ಕಳಪೆ ಪಿಕ್ಅಪ್ ಬಗ್ಗೆ ಕಾರು ಮಾಲೀಕ ದೂರು: 6 ವರ್ಷಗಳ ವಿಚಾರಣೆ ಬಳಿಕ ಪರಿಹಾರ ನೀಡಲು ಕೋರ್ಟ್ ಅದೇಶ

ಗ್ರಾಹಕರು ತಮ್ಮ ಮೆಚ್ಚಿನ ಕಾರನ್ನು ಬಹುನಿರೀಕ್ಷೆಯಿಂದ ಖರೀದಿಸುತ್ತಾರೆ. ತಾವು ಖರೀದಿಸಿದ ಕಾರಿನ ಕಂಪನಿಯಿಂದ ಉತ್ತಮ ಸರ್ವಿಸ್ ಅನ್ನು ಬಯಸುತ್ತಾರೆ. ಕೆಲವರು ತಮ್ಮಗೆ ಸರಿಯಾದ ಸರ್ವಿಸ್ ಸಿಗದೇ ಮೋಸ ಆಗಿದೆ ಎಂದು ಗ್ರಾಹಕರ ನ್ಯಾಯಲಯದ ಮೊರೆಹೋಗುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಜನಪ್ರಿಯ ಕಾರು ತಯಾರಕ ಕಂಪನಿಯ ವಿರುದ್ದ ನ್ಯಾಯಲದ ಮೊರೆ ಹೋಗಿದ್ದಾರೆ.

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಕಂಪನಿಯ ವಿರುದ್ದ ಕಳಪೆ-ಗುಣಮಟ್ಟದ ಸರ್ವಿಸ್ ಎಂದು ಗ್ರಾಹಕ ನ್ಯಾಯಲಕ್ಕೆ ದೂರು ನೀಡಿದ್ದಾರೆ. ನ್ಯಾಯಲಯ ಈ ಪ್ರಕರಣವನ್ನು ವಿಚಾರಣೆ ಮಾಡಿ ರೂ,20,000 ಕಾರು ಮಾಲೀಕನಿಗೆ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಅಲ್ಲದೇ ನ್ಯಾಯಾಲಯವು ಅವರ ಕಾರನ್ನು ಉಚಿತವಾಗಿ ಸರಿಪಡಿಸಲು ಕಂಪನಿಗೆ ಆದೇಶಿಸಿದೆ. ಈ ಪ್ರಕರಣವು ಬೆಂಗಳೂರಿನಲ್ಲಿ ನಡೆದಿದ್ದು, ಮೈಲಸಂದ್ರ ರಸ್ತೆಯ ನಿವಾಸಿ 35 ವರ್ಷದ ದಿನೇಶ್ ಕುಮಾರ್ ಪಿಪಿ ಎಂಬ ವ್ಯಕ್ತಿ 2015 ರಲ್ಲಿ ಫೋಕ್ಸ್‌ವ್ಯಾಗನ್ ವೆಂಟೊ 1.5 ಡೀಸೆಲ್ ಹೈಲೈನ್ ಎಂ7 ಕಾರನ್ನು ಖರೀದಿಸಿದರು.

