ಬುಗಾಟಿ ಬೆಲ್ಟ್ ಬಕ್‌ಲ್ ದರ ಜಸ್ಟ್ 50 ಲಕ್ಷ ರು..!
ಪುರುಷರ ಸೌಂದರ್ಯ ವರ್ಧನೆಯಲ್ಲಿ ಬೆಲ್ಟ್ ಬಕ್‌ಲ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಿರುವಾಗ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಬೆಲ್ಟ್‌ಗಳು ಲಭ್ಯರುತ್ತದೆ. ಇದು ವಿವಿಧ ಬೆಲೆಗಳಲ್ಲಿ ದೊರೆಯುತ್ತದೆ. ಅಂದ ಹಾಗೆ ಸಾಮಾನ್ಯ ಬೆಲ್ಟ್ ಬಕ್‌ಲ್‌ವೊಂದು ಎಷ್ಟು ದುಬಾರಿ ಎನಿಸಿಕೊಳ್ಳಬಹುದು? ನಿಮ್ಮಿಂದ ಅಂದಾಜಿಸಬಹುದೇ? 1000, 2000 ಹೀಗೆ ಪಟ್ಟಿ ಮಾಡಿದರೆ ಬಹುಶ: ಲಕ್ಷ ವರೆಗೂ ಪಟ್ಟಿ ಬೆಳೆಯಬಹುದೇನೋ?
ಆದರೆ ನಾವಿಂದು ಪರಿಚಯಿಸಲಿರುವ ಬೆಲ್ಟ್ ಬಕ್‌ಲ್ 50 ಲಕ್ಷ ರು.ಗಳಷ್ಟು ದುಬಾರಿಯಾಗಿದೆ. ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬುಗಾಟಿ ಇದನ್ನು ತಯಾರಿಸಿದೆ ಅಂದರೆ ನಿಮ್ಮಿಂದ ನಂಬಲಾರ್ಹವೇ?

ಕೋಟ್ಯಧಿಪತಿಗಳು ಮಾತ್ರ ಬುಗಾಟಿ ಬೆಲ್ಟ್ ಬಕ್‌ಲ್ ತಮ್ಮದಾಗಿಸಿಕೊಳ್ಳಬಹುದಾಗಿದೆ. ಜಿನೆವಾ ಮೂಲದ ರೋಲ್ಯಾಂಡ್ ಐಟೆನ್ ಎಂಬ ವಿನ್ಯಾಸಗಾರ ಇದನ್ನು ರಚಿಸಿದ್ದಾರೆ.

ಒಟ್ಟು ಮೂರು ವಿಭಿನ್ನ ಸಿರೀಸ್‌ನಲ್ಲಿ ಲಭ್ಯವಿರುವ ಈ ಬಕ್‌ಲ್ ಸೀಮಿತ 44 ಯುನಿಟ್‌ಗಳನ್ನು ಮಾತ್ರ ತಯಾರಿಸಲಾಗುತ್ತಿದೆ.

ಮೊದಲ ಹಂತವಾಗಿ 11 ಯುನಿಟ್‌ಗಳನ್ನು ತಯಾರಿಸಲಾಗುತ್ತಿದ್ದು, ಇದು ಬಿಳಿ ಚಿನ್ನವನ್ನು ಒಳಗೊಂಡಿರಲಿದೆ. ಹಾಗೆಯೇ ಮುಂದಿನ ಸರಪಣಿಯು ಗುಲಾಬಿ ಹಾಗೂ ಮೂರನೇ ವರ್ಷನ್ ಇನ್ನಷ್ಟೇ ಆಗಮನವಾಗಬೇಕಿದೆ.

ಐಷಾರಾಮಿ ಕೈಗಡಿಯಾರ ತಯಾರಿಸುವ ತಂತ್ರಗಾರಿಕೆಯನ್ನು ಇಲ್ಲಿ ಬಳಸಲಾಗಿದೆ. ಈ ಮೂಲಕ ನಿಜಕ್ಕೂ ಅಮೂಲ್ಯವಾದ ಉಡುಗೊರೆಯೆನಿಸಲಿದೆ.

ಒಟ್ಟಿನಲ್ಲಿ ಕ್ಯಾಲಿಬರ್ ಆರ್22 ಎಂಕೆ I ಬುಗಾಟಿ ಎಡಿಷನ್ ಐಷಾರಾಮಿ ಕಾರು ಪ್ರಿಯರಲ್ಲಿ ಹೆಚ್ಚಿನ ಕುತೂಹಲ ಸೃಷ್ಟಿಸಿದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








