ಹೊಸ ಉದ್ಯಮ ವ್ಯವಹಾರಗಳಿಗೆ ನಾಂದಿ ಹಾಡಿದ ಕರೋನಾ ವೈರಸ್
ಭಾರತದಲ್ಲಿ ಕರೋನಾ ವೈರಸ್ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವೈರಸ್ ಭಾರತದಲ್ಲಿ ಕಳೆದ ಎರಡು ತಿಂಗಳಿನಿಂದ ಹಾವಳಿಯನ್ನುಂಟು ಮಾಡುತ್ತಿದೆ. ಇದರಿಂದಾಗಿ ಭಾರತವು ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದೆ.

ಈ ಮಹಾಮಾರಿ ವೈರಸ್ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನರು ಕೆಲಸ ಕಳೆದುಕೊಂಡಿದ್ದಾರೆ. ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯುವ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಇದರಿಂದಾಗಿ ಎಲ್ಲಾ ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡವು. ಅನೇಕ ಉದ್ಯಮಗಳು ಶಾಶ್ವತವಾಗಿ ಬಂದ್ ಆದವು.

ಲಾಕ್‌ಡೌನ್ ಕೆಲವರ ಮೇಲೆ ತಾತ್ಕಾಲಿಕ ಪರಿಣಾಮವನ್ನುಂಟು ಮಾಡಿದರೆ, ಇನ್ನೂ ಕೆಲವರ ಮೇಲೆ ಶಾಶ್ವತ ಪರಿಣಾಮವನ್ನುಂಟು ಮಾಡಿದೆ. ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿ ಕೆಲವು ಕಂಪನಿಗಳು ನೌಕರರನ್ನು ಕೆಲಸದಿಂದ ವಜಾ ಮಾಡಿವೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಬಹುತೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಆದರೆ ಮಾರಣಾಂತಿಕ ಕರೋನಾ ವೈರಸ್ ಹೊಸ ಉದ್ಯೋಗಗಳ ಸೃಷ್ಟಿಗೂ ಕಾರಣವಾಗಿದೆ. ಕರೋನಾ ವೈರಸ್ ಹರಡ ಬಹುದೆಂಬ ಭೀತಿಯಿಂದ ಜನರು ಆಂಟಿಸೆಪ್ಟಿಕ್ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

ಇದರಿಂದಾಗಿ ಮಾಸ್ಕ್ ಹಾಗೂ ಆಂಟಿಸೆಪ್ಟಿಕ್‌ಗಳನ್ನು ತಯಾರಿಸುವ ಕಂಪನಿಗಳು ಹೊಸದಾಗಿ ಆರಂಭವಾಗಿವೆ. ಇದರ ಜೊತೆಗೆ ಪ್ರಮುಖ ನಗರಗಳಲ್ಲಿ ವಾಹನಗಳನ್ನು ಸ್ವಚ್ವಗೊಳಿಸುವ ಘಟಕಗಳನ್ನು ತೆರೆಯಲಾಗುತ್ತಿದೆ. ವೈರಸ್ ಹರಡದಂತೆ ತಡೆಯುವುದೇ ಇದರ ಮುಖ್ಯ ಉದ್ದೇಶ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಕಾರಣಕ್ಕೆ ಬಹಳಷ್ಟು ಜನರು ಸಾರ್ವಜನಿಕ ವಾಹನಗಳ ಬದಲಿಗೆ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಕರೋನಾ ವೈರಸ್ ವಾಹನಗಳ ಮೂಲಕವೂ ಸಹ ಹರಡುತ್ತದೆ ಎಂಬ ಆತಂಕವಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಕೆಲವು ಖಾಸಗಿ ಕಂಪನಿಗಳು ವಾಹನಗಳನ್ನು ಸ್ಯಾನಿಟೈಜೆಷನ್ ಮಾಡುವ ಕೇಂದ್ರಗಳನ್ನು ತೆರೆಯುತ್ತಿವೆ.

ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಯಾನಿಟೈಜೆಷನ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಇದರ ಜೊತೆಗೆ ಭಾರತದ ಹಲವಾರು ಪ್ರಮುಖ ನಗರಗಳಲ್ಲಿ ಸ್ಯಾನಿಟೈಜೆಷನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.ಸ್ಯಾನಿಟೈಜೆಷನ್ ಉದ್ಯಮಕ್ಕೆ ಈಗ ಹೆಚ್ಚಿನ ಬೇಡಿಕೆ ಉಂಟಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಮೊದಲು ಕೇವಲ ವಾಟರ್ ವಾಶ್ ಮಾಡುತ್ತಿದ್ದ ಕಂಪನಿಗಳು ಈಗ ಜೊತೆಯಲ್ಲಿ ಸ್ಯಾನಿಟೈಜೆಷನ್ ಕೇಂದ್ರಗಳನ್ನು ತೆರೆಯುತ್ತಿವೆ. ಆರ್ಥಿಕ ವ್ಯವಸ್ಥೆಗೆ ಚೇತರಿಕೆ ನೀಡುವ ಕಾರಣಕ್ಕೆ ಲಾಕ್‌ಡೌನ್‌ಗೆ ಸ್ವಲ್ಪ ಪ್ರಮಾಣದ ವಿನಾಯಿತಿ ನೀಡಲಾಗಿದೆ.

ಇದರಿಂದ ಇಷ್ಟು ದಿನ ಮನೆಯಲ್ಲಿ ಬಂಧಿಯಾಗಿದ್ದ ಜನರು ಮನೆಗಳಿಂದ ಹೊರಬರಲು ಆರಂಭಿಸಿದ್ದಾರೆ. ಆದರೆ ಜನರಲ್ಲಿ ವೈರಸ್ ಹರಡಬಹುದೆಂಬ ಭೀತಿ ಇರುವ ಕಾರಣಕ್ಕೆ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಇದನ್ನು ಗಮನದಲ್ಲಿಟ್ಟುಕೊಂಡು ಸ್ಯಾನಿಟೈಜೆಷನ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಸ್ಯಾನಿಟೈಜೆಷನ್ ಕೇಂದ್ರಗಳಲ್ಲಿ ವಾಹನಗಳ ಆಧಾರದ ಮೇಲೆ ರೂ. 20ರಿಂದ ರೂ. 100ರವರೆಗೆ ಶುಲ್ಕ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ ಕನಿಷ್ಠ ರೂ. 20 ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಕನಿಷ್ಠ ರೂ. 50ರಿಂದ ರೂ. 100ರವರೆಗೆ ಶುಲ್ಕ ವಿಧಿಸಲಾಗುತ್ತದೆ.


Click it and Unblock the Notifications