ಕಾರಿನಲ್ಲಿ ಪ್ರಯಾಣಿಸುವಾಗ ವಾಕರಿಕೆ ಬರುತ್ತಾ.. ಇದಕ್ಕೆ ಪರಿಹಾರವೇನು?

ಕಾರು, ಬಸ್‍ನಲ್ಲಿ ಪ್ರಯಾಣಿಸುವಾಗ ಅನೇಕರಿಗೆ ವಾಂತಿ ಹಾಗೂ ವಾಕರಿಕೆ ಸಮಸ್ಯೆಗಳು ಕಾಡುತ್ತೇವೆ. ಅಂತಹವರಿಗೆ ವಾಹನ ಪ್ರಯಾಣವು ಆರಾಮದಾಯಕವಲ್ಲ ಎಂದು ಹಲವರು ಹೇಳುತ್ತಾರೆ. ಇದು ಯಾವ ಕಾರಣಕ್ಕೆ ಸಂಭವಿಸುತ್ತದೆ? ಇದನ್ನು ತಡೆಯುವ ಮಾರ್ಗವೇನು? ಇದಕ್ಕೆ ಶಾಶ್ವತ ಪರಿಹಾರವೇನು? ಎಂಬುದರ ಬಗ್ಗೆ ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ನಮ್ಮಲ್ಲಿ ಅನೇಕರಿಗೆ ಪ್ರಯಾಣದ ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ಕಾರು, ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಸಂಚರಿಸುವಾಗ ವಾಂತಿ, ಮೂರ್ಛೆ ಹೋಗುವಂತ ಅನುಭವವಾಗುತ್ತದೆ. ಕೆಲವರಿಗೆ ಬೋಟ್ ನಲ್ಲಿ ಪ್ರಯಾಣಿಸುವಾಗಲು ಸಮಸ್ಯೆ ಉಂಟಾಗುತ್ತದೆ. ಮತ್ತೆ ಹಲವರಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಈ ರೀತಿಯ ಅನಾರೊಗ್ಯ ಉಂಟಾಗುತ್ತದೆ. ಈ ರೀತಿಯ ತೊಂದರೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಮೋಷನ್ ಸಿಕ್ನೆಸ್' ಎನ್ನುತ್ತಾರೆ. ಅದೇನೆಂದರೆ, ವ್ಯಕ್ತಿಯೊಬ್ಬನಿಗೆ ಪ್ರಯಾಣದಿಂದ ಸಮಸ್ಯೆ ಉಂಟಾಗುವುದು ಎಂಬ ಅರ್ಥವನ್ನು ನೀಡುತ್ತದೆ.

ಕಾರಿನಲ್ಲಿ ಪ್ರಯಾಣಿಸುವ ವಾಕರಿಕೆ ಬರುತ್ತಾ.. ಇದಕ್ಕೆ ಪರಿಹಾರವೇನು?

ಈ ಸಮಸ್ಯೆಗೆ ಮುಖ್ಯ ಕಾರಣವೆಂದರೇ ಅದು ನಮ್ಮ ಮೆದುಳು. ನಮ್ಮ ದೇಹದ ಕೆಲವು ಅಂಗಾಂಗಗಳು, ನಾವು ಪ್ರಯಾಣಿಸುತ್ತಿರುವ ಮಾಹಿತಿಯನ್ನು ಮೆದುಳಿಗೆ ಕಳುಹಿಸಿದರೆ, ಇನ್ನೂ ಹಲವು ಭಾಗಗಳು ನಾವು ಪ್ರಯಾಣಿಸುತ್ತಿಲ್ಲ ಎಂಬ ಮಾಹಿತಿಯನ್ನು ಕಳುಹಿಸುತ್ತೇವೆ. ಉದಾಹರಣೆಗೆ, ನಾವು ಪ್ರಯಾಣಿಸುವಾಗ, ಕಿಟಕಿಯಿಂದ ನೋಡಿದಾಗ ಸುತ್ತಲಿನ ಮರಗಳು, ಬೆಟ್ಟಗಳು ನಮ್ಮೊದೊಂದಿಗೆ ಪ್ರಯಾಣಿಸುತ್ತಿರುವಂತೆ ಭಾಸವಾಗುತ್ತದೆ. ಅದು ನಾವು ಪ್ರಯಾಣಿಸುತ್ತಿರುವ ಬಗ್ಗೆ ಮಾಹಿತಿಯನ್ನು ಮೆದುಳಿಗೆ ಕಳುಹಿಸಿದರೆ, ನಮ್ಮ ದೇಹದ ಇತರೆ ಭಾಗಗಳು ನಾವು ಒಂದೇ ಸ್ಥಳದಲ್ಲಿ ಕುಳಿತಿರುವ ಮಾಹಿತಿಯನ್ನು ರವಾನಿಸುತ್ತವೆ.

