ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಿಸುವಲ್ಲಿ ಹೆಲ್ಮೆಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣಕ್ಕಾಗಿಯೇ ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಭಾರತದಲ್ಲಿ ದ್ವಿಚಕ್ರ ವಾಹನ ಸವಾರರು ಮಾತ್ರವಲ್ಲದೆ ಹಿಂಬದಿಯ ಸವಾರರು ಸಹ ಹೆಲ್ಮೆಟ್ ಧರಿಸಬೇಕಾಗುತ್ತದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಈಗ ವಿದೇಶಿ ಕಂಪನಿಯೊಂದು ಹೆಲ್ಮೆಟ್‌ನಷ್ಟೇ ಸಾಮರ್ಥ್ಯವನ್ನು ಹೊಂದಿರುವ ಪೇಟವನ್ನು (ಟರ್ಬನ್) ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ. ಈ ಟರ್ಬನ್ ಅನ್ನು ಕೆನಡಾದ ಸ್ಪಾರ್ಕ್ ಇನ್ನೋವೇಶನ್ಸ್ ಎಂಬ ಕಂಪನಿ ತಯಾರಿಸಿದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಕೆನಡಾದಲ್ಲಿ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಚಿಕ್ ಮೋಟಾರ್‌ಸೈಕಲ್ ಕ್ಲಬ್ ಎಂಬ ಸಂಘಟನೆ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತದೆ. ಬಲಿಷ್ಠವಾದ ಟರ್ಬನ್ ತಯಾರಿಸಲು ಸ್ಪಾರ್ಕ್ ಇನ್ನೋವೇಶನ್ಸ್ ಈ ಕ್ಲಬ್‌ನೊಂದಿಗೆ ಕೈಜೋಡಿಸಿದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಸಿಖ್ಖರು ಟರ್ಬನ್‌ಗೆ ಹೆಚ್ಚು ಒತ್ತು ನೀಡುತ್ತಾರೆ. ಈ ಕಾರಣಕ್ಕಾಗಿಯೇ ಭಾರತದ ಕೆಲವು ರಾಜ್ಯಗಳಲ್ಲಿ ಸಿಖ್ಖರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಟರ್ಬನ್‌ಗಳು ಹೆಲ್ಮೆಟ್‌ಗೆ ಸಮಾನಾಂತರವಾದ ರಕ್ಷಣೆ ನೀಡುತ್ತವೆ ಎಂದು ಹೇಳಲಾಗಿದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಈಗ ಕೆನಡಾ ಕಂಪನಿ ಹೆಚ್ಚು ಸುರಕ್ಷಿತ ಟರ್ಬನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಟರ್ಬನ್'ನಲ್ಲಿ ಸುರಕ್ಷತೆಗಾಗಿ ಮೂರು ಪದರಗಳನ್ನು ಬಳಸಲಾಗಿದೆ. ಮೊದಲು ತೇವಾಂಶವನ್ನು ಹೀರಿಕೊಳ್ಳುವ ಪದರವನ್ನು ಅಳವಡಿಸಲಾಗಿದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ನಂತರ 3 ಡಿ ಮುದ್ರಿತ ಪ್ಲಾಸ್ಟಿಕ್ ಪದರವನ್ನು ನೀಡಲಾಗಿದೆ. ಕೊನೆಯದಾಗಿ ಬುಲೆಟ್ ಪ್ರೂಫ್ ಡೈನಾಮಿಕ್ ಫ್ಯಾಬ್ರಿಕ್ ಪದರವನ್ನು ನೀಡಲಾಗಿದೆ. ಇದು ಸಾಂಪ್ರದಾಯಿಕ ಲೋಹಕ್ಕಿಂತ ಹತ್ತು ಪಟ್ಟು ಪ್ರಬಲವಾಗಿದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಇದರಿಂದ ಈ ಟರ್ಬನ್ ಧರಿಸಿದರೆ ಹೆಲ್ಮೆಟ್‌ಗಿಂತ ಹಲವು ಪಟ್ಟು ಹೆಚ್ಚಿನ ರಕ್ಷಣೆ ಸಿಗುತ್ತದೆ ಎಂಬುದು ಸ್ಪಷ್ಟವಾಗಿದೆ. ಸ್ಪಾರ್ಕ್ ಇನ್ನೋವೇಶನ್ಸ್ ಕೆನಡಾದಲ್ಲಿರುವ ಸಿಖ್ಖರಿಗಾಗಿಯೇ ಈ ವಿಶಿಷ್ಟವಾದ ಟರ್ಬನ್ ತಯಾರಿಸಿದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಈ ಟರ್ಬನ್ ಹೆಚ್ಚು ಗಟ್ಟಿಮುಟ್ಟಾಗಿದ್ದರೂ ಸಾಮಾನ್ಯ ಬಟ್ಟೆಗಳಂತೆ ಸುಲಭವಾಗಿ ತಲೆಯ ಸುತ್ತಲೂ ಮಡಚಬಹುದು. ಇದು ಈ ಟರ್ಬನ್‌ನ ವಿಶೇಷ ಲಕ್ಷಣವಾಗಿದೆ.ಈ ಟರ್ಬನ್ ಅನ್ನು ಪೇಟ ಅಥವಾ ಹೆಲ್ಮೆಟ್‌ನಂತೆ ಬಳಸಬಹುದು ಎಂದು ಅದರ ವಿನ್ಯಾಸಕ ಕ್ರಿಸ್ ಪಿಯರೆ ಹೇಳಿದ್ದಾರೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಅವರು ಈ ಟರ್ಬನ್ ತಯಾರಿಸುವ ನೀಲನಕ್ಷೆಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಯಾರು ಬೇಕಾದರೂ ಈ ನೀಲನಕ್ಷೆಯನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮದೇ ಆದ ಟರ್ಬನ್ ತಯಾರಿಸಬಹುದು.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಭಾರತದ ಕೆಲವು ರಾಜ್ಯಗಳಲ್ಲಿರುವಂತೆ ಕೆನಡಾದ ಸಿಖ್ಖರಿಗೂ ಸಹ ಹೆಲ್ಮೆಟ್ ಇಲ್ಲದೆ ಟರ್ಬನ್'ನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಲು ಅವಕಾಶವಿದೆ ಎಂಬುದು ಗಮನಾರ್ಹ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಭಾರತದಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಭಾರತದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಮೃತ ಪಡುವ ದ್ವಿಚಕ್ರ ವಾಹನ ಸವಾರರ ಸಾವಿಗೆ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವುದೇ ಪ್ರಮುಖ ಕಾರಣವಾಗಿದೆ.

ಹೆಲ್ಮೆಟ್‌ನಷ್ಟೇ ಬಲಿಷ್ಠವಾದ ಟರ್ಬನ್ ಬಿಡುಗಡೆಗೊಳಿಸಿದ ಕೆನಡಾ ಕಂಪನಿ

ಈ ಘಟನೆಗಳನ್ನು ಕಡಿಮೆ ಮಾಡಲು ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.ಇತ್ತೀಚೆಗೆ ಕೇಂದ್ರ ಸರ್ಕಾರವು ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್'ಗಳನ್ನು ಮಾತ್ರ ಬಳಸುವಂತೆ ಆದೇಶ ಹೊರಡಿಸಿದೆ.

Most Read Articles

Kannada
English summary
Canadian company introduces turban which gives more safety than helmet. Read in Kannada.
Story first published: Saturday, June 26, 2021, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X