ಕಾರುಗಳಿಗೆ ರಾಜ ಮಾರ್ಯಾದೆ ನೀಡುವ ಐಷಾರಾಮಿ ಹೋಟೆಲ್
ಸಾಕು ನಾಯಿಗಳನ್ನು ಬರಮಾಡಿಕೊಳ್ಳುವ ಐಷಾರಾಮಿ ಹೋಟೆಲ್ ಗಳ ಬಗ್ಗೆ ನೀವು ಕೇಳಿರಬಹುದು. ಆದರೆ ಯಾವತ್ತಾದರೂ ಕಾರುಗಳಿಗೂ ರಾಜ ಮಾರ್ಯಾದೆ ನೀಡುವ ಐಷಾರಾಮಿ ಹೋಟೆಲ್ ಗಳ ಬಗ್ಗೆ ಕೇಳಿರುವೀರಾ? ಹಾಗೊಂದು ವೇಳೆ ವಾಹನ ಪ್ರೇಮಿಗಳು ಮೋಜಿನ ಪ್ರಯಾಣಕ್ಕೆ ಹೊರಡುವುದಾದ್ದಲ್ಲಿ ಈ ಹೋಟೆಲ್ ಬಗ್ಗೆಯೂ ತಿಳಿದುಕೊಳ್ಳಲು ಮರೆಯದಿರಿ.
ವಿಮಾನ ನಿಲ್ದಾಣಗಳಲ್ಲಿ ವಾರಗಟ್ಟಲೆ ನಿಲುಗಡೆಗೊಳಿಸಿದ ಕಾರುಗಳು ಪ್ರಯಾಣ ಮುಗಿಸಿ ಹಿಂತಿರುಗಿ ಬಂದು ನೋಡಿದಾಗ ಧೂಳಿನಿಂದ ತುಂಬಿಕೊಂಡಿರುತ್ತದೆ. ಇಂತಹದೊಂದು ಸಮಸ್ಯೆಗೆ ಲಂಡನ್‌ನ ವಿಶ್ವ ಪ್ರಖ್ಯಾತ ಹೀಥ್ರೂ ವಿಮಾನ ನಿಲ್ದಾಣ ಪರಿಹಾರ ಕಂಡು ಹುಡುಕಿದೆ.

ಗುಡ್ ಟು ಗೊ ಪಾರ್ಕಿಂಗ್ ಎಂಬ ವಿನೂತನ ಕಾರು ಸೇವೆಯನ್ನು ಆರಂಭಿಸಲಾಗಿದ್ದು, ಮಾಲಿಕರ ಅನುಪಸ್ಥಿತಿಯಲ್ಲೂ ಕಾರನ್ನು ಆರೈಕೆ ಮಾಡಲಾಗುವುದು.

ಕಾರು ಪಾರ್ಕ್ ಹೋಟೆಲ್ ನಲ್ಲಿ ವಿವಿಧ ರೀತಿಯ ಸೇವೆಗಳನ್ನು ಒದಗಿಸಲಾಗುತ್ತದೆ. ಉದಾಹರಣೆಗೆ ಡಿಲಕ್ಸ್ ಜ್ಯೂನಿಯರ್ ಸ್ಯೂಟ್, ಕಾರಿಗೆ ಹೆಚ್ಚುವರಿ ಸ್ಥಳಾವಕಾಶವನ್ನು ನೀಡುತ್ತದೆ.

ಬೀಚ್ ಬದಿಯ ಪ್ಯಾರಡೈಸ್ ಸ್ಯೂಟ್, ರನ್ವೇ ಪೆಂಟ್ ಹೌಸ್, ಬ್ರೀತ್ ಟೇಕಿಂಗ್ ಗಳು ಇತರ ಪ್ರಮುಖ ಸೇವೆಗಳಿಗಳಾಗಿವೆ. ಇಲ್ಲಿ ಬ್ರೀತ್ ಟೇಕಿಂಗ್ ನಲ್ಲಿ ವಿಮಾನಗಳ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೀಕ್ಷಿಸಬಹುದಾಗಿದೆ.

ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಇಲ್ಲಿ ಸೇವೆ ನೀಡಲಾಗುತ್ತದೆ. ಒಟ್ಟಿನಲ್ಲಿ ನಿಮ್ಮ ಅನುಪಸ್ಥಿತಿಯಲ್ಲೂ ಕಾರಿಗೆ ಗರಿಷ್ಠ ಆರೈಕೆ ದೊರಕಲಿದೆ.

ಕಾರುಗಳನ್ನು ತೊಳೆದು ಸ್ವಚ್ಛ ಮಾಡಿಕೊಡಲಾಗುವುದು. ಹೆಡ್ ಲ್ಯಾಂಪ್ ಗಳಿಗೆ ವಿಶೇಷ ರೀತಿಯ ಪೊಲಿಶ್ ಸಹ ಮಾಡಿಕೊಡಲಾಗುವುದು.

ಮಸ್ಸಾಜ್ ಸೇವೆಯೂ ಇದರಲ್ಲಿ ಪ್ರಮುಖವೆನಿಸುತ್ತದೆ. ಈ ಎಲ್ಲ ಸೇವೆಗಳು ಸರಿ ಸುಮಾರು 7,000 ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








