ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ದಿನ ನಿತ್ಯ ವಿಶ್ವದ ಯಾವುದೇ ಮೂಲೆಯಲ್ಲಿ ಪ್ರತಿ ನಿಮಿಷಕ್ಕೊಂದು ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ರಸ್ತೆ ಅಪಘಾತಗಳಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡರೆ ಇನ್ನು ಕೆಲವರು ಸಾವನ್ನಪ್ಪುತ್ತಾರೆ.

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಚಾಲಕರ ನಿರ್ಲಕ್ಷ್ಯವೇ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿವೆ. ಇತ್ತೀಚಿಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿತು. ಈ ರಸ್ತೆ ಅಪಘಾತ ಸಂಭವಿಸಿದ್ದು ಎರಡು ಅತ್ಯಂತ ದುಬಾರಿ ಕಾರುಗಳಾದ ಪೋರ್ಷೆ 911 ಹಾಗೂ ಬುಗಾಟ್ಟಿ ಚಿರೋನ್ ನಡುವೆ ಎಂಬುದೇ ವಿಶೇಷ. ಈ ದುರದೃಷ್ಟಕರ ಘಟನೆ ನಡೆದಿದ್ದು ಸ್ವಿಟ್ಜರ್‌ಲ್ಯಾಂಡ್‌ನ ಗೋಥಾರ್ಡ್ ಪಾಸ್ ಎಂಬ ಪ್ರದೇಶದಲ್ಲಿ. ಓವರ್ ಟೇಕ್ ಮಾಡುವ ವೇಳೆ ಈ ದುರಂತ ಸಂಭವಿಸಿದೆ.

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿಡಿಹೆಚ್ ಆಟೋಮೋಟಿವ್ಈ ಅಪಘಾತದ ವೀಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಅಪಘಾತದಲ್ಲಿ ಪೋರ್ಷೆ 911 ಹಾಗೂ ಬುಗಾಟ್ಟಿ ಚಿರೋನ್ ಎರಡೂ ಕಾರುಗಳಿಗೆ ತೀವ್ರವಾದ ಹಾನಿಯಾಗಿದೆ. ಪೋರ್ಷೆ 911 ಕಾರಿನ ಮುಂಭಾಗದ ವ್ಹೀಲ್ ಗಳು ವಿರೂಪಗೊಂಡಿವೆ. ಅಪಘಾತದ ನಂತರ ಈ ಕಾರನ್ನು ಕ್ಯಾರಿಯರ್ ಟ್ರಕ್‌ ಮೂಲಕ ಪೋರ್ಷೆ ಸೆಂಟರ್ ಗೆ ಕೊಂಡೊಯ್ಯಲಾಗಿದೆ.

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಬುಗಾಟ್ಟಿ ಚಿರೋನ್ ಕಾರಿಗೂ ಹಾನಿಯಾಗಿದೆ. ಆದರೆ ಮುಂಭಾಗದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ. ಕಾರಿನ ಬೇರೆ ಭಾಗಗಳಿಗೆ ಯಾವುದೇ ಹಾನಿಯಾಗಿಲ್ಲ. ಅಪಘಾತದ ಕಾರಣಕ್ಕೆ ಗೋಥಾರ್ಡ್ ಪಾಸ್ ಅನ್ನು ಸುಮಾರು 3 ಗಂಟೆಗಳ ಕಾಲ ಮುಚ್ಚಲಾಗಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಅಪಘಾತದಲ್ಲಿ ಭಾಗಿಯಾದ ಎರಡೂ ಕಾರುಗಳು ದುಬಾರಿ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಈ ಅಪಘಾತವನ್ನು ದುಬಾರಿ ಅಪಘಾತವೆಂದು ಕರೆಯಲಾಗಿದೆ. ಈ ಅಪಘಾತ ಸಂಭವಿಸಿದ ಗೋಥಾರ್ಡ್ ಪಾಸ್ ವಿಶ್ವ ವಿಖ್ಯಾತ ಪ್ರೇಕ್ಷಣೀಯ ಸ್ಥಳವಾಗಿದೆ.

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಗೋಥಾರ್ಡ್ ಪಾಸ್ ಸುತ್ತ ಪರ್ವತಗಳಿದ್ದು, ಘಾಟ್ ಸೆಕ್ಷನ್ ನಂತಹ ಸ್ಥಳಗಳಿವೆ. ಈ ಕಾರಣಕ್ಕೆ ಅಡ್ವೆಂಚರ್ ಟೂರ್ ಮಾಡುವವರ ಮೊದಲ ಆಯ್ಕೆ ಗೋಥಾರ್ಡ್ ಪಾಸ್ ಆಗಿರುತ್ತದೆ. ಈ ರೀತಿಯ ಸ್ಥಳಗಳಲ್ಲಿ ಕಾರು ಚಾಲನೆ ಮಾಡುವಾಗ ಜಾಗರೂಕರಾಗಿರುವುದು ಅವಶ್ಯಕ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಕಾರು ಚಾಲನೆ ಮಾಡುವಾಗ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ಅದರಲ್ಲೂ ಓವರ್ ಟೇಕ್ ಮಾಡುವಾಗ ಹೆಚ್ಚಿನ ಜಾಗರೂಕತೆ ಅವಶ್ಯಕ. ಪೋರ್ಷೆ 911 ಹಾಗೂ ಬುಗಾಟ್ಟಿ ಚಿರೋನ್ ಎರಡೂ ಕಾರುಗಳು ಅತ್ಯಂತ ದುಬಾರಿ ಬೆಲೆಯನ್ನು ಹೊಂದಿವೆ.

ಅಲ್ಪ ಪ್ರಮಾಣದ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆತ್ತ ದುಬಾರಿ ಕಾರು ಮಾಲೀಕರು

ಅಪಘಾತಕ್ಕೀಡಾಗಿರುವ ಈ ಕಾರುಗಳ ಮಾಲೀಕರು ಅವುಗಳನ್ನು ಸರಿಪಡಿಸಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಓವರ್ ಟೇಕ್ ಮಾಡುವಾಗ ತೋರುವ ಅಲ್ಪ ಪ್ರಮಾಣದ ನಿರ್ಲಕ್ಷ್ಯವು ಎಷ್ಟು ದುಬಾರಿಯಾಗುತ್ತದೆ ಇದೊಂದು ನಿದರ್ಶನ.

Most Read Articles

Kannada
English summary
Bugatti Chiron and Porsche 911 car accident during overtake in Switzerland. Read in Kannada.
Story first published: Sunday, August 16, 2020, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X