ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರಕ್ಕೆ ಗ್ರಾಹಕ ನ್ಯಾಯಾಲಯ ಆದೇಶ

ಭಾರತದ ಆಟೋಮೊಬೈಲ್ ಕ್ಷೇತ್ರವು ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಭಾರತದಲ್ಲಿ ಹಲವು ಅಂತರರಾಷ್ಟ್ರೀಯ ಮಟ್ಟದ ಜನಪ್ರಿಯ ವಾಹನ ತಯಾರಕರು ತಮ್ಮ ಐಷಾರಾಮಿ ವಾಹನಗಳನ್ನು ಮಾರಾಟಗೊಳಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ವಿವಿಧ ಬಗೆಯ ಕಾರುಗಳ ಆಯ್ಕೆಗಳಿವೆ.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಹೆಚ್ಚಿನ ತಯಾರಕರು ತಮ್ಮ ಗ್ರಾಹಕರಿಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಮತ್ತು ಸುರಕ್ಷಿತ ಕಾರುಗಳನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಹಿಂದೆ ಹೊಸ ಕಾರು ಖರೀದಿಸುವಾಗ ಪೂರ್ಣ ಗಾತ್ರದ ಸ್ಪೇರ್ ವ್ಹೀಲ್ ಅನ್ನು ನೀಡುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ.ಅನೇಕ ಕಾರುಗಳು ಮತ್ತು ಎಸ್‌ಯುವಿಗಳು ಈಗ ಸ್ಪೇಸ್ ಸೇವರ್‌ಗಳು ಅಥವಾ ಸಣ್ಣ ಗಾತ್ರದ ಸ್ಪೇರ್ ವ್ಹೀಲ್ ಗಳನ್ನು ನೀಡುತ್ತವೆ. ಒಬ್ಬ ಗ್ರಾಹಕ ಈ ವಿಷಯವನ್ನು ಇಟ್ಟು ಗ್ರಾಹಕ ನ್ಯಾಯಾಲಯ ಮೊರೆಹೋಗಿದ್ದರು. ಗ್ರಾಹಕ ನ್ಯಾಯಾಲಯವು ವಿಚಾರಣೆ ನಡೆಸಿ ಕಾರು ತಯಾರಕರಕ ಕಂಪನಿ ಮತ್ತು ಡೀಲರ್‌ ಕಾರು ಖರೀದಿಸಿದ ಗ್ರಾಹಕರಿಗೆ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಕೇರಳದ ಕಾಸರಗೋಡಿನಲ್ಲಿ ಈ ಘಟನೆ ನಡೆದಿದೆ. ಸಿ.ಮಾಧವನ್ ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದಾರೆ. ಈ ಹೊಸ ಕಾರಿನಲ್ಲಿ ಕಾರು ಸಣ್ಣ ಗಾತ್ರದ ಸ್ಪೇರ್ ವ್ಹೀಲ್ ಅನ್ನು ನೀಡಿದ್ದರು, ಗ್ರಾಹಕರು ಇದರಿಂದ ತೃಪ್ತರಾಗಲಿಲ್ಲ ಮತ್ತು ಅವರು ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋದರು.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಈ ವಿಷಯವನ್ನು ವಿಶ್ಲೇಷಿಸಿದ ನಂತರ ನ್ಯಾಯಾಲಯವು ಸಣ್ಣ ಗಾತ್ರದ ಸ್ಪೇರ್ ವ್ಹೀಲ್ ವಾಹನದ ನಿರ್ವಹಣೆಯ ಗುಣಲಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಕಾರು ವರ್ಕ್ ಶಾಪ್ ಇಲ್ಲದೆ ಕಡೆಗಳಲ್ಲಿ ಪಂಕ್ಚರ್ ಆದರೆ ಯಾವುದೇ ಸ್ಪೇರ್ ವ್ಹೀಲ್ ಇಲ್ಲದೇ ಯಾವುದೇ ಪ್ರಯೋಜನವಿಲ್ಲ..

