ರಾಂಗ್ ರೂಟ್‌ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೇಳುವುದೇ ಬೇಡ, ಬೃಹತ್ ರಸ್ತೆಗಳಲ್ಲಿಯೇ ವಾಹನಗಳಿಗೆ ಗಂಟೆಗಟ್ಟೆಲೆ ಸಾಗುವ ಪರಿಸ್ಥಿತಿ ಇದೆ. ಇನ್ನು ಕಿರಿದಾದ ರಸ್ತೆಯಲ್ಲಿ ಒಂದು ದೊಡ್ಡ ವಾಹನ ಸಿಲುಕಿದರೆ ಇಡೀ ರಸ್ತೆ ಜಾಮ್ ಆಗುತ್ತದೆ. ಹಾಗಾಗಿಯೇ ನಗರದಲ್ಲಿ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಲು ನಗರದ ಬಹುತೇಕ ಎಲ್ಲಾ ರಸ್ತೆಗಳಲ್ಲಿಯೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಆದರೂ ಕೆಲ ಕಿಡಿಗೇಡಿಗಳು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಮನಬಂದಂತೆ ಓಡಾಡುತ್ತಾರೆ. ಇತ್ತೀಚೆಗೆ ಇಂಥಹದ್ದೇ ಘಟನೆ ಬೆಳಕಿಗೆ ಬಂದಿದ್ದು, ನಗರದ ಒನ್ ವೇನಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದಿದ್ದಲ್ಲದೇ ಪ್ರಶ್ನಿಸಿದವರ ಮೇಲೆ ದರ್ಪ ತೊರಿದ್ದಾನೆ. ಸಾಲಾಗಿ ವಾಹನಗಳು ಬರುತ್ತಿದ್ದರೆ ಅವುಗಳಿಗೆ ವಿರುದ್ಧವಾಗಿ ಬಂದ ಬಲೆನೋ ಚಾಲಕ ಸ್ಕೂಟರ್ ಚಾಲಕನನ್ನು ಥಳಿಸಿದ್ದಾನೆ.

car-driver-violated-traffic-rules-and-beat-up-the-bike-rider

ಸ್ಕೂಟರ್ ಚಾಲಕ ಎಲ್ಲವನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್‌ ಮಾಡಿದ್ದು, ಈ ಜಗಳವಾಡುವ ವೀಡಿಯೊವನ್ನು ಸೃಜನ್ ಕದಂಬ ಎಂಬ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ನಂತರ ಅದನ್ನು 'ಥರ್ಡ್ ಐ' ತಮ್ಮ ಪುಟದಲ್ಲಿ ರೀ-ಪೋಸ್ಟ್ ಮಾಡಿದೆ. ಮೂಲ ಪೋಸ್ಟ್‌ನಲ್ಲಿ 2 ವೀಡಿಯೊಗಳು ಮತ್ತು ಮಾರುತಿ ಸುಜುಕಿ ಬಲೆನೊದ ಚಿತ್ರವನ್ನು ಹಂಚಿಕೊಂಡು ಕಾರು ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಥಳಿಸಿದ ಕಾರು ಚಾಲಕ: ತಪ್ಪು ದಾರಿಯಲ್ಲಿ ಬಂದಿದ್ದಲ್ಲದೇ ಅಡ್ಡ ಬಂದು ಪ್ರಶ್ನಿಸಿದ ಸ್ಕೂಟರ್ ಚಾಲಕನನ್ನು ಥಳಿಸಲು ಮುಂದಾಗಿದ್ದಾನೆ. ಈ ವಿಡಿಯೋದಲ್ಲಿ ಸ್ಕೂಟರ್ ಚಾಲಕನನ್ನು ನೂಕಿ ಥಳಿಸುವುದು ರೆಕಾರ್ಡ್ ಆಗಿದೆ. ಅಕ್ಕಪಕ್ಕದಲ್ಲಿದ್ದವರು ಕೂಡ ಕಾರು ಚಾಲಕನ ತಪ್ಪನ್ನು ಎತ್ತಿತೋರಿಸಿ ಜಗಳವನ್ನು ಬಿಡಿಸಲು ಮುಂದಾಗಿದ್ದರು. ಬಳಿಕ ಕಾರು ಚಾಲಕ ಕಾರನ್ನೇರಿ ಮುಂದೆ ಹೊಗಲು ಪ್ರಯತ್ನಿಸಿದನಾದರೂ ಮುಂದೆ ಎಲ್ಲಾ ವಾಹನಗಳು ಅಡ್ಡಗಟ್ಟಿದ್ದರಿಂದ ಹಿಂದಕ್ಕೆ ಬಂದಿದ್ದಾನೆ.

