ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಸ್ಟಾಕ್‌ಹೋಮ್ ಮೂಲದ ದೋಣಿ ತಯಾರಕ ಕಂಪನಿಯಾದ Candela ತನ್ನ ಸಿ 8 ಎಲೆಕ್ಟ್ರಿಕ್ ಹೈಡ್ರೋಫಾಯಿಲ್ ದೋಣಿಯನ್ನು ಕಳೆದ ತಿಂಗಳಷ್ಟೇ ಬಿಡುಗಡೆಗೊಳಿಸಿತ್ತು. ಈ ದೋಣಿ ಈಗ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಎಲೆಕ್ಟ್ರಿಕ್ ದೋಣಿಯ ಬಳಕೆಯ ನಂತರ ಇಂಧನ ಚಾಲಿತ ದೋಣಿ ಹಂತ ಹಂತವಾಗಿ ತೆರೆ ಮರೆಗೆ ಸರಿಯುವ ಸಾಧ್ಯತೆಗಳು ದಟ್ಟವಾಗಿವೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಬಿಡುಗಡೆಯಾದ ಆರು ವಾರಗಳಲ್ಲಿ ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಬೋಟ್'ನ 60 ಕ್ಕೂ ಹೆಚ್ಚು ಯುನಿಟ್ ಗಳು ಮಾರಾಟವಾಗಿವೆ. ಮಾಹಿತಿಗಳ ಪ್ರಕಾರ, Candela ಸಿ 8 ಎಲೆಕ್ಟ್ರಿಕ್ ಫ್ಲೈಯಿಂಗ್ ಬೋಟ್ ಒಂದು ಬೃಹತ್ ಉತ್ಪಾದನಾ ಉತ್ಪನ್ನವಾಗಿದೆ. ಕ್ಯಾಂಡೆಲ್ಲಾ ಕಂಪನಿಯು ಈ ದೋಣಿಯನ್ನು ಸಿ 7 ದೋಣಿಗೆ ಬದಲು ಬಿಡುಗಡೆಗೊಳಿಸಿದೆ. 28 ಅಡಿ ಉದ್ದವಿರುವ ಈ ದೋಣಿ ಎಲೆಕ್ಟ್ರಿಕ್ ಚಾಲಿತವಾಗಿದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಈ ದೋಣಿ ಒಂದು ಜೋಡಿ ಹೈಡ್ರೋಫಾಯಿಲ್‌ಗಳ ಮೇಲೆ ನೀರಿನ ಮೇಲೆ ಹಾರುತ್ತದೆ. ಈ ದೋಣಿಯ ಕೆಳ ಭಾಗದಲ್ಲಿ ಅಳವಡಿಸಿರುವ ಹೈಡ್ರೋಫಾಯಿಲ್ ಯಾವುದೇ ತೊಂದರೆಯಿಲ್ಲದೆ ನೀರಿನ ಮೇಲೆ ಚಲಿಸಲು ಸಹಾಯ ಮಾಡುತ್ತದೆ. ಗಮನಾರ್ಹ ಗಾತ್ರದ Candela ಸಿ 8 ದೋಣಿ ನೀರು ಹಾಗೂ 3 - 4 ಅಡಿ ಆಳದ ಸಮುದ್ರದ ನೀರಿನ ಮೇಲೆ ಸುಲಭವಾಗಿ ಚಲಿಸಲು ಸಾಧ್ಯವಾಗುತ್ತದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಅಲೆಗಳು ತುಂಬಾ ಹೆಚ್ಚಾದಾಗ, ದೋಣಿಯ ಫ್ಲೈಟ್ ಕಂಟ್ರೋಲರ್ ದೋಣಿಯನ್ನು ಮತ್ತೆ ನೀರಿಗೆ ಇಳಿಸುತ್ತದೆ. ಮಾಹಿತಿಯ ಪ್ರಕಾರ, C-POD ಎಂದು ಕರೆಯಲ್ಪಡುವ Candela ಸಿ 8 ದೋಣಿಯಲ್ಲಿ ಹೊಸ ಥ್ರಸ್ಟರ್ ಅನ್ನು ಅಳವಡಿಸಲಾಗಿದೆ. ಈ ಥ್ರಸ್ಟರ್ ಅನ್ನು Candela ಕಂಪನಿಯು ಸ್ವತಃ ತಾನೇ ಅಭಿವೃದ್ಧಿಪಡಿಸಿದೆ. ಸಿ ಪಿಒಡಿ ಒಂದು ಪ್ರತ್ಯೇಕ ಮೋಟಾರ್‌ನಿಂದ ನಡೆಸಲ್ಪಡುವ ಒಂದು ಜೋಡಿ ಪ್ರತಿರೋಧಕ ಪ್ರೊಪೆಲ್ಲರ್‌ಗಳನ್ನು ಬಳಸುತ್ತದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಈ ಪ್ರೊಪೆಲ್ಲರ್ ಸಂಪೂರ್ಣವಾಗಿ ನೀರಿನ ಅಡಿಯಲ್ಲಿ ಮುಳುಗಿರುತ್ತದೆ. ಸಿ ಪಿಒಡಿಯನ್ನು