ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ರಸ್ತೆ ಅಪಘಾತಗಳಿಂದ ಹೆಚ್ಚಿನ ಸಾವು ಸಂಭವಿಸುವ ದೇಶಗಳಲ್ಲಿ ಭಾರತವೂ ಒಂದು. ಪ್ರತಿ ವರ್ಷ ಭಾರತದಲ್ಲಿ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದೇ ಇದಕ್ಕೆ ಮುಖ್ಯ ಕಾರಣ.

ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ಈ ಕಾರಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಮಾಡಲು ಪೊಲೀಸರು ಸಕ್ರಿಯವಾಗಿರುತ್ತಾರೆ. ಇದರ ಸಲುವಾಗಿ ಪೊಲೀಸರು ನಿಯಮಿತವಾಗಿ ವಾಹನಗಳ ತಪಾಸಣೆ ನಡೆಸಿ, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಕೆಲವರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುವುದುಂಟು.

ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ಈ ರೀತಿಯ ಹಲವಾರು ವೀಡಿಯೊಗಳನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಈಗ ವಿಭಿನ್ನ ರೀತಿಯ ವೀಡಿಯೊವೊಂದು ವೈರಲ್ ಆಗಿದ್ದು, ಕರ್ತವ್ಯ ನಿರತ ಹೋಂ ಗಾರ್ಡ್ ಸುರಕ್ಷತೆ ಬಗ್ಗೆ ಪ್ರಶ್ನೆ ಎದುರಾಗುವಂತೆ ಮಾಡಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ರಾಜಸ್ಥಾನದ ಬಿಕಾನೆರ್‌ನಲ್ಲಿ ಹೋಂ ಗಾರ್ಡ್ ಒಬ್ಬರು ಕರ್ತವ್ಯದಲ್ಲಿದ್ದಾಗ ಕಾರೊಂದು ಬಂದಿದೆ. ಆ ಕಾರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಾಂಗ್ ಸೈಡಿನಲ್ಲಿ ಬಂದಿದೆ. ಈ ಕಾರಣಕ್ಕೆ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಕಾರಿಗೆ ಅಡ್ಡ ಬಂದು ಕಾರನ್ನು ನಿಲ್ಲಿಸಲು ಯತ್ನಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ಆದರೆ ಕಾರಿನ ಚಾಲಕ ವಾಹನವನ್ನು ನಿಲ್ಲಿಸಿಲ್ಲ. ಇದರಿಂದಾಗಿ ಹೋಂ ಗಾರ್ಡ್ ಅನಿರೀಕ್ಷಿತವಾಗಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಆದರೂ ಕಾರು ಚಾಲಕ ಕಾರು ನಿಲ್ಲಿಸದೇ ಕಾರನ್ನು ಚಾಲನೆ ಮಾಡಿದ್ದಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ಹೋಂ ಗಾರ್ಡ್ ಬಾನೆಟ್‌ ಮೇಲೆ ನೇತಾಡಿಕೊಂಡು ಸುಮಾರು 200 ಮೀಟರ್ ಸಾಗಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಚಾಲಕ ಸೃಷ್ಟಿಸಿದ ಈ ಅವಾಂತರದ ವೀಡಿಯೊ ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ಈ ವೀಡಿಯೊದಲ್ಲಿ ಹೋಂ ಗಾರ್ಡ್ ಕಾರಿನ ಬಾನೆಟ್ ಹಿಡಿದು ಕೊಂಡಿರುವುದನ್ನು ಕಾಣಬಹುದು. ಈ ವೇಳೆ ಹಲವು ದ್ವಿಚಕ್ರ ವಾಹನಗಳು ಹಾದುಹೋಗುತ್ತವೆ. ವರದಿಗಳ ಪ್ರಕಾರ ದ್ವಿಚಕ್ರ ವಾಹನ ಚಾಲಕರು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ಕಾರಿನ ಡ್ರೈವರ್ ಕಾರನ್ನು ನಿಲ್ಲಿಸಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಈ ಘಟನೆ ಸೆಪ್ಟೆಂಬರ್ 19ರ ಸಂಜೆ ನಡೆದಿದೆ. ಘಟನೆಯಲ್ಲಿ ಹೋಂ ಗಾರ್ಡ್ ಗಾಯಗೊಂಡಿದ್ದು, ಅವರನ್ನು ಸಮೀಪದಲ್ಲಿದ್ದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯನ್ನು ಪಡೆದ ನಂತರ, ಹೋಮ್ ಗಾರ್ಡ್ ಮನೆಗೆ ಮರಳಿದ್ದಾರೆಂದು ವರದಿಯಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸಿ ಬಾನೆಟ್ ಮೇಲೆ ಹೋಂ ಗಾರ್ಡ್ ಹೊತ್ತೊಯ್ದ ಕಾರು ಚಾಲಕ

ಈ ಅಮಾನವೀಯ ಕೃತ್ಯ ಎಸಗಿದ ಕಾರು ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದು, ಶೀಘ್ರದಲ್ಲಿಯೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ಟೈಮ್ಸ್ ನೌ ವರದಿ ಮಾಡಿದೆ.

Most Read Articles

Kannada
English summary
Car driver violates traffic rules carries home guard on bonnet. Read in Kannada.
Story first published: Monday, September 21, 2020, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X