car-driver-violated-traffic-rules-and-beat-up-the-bike-rider

ಪೊಲೀಸರ ಅತಿಥಿಯಾದ: ವಿಡಿಯೋ ವೈರಲ್ ಆಗುವ ಮುನ್ನವೇ ಪೊಲೀಸರು ಕಾರು ಚಾಲಕನನ್ನು ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಈ ಕುರಿತ ಚಿತ್ರ ಕೂಡ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಪೊಲೀಸ್ ಠಾಣೆ ಮುಂದೆ ಕಾರನ್ನು ನಿಲ್ಲಿಸಿ ಅದರ ಪಕ್ಕದಲ್ಲಿ ಪೊಲೀಸ್ ಹಾಗೂ ಕಾರು ಚಾಲಕ ನಿಂತಿರುವ ಫೋಟೊ ಈಗ ವೈರಲ್ ಆಗಿದೆ.

ರಾಂಗ್ ರೂಟ್‌ನಲ್ಲಿ ಎಂದಿಗೂ ವಾಹನ ಚಲಾಯಿಸಬೇಡಿ: ಪ್ರತಿಯೊಬ್ಬರು ಆತರುದಲ್ಲಿ ಬೇಗನೆ ತಮ್ಮ ಸ್ಥಳಗಳನ್ನು ತಲುಪಲು ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಆದ್ರೆ ಇದು ದಂಡಕ್ಕೆ ಆಹ್ವಾನಿಸುವುದರ ಜೊತೆಗೆ, ಎದರು ಬರುವ ವಾಹನಗಳಿಗೆ ಅಪಘಾತವಾಗಲು ಕಾರಣವಾಗಬಹುದು. ಹೀಗಿದ್ದಾಗ ಎದರು ಬರುವವರು ಬೇಕಂತಲೇ ಡಿಕ್ಕಿ ಹೊಡೆದರೂ ನಿಮ್ಮದೇ ತಪ್ಪೆಂದು ದಂಡ ವಿಧಿಸಲಾಗುತ್ತದೆ.

car-driver-violated-traffic-rules-and-beat-up-the-bike-rider

ನಗರದ ಎಲ್ಲಾ ರಸ್ತೆಗಳು ಈಗ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿವೆ, ನಿಯಮ ಉಲ್ಲಂಘಿಸಿ ಓಡಾಡಿದರೆ ದಂಡ ಫಿಕ್ಸ್ ಎಂಬುದನ್ನು ಮರೆಯಬೇಡಿ. ಈ ವಿಡಿಯೋದಲ್ಲಿನ ವ್ಯಕ್ತಿ ಕೂಡ ನಿಯಮ ಉಲ್ಲಂಘಿಸಿ ತಪ್ಪಿಸಿಕೊಂಡು ಓಡಾಡಬಹುದು ಎಂದುಕೊಂಡಿರುವಂತಿದೆ. ಆದರೆ ಪೊಲೀಸರು ಕೂಡಲೇ ಕರೆತಂದು ಬುದ್ಧಿ ಕಲಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 19, 2024, 8:30 [IST]
English summary
Car driver violated traffic rules and beat up the bike rider
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+