ಕಳಪೆ ಪಿಕ್ಅಪ್ ಬಗ್ಗೆ ಕಾರು ಮಾಲೀಕ ದೂರು

ಅವರು ತಮ್ಮ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದರು ಎಂದು ಅವರು ಹೇಳಿದ್ದಾರೆ. 2016ರ ಅಕ್ಟೋಬರ್‌ನಲ್ಲಿ ಕಾರಿನ ಮಾಲೀಕನಿಗೆ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ಕರೆ ಬಂದಿತು. ನಿಮ್ಮ ಕಾರನ್ನು ಹೊರಸೂಸುವಿಕೆ ನಿಯಮಗಳನ್ನು ಅನುಸರಿಸಲು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡಲು ಕರೆ ಮಾಡಿದ್ದೇವೆ ಎಂದು ಹೇಳಿದರು. ಅವರು ಕರೆ ಮಾಡಿರುವುದರಿಂದ, ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ನ ಅಧಿಕೃತ ಡೀಲರ್ ಮತ್ತು ಸರ್ವಿಸ್ ಸೆಂಟರ್ ಆದ, ಹೊಸೂರು ಮುಖ್ಯ ರಸ್ತೆಯ ಸಿಂಗಸಂದ್ರದಲ್ಲಿರುವ ಎಲೈಟ್ ಮೋಟಾರ್ಸ್ ಪ್ರೈವೇಟ್‌ನಲ್ಲಿ ತಮ್ಮ ಫೋಕ್ಸ್‌ವ್ಯಾಗನ್ ವೆಂಟೊ ಕಾರನ್ನು ನೀಡಿದ್ದರು.

ಇದರ ನಂತರ ಅವರು 2016ರ ಅಕ್ಟೋಬರ್ 28 ರಂದು ಡೀಲರ್‌ಶಿಪ್‌ನಿಂದ ಕಾರನ್ನು ಮರಳಿ ಪಡೆದರು. ನಂತರ ಅವರು ಕಾರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅದರ ಪಿಕ್ ಅಪ್ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುವುದು ಅವರ ಗಮನಕೆ ಬಂದಿತು. ಇಂಜಿನ್‌ನಿಂದ ವಿಚಿತ್ರ ಮತ್ತು ದೊಡ್ಡ ಶಬ್ದ ಬರಲು ಪ್ರಾರಂಭವಾಯ್ತು. ಇದರಿಂದ ಈ ಸಮಸ್ಯೆಗಳನ್ನು ಸರಿಪಡಿಸಲು ಕಾರಿನ ಮಾಲೀಕರಾದ ದಿನೇಶ್ ಅವರು ಅದನ್ನು ಸರಿಪಡಿಸಲು ಕಂಪನಿಯ ಡೀಲರ್ ಬಳಿ ತೆಗೆದುಕೊಂಡು ಹೋದರು.

ಆದರೆ ಅದು ಯಾವುದೇ ಫಲ ನೀಡಿಲ್ಲ. ಯಾಕೆಂದರೆ ಡೀಲರ್‌ಶಿಪ್‌ಗೆ ಹಲವಾರು ಭಾರೀ ತೆಗೆದುಕೊಂಡು ಹೋದರು, ಯಾವುದೇ ತಂತ್ರಜ್ಞರು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಗುಣಮಟ್ಟದ ಸರ್ವಿಸ್'ನ ಕೊರತೆಯಿಂದ ನಿರಾಶೆಗೊಂಡ ನಂತರ ಮಾಲೀಕರು ಸಹಾಯಕ್ಕಾಗಿ ನೇರವಾಗಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ತೆರಳಿ ಅಲ್ಲಿ ಅವರ ಸಮಸ್ಯೆಯನ್ನು ಹೇಳಿಕೊಂಡರು. ಆದರೆ ಅಲ್ಲಿ ಕೂಡ ನಿರ್ಲಕ್ಷ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಅಂತಿಮವಾಗಿ ನಿರಾಸೆಗೊಂಡು, 2016ರ ಡಿಸೆಂಬರ್ 6 ರಂದು ತಯಾರಕರು ಮತ್ತು ಡೀಲರ್‌ಶಿಪ್ ವಿರುದ್ಧ ದೂರನ್ನು ಸಲ್ಲಿಸಿದರು.