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಕಾರಿನ ಬೆಲೆಯು ಸ್ಟೆಪ್ನಿ ಅಥವಾ ಸ್ಪೇರ್ ವ್ಹೀಲ್ ವೆಚ್ಚವನ್ನು ಒಳಗೊಂಡಿರುತ್ತದೆ ಮತ್ತು ತಯಾರಕರು ಪೂರ್ಣ ಗಾತ್ರದ ಸ್ಪೇರ್ ವ್ಹೀಲ್ ಅರ್ಹರು ಎಂದು ನ್ಯಾಯಾಲಯವು ಉಲ್ಲೇಖಿಸಿದೆ. ವಾಹನ ತಯಾರಕರು ಮತ್ತು ಡೀಲರ್ ಅವರು ವಾಹನದಲ್ಲಿ ಸ್ಪೇರ್ ವೀಲ್ ಅಥವಾ ಸ್ಪೇಸ್ ಸೇವರ್ ಅನ್ನು ಆಯ್ಕೆಯಾಗಿ ನೀಡಿದರೆ ಗ್ರಾಹಕರು ತಮ್ಮ ಫ್ಲಾಟ್ ಟೈರ್ ಸರಿಪಡಿಸಲು ವಾಹನವನ್ನು ಹತ್ತಿರದ ವರ್ಕ್ ಶಾಪ್ ತೆಗೆದುಕೊಂಡು ಹೋಗಬಹುದು.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಎರಡೂ ಪಕ್ಷಗಳನ್ನು ಆಲಿಸಿದ ನ್ಯಾಯಾಲಯವು ಗ್ರಾಹಕರ ಪರವಾಗಿ ತೀರ್ಪು ನೀಡಿತು. ಕಾರು ತಯಾರಕರು ಮತ್ತು ಡೀಲರ್ ರೂ.20,000 ಗಳನ್ನು ನ್ಯಾಯಾಲಯದ ವೆಚ್ಚವಾಗಿ ಮತ್ತು ರೂ.5,000 ಗಳನ್ನು ಗ್ರಾಹಕರಿಗೆ ಪ್ರಕ್ರಿಯೆಗೆ ಪಾವತಿಸಬೇಕು. ಕಾಸರಗೋಡು ಗ್ರಾಹಕರ ನ್ಯಾಯಲಯ ಈ ತೀರ್ಪು ನೀಡಿದೆ.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಕಳೆದ ವರ್ಷ, ಭಾರತ ಸರ್ಕಾರವು ಕೇಂದ್ರ ಮೋಟಾರು ವಾಹನ ನಿಯಮಗಳ ತಿದ್ದುಪಡಿಯ ಮೂಲಕ ಕಾರಿನಲ್ಲಿ ಸ್ಪೇರ್ ವ್ಹೀಲ್ ನಿಯಮವನ್ನು ಬದಲಾಯಿಸಿತ್ತು. ಬೂಟ್‌ನಲ್ಲಿ ಜಾಗವನ್ನು ಮುಕ್ತಗೊಳಿಸಲು ಹೊಸ ನಿಯಮವನ್ನು ಪರಿಚಯಿಸಲಾಯಿತು.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಹೊಸ ತಿದ್ದುಪಡಿಯ ಪ್ರಕಾರ, 8 ಜನರು ಕುಳಿತುಕೊಳ್ಳಬಹುದಾದ ಮತ್ತು ಟ್ಯೂಬ್ ಲೆಸ್ ಟೈರ್ ಹೊಂದಿರುವ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅಥವಾ ಟೈರ್ ರಿಪೇರಿ ಕಿಟ್ ಹೊಂದಿರುವ ಕಾರು ಸ್ಪೇರ್ ವೀಲ್ ಇಟ್ಟುಕೊಳ್ಳುವುದನ್ನು ತಪ್ಪಿಸಬಹುದು.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಭಾರತೀಯ ಮಾರುಕಟ್ಟೆಯಲ್ಲಿ TPMS ನೊಂದಿಗೆ ನೀಡಲಾಗುವ ಹಲವಾರು ಕಾರುಗಳಿವೆ. ಇತ್ತೀಚೆಗೆ ಫೋರ್ಡ್ ಇಕೋಸ್ಪೋರ್ಟ್‌ನ ಹೊಸ ಆವೃತ್ತಿಯನ್ನು ಪರಿಚಯಿಸಿತು, ಟೈಲ್‌ಗೇಟ್‌ನಲ್ಲಿ ಯಾವುದೇ ಸ್ಪೇರ್ ವ್ಹೀಲ್ ಅನ್ನು ಅಳವಡಿಸಲಾಗಿಲ್ಲ. ಬದಲಾಗಿ ತಯಾರಕರು ಪಂಕ್ಚರ್ ರಿಪೇರಿ ಕಿಟ್ ಅನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಈ ಸಂದರ್ಭದಲ್ಲಿ, ಸಿ.