ಬುಲೆಟ್ ರೈಲು ಯೋಜನೆಗೆ ವೇಗ: ಶೇ100 ಭೂಸ್ವಾಧೀನ ಪ್ರಕ್ರಿಯೆ ಪೂರ್ಣ: ಯಾವಾಗ ಆರಂಭ?

ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ಗುಜರಾತ್‌ನಲ್ಲಿ ಶೇ 100 ರಷ್ಟು ಭೂಸ್ವಾಧೀನವನ್ನು ಪೂರ್ಣಗೊಳಿಸಲಾಗಿದೆ ಎಂದು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಸೋಮವಾರ ಹೇಳಿದೆ. ಸೆಪ್ಟೆಂಬರ್‌ನಲ್ಲಿ ಸೂರತ್ ಜಿಲ್ಲೆಯ ಕಥೋರ್ ಗ್ರಾಮದಲ್ಲಿ ಗುಜರಾತ್‌ನ ಕೊನೆಯ ಪಾರ್ಸೆಲ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ನಿಗಮವು ತಿಳಿಸಿದೆ.

ಒಟ್ಟಾರೆ ಈ ಯೋಜನೆಗಾಗಿ ಗುಜರಾತ್‌ನ ಎಂಟು ಜಿಲ್ಲೆಗಳಲ್ಲಿ 951.14 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಇತ್ತೀಚಿನ ಸ್ವಾಧೀನದೊಂದಿಗೆ, ಗುಜರಾತ್, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯುಗಳಲ್ಲಿ ಶೇ 99.95 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು NHSRCL ಪ್ರಕಟಣೆಯಲ್ಲಿ ತಿಳಿಸಿದೆ.

bullet-train-project-100-pc-land-acquisition-complete

ಪ್ರಧಾನಿ ಮೋದಿ ಮತ್ತು ಅವರ ಜಪಾನ್ ಕೌಂಟರ್ ಶಿಂಜೊ ಅಬೆ ಅವರು ಸೆಪ್ಟೆಂಬರ್ 2017 ರಲ್ಲಿ ಅಹಮದಾಬಾದ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದರು. 2026ರ ವೇಳೆಗೆ ದಕ್ಷಿಣ ಗುಜರಾತ್‌ನ ಸೂರತ್ ಮತ್ತು ಬಿಲಿಮೋರಾ ನಡುವೆ ಬುಲೆಟ್ ರೈಲಿನ ಮೊದಲ ಹಂತವನ್ನು ಓಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪೂರ್ಣಗೊಂಡ ಬಳಿಕ 508 - ಕಿ.ಮೀ ದೂರವನ್ನು ರೈಲು 2 ರಿಂದ 3 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ.

ಜಪಾನ್‌ನ ಶಿಂಕನ್‌ಸೆನ್ ತಂತ್ರಜ್ಞಾನವನ್ನು ಬಳಸಿಕೊಂಡು ಮುಂಬೈ ಮತ್ತು ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಯೋಜನೆಯು ಹೆಚ್ಚಿನ ಆವರ್ತನ ಸಮೂಹ ಸಾರಿಗೆ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಜಪಾನ್‌ನಿಂದ 88,000 ಕೋಟಿ ರೂ. ಮೃದು ಸಾಲದೊಂದಿಗೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಈ ಯೋಜನೆಗೆ ಹಣವನ್ನು ನೀಡಿದೆ.

bullet-train-project-100-pc-land-acquisition-complete

1.10 ಲಕ್ಷ ಕೋಟಿ ವೆಚ್ಚದ ಈ ಯೋಜನೆಯು 2022 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ ಭೂಸ್ವಾಧೀನದಲ್ಲಿ ಅಡಚಣೆಗಳನ್ನು ಎದುರಿಸಿದರಿಂದ ತಡವಾಗಿದೆ ಎಂದು NHSRCL ತಿಳಿಸಿದೆ. ಕಾರ್ಯಾಚರಣೆಯ ನಿಯಂತ್ರಣ ಕೇಂದ್ರವು ಅಹಮದಾಬಾದ್‌ನ ಸಬರಮತಿಯಲ್ಲಿದೆ. ಗುಜರಾತ್‌ನಲ್ಲಿ ಎರಡು - ಸೂರತ್ ಮತ್ತು ಸಬರಮತಿ - ಮತ್ತು ಮಹಾರಾಷ್ಟ್ರದಲ್ಲಿ ಥಾಣೆಯಲ್ಲಿ ಮೂರು ಡಿಪೋಗಳು ಇರುತ್ತವೆ ಎಂದು NHSRCL ಹೇಳಿದೆ.

