ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಇತ್ತೀಚೆಗೆ ಮೈಸೂರಿನಲ್ಲಿ 85 ವರ್ಷದ ವ್ಯಕ್ತಿಯೊಬ್ಬರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕಾರು ಚಾಲಕನೊಬ್ಬ ಆಂಬ್ಯುಲೆನ್ಸ್‌ಗೆ ದಾರಿ ಕೊಡದೇ ಅಡ್ಡಿಪಡಿಸಿದ್ದಾನೆ. ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿದ ಕಾರು ಚಾಲಕನಿಗೆ ರೂ.11,000ಗಳ ದಂಡ ವಿಧಿಸಲಾಗಿದೆ.

ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಆದರೆ ಆಸ್ಪತ್ರೆಗೆ ತಲುಪುವುದು ತಡವಾದ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೈಸೂರು ನಗರದ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಕಾರು ಚಾಲಕ ಜಯನಾಥ್ ಎಂಬಾತನೇ ಆಂಬ್ಯುಲೆನ್ಸ್‌ಗೆ ದಾರಿ ಕೊಡದೇ ಅಡ್ಡಿ ಪಡಿಸಿದ ವ್ಯಕ್ತಿ. ಈ ಕಾರಣಕ್ಕೆ ಆತನಿಗೆ 2019ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ತುರ್ತು ವಾಹನಕ್ಕೆ ದಾರಿ ನೀಡದ ಕಾರಣಕ್ಕೆ ರೂ.10,000 ಹಾಗೂ ಅಪಾಯಕಾರಿ ಚಾಲನೆಗೆ ರೂ.1,000 ದಂಡ ವಿಧಿಸಲಾಗಿದೆ.

ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಆಗಸ್ಟ್ 22 ರಂದು 85 ವರ್ಷದ ಚಂದ್ರಶೇಖರ್ ಆಚಾರ್ಯ ಎಂಬುವವರಿಗೆ ಹೃದಯಾಘಾತವಾಗಿತ್ತು. ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ರಾತ್ರಿ 8.30ರ ಸುಮಾರಿಗೆ ಆಂಬ್ಯುಲೆನ್ಸ್ ಹುಣಸೂರು ರಸ್ತೆಯನ್ನು ತಲುಪಿದಾಗ, ಜಯನಾಥ್ ಚಾಲನೆ ಮಾಡುತ್ತಿದ್ದ ಕಾರನ್ನು ರಸ್ತೆಯಲ್ಲಿ ಅಡ್ಡ ನಿಲ್ಲಿಸಲಾಗಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಆಂಬ್ಯುಲೆನ್ಸ್ ಹಲವಾರು ಬಾರಿ ಹಾರ್ನ್ ಮಾಡಿದರೂ, ಸೈರನ್ ಮಾಡಿದರೂ ಜಯನಾಥ್ ತನ್ನ ಕಾರನ್ನು ರಸ್ತೆಯಿಂದ ತೆಗೆದಿಲ್ಲ. ಜಯನಾಥ್ ಕಾರನ್ನು ರಸ್ತೆಯ ಮೇಲೆ ಅಡ್ಡ ನಿಲ್ಲಿಸಿದ್ದರಿಂದ ರಸ್ತೆ ಬ್ಲಾಕ್ ಆಗಿತ್ತು.

ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಆಂಬ್ಯುಲೆನ್ಸ್ ಚಾಲಕ ಕಿಶೋರ್ ಆಂಬ್ಯುಲೆನ್ಸ್‌ನಿಂದ ಕೆಳಗಿಳಿದು ದಾರಿ ನೀಡುವಂತೆ ಜಯನಾಥ್‌ಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ರೋಗಿಯ ಸಂಬಂಧಿಕರು ಸಹ ಆಂಬ್ಯುಲೆನ್ಸ್‌ನಿಂದ ಕೆಳಗಿಳಿದು ಜಯನಾಥನನ್ನು ಅಂಗಲಾಚಿ ಬೇಡಿ ಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಇದರಿಂದಾಗಿ 15 ನಿಮಿಷಗಳ ಅಮೂಲ್ಯ ಸಮಯ ವ್ಯರ್ಥವಾಗಿದೆ. ಆಂಬ್ಯುಲೆನ್ಸ್ ಆಸ್ಪತ್ರೆಗೆ ತಲುಪುವ ಹೊತ್ತಿಗೆ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿ ಮೃತಪಟ್ಟಿದ್ದರು. ಆಸ್ಪತ್ರೆ ತಲುಪಲು ವಿಳಂಬವಾದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಹೃದಯಾಘಾತವಾದಾಗ ಪ್ರತಿ ಸೆಕೆಂಡ್ ಅಮೂಲ್ಯವಾಗಿರುತ್ತದೆ. ಜಯನಾಥ್ ರಿಂದ 15 ನಿಮಿಷ ವ್ಯರ್ಥವಾಗಿದೆ. ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಆಸ್ಪತ್ರೆಗೆ ತಲುಪಿದ್ದರೆ ಆ ವ್ಯಕ್ತಿ ಬದುಕುಳಿಯುತ್ತಿದ್ದರು. ಪೊಲೀಸರು ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿದ ಜಯನಾಥ್ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಆಂಬ್ಯುಲೆನ್ಸ್‌ಗೆ ಅಡ್ಡಿ ಪಡಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಕಾರು ಚಾಲಕ

ಕಳೆದ ವರ್ಷ ಜಾರಿಗೆ ತರಲಾದ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ತುರ್ತು ವಾಹನಗಳಿಗೆ ದಾರಿ ನೀಡದವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ತುರ್ತು ವಾಹನಗಳಲ್ಲಿ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ, ಪೊಲೀಸ್ ವಾಹನಗಳು ಸೇರಿವೆ.

ಗಮನಿಸಿ: ಈ ಲೇಖನದಲ್ಲಿರುವ ಎಲ್ಲಾ ಚಿತ್ರಗಳು ಸಾಂದರ್ಭಿಕ ಚಿತ್ರಗಳು.

Most Read Articles

Kannada
English summary
Car driver fined Rs 11000 for blocking ambulance in Mysuru. Read in Kannada.
Story first published: Monday, September 7, 2020, 18:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X