ಟಾಟಾ ನ್ಯಾನೋವನ್ನು ಸೋಲಾರ್ ಕಾರ್ ಆಗಿ ಪರಿವರ್ತನೆ: 100 ಕಿ.ಮೀ ಚಲಿಸಲು ಕೇವಲ 30 ರೂ. ವೆಚ್ಚ
ಭಾರತದ ಮಧ್ಯಮ ವರ್ಗದ ಕುಟುಂಬಗಳು ಸ್ಕೂಟರ್ ನಲ್ಲಿ ತಮ್ಮ ಕುಟುಂಬಸ್ಥರ ಜೊತೆ ಹಾಳು ಗುಂಡಿ ಬಿದ್ದ ರಸ್ತಗಳಲ್ಲಿನ ಪ್ರಯಾಣ ಮಾಡುವುದನ್ನು ತಪ್ಪಿಸಲು ರತನ್ ಟಾಟಾ ಅವರು ನ್ಯಾನೋ ಕಾರನ್ನು ಪರಿಚಯಿಸಿದ್ದರು. 1 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಈ ಟಾಟಾ ನ್ಯಾನೋ ಕಾರನ್ನು ಪರಿಚಯಿಸಲಾಗಿತ್ತು.
ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸುರಕ್ಷತೆ ನಿಯಮ ಮತ್ತು ಬೇಡಿಕೆಯ ಕುಸಿತದಿಂದಾಗಿ 2019 ರಲ್ಲಿ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರೂ ಭಾರತದ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಈ ಕಾರು ವಿಶೇಷವಾಗಿ ಉಳಿದುಕೊಂಡಿದೆ, ಈ ಜನಪ್ರಿಯ ಟಾಟಾ ನ್ಯಾನೋ ಕಾರನ್ನು ಸೋಲಾರ್ ಚಾಲಿತ ವಾಹನವಾಗಿ ಪರಿವರ್ತಿಸಿದ್ದಾರೆ. ಪಶ್ಚಿಮ ಬಂಗಾಳಬಂಕುರಾದ ಕಟ್ಜುರಿದಂಗ ನಿವಾಸಿ ಮನೋಜಿತ್ ಮೊಂಡಲ್ ಎಂಬ ವ್ಯಕ್ತಿಯು ಸಮಾನ್ಯ ನ್ಯಾನೋ ಕಾರನ್ನು ಸೋಲಾರ್ ಚಾಲಿತ ವಾಹನವನ್ನು ಪರಿವತಿಸಿದ್ದಾರೆ.

ವೃತ್ತಿಯಲ್ಲಿ ಉದ್ಯಮಿಯಾಗಿರುವ ಮನೋಜಿತ್, ಈ ಸೋಲಾರ್ ಚಾಲಿತ ಟಾಟಾ ನ್ಯಾನೋ ಕಾರಿನಲ್ಲಿ ಓಡಾಡುತ್ತಿದ್ದಾರೆ. ಸೋಲಾರ್ ಕಾರ್ ಆಗಿರುವುದರಿಂದ ಪೆಟ್ರೋಲ್ ಅಗತ್ಯವಿಲ್ಲ. ಅಲ್ಲದೆ, ಇದು ಎಂಜಿನ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಕಾರಿನ ನಿರ್ವಹಣಾ ವೆಚ್ಚ ಕೇಳಿದರೆ ಬೆಚ್ಚಿ ಬೀಳುತ್ತೀರಾ. ಈ ನ್ಯಾನೋ ಸೋಲಾರ್ ಕಾರ್ ಕೇವಲ 30 ರಿಂದ 35 ರೂಗಳಲ್ಲಿ 100 ಕಿಲೋಮೀಟರ್ ವರೆಗೆ ಚಲಿಸುತ್ತದೆ.
ಈ ಟಾಟಾ ನ್ಯಾನೋ ಸೋಲಾರ್ ಕಾರ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಮನೋಜಿತ್ ಅವರು ಇಂಧನದ ಬೆಲೆಯು ಹೆಚ್ಚಾದಾಗ ಅದಕ್ಕೆ ಪರಿಹಾರವಾಗಿ ಸೋಲಾರ್ ಕಾರ್ ಉತ್ತಮ ಆಯ್ಕೆಯಾಗಿ ಕಂಡುಕೊಂಡರು. ಈ ಟಾಟಾ ಕಾರನ್ನು ಮಾರ್ಪಡಿಸುವಾಗ, ಮನೋಜಿತ್ ಹಲವಾರು ತೊಂದರೆಗಳನ್ನು ಎದುರಿಸಿದರು. ಫೋಸಿಲ್ ಇಂಧನಗಳ ಲಭ್ಯತೆಯ ಕೊರತೆ ಮತ್ತು ಹೆಚ್ಚು ಮಾಲಿನ್ಯ ತಡೆಗೆಟ್ಟಲು ಉತ್ತಮ ಮಾರ್ಗವನ್ನು ಇವರು ತೋರಿಸಿಕೊಟ್ಟಿದ್ದಾರೆ.