ಈ ರೀತಿಯಾಗಿ, ಮೆದುಳಿಗೆ ಎರಡು ವಿಭಿನ್ನ ರೀತಿಯ ಮಾಹಿತಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ, ನಾವು ಪ್ರಯಾಣಿಸುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಗೊಂದಲ ಉಂಟಾಗುತ್ತದೆ. ಇದು ವಾಂತಿ, ವಾಕರಿಕೆ ಮತ್ತು ಮೂರ್ಛೆ ಸಮಸ್ಯೆಗೆ ಕಾರಣವಾಗುತ್ತದೆ. ಬಹುತೇಕ ಎಲ್ಲರಿಗೂ ಈ ಸಮಸ್ಯೆ ಕಾಡುವುದಿಲ್ಲ. ಕೆಲವರಿಗೆ ಮಾತ್ರ ಉಂಟಾಗುತ್ತದೆ ಎಂದು ಮಾತ್ರವೇ ಹೇಳಬಹುದು. ಸರಿ.. ಈ ಸಮಸ್ಯೆ ಉಂಟಾದರೆ ನಾವು ಏನು ಮಾಡಬೇಕೆಂದು ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ ಅದರ ಬಗ್ಗೆ ತಿಳಿಯಿರಿ.

ಟ್ರಾವೆಲ್ ಸಿಕ್ನೆಸ್ ತಡೆಯುವ ಮಾರ್ಗಗಳು:
ಟ್ರಾವೆಲ್ ಸಿಕ್ನೆಸ್ ಗೂ ಔಷಧಿಗಳು ಲಭ್ಯವಿದೆ. ಈ ರೀತಿಯ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಮಾಡಿ, ಯಾವ ರೀತಿಯಾಗಿ ಪ್ರಯಾಣದಿಂದ ತೊಂದರೆಯಾಗುತ್ತಿದೆ ಎಂಬುದನ್ನು ತಿಳಿಸಿ, ಅದಕ್ಕೆ ಅವರಿಂದ ಸೂಕ್ತ ಔಷಧಿಯನ್ನು ಪಡೆದುಕೊಳ್ಳಬಹುದು. ನೀವು ಪ್ರಯಾಣಿಸುವ 1-2 ಗಂಟೆಗಳ ಮೊದಲು ಈ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಪ್ರಯಾಣದ ಸಮಯದಲ್ಲಿ ಈ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು. ಎಚ್ಚರಿಕೆ.. ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರವಷ್ಟೇ ಈ ಔಷಧಿಯನ್ನು ತೆಗೆದುಕೊಳ್ಳಿ.

