ರಾಂಗ್ ಸೈಡಿನಲ್ಲಿ ಅವಾಂತರ.. ಕಾರಿಗೆ ಗುದ್ದಿದ ಎತ್ತಿನ ಗಾಡಿ..!
ಭಾರತದಲ್ಲಿರುವ ಹಳ್ಳಿಗಳು ಹಾಗೂ ಎರಡನೇ, ಮೂರನೇ ಹಂತದ ನಗರಗಳ ರಸ್ತೆಗಳಲ್ಲಿ ಅಕ್ರಮವಾಗಿ ಎತ್ತಿನ ಗಾಡಿ ಸ್ಪರ್ಧೆಗಳನ್ನು ಏರ್ಪಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಮುಂಬೈ ಹಾಗೂ ಪುಣೆಯಂತಹ ನಗರಗಳಲ್ಲಿ ನಡೆಯುವ ಅಕ್ರಮ ಕುದುರೆ ರೇಸ್‍ಗಳ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ರೀತಿಯ ಸ್ಪರ್ಧೆಗಳು ದೇಶಾದ್ಯಂತ ನಡೆಯುತ್ತಲೇ ಇರುತ್ತವೆ.

ಇದೇ ರೀತಿಯ ಘಟನೆಯೊಂದು ಇತ್ತೀಚಿಗೆ ನಡೆದಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಈ ರೇಸ್‍ಗಳನ್ನು ಯಾವ ಕಾರಣಕ್ಕೆ ನಡೆಸಬಾರದು ಎಂಬುದನ್ನು ತಿಳಿಸುತ್ತವೆ. ಈ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ. ಭಾರತದ ಕೆಲವು ನಗರಗಳಲ್ಲಿ ಕುದುರೆ ರೇಸ್ ಜನಪ್ರಿಯವಾಗಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಎತ್ತುಗಳ ಸ್ಪರ್ಧೆ ಜನಪ್ರಿಯವಾಗಿದೆ.

ಇದು ಎಷ್ಟರ ಮಟ್ಟಿಗೆ ಎಂದರೆ ಕೆಲವು ಹಬ್ಬಗಳಲ್ಲಿ ಎತ್ತಿನ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಅದೂ ಕೂಡ ಸಾರ್ವಜನಿಕ ರಸ್ತೆಗಳಲ್ಲಿ. ವೈರಲ್ ಆಗಿರುವ ಈ ವೀಡಿಯೊದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಎತ್ತಿನ ಸ್ಪರ್ಧೆ ಏರ್ಪಡಿಸಿದರೆ ಏನಾಗುತ್ತದೆ ಎಂಬುದನ್ನು ಕಾಣಬಹುದು. ಈ ವೀಡಿಯೊವನ್ನು ಬೆಳಗಾವಿಯಲ್ಲಿರುವ ಸೇತುವೆಯ ಮೇಲೆ ಚಿತ್ರಿಸಲಾಗಿದೆ.

ಕಾರಿನ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಸಂಪೂರ್ಣ ಘಟನೆಯನ್ನು ಈ ವೀಡಿಯೊದಲ್ಲಿ ಚಿತ್ರಿಸಿದ್ದಾರೆ. ಈ ಘಟನೆಯು ಸ್ಥಳಾವಕಾಶದ ಕೊರತೆಯಿಂದಾಗಿ ಸೇತುವೆಯ ಮೇಲೆ ನಡೆದಿದೆ. ಈ ವೀಡಿಯೊದಲ್ಲಿ ಎತ್ತಿನ ಗಾಡಿಯು ಎದುರುಗಡೆಯಿಂದ ವೇಗವಾಗಿ ಬಂದಿದೆ.

ರಾಂಗ್ ಸೈಡಿನಲ್ಲಿ ಈ ಎತ್ತಿನಗಾಡಿಯು ತನ್ನ ಮುಂದಿರುವ ಇನ್ನೊಂದು ಎತ್ತಿನಗಾಡಿಯನ್ನು ಒವರ್‍ಟೇಕ್ ಮಾಡಲು ಯತ್ನಿಸುತ್ತಿರುವುದನ್ನು ಕಾಣಬಹುದು. ಎತ್ತಿನ ಗಾಡಿಯು ರಾಂಗ್ ಸೈಡಿನಲ್ಲಿ ಬರುತ್ತಿರುವ ಕಾರಣಕ್ಕೆ ಕಾರ್ ಅನ್ನು ನಿಲ್ಲಿಸಲಾಗಿದೆ. ಎತ್ತಿನ ಗಾಡಿಯನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಎತ್ತುಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ.