ಆದರೂ ಅವರು ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಇದರ ನಂತರ ದೀನೆಶ್ ಕುಮಾರ್ ಅವರು 2017ರ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರು 3ನೇ ಹೆಚ್ಚುವರಿ ನಗರ ಗ್ರಾಹಕರ ಆಯೋಗಕ್ಕೆ ಕಳಪೆ ಸರ್ವಿಸ್ ಎಂದು ಕಾರು ತಯಾರಕರ ವಿರುದ್ಧ ದೂರು ಸಲ್ಲಿಸಲು ಮುಂದಾದರು. ಇದರ ನಂತರ ಕಂಪನಿಯ ವಕೀಲರು ಅಂತಿಮವಾಗಿ ಉತ್ತರಿಸಿದರು ಮತ್ತು ದೂರು ಸುಳ್ಳು ಮತ್ತು ದುರುದ್ದೇಶಪೂರಿತವಾಗಿದೆ ಎಂದು ಹೇಳಿದ್ದಾರೆ ಮತ್ತು ಇದು ಅಂತಾರಾಷ್ಟ್ರೀಯವಾಗಿ ಹೆಸರಾಂತ ವಾಹನ ತಯಾರಕರಿಗೆ ಕಿರುಕುಳ ನೀಡುವ ಉದ್ದೇಶದಿಂದ ಮಾಡಲಾಗಿದೆ ಎಂದರು.

ದಿನೇಶ್ ಕುಮಾರು ಅವರ ಕಾರ್ ಅನ್ನು ಹಲವಾರು ಬಾರಿ ಸರ್ವಿಸ್ ಮಾಡಲಾಗಿದೆ ಮತ್ತು ಸರಿಪಡಿಸಲಾಗಿದೆಯಾದರೂ, ಎಮಿಷನ್-ಸಂಬಂಧಿತ ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಅಪ್‌ಗ್ರೇಡ್ ಪಿಕ ಅಪ್ ಮೇಲೆ ಪರಿಣಾಮ ಬೀರಿದೆ ಮತ್ತು ಇಂಜಿನ್ ಶಬ್ದವನ್ನು ಉಂಟುಮಾಡಿದೆ ಎಂಬುವುದು ಸುಳ್ಳು ಎಂದು ವಕೀಲರು ಹೇಳಿದರು. 2023ರ ಜನವರಿ 20 ರಂದು ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಎರಡೂ ಕಡೆಯಿಂದ ಸುಮಾರು ಆರು ವರ್ಷಗಳ ವಿಚಾರಣೆಯ ನಂತರ ಅಂತಿಮವಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

ರಿಪೇರಿ ಸ್ಟೇಷನ್‌ನಲ್ಲಿ ಗ್ರಾಹಕರ ಕಾರನ್ನು ಸರಿಪಡಿಸಲು ವಿಫಲವಾಗಿದ್ದರೂ, ದಿನೇಶ್ ಕುಮಾರ್ ತನ್ನ ಹಕ್ಕನ್ನು ಬೆಂಬಲಿಸಲು ತಜ್ಞರ ವರದಿಯಂತಹ ಸಾಕಷ್ಟು ಪುರಾವೆಗಳನ್ನು ಒದಗಿಸಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ. ಗ್ರಾಹಕರು ಡೀಲರ್‌ಶಿಪ್‌ನಲ್ಲಿ ಯೋಗ್ಯವಾದ ಸರ್ವಿಸ್ ಪಡೆದಿದ್ದಾರೆ ಎಂದು ಸಾಬೀತು ಆಗಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಇನ್ನು ಈ ರಿಪೇರಿಗಳನ್ನು ಉಚಿತವಾಗಿ ಮಾಡಬೇಕು, ಕುಮಾರ್‌ಗೆ ರೂ. 10,000 ಪರಿಹಾರ ಹಾಗೂ ನ್ಯಾಯಾಲಯದ ವೆಚ್ಚ 10,000 ರೂ ಭರಿಸಲು ಅದೇಶ ನೀಡಿದರು.

Article Published On: Wednesday, February 15, 2023, 17:41 [IST]
English summary
Car pickup reduced post service court orders automaker to pay compensation details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+