ಯಾವ ಪ್ರದೇಶದಲ್ಲಿ ಎಷ್ಟು ಭೂ ಸ್ವಾಧೀನ?: ಮಹಾರಾಷ್ಟ್ರದಲ್ಲಿ ಸ್ವಾಧೀನಪಡಿಸಿಕೊಂಡ 429.71 ಹೆಕ್ಟೇರ್‌ಗಳಲ್ಲಿ ಶೇ 99.83 ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಉತ್ತರಪ್ರದೇಶದಲ್ಲಿ 7.90 ಹೆಕ್ಟೇರ್‌, ಅಹಮದಾಬಾದ್‌ನಲ್ಲಿ 133.29 ಹೆಕ್ಟೇರ್, ಖೇಡಾದಲ್ಲಿ 110.25 ಹೆಕ್ಟೇರ್, ಆನಂದ್‌ನಲ್ಲಿ 52.59 ಹೆಕ್ಟೇರ್, ವಡೋದರಾದಲ್ಲಿ 142.30 ಹೆಕ್ಟೇರ್, ಭರೂಚ್‌ನಲ್ಲಿ 140.32 ಹೆಕ್ಟೇರ್, ಭರೂಚ್‌ನಲ್ಲಿ 160.52 ಹೆಕ್ಟೇರ್, ಸೂರತ್‌ನಲ್ಲಿ 160.52 ಹೆಕ್ಟೇರ್, ವ್ಯಾಲಡ್‌ನಲ್ಲಿ 8 ಹೆಕ್ಟೇರ್ ಸ್ವಾಧೀನ ಪಡಿಸಿಕೊಳ್ಳಲಾಗಿದೆ.

bullet-train-project-100-pc-land-acquisition-complete

ಬೃಹತ್ ಪರ್ವತ ಸುರಂಗ ಪೂರ್ಣ: ಮುಂಬೈ ಮತ್ತು ಅಹಮದಾಬಾದ್ ನಡುವಿನ ರೈಲು ಕಾರಿಡಾರ್‌ನಲ್ಲಿ 350 ಮೀಟರ್ ಉದ್ದದ ಪರ್ವತ ಸುರಂಗವು ಗುಜರಾತ್‌ನ ವಲ್ಸಾದ್ ಜಿಲ್ಲೆಯ ಜರೋಲಿ ಗ್ರಾಮದ ಬಳಿ ಪೂರ್ಣಗೊಳಿಸಲಾಗಿದೆ. ಸುರಂಗದ ಪ್ರವೇಶದ್ವಾರದ ಹತ್ತಿರವಿರುವ ಬಂಡೆಯ ಕೊನೆಯ ಪದರಗಳನ್ನು ತೆಗೆದುಹಾಕಲು ಅಂತಿಮ ಸ್ಫೋಟವನ್ನು ನಡೆಸಲಾಗಿದೆ ಎಂದು NHSRCL ತಿಳಿಸಿದೆ.

ಈ ಬುಲೆಟ್ ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುವುದರಿಂದ ಸಣ್ಣ ಜೋಡಣೆಯ ದೋಷವು ತೀವ್ರ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ಸುರಂಗದ ಜೋಡಣೆಯನ್ನು ಸಂಪೂರ್ಣವಾಗಿ ನೇರವಾಗಿ ಇಡುವುದು ನಮಗೆ ದೊಡ್ಡ ಸವಾಲಾಗಿತ್ತು. ಆದ್ದರಿಂದ ಪ್ರತಿಯೊಂದು ನಿರ್ದಿಷ್ಟತೆಯನ್ನು ನಿಖರವಾಗಿ ಅನುಸರಿಸಿದ್ದೇವೆ. ಇದೀಗ ಮಿಲಿಮೀಟರ್‌ನಷ್ಟು ವಿಚಲನವನ್ನು ಸಹ ಯಾರೂ ಕಾಣುವುದಿಲ್ಲ ಎಂದು ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ತಿಳಿಸಿದ್ದಾರೆ.

ನಾವು ಸಂಪೂರ್ಣ ಸುರಂಗದ ರಚನೆಯನ್ನು ಅಗೆದಿದ್ದೇವೆ. ಬಹುತೇಕ ಕೆಲಸ ಮುಗಿದಿದೆ. ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ವರ್ಷಕ್ಕೂ ಹೆಚ್ಚು ಸಮಯ ಮತ್ತು ದೊಡ್ಡ ಕಾರ್ಮಿಕ ಬಲವನ್ನು ತೆಗೆದುಕೊಳ್ಳಲಾಗಿತ್ತು. ಇದು ನಮ್ಮ ನೇರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾದ ಮೊದಲ ಪರ್ವತ ಸುರಂಗವಾಗಿದೆ ಎಂದು ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ಎಸ್‌ಪಿ ಮಿತ್ತಲ್ ಬಹಳ ತೃಪ್ತಿ ವ್ಯಕ್ತಪಡಿಸಿದ್ದಾರೆ.

Article Published On: Monday, October 9, 2023, 17:52 [IST]
English summary
Bullet train project 100 pc land acquisition complete
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+