ಹಣ ಸುಲಿಗೆ ಮಾಡಲು ಬಂದವರಿಂದ ರಕ್ಷಿಸಿತು ಕಾರಿನ ಈ ಆಧುನಿಕ ಫೀಚರ್

ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪ್ರಯಾಣಿಸುತ್ತಿದ್ದ ಕಾರು ಚಾಲಕನನ್ನು ರಸ್ತೆಯ ಮಧ್ಯದಲ್ಲಿ ತಡೆದ ಪುಂಡರ ಗುಂಪೊಂದು, ಅಪಘಾತ ಮಾಡಿದ್ದಾರೆಂದು ನಾಟಕವಾಡಿ ಸುಲಿಗೆ ಮಾಡಲು ಮುಂದಾದ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಷ್ಯಗಳು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ದರೋಡೆಕೋರರು ಜೈಲು ಸೇರಿದ್ದಾರೆ.

ಈ ಅನಿರೀಕ್ಷಿತ ಘಟನೆಯಲ್ಲಿ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾ ಪ್ರಮುಖ ಪಾತ್ರ ವಹಿಸಿದೆ. ಸುಲಿಗೆ ಮಾಡಲು ಬಂದವರು ತಮ್ಮ ಸ್ಕೂಟರ್ ಅನ್ನು ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದರು ಎಂದು ಕಟ್ಟುಕಥೆಯನ್ನು ಸೃಷ್ಟಿಸಲು ಹೊರಟಿದ್ದರು. ಆದರೆ ಪೋಲೀಸರು ಸಂಪೂರ್ಣ ಡ್ಯಾಷ್ ಕ್ಯಾಮ್ ವಿಡಿಯೋ ಸಾಕ್ಷ್ಯಾದಾರಗಳನ್ನು ಪರಿಶೀಲಿಸಿ ಪುಂಡರನ್ನು ಜೈಲಿಗಟ್ಟಿದ್ದಾರೆ.

bangalore-viral-video-car-dash-cam-saved-passengers-from-extortionist

ನಡೆದಿದ್ದೇನು? ಕಾರಿನ ಡ್ಯಾಶ್‌ಕ್ಯಾಮ್ ಪ್ರಕಾರ, ಕಾರಿಗೆ ಅಡ್ಡಲಾಗಿ ಕೆಲ ದೂರ ಕಾರಿನ ಮುಂದೆಯೇ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಇದ್ದಕ್ಕಿದ್ದಾಗೆ ಸ್ಕೂಟರ್ ಇಳಿದು ಕಾರನ್ನು ತಡೆಯಲು ಮುಂದಾಗಿದ್ದಾರೆ. ಕಾರಿನ ಗಾಜನ್ನು ಒಡೆಯಲು ಹಾಗೂ ಕಾರಿನಲ್ಲಿದ್ದವರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ನಂತರ ಕಾರು ಚಾಲಕ ಮುಂದೆ ಹೋಗಲು ಪ್ರಯತ್ನಿಸಿದ್ದು, ದುಷ್ಕರ್ಮಿಗಳು ಸ್ಕೂಟರ್ ಅನ್ನು ಕಾರಿಗೆ ಅಡ್ಡವಾಗಿ ನಿಲ್ಲಿಸಿದ್ದಾರೆ.

ಗಾಬರಿಗೊಂಡು ಕಾರು ಚಾಲಕ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸುಮಾರು ನೂರು ಮೀಟರ್‌ಗಳವರೆಗೆ ಸ್ಕೂಟರನ್ನು ಎಳೆದೊಯ್ದಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದವರು ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಬಳಿಕ ಎರಡೂ ವಾಹನಗಳು ಸ್ಥಳಿಯ ಠಾಣೆಯ ಹೊರಗೆ ನಿಂತಿದ್ದವು. ಪೊಲೀಸರಿಗೆ ದೂರು ನೀಡಿದ್ದು ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.

bangalore-viral-video-car-dash-cam-saved-passengers-from-extortionist

ಘಟನೆ ವೇಳೆ ದ್ವಿಚಕ್ರ ವಾಹನ ಸವಾರರು ಮದ್ಯಪಾನ ಮಾಡಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಕಾರು ತಮ್ಮ ಬೈಕನ್ನು ಡಿಕ್ಕಿ ಹೊಡೆದ ಕಾರಣ ಅವರನ್ನು ತಡೆದೆವು ಎಂದು ಪೊಲೀಸರ ಬಳಿ ಹೇಳಿದ್ದಾರೆ, ಆದರೆ ಇದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಕಾರಿನ ಡ್ಯಾಶ್‌ಕ್ಯಾಮ್ ವಿಡಿಯೋಗಳನ್ನು ಪರಿಶೀಲಿಸಿ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರ ಸ್ಪಷ್ಟನೆ: ಯಾವುದೇ ಅಪಘಾತ ಸಂಭವಿಸಿಲ್ಲ, ಇದು ಕೇವಲ ಸುಲಿಗೆ ಮತ್ತು ಕಿರುಕುಳದ ಪ್ರಕರಣ ಎಂದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಈ ವ್ಯಕ್ತಿಗಳು ಕುಡಿದು ವಾಹನ ಚಾಲನೆ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

bangalore-viral-video-car-dash-cam-saved-passengers-from-extortionist

ಕಾರಿನಲ್ಲಿದ್ದವರಿಗೆ ಕನ್ನಡ ಬಾರದ ಕಾರಣ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿರಬಹುದು. ಏಕೆಂದರೆ ವಿಡಿಯೋದಲ್ಲಿ ಮೊದಲು ಕಾರನ್ನು ತಡೆದಾಗ ಅದೊಂದು ಕಡಿಮೆ ಸಂಚಾರವಿರುವ ಸ್ಥಳದಂತೆ ಕಾಣುತ್ತಿದೆ. ಒಮ್ಮೆಲೆ ಮತ್ತೊಂದು ಸ್ಥಳದಲ್ಲಿ ಕಾರನ್ನು ತಡೆದ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿವೆ. ಅಂದರೆ ಈ ಎರಡೂ ದೃಷ್ಯಗಳ ನಡುವೆ ಕಾರು ಚಾಲಕ ಮೊದಲು ತಡೆದ ಸ್ಥಳದಿಂದ ತಪ್ಪಿಸಿಕೊಂಡು ಮುಂದೆ ಬಂದಾಗ ಮತ್ತೊಂದು ಜಾಗದಲ್ಲಿ ಅವರನ್ನು ತಡೆದಿದ್ದಾರೆ.

ಎರಡನೇ ಬಾರಿ ಪುಂಡರು ಕಾರನ್ನು ತಡೆದಾಗ ಆ ಸ್ಥಳದಲ್ಲಿ ಹಲವರ ಸಂಚಾರವಿರುವುದನ್ನು ಕಾಣಬಹುದು. ಅಲ್ಲದೇ ಸ್ಥಳೀಯರು ಕೂಡ ನೆರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಕಾರಿನಲ್ಲಿದ್ದವರಿಗೆ ಘಟನೆಯನ್ನು ಸ್ಪಷ್ಟವಾಗಿ ವಿವರಿಸಲು ಕನ್ನಡ ಬಾರದಿದ್ದರಿಂದ ಗಾಬರಿಗೊಂಡು ಸ್ಕೂಟರ್ ಅನ್ನು ಡಿಕ್ಕಿ ಹೊಡೆದು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 10, 2024, 16:10 [IST]
English summary
Bangalore viral video car dash cam saved passengers from extortionist
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+