ಅಡ್ಡ ಬಂದ್ರೆ ಪೊಲೀಸ್ ಅಂತಲೂ ನೋಡೋದಿಲ್ಲ... 10 ಕಿ.ಮೀ ಎಳೆದೊಯ್ದ ಡ್ರೈವರ್ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ

ಭಯದಿಂದಲೋ ಅಥವಾ ಅಸಹಜ ಸ್ಥಿತಿಯಿಂದಲೋ ತಿಳಿಯದೇ ಟ್ರಾಫಿಕ್ ಪೊಲೀಸರನ್ನು ಡಿಕ್ಕಿ ಹೊಡೆದು ಎಳೆದೊಯ್ದ ಹಲವು ಘಟನೆಗಳನ್ನು ಈಗಾಗಲೇ ನಾವು ನೋಡಿದ್ದೇವೆ. ಆದರೆ ಮುಂಬೈನಲ್ಲಿ ಡ್ರಗ್ ಸೇವಿಸಿದ ವ್ಯಕ್ತಿಯೋರ್ವ ಅಮಲಿನಲ್ಲಿ ತನ್ನ ಕಾರನ್ನು ತಡೆದು ನಿಲ್ಲಿಸಲು ಯತ್ನಿಸಿದ ಟ್ರಾಫಿಕ್ ಕಾನಿಸ್ಟೇಬಲ್‌ರನ್ನು ಬಾನೆಟ್ ಮೇಲೆ ಎಳೆದೊಯ್ದ ದೃಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆರೋಪಿಯನ್ನು ಆದಿತ್ಯ ಬೆಂಬಡೆ ಎಂದು ಗುರ್ತಿಸಲಾಗಿದೆ, ನಗರದಲ್ಲಿ ಎಷ್ಟೇ ಮಂದಿ ಪೊಲೀಸರು ತಡಿಯಲು ಯತ್ನಿಸಿದರೂ ನಿಲ್ಲಿಸಿಲ್ಲ. ಘಟನೆಯನ್ನು ಗಂಭಿರವಾಗಿ ತೆಗೆದುಕೊಂಡ ಪೊಲೀಸರು ಸುಮಾರು 10 ಕಿ.ಮೀ ಬೆನ್ನಟ್ಟಿ ನಗರದ ಉರಾನ್ ನಾಕಾದ ಗವ್ಹಾನ್ ಫಾಟಾದಲ್ಲಿ ಪೊಲೀಸ್ ವ್ಯಾನ್‌ ಮೂಲಕ ಆತನನ್ನು ತಡೆದು ನಿಲ್ಲಿಸಿದ್ದಾರೆ. ಬಂಧಿಸಿದ ಬಳಿಕವಷ್ಟೇ ಆತ ಮಾದಕದ್ರವ್ಯದ ಅಮಲಿನಲ್ಲಿದ್ದಾನೆ ಎಂಬುದು ತಿಳಿದುಬಂದಿದೆ. ಪೊಲೀಸ್ ಕಾನಿಸ್ಟೇಬಲ್ ಮೇಲೆ ಕೊಲೆ ಯತ್ನ ಆರೋಪದಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Car driver dragged the police man on the bonnet for 10 km

ಮಧ್ಯಾಹ್ನ ಸುಮಾರು 2 ಗಂಟೆಗೆ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ದೃಷ್ಯಗಳು ಸೆರೆಯಾಗಿವೆ. ಮೊದಲಿಗೆ ಆತನನ್ನು ತಡೆಯಲು ಯತ್ನಿಸಿದಾಗ ನಿಲ್ಲಿಸಿಲ್ಲ, ಬಳಿಕ ಟ್ರಾಫಿಕ್ ಪೊಲೀಸರು ಮೋಟಾರ್ ಸೈಕಲ್ ಹತ್ತಿ ವಾಹನವನ್ನು ಹಿಂಬಾಲಿಸಿದರು. ಎರಡನೇ ಬಾರಿ ಕಾನ್ಸ್‌ಟೇಬಲ್ ಸಿದ್ದೇಶ್ವರ್ ಮಾಳಿ ಎಂಬುವರು ರಸ್ತೆ ಮಧ್ಯೆ ಕಾರನ್ನು ನಿಧಾನಗೊಳಿಸಲು ಕಾರಿನ ಮುಂದೆ ನಿಂತಿದ್ದರು. ಆದರೆ, ಕಾರು ಚಾಲಕ ನಿಲ್ಲಿಸದೇ ಆತನ ಮೇಲೆ ಕಾರು ಏರಿಸಿದ್ದಾನೆ.

