ಚಲಿಸುತ್ತಿದ್ದ ಬಸ್‌ಗೆ ಸೈಡ್‌ ಬಿಡದೇ ಕಾರು ಚಾಲಕನ ಬಿಟ್ಟಿ ಶೋ: ತನ್ನಕಾರ್‌ಗೇ ಬಸ್‌ ಗುದ್ದಿಸಿ ನಂತರ ಮಾಡಿದ್ದೇನು?

ಒಂದು ಅಪಘಾತವಾದರೆ ಅದರಲ್ಲಿ ದೊಡ್ಡ ಗಾಡಿಯ ಚಾಲಕನದ್ದೇ ತಪ್ಪು ಎಂದು ಹಲವು ಬಾರಿ ಬಿಂಬಿಸುವುದನ್ನು ಕಂಡಿದ್ದೇವೆ. ಆದರೆ ಇಂತಹ ಸಂಧರ್ಭದಲ್ಲಿ ಹಲವು ಬಾರಿ ಸಣ್ಣ ವಾಹನದ ಚಾಲಕರನ ತಪ್ಪೂ ಇರುತ್ತದೆ. ಇಲ್ಲೊಂದು ಕಡೆ ಕಾರಿನ ಚಾಲಕನೊಬ್ಬ ತಾನು ತೋರಿದ ಅಹಂಕಾರಕ್ಕೆ ತಕ್ಕ ಶಾಸ್ತಿ ಪಡೆದ ಘಟನೆಯೊಂದು ವರದಿಯಾಗಿದೆ.

ಚಲಿಸುತ್ತಿದ್ದ ಬಸ್‌ ಗೆ ದಾರಿ ಬಿಡದೆ ಅಡ್ಡಲಾಗಿ ಚಲಿಸಿ ಅದೇ ಬಸ್‌ ನಿಂದ ಗುದ್ದಿಸಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ಖಾಸಗಿ ಬಸ್ ಒಂದಕ್ಕೆ ಸೈಡ್‌ ಕೊಡದೆ, ಅನೇಕ ಹೊತ್ತಿನವರೆಗೆ ಚಲಿಸಿದರ ಪರಿಣಾಮವಾಗಿ (Car Driver), ರೋಸಿ ಹೋದ ಬಸ್‌ ಸವಾರ ಕಾರಿಗೆ ಗುದ್ದಿದ್ದಾನೆ ಎಂದು ತಿಳಿದು ಬಂದಿದೆ.

Car Driver Blocks Road

ಈ ಘಟನೆಯ ಸಂಪೂರ್ಣ ವಿಡಿಯೋ ಮನೋರಮಾ ನ್ಯೂಸ್‌ ನ ಯ್ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇನ್ನ ಕೇರಳದಲ್ಲಿ ಮೇಲೆ ತಿಳಿಸಿದ ಘಟನೆ ನಡೆದಿದೆ ಎಂದು ತಿಳಿದು ಬಂದರೂ, ನಿರ್ದಿಷ್ಟವಾಗಿ ಎಲ್ಲಿ ಈ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿಲ್ಲ.

ಇನ್ನು ಘಟನೆ ನಡೆಯುವ ಸಂಧರ್ಭದಲ್ಲಿ ಆ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ದೊರೆತಿರುವ ಸಣ್ಣ ವಿಡಿಯೋದಲ್ಲಿ ಖಾಸಗಿ ಬಸ್‌ ಒಂದಕ್ಕೆ ಕೆಂಪು ಬಣ್ಣದ ರೆನಾಲ್ಟ್‌ ಕ್ವಿಡ್‌ ಕಾರೊಂದು ಸೈಡ್‌ ಬಿಡದೇ ಚಲಿಸುತ್ತಿದ್ದುದನ್ನು ಕಾಣಬಹುದು.

ಎರಡೂ ವಾಹನಗಳೂ ಚಲಿಸುತ್ತಿದ್ದುದು ಒಂದು ಸಣ್ಣ ರಸ್ತೆಯಲ್ಲಿ ಆಗಿದ್ದು ಎದುರಿನಿಂದ ವಾಹನಗಳು ಬರದೇ ಇರುವ ಸಂಧರ್ಭದಲ್ಲೂ ಕಾರಿನ ಚಾಲಕ ಬಸ್‌ಗೆ ಸೈಡ್‌ ಕೊಡಲು ನಿರಾಕರಿಸಿದ್ದಾನೆ. ಅಷ್ಟು ಮಾತ್ರವಲ್ಲದೇ, ಬಸ್‌ನಲ್ಲಿರುವ ಪ್ರಯಾಣಿಕರಿಗೆ ತೊಂದರೆ ಆಗಲೆಂದೇ ಆತ ಕಾರನ್ನು ನಿಧಾನವಾಗಿ ಚಲಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

ಬಸ್‌ ಚಾಲಕ ನಿರಂತರವಾಗಿ ಹಾರ್ನ್‌ ಹಾಕಿ ಸೈಡ್‌ ಬಿಡುವಂತೆ ಕೇಳಿಕೊಳ್ಳುತ್ತಿದ್ದರೂ ಕಾರು ಚಾಲಕ ಮಾತ್ರ ಅದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನ ಕೆಲಸವನ್ನು ಮುಂದುವರೆಸಿದ್ದಾನೆ. ಕೊನೆಗೆ ರೋಸಿ ಹೋದ ಬಸ್‌ ಚಾಲಕ ನಿಧಾನವಾಗಿ ಚಲಿಸುತ್ತಿದ್ದ ರೆನಾಲ್ಟ್‌ ಕ್ವಿಡ್‌ ಕಾರು ಬೇಕೆಂದು ಬ್ರೇಕ್‌ ಹಾಕಿದಾಗ ಅದರ ಹಿಂಭಾಗಕ್ಕೆ ತನ್ನ ಬಸ್‌ ಅನ್ನು ತಾಗಿಸಿದ್ದಾನೆ.

ಇನ್ನು ವಿಡಿಯೋದಲ್ಲಿ ಕಾಣುವಂತೆ ಬಸ್‌ ತಾಗಿದಾಗ ಕಾರ್‌ ಚಾಲಕ ಕಾರನ್ನು ನಿಲ್ಲಿಸಿ ಹೊರಗಿಳಿದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರೂ ಕೆಳಗಿಳಿದು ಕಾರನ್ನು ಸುತ್ತುವರೆದಿದ್ದಾರೆ. ಈ ವೇಳೆ ಕಾರ್‌ ಚಾಲಕನಿಗೆ ತನ್ನದೇ ತಪ್ಪು ಎಂದು ತಿಳಿದೋ ಅಥವಾ ಅಲ್ಲಿದ್ದ ಜನರನ್ನು ನೋಡಿ ಭಯದಿಂದಲೋ ಏನೋ, ಏನೂ ಮಾತನಾಡದೇ ಸುಮ್ಮನೆ ನಿಂತಿರುವುದನ್ನು ಕಾಣಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 27, 2023, 14:27 [IST]
English summary
Car driver blocks road and gets hit by private bus
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+