ಈ ಮಾಡಿಫೈ ಟಾಟಾ ನ್ಯಾನೋ ಕಾರಿಗೆ 80 ಕಿ.ಮೀ ವರೆಗೆ ಚಲಿಸಲು ಸಾಧ್ಯವಾಗುತ್ತದೆ. ಈ ಟಾಟಾ ನ್ಯಾನೋ ಸೋಲಾರ್ ಕಾರು ಒಂದು ಕಿಲೋಮೀಟರ್ ಓಡಲು 80 ಪೈಸೆ ಮಾತ್ರ ವೆಚ್ಚ. ಈ ಕಾರು ನಾಲ್ಕನೇ ಗೇರ್ ನಲ್ಲಿ ಸದ್ದಿಲ್ಲದೇ 80 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಮನೋಜಿತ್ ಮಂಡಲ್ ಅವರು ಬಾಲ್ಯದಿಂದಲೂ ಹೊಸದನ್ನು ಮಾಡಬೇಕೆಂದು ಬಯಸಿದ್ದರು. ಹಾಗಾಗಿ, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕೊರಗದೆ ತಾವೇ ಸೋಲಾರ್ ಕಾರನ್ನು ನಿರ್ಮಿಸಿದ್ದಾರೆ.
ಮನೋಜಿತ್ ಕಾರನ್ನು ಪರಿವರ್ತಿಸುವಾಗ ಹಲವು ಸವಾಲುಗಳನ್ನು ಎದುರಿಸಿದ್ದರು. ಆದರೂ ತಾವು ಅಂದುಕೊಟ್ಟ ರೀತಿಯಲ್ಲಿ ಈ ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದಾರೆ. ಇನ್ನು ರತನ್ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಅವರಿಗೆ ಕಳೆದ ವರ್ಷ ನೀಡಿತು. ಇದೇ ಎಲೆಕ್ಟ್ರಾ ಇವಿ ಸ್ಟಾರ್ಟ್ಅಪ್ ಟಾಟಾ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸಿದೆ.

ಈ ಎಲೆಕ್ಟ್ರಾ ಇವಿ ಹಳೆ ಇಂಧನ ವಾಹನಗಳನ್ನು ಎಲಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲು ಬೇಕಾದ ಟೆಕ್ನಾಲಜಿ ಕಿಟ್ ಅಭಿೃದ್ಧಿಪಡಿಸುತ್ತಿದೆ. ಇದೆ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಿದೆ. ಮಾಡಿಫಿಕೇಶನ್ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 160 ಕಿ.ಮೀವರೆಗೆ ಚಲಿಸಲಿದೆ. ಈ ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರು 10 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ 0-60 ಕಿಮೀ ವರೆಗೆ ವೇಗವನ್ನು ಪಡೆದುಕೊಳ್ಳುತ್ತದೆ.
ಮತ್ತೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಆಗಿ ಬಂದರೆ, ಪರಿಸರಕ್ಕೆ ಹಾನಿಯಾಗದಂತೆ ಇದು ಪರಿಪೂರ್ಣ ಸಿಟಿ ಕಾರ್ ಎಂದು ಸಾಬೀತುಪಡಿಸುತ್ತದೆ. ಈ ಎಲೆಕ್ಟ್ರಾ ಇವಿ ಕಸ್ಟಮ್-ನಿರ್ಮಿತ ನ್ಯಾನೋ ಇವಿಗಾಗಿ 72V ಆರ್ಕಿಟೆಕ್ಚರ್ ಅನ್ನು ಬಳಸಿದೆ. ಈ ಆರ್ಟಿಟೆಕ್ನಚರ್ ಎಲೆಕ್ಟ್ರಾ ಇವಿ ಟಿಗೊರ್ ಇವಿ (ಟ್ಯಾಕ್ಸಿ ಆವೃತ್ತಿ) ಯಿಂದ 140 ಕಿಮೀ ರೇಂಜ್ ಅನ್ನು ವಿಸ್ತರಿಸಲು ಮತ್ತು ಡ್ರೈವಿಂಗ್ ರೇಂಜ್ ಅನ್ನು ಹೆಚ್ಚಿಸಲು ವಿನ್ಯಾಸವನ್ನು ಮಾರ್ಪಡಿಸಲು ಸಹಾಯ ಮಾಡಿತು.
Source: News18


Click it and Unblock the Notifications