ಇದರಿಂದಾಗಿ ಎತ್ತಿನ ಗಾಡಿಯು ಕಾರಿಗೆ ಗುದ್ದಿದೆ. ಎತ್ತಿನ ಗಾಡಿಯು ಕಾರಿಗೆ ಗುದಿಯುವ ದೃಶ್ಯವನ್ನು ಈ ವೀಡಿಯೊದಲ್ಲಿ ಕಾಣಬಹುದು. ಎತ್ತಿನ ಗಾಡಿಯು ಗುದ್ದಿದ್ದ ರಭಸಕ್ಕೆ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಎತ್ತಿನ ಗಾಡಿಯನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯು ಎತ್ತುಗಳನ್ನು ಕಂಟ್ರೋಲ್ ಮಾಡಲು ಹೆಣಗಾಡುತ್ತಿರುವುದನ್ನು ಕಾಣಬಹುದು.

ಪ್ರಾಣಿಗಳು ಯಾವಾಗ ಯಾವ ಕಡೆ ನುಗ್ಗುತ್ತವೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ವೇಗವಾಗಿ ಓಡುವ ಪ್ರಾಣಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಈ ಹಿಂದೆಯೂ ಎತ್ತಿನ ಗಾಡಿಗಳು ವೇಗವಾಗಿ ಸಾಗಿ ಎದುರಿಗೆ ಬಂದ ವಾಹನಗಳಿಗೆ ಗುದ್ದಿದ್ದ ಹಲವು ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿಗೆ ಕುದುರೆಗಾಡಿಯಲ್ಲಿದ್ದ ಕುದುರೆಯೊಂದು ಸಾರ್ವಜನಿಕ ರಸ್ತೆಗಳಲ್ಲಿ ವೇಗವಾಗಿ ಓಡುತ್ತಿತ್ತು.
ಕುದುರೆಗಾಡಿಯಲ್ಲಿ ಕುದುರೆಯನ್ನು ನಿಯಂತ್ರಿಸಲು ಯಾರೂ ಇರಲಿಲ್ಲ. ಎತ್ತಿನ ಗಾಡಿಗಳ ಸ್ಪರ್ಧೆಯು ಭಾರತದಲ್ಲಿ ಕಾನೂನುಬಾಹಿರವಾಗಿದ್ದು, ಈ ಸ್ಪರ್ಧೆಗಳನ್ನು ಆಯೋಜಿಸುವವರಿಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಭಾರತದ ರಸ್ತೆಗಳಲ್ಲಿ ಈ ರೀತಿಯ ಗಾಡಿಗಳು ಸಾಮಾನ್ಯವಾಗಿವೆ.

ಕುದುರೆ ಗಾಡಿ, ಎತ್ತಿನ ಗಾಡಿಗಳು ಭಾರತದ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಬರುವುದಿಲ್ಲ. ಈ ಕಾರಣಕ್ಕೆ ನಿಯಮಗಳನ್ನು ಉಲ್ಲಂಘಿಸಿದರೂ ಈ ಗಾಡಿಗಳಿಗೆ ಸಂಚಾರಿ ಪೊಲೀಸರು ದಂಡ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ರೀತಿಯ ಗಾಡಿಗಳು ಹೆಚ್ಚಿನ ವೇಳೆ ರಾಂಗ್ ಸೈಡಿನಲ್ಲಿಯೇ ಚಲಿಸುತ್ತವೆ. ಈ ಗಾಡಿಗಳಲ್ಲಿ ಯಾವುದೇ ರೀತಿಯ ರಿಫ್ಲೆಕ್ಟರ್‍ಗಳೂ ಸಹ ಇರುವುದಿಲ್ಲ. ಇದರಿಂದ ರಾತ್ರಿ ವೇಳೆಯಲ್ಲಿ ಎದುರುಗಡೆಯಿಂದ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.


Click it and Unblock the Notifications