ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಮರ್ಸಿಡಿಸ್ ಬೆಂಝ್ ವಿಶ್ವದ ಐಷಾರಾಮಿ ಕಾರು ತಯಾರಕ ಕಂಪನಿಗಳಲ್ಲಿ ಒಂದು. ವಿಶ್ವಾದ್ಯಂತ ಕಂಪನಿಯ ಕಾರುಗಳು ಅಪಾರ ಜನಪ್ರಿಯತೆಯನ್ನು ಹೊಂದಿವೆ. ಮರ್ಸಿಡಿಸ್ ಬೆಂಝ್ ಕಂಪನಿಯು ಐಷಾರಾಮಿ ಕಾರುಗಳನ್ನು ಮಾತ್ರವಲ್ಲದೆ ಬಸ್ ಹಾಗೂ ಟ್ರಕ್‌ಗಳಂತಹ ದೊಡ್ಡ ವಾಹನಗಳನ್ನು ಉತ್ಪಾದಿಸುತ್ತದೆ.

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಇತ್ತೀಚಿಗೆ ಮರ್ಸಿಡಿಸ್ ಬೆಂಝ್ ಕಂಪನಿಯು ಬಸ್ ಚಾಲಕನೊಬ್ಬನನ್ನು ಶ್ಲಾಘಿಸಿದೆ. ಮರ್ಸಿಡಿಸ್ ಬೆಂಝ್ ಕಂಪನಿಯಿಂದ ಶ್ಲಾಘಿಸಲ್ಪಟ್ಟ ಬಸ್ ಚಾಲಕ ರೊಮೇನಿಯನ್ ಪ್ರಜೆಯಾಗಿದ್ದು, ಆತನ ಹೆಸರಿನ ಬಗೆಗಿನ ಮಾಹಿತಿ ಬಿಡುಗಡೆಯಾಗಿಲ್ಲ. ಯಾವ ಕಾರಣಕ್ಕಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ರೊಮೇನಿಯನ್ ಚಾಲಕನನ್ನು ಶ್ಲಾಘಿಸಿತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ರೊಮೇನಿಯನ್ ಸರ್ಕಾರವು 2005ರಲ್ಲಿ ದೇಶದ ರಾಜಧಾನಿ ಬುಕಾರೆಸ್ಟ್‌ನಲ್ಲಿ ಸಾರ್ವಜನಿಕರ ಬಳಕೆಗಾಗಿ ಹಲವಾರು ಮರ್ಸಿಡಿಸ್-ಬೆಂಝ್ ಸಿಟಾರೊ ಬಸ್‌ಗಳನ್ನು ಖರೀದಿಸಿತು. 2005ರಲ್ಲಿ ಖರೀದಿಸಿದ ಅನೇಕ ಬಸ್‌ಗಳು ಈಗ ಬಳಕೆಯಲ್ಲಿಲ್ಲ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಆದರೆ ಈ ಚಾಲಕ ಚಾಲನೆ ಮಾಡುವ ಬಸ್ ಇನ್ನೂ ಹೊಚ್ಚ ಹೊಸದರಂತಿದ್ದು, ಉತ್ತಮ ಸ್ಥಿತಿಯಲ್ಲಿದೆ. ಬಸ್ ಅನ್ನು ಹೊಸದರಂತೆ ಕಾಪಾಡಿಕೊಂಡು ಬಂದ ಕಾರಣಕ್ಕೆ ಆ ಬಸ್ಸಿನ ಚಾಲಕ ರೊಮೇನಿಯನ್ ಸರ್ಕಾರ ಹಾಗೂ ಮರ್ಸಿಡಿಸ್ ಬೆಂಝ್ ನಿಂದ ಶ್ಲಾಘಿಸಲ್ಪಟ್ಟಿದ್ದಾನೆ.

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

2005ರಲ್ಲಿ ಸಂಚಾರವನ್ನು ಆರಂಭಿಸಿದ ಈ ಬಸ್ ಇದುವರೆಗೂ 1 ಮಿಲಿಯನ್ ಅಂದರೆ ಹತ್ತು ಲಕ್ಷ ಕಿ.ಮೀಗಳಿಗಿಂತ ಹೆಚ್ಚು ದೂರ ಸಂಚರಿಸಿದೆ. ವಿಶೇಷವೆಂದರೆ ಈ ಬಸ್ ಬಳಕೆಗೆ ಬಂದಾಗಿನಿಂದ ಒಬ್ಬನೇ ಚಾಲಕ ಚಾಲನೆ ಮಾಡಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಈ ಕಾರಣಕ್ಕಾಗಿಯೇ ಮರ್ಸಿಡಿಸ್ ಬೆಂಝ್ ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ಬಸ್ ಹಾಗೂ ಅದರ ಚಾಲಕನನ್ನು ಶ್ಲಾಘಿಸುವ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಪನಿಯು ತನ್ನ ಪೋಸ್ಟ್ ನಲ್ಲಿ ಒಬ್ಬ ವ್ಯಕ್ತಿ, ಒಂದು ಬಸ್, ಒಂದು ಮಿಲಿಯನ್ ಕಿ.ಮೀ ಎಂದು ಹೇಳಿದೆ.

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಯಾವುದೇ ಪ್ರಮುಖ ಮೆಂಟೆನೆನ್ಸ್ ಇಲ್ಲದೇ ಇನ್ನೂ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಂಡಿರುವ ಬಸ್ ಚಾಲಕನನ್ನು ಶ್ಲಾಘಿಸಿದೆ. ಮರ್ಸಿಡಿಸ್ ಬೆಂಝ್ ಸಿಟಾರೊ ಬಸ್ಸುಗಳು ಲೋ ಫ್ಲೋರ್ ಹೊಂದಿರುವ ಸಿಟಿ ಬಸ್ಸುಗಳಾಗಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಈ ಬಸ್ಸುಗಳನ್ನು ಕಾರುಗಳಂತೆ ವಿವಿಧ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಸ್ಸುಗಳು ವಿವಿಧ ಸಂಖ್ಯೆಯ ಸೀಟುಗಳನ್ನು ಹೊಂದಿವೆ. ಯುರೋಪ್ ಹಾಗೂ ಏಷ್ಯಾದ ಕೆಲವು ದೇಶಗಳಿಗೆ ಸೂಕ್ತವಾದ ವಿನ್ಯಾಸಗಳಲ್ಲಿ ಈ ಬಸ್ ಅನ್ನು ಮಾರಾಟ ಮಾಡಲಾಗುತ್ತದೆ.

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಭಾರತದಂತಹ ಒರಟು ರಸ್ತೆಗಳನ್ನು ಹೊಂದಿರುವ ದೇಶಗಳಿಗೆ ಇದರ ಶೇಪ್ ಹಾಗೂ ಲೋ ಬೇಸ್ ವಿನ್ಯಾಸ ಸೂಕ್ತವಾಗಿಲ್ಲ. ಈ ಬಸ್‌ನ ಬೆಲೆ ಹೆಚ್ಚಿರುವುದರಿಂದ ಅವುಗಳನ್ನು ಭಾರತದ ಸಾರ್ವಜನಿಕ ಸಾರಿಗೆಯಲ್ಲಿ ನೋಡುವುದು ತುಂಬಾ ಕಷ್ಟ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಈ ಬಸ್‌ನಲ್ಲಿನ ಪ್ರಯಾಣವು ಮರ್ಸಿಡಿಸ್ ಬೆಂಝ್ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸಿದ ಅನುಭವವನ್ನು ನೀಡುತ್ತದೆ. ಸಿಟಾರೊ ಬಸ್ಸುಗಳು ಹಲವು ಫೀಚರ್ ಗಳನ್ನು ಹೊಂದಿವೆ. ಈ ಬಸ್ಸುಗಳು ಆಕರ್ಷಕ ಲುಕ್ ಹೊಂದಿವೆ. ವಿದ್ಯುತ್ ಬೆಳಕಿನ ಮುಂಭಾಗದ ಭಾಗವು ಮರ್ಸಿಡಿಸ್ ಬೆಂಝ್ ಶೈಲಿಯಲ್ಲಿದೆ.

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಈ ಬಸ್‌ನಲ್ಲಿ ಬ್ಲೂ ಎಫಿಷಿಯೆನ್ಸಿ ಪವರ್ ಡ್ರೈವ್ ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂ ಸಾಮಾನ್ಯ ಬಸ್‌ಗಳಿಗಿಂತ ಉತ್ತಮ ಕಾರ್ಯಾಚರಣಾ ಅನುಭವವನ್ನು ನೀಡುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಒಂದು ಬಸ್, ಒಬ್ಬನೇ ಚಾಲಕ, ಒಂದು ಮಿಲಿಯನ್ ಕಿ.ಮೀ ಇದೇ ಈ ಬಸ್ಸಿನ ವೈಶಿಷ್ಟ್ಯ

ಫಾಲೋ-ಅಪ್ ಸುರಕ್ಷತಾ ಫೀಚರ್ ಆಗಿ ಈ ಬಸ್ಸಿನಲ್ಲಿ ಯಾಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂ ಕಷ್ಟಕರ ಸಂದರ್ಭಗಳಲ್ಲಿಯೂ ಉತ್ತಮ ಬ್ರೇಕಿಂಗ್ ಅನುಭವವನ್ನು ನೀಡಲು ನೆರವಾಗುತ್ತದೆ.

Most Read Articles
 
Kannada
English summary
Bus driver clocks one million kms in Mercedes Benz Citaro bus. Read in Kannada.
Story first published: Wednesday, October 14, 2020, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X