ಕಾರು ಹಾಗೂ ಬಸ್ ಸೇರಿದಂತೆ ಇತರೆ ವಾಹನದಲ್ಲಿ ಪ್ರಯಾಣಿಸುವರೂ ಈ ರೀತಿಯ ಸಮಸ್ಯೆಯನ್ನು ಎದುರಿಸಿದರೆ, ಪ್ರಯಾಣದ ವೇಳೆ ಅತಿಯಾಗಿ ತಿನ್ನುವುದು ಮತ್ತು ಕುಡಿಯುವುದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಇದು ನಿಮ್ಮ ಅನಾರೋಗ್ಯದ ಸಾಧ್ಯತೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಹೆವಿ ಫುಡ್ ಸೇವನೆಯು ವಾಂತಿಗೆ ಕಾರಣವಾಗಬಹುದು. ಅಲ್ಲದೆ, ಆಲ್ಕೊಹಾಲ್ ಸೇವನೆ ಸಹ ನಮ್ಮ ದೇಹವನ್ನು ನಿರ್ಜಲೀಕರಣಗೊಳಿಸಲಿದ್ದು, ಇದು ತಲೆನೋವು ಮತ್ತು ವಾಕರಿಕೆಯಂತಹ ಸಮಸ್ಯೆಗಳನ್ನು ನಮಗೆ ತಂದೊಡ್ಡಬಹುದು.

ಸ್ಟ್ರಾಂಗ್ ಸ್ಮೆಲ್ ಸಹ ವಾಂತಿಯನ್ನು ಉಂಟುಮಾಡಬಹುದು. ಮತ್ತೊಂದೆಡೆ, ಕೆಲವು ಸೆಂಟ್ ಅಥವಾ ಡಿಫ್ಯೂಸರ್ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು. ಅದಕ್ಕಾಗಿ ನಿಮಗೆ ಅನಾನುಕೂಲವಾಗದಂತಹ ಸೂಕ್ಷ್ಮವಾದ ಸೆಂಟ್ ಅನ್ನು ಬಳಕೆ ಮಾಡಿರಿ. ಅಲ್ಲದೆ, ಮಿಡಲ್ ಸೀಟ್ ಅಥವಾ ಹಿಂಭಾಗದಲ್ಲಿರುವ ಸೀಟ್ ನಲ್ಲಿ ಕುಳಿತುಕೊಳ್ಳುವುದರಿಂದ ಈ ರೀತಿಯ ಸಮಸ್ಯೆ ಬರಬಹುದು. ಬಹುತೇಕ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊಳ್ಳುವುದು ತುಂಬಾ ಒಳ್ಳೆಯದು. ಜೊತೆಗೆ ತಾಜಾ ಮತ್ತು ಶುದ್ಧ ಗಾಳಿ ದೊರೆಯುವಂತೆ ನೋಡಿಕೊಳ್ಳಿ. ಇದು ನಿಮಗೆ ವಾಕರಿಕೆ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕಾರಿನಲ್ಲಿ ಪ್ರಯಾಣಿಸುವ ನಡುವೆ ಒಂದು ಚಿಕ್ಕನಿದ್ರೆ ಮಾಡುವುದರಿಂದ ಟ್ರಾವೆಲ್ ಸಿಕ್ನೆಸ್ ದೂರವಾಗುತ್ತದೆ. ಚೂಯಿಂಗ್ ಗಮ್ ಅಗಿಯುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡಲಿದ್ದು, ಅದು ನಿಮ್ಮ ಗಮನವನ್ನು ಬೇರೆಡೆಗೆ ಇರಲು ಸಹಾಯ ಮಾಡುತ್ತದೆ. ನೀವು ಪ್ರಯಾಣದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಂಗೀತವನ್ನು ಕೇಳುವುದು ಉತ್ತಮ ಮಾರ್ಗವಾಗಿದೆ. ಸಂಗೀತವನ್ನು ಕೇಳುವುದರಿಂದ ರಾಸಾಯನಿಕಗಳು ಮತ್ತು ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಅದು ನಿಮ್ಮಲ್ಲಿ ಬೇರೆ ಭಾವನೆಯನ್ನು ಉಂಟುಮಾಡುತ್ತದೆ. ಇದರಿಂದ ಈ ಸಮಸ್ಯೆ ದೂರವಾಗುತ್ತದೆ.

Article Published On: Monday, December 12, 2022, 15:30 [IST]
English summary
Car travel nasia what is the solution
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+