ಮಾಧವನ್ ಯಾವ ಕಾರನ್ನು ಖರೀದಿಸಿದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಹೊಸ ನಿಯಮವು ಎಲ್ಲಾ ರೀತಿಯ ವಾಹನಗಳಿಗೆ ಅನ್ವಯಿಸುತ್ತದೆ ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಸಹಾಯ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಥಾಣೆ ಜಿಲ್ಲಾ ಗ್ರಾಹಕ ನ್ಯಾಯಾಲಯವು ಖ್ಯಾತ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ಡೀಲರ್ ಗಳಿಗೆ ಸರಿಯಾದ ಸೇವೆ ನೀಡಿಲ್ಲವೆಂಬ ಕಾರಣಕ್ಕೆ ರೂ.6 ಲಕ್ಷಗಳ ದಂಡವನ್ನು ಕಳೆದ ವರ್ಷ ವಿಧಿಸಿತ್ತು. ತಾವು ಖರೀದಿಸಿದ ಸ್ಕೋಡಾ ಕಾರು ಸತತವಾಗಿ ತೊಂದರೆಯನ್ನು ಅನುಭವಿಸಿದರೂ ಕಂಪನಿಯು ಸರಿಪಡಿಸದೇ ಇದ್ದ ಕಾರಣಕ್ಕೆ ಗ್ರಾಹಕರೊಬ್ಬರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಪಾಲ್ಘರ್ ನಿವಾಸಿ ಧನೇಶ್ ಮೋಥೆ ಎಂಬುವವರು 2014ರಲ್ಲಿ ಜೆಎಂಡಿ ಆಟೋದಿಂದ ರೂ.8 ಲಕ್ಷ ಮೌಲ್ಯದ ಕಾರನ್ನು ಖರೀದಿಸಿದ್ದರು. ಕಾರು ಖರೀದಿಸಿದ ಕೆಲವು ದಿನಗಳಲ್ಲಿ ಬ್ರೇಕ್, ಪವರ್ ವಿಂಡೋಸ್, ಸಸ್ಪೆಂಷನ್ ಹಾಗೂ ಎಂಜಿನ್‌ಗಳಲ್ಲಿ ಸಮಸ್ಯೆಗಳು ಕಂಡು ಬಂದವು. ಧನೇಶ್ ಮೋಥೆ ಈ ಸಮಸ್ಯೆಯನ್ನು ಮಾರಾಟಗಾರರ ಗಮನಕ್ಕೆ ತಂದರೂ ಅವರು ತೊಂದರೆಯನ್ನು ಸರಿಪಡಿಸಲಿಲ್ಲ. ಗ್ರಾಹಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆಯಲ್ಲಿ ಕಾರು ಮಾರಾಟಗಾರರು ಹಾಗೂ ಕಂಪನಿ ಕಾರಿನ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದು, ತಪ್ಪು ಎಸಗಿರುವುದು ಕಂಡು ಬಂದಿದೆ.

ಫುಲ್ ಸೈಜ್ ಸ್ಪೇರ್ ವ್ಹೀಲ್ ಕಾರು ಖರೀದಿದಾರರಿಗೆ ನೀಡದಕ್ಕೆ ರೂ.25 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಹೊಸ ತಿದ್ದುಪಡಿಯು ಬೂಟ್‌ನಲ್ಲಿ ಹೆಚ್ಚಿನ ಜಾಗವನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ ಇದರಿಂದ ಎಲೆಕ್ಟ್ರಿಕ್ ವಾಹನ ತಯಾರಕರು ಚಾಲನಾ ಶ್ರೇಣಿಯನ್ನು ಹೆಚ್ಚಿಸಲು ಕಾರಿನಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್‌ಗಳನ್ನು ಸ್ಥಾಪಿಸಬಹುದು. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಜನಪ್ರಿಯಗೊಳಿಸಲು ಸರ್ಕಾರವು ಈ ಹಿಂದೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.

Most Read Articles

Kannada
English summary
Car maker compensate consumer with rs 25000 to give small spare wheel consumer court kerala details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X