ನಿರ್ದಿಷ್ಟವಾಗಿ Candela ಸಿ 8 ಗಾಗಿ ಹೊಸ ವಿನ್ಯಾಸ ತತ್ವಶಾಸ್ತ್ರದ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆ. Candela ಕಂಪನಿಯ ಎಲೆಕ್ಟ್ರಿಕ್ ಫ್ಲೈಯಿಂಗ್ ಬೋಟ್ ನಾಲ್ಕು ಜನರು ಕೂರುವಷ್ಟು ಸಾಕಷ್ಟು ವಿಶಾಲವಾಗಿದ್ದು, ಸೌಕರ್ಯಗಳು ಹಾಗೂ ಸೋಫಾದ ಕೆಳಗಿರುವ ಡೆಕ್ ಕ್ಯಾಬಿನ್ ನಂತಹ ಹಲವು ಫೀಚರ್ ಗಳನ್ನು ಹೊಂದಿದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಈ ಎಲೆಕ್ಟ್ರಿಕ್ ಬೋಟ್ ನಲ್ಲಿರುವ ಸೋಫಾವನ್ನು ಇಬ್ಬರು ವಯಸ್ಕರು ಹಾಗೂ ಇಬ್ಬರು ಮಕ್ಕಳಿಗೆ ಮಲಗುವ ಹಾಸಿಗೆಯನ್ನಾಗಿ ಪರಿವರ್ತಿಸಬಹುದು. ಇದರ ಜೊತೆಗೆ ಈ ಎಲೆಕ್ಟ್ರಿಕ್ ಬೋಟ್ ನಲ್ಲಿ ಶೌಚಾಲಯ ಹಾಗೂ ಸಿಹಿ ನೀರಿನ ಶವರ್‌ ಹೊಂದಿರುವ ಸ್ನಾನಗೃಹವನ್ನು ಸಹ ನೀಡಲಾಗಿದೆ. ಶೀತ ಹವಾಮಾನ ಅಥವಾ ಸೂರ್ಯನ ರಕ್ಷಣೆಗಾಗಿ ಐಚ್ಛಿಕ ಹಾರ್ಡ್ ಟಾಪ್ ಹಾಗೂ ಪ್ರೀಮಿಯಂ ಸೌಂಡ್ ಸಿಸ್ಟಂಗಳನ್ನು ಸಹ ನೀಡಲಾಗಿದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ನ್ಯಾವಿಗೇಷನ್ ಹಾಗೂ ಕಂಟ್ರೋಲ್ ಗಾಗಿ ಈ ಎಲೆಕ್ಟ್ರಿಕ್ ಬೋಟ್'ನ ಕ್ಯಾಬಿನ್‌ನಲ್ಲಿ 15.4 ಇಂಚಿನ ಹೈ ರೆಸಲ್ಯೂಶನ್ ಟಚ್‌ಸ್ಕ್ರೀನ್ ಗಳನ್ನು ನೀಡಲಾಗಿದೆ. Candela ಸಿ 8 ಎಲೆಕ್ಟ್ರಿಕ್ ಬೋಟ್'ನಲ್ಲಿ ಗರಿಷ್ಠ 30 ನಾಟಿಕಲ್ ಮೈಲುಗಳ ವೇಗದಲ್ಲಿ ಚಲಿಸಬಹುದು. ಈ ಎಲೆಕ್ಟ್ರಿಕ್ ಬೋಟ್ ನಲ್ಲಿ 2.5 ನಾಟಿಕಲ್ ಮೈಲುಗಳಷ್ಟು ಪ್ರಯಾಣಿಸಲು ಸಾಕಾಗುವಷ್ಟು ಬ್ಯಾಟರಿಯನ್ನು ನೀಡಲಾಗಿದೆ. ಈ ಬ್ಯಾಟರಿ 45 ಕಿ.ವ್ಯಾ ಶಕ್ತಿಯನ್ನು ಹೊಂದಿದ್ದು, ಗರಿಷ್ಠ 50 ನಾಟಿಕಲ್ ಮೈಲು ಅಂದರೆ 92 ಕಿ.ಮೀಗಳಷ್ಟು ದೂರ ಚಲಿಸಬಲ್ಲದು.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಈಗ ಓಡಾಡಲು ಸ್ವಂತ ವಾಹನಗಳಿದ್ದರೂ ಟ್ರಾಫಿಕ್ ಕಿರಿ ಕಿರಿ ತಪ್ಪಿದ್ದಲ್ಲ. ಟ್ರಾಫಿಕ್ ಕಿರಿ ಕಿರಿ ತಪ್ಪಿಸಲು ವಿಶ್ವದಾದ್ಯಂತ ಹಾರುವ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚೆನ್ನೈ ಮೂಲದ ವಿನತಾ ಏರೋಮೊಬಿಲಿಟಿ ಕಂಪನಿಯು ಭಾರತದ ಮೊದಲ ಹಾರುವ ಹೈಬ್ರಿಡ್ ಕಾರ್ ಅನ್ನು ಅಭಿವೃದ್ಧಿಪಡಿಸಿದೆ. ಶೀಘ್ರದಲ್ಲಿಯೇ ಲಂಡನ್ ನಲ್ಲಿ ನಡೆಯಲಿರುವ ಏರ್ ಶೋದಲ್ಲಿ ಈ ಕಾರ್ ಅನ್ನು ಅನಾವರಣಗೊಳಿಸಲಾಗುವುದು ಎಂದು ವರದಿಯಾಗಿದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ವಿನತಾ ಏರೋಮೊಬಿಲಿಟಿ ಕಂಪನಿಯು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ. ಇದು ಭಾರತದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರು ಮಾತ್ರವಲ್ಲದೆ ಒಟ್ಟಾರೆಯಾಗಿ ಏಷ್ಯಾದ ಮೊದಲ ಹಾರುವ ಕಾರು ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ವಿನತಾ ಏರೋಮೊಬಿಲಿಟಿ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ವಿಶ್ವದ ಪ್ರಮುಖ ಏರ್‌ ಶೋ ಆದ ಎಕ್ಸೆಲ್‌ನಲ್ಲಿ ಈ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ನಿರ್ಧರಿಸಿದೆ. ಈ ಮೂಲಕ ಏಷ್ಯಾದ ಮೊದಲ ಹೈಬ್ರಿಡ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆಗಳನ್ನು ನಡೆಸಿದೆ. ವಿನತಾ ಏರೋ ಮೊಬಿಲಿಟಿ ಕಂಪನಿಯು ಈ ಹೈಬ್ರಿಡ್ ಹಾರುವ ಕಾರಿನಲ್ಲಿ ಪೂರ್ಣ ಪ್ರಮಾಣದ ಪ್ಯಾರಾಚೂಟ್ ಹಾಗೂ ಏರ್ ಬ್ಯಾಗ್ ಸೌಲಭ್ಯಗಳನ್ನು ಒದಗಿಸಿದೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಈ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿದೆ. ವಿನತಾ ಏರೋ ಮೊಬಿಲಿಟಿ ಕಂಪನಿಯು ಮಾತ್ರವಲ್ಲದೇ ವಿಶ್ವದಾದ್ಯಂತವಿರುವ ಹಲವು ಕಂಪನಿಗಳು ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಹಲವು ಕಂಪನಿಗಳು ಈಗಾಗಲೇ ಹಾರುವ ಕಾರುಗಳ ಪರೀಕ್ಷಾರ್ಥ ಹಾರಾಟವನ್ನು ಪೂರ್ಣಗೊಳಿಸಿವೆ. ಕೆಲವು ಹಾರುವ ಕಾರುಗಳು ಯಶಸ್ಸನ್ನು ಸಹ ಕಂಡಿವೆ.

ನೀರಿನ ಮೇಲೆ ಹಾರುವ ಎಲೆಕ್ಟ್ರಿಕ್ ದೋಣಿ ಅಭಿವೃದ್ಧಿಪಡಿಸಿದ Candela

ಹಾರುವ ಕಾರುಗಳು ಪ್ರಯಾಣಿಕರು ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಗಳಲ್ಲಿ ಕಾಯುವ ತೊಂದರೆಯನ್ನು ತಪ್ಪಿಸುತ್ತವೆ. ಕೆಲವು ಕಂಪನಿಗಳು ಭಾರತದಲ್ಲಿಯೂ ತಮ್ಮ ಹಾರುವ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿವೆ. ಆದರೆ ಈ ಕಾರುಗಳು ಇನ್ನು ಎರಡು - ಮೂರು ವರ್ಷಗಳ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ.

Most Read Articles

Kannada
English summary
Candela develops c 8 electric boat which flies on water details
Story first published: Monday, October 11, 2021, 14:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X