ಈ ವೇಳೆ ಕಾನಿಸ್ಟೇಬಲ್ ಬಾನೆಟ್ ಮೇಲೆ ಬಿದ್ದು ಆತನೊಂದಿಗೆ ಹೋಗಿದ್ದಾರೆ. ವೇಗವಾಗಿ ಸುಮಾರು 10 ಕಿ.ಮೀ ವರೆಗೆ ಎಳೆದೊಯ್ದಿದ್ದಾನೆ. ವಿವಿಧ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಾಹನದ ವಿಂಡ್‌ಶೀಲ್ಡ್ ಮೇಲೆ ಪೊಲೀಸ್ ತೂಗಾಡುತ್ತಿರುವುದನ್ನು ನೋಡಿದ ಕಂಟ್ರೋಲ್ ರೂಂ ಏನೋ ತಪ್ಪಾಗಿದೆ ಎಂದು ಎಚ್ಚೆತ್ತು ಆತನನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಎಷ್ಟೇ ಪ್ರಯತ್ನಿಸದರೂ ತಪ್ಪಿಸಿಕೊಳ್ಳಲಾಗದೇ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೊಲೆ ಯತ್ನ ಆರೋಪದಡಿ ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿ ಜೈಲಿಗಟ್ಟಿದ್ದಾರೆ.

Car driver dragged the police man on the bonnet for 10 km

ನಾವು ಮೊದಲಿಗೆ ಇದನ್ನು ತಿಳಿದುಕೊಳ್ಳಬೇಕು, ನಗರಗಳಲ್ಲಿ ಟೆಕ್ನಾಲಜಿ ತುಂಬಾ ಮುಂದುವರೆದಿದೆ. ನಾವು ತಪ್ಪು ಮಾಡಿ ಪರಾರಿಯಾಗಲು ಯತ್ನಿಸಿದರೇ ಸಿಕ್ಕಿಬೀಳುವುದಂತೂ ಖಚಿತ. ನೀವು ಯಾವುದೇ ತಪ್ಪು ಮಾಡದಿದ್ದರೂ ಪೊಲೀಸರು ಕೈ ತೋರಿಸಿ ತಡೆದಾಗ ನಿಲ್ಲಿಸಬೇಕು, ಇಲ್ಲದಿದ್ದರೇ ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ಹೆಲ್ಮೆಟ್ ವಿಚಾರವಾಗಿ ತಡೆದರೂ ನಿಲ್ಲಿಸಿ ಚಲನ್ ಹಾಕಿಸಿಕೊಂಡು ನಂತರದ ದಿನಗಳಲ್ಲಿ ದಂಡ ಪಾವತಿಸಬಹುದು. ಆದರೆ ಯಾವುದೇ ಕಾರಣಕ್ಕೂ ಪೊಲೀಸರನ್ನು ನಿರ್ಲಕ್ಷಿಸಬಾರದು.

ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಾರ್ ಡ್ರೈವರ್‌ಗಳು ಪೊಲೀಸರನ್ನು ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದು ಗಾಯಗೊಳಿಸಿರುವ ಹಲವಾರು ಪ್ರಕರಣಗಳಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳಲು ಒಂದು ಕಿಲೋಮೀಟರ್ ಎಳೆದೊಯ್ದಿದ್ದ. ಆದರೂ ಸಿಸಿಟಿವಿ ದೃಷ್ಯಾವಳಿಗಳನ್ನು ಆದರಿಸಿ ಆತನನ್ನು ಅಂದೇ ಬಂದಿಸಿದ್ದರು. ಹೆಚ್ಚಿನ ಪೋಲೀಸ್ ಪಡೆಗಳು ಈಗ ಟೆಕ್ನಾಲಜಿಯಲ್ಲಿ ಮುಂದುವರೆದಿರುವುದರಿಂದ ನಾವು ಒಂದು ಸಿಗ್ನಲ್‌ನಲ್ಲಿ ತಪ್ಪಿಸಿಕೊಂಡರು ಮುಂದಿನ ಸಿಗ್ನಲ್‌ಗೆ ಹೋಗುವಷ್ಟರಲ್ಲಿ ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನೆಯಾಗಿರುತ್ತದೆ.

ಹಾಗಾಗಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನವೇ ವ್ಯರ್ಥ ಎಂದು ಹೇಳಬಹುದು. ಪೊಲೀಸ್ ಅಧಿಕಾರಿಗಳು ನಿಯಮ ಉಲ್ಲಂಘನೆಯನ್ನು ಫೋಟೋ ತೆಗೆದು ಆನ್‌ಲೈನ್‌ನಲ್ಲಿ ಚಲನ್ ನೀಡುತ್ತಾರೆ. ಒಂದು ವೇಳೆ ನಿಮಗೆ ತಪ್ಪಾಗಿ ದಂಡ ವಿಧಿಸಲಾಗಿದೆ ಎಂದು ನೀವು ಭಾವಿಸಿದರೆ ಅದನ್ನು ಪ್ರಶ್ನಿಸಬಹುದು. ಈ ಕುರಿತು ನ್ಯಾಯಾಲಯದಲ್ಲಿ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಕೂಡ ಸಲ್ಲಿಸಬಹುದು. ಇದು ಸುದೀರ್ಘ ಪ್ರಕ್ರಿಯೆಯಾಗಿದ್ದರೂ, ಭಾರತದಲ್ಲಿ ಕುಂದುಕೊರತೆಗಳನ್ನು ಪರಿಹರಿಸಲು ಇದು ಕಾನೂನುಬದ್ಧ ಮಾರ್ಗವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, April 20, 2023, 12:16 [IST]
English summary
Car driver dragged the police on the bonnet 10 km
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+