ಮಗದೊಂದು ಟೈಟಾನಿಕ್ ದುರಂತ?

By Nagaraja

ಸಮುದ್ರ ತೀರಾ ಪ್ರದೇಶದಲ್ಲಿ ಗಂಟೆಗೆ 80 ಕೀ.ಮೀ. (50ಮೈಲ್) ವೇಗದಲ್ಲಿ ಬೀಸುವ ಗಾಳಿಯ ಭೀತಿಯಿಂದ ಹಡಗೊಂದನ್ನು ತಪ್ಪಿಸುವ ಹಾಗೂ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆ ವೇಳೆ ಎಡವಟ್ಟು ಸಂಭವಿಸಿದ್ದು, ಇದರ ಭವಿಷ್ಯತ್ ಪರಿಣಾಮವೆಂಬಂತೆ ಸಮುದ್ರ ತೀರದಲ್ಲೇ ಹಡಗು ಮಗುಚಿದ ಘಟನೆ ವರದಿಯಾಗಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ 52,000 ಟನ್ ಭಾರದ ಕಾರು ಸಾಗಾಣೆ ಸಾಮರ್ಥ್ಯದ ಈ ಹಡಗಿನಲ್ಲಿ 1,400 ಕಾರುಗಳನ್ನು ಹೊತ್ತುಕೊಂಡು ಸಾಗಿಸಲಾಗಿತ್ತು. ಸದ್ಯಕ್ಕೆ ಹಡಗಿನಲ್ಲಿ ಸಾಗಿಸುತ್ತಿದ್ದ ದುಬಾರಿ ಕಾರುಗಳಿಗೆ ಹಾನಿ ಸಂಭವಿಸಿದೆಯೇ ಎಂಬುದು ತಿಳಿದು ಬಂದಿಲ್ಲ.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ಹ್ಯಾಂಪ್‌ಶೈರ್ ಬಂದರಿನಿಂದ ಹೊರಟ ಹಡಗು ಸೌಂಥಪ್ಟನ್ ಹಾಗೂ ಐಸಲ್ ಆಫ್ ವೈಟ್ ನಡುವಣ ಬ್ರಾಂಬಲ್ ಬ್ಯಾಂಕ್ ತಲುಪಿದ ವೇಳೆ Hoegh Osaka ಹಡಗಿಗೆ ಇಂತಹದೊಂದು ದುರಂತ ಎದುರಾಗಿದೆ.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ವೇಗದಿಂದ ಬೀಸುವ ಗಾಳಿಯಿಂದ ಪಾರಾಗುವ ನಿಟ್ಟಿನಲ್ಲಿ ರಕ್ಷಣಾ ಕಾರ್ಮಿಕರು ಉದ್ದೇಶಪೂರ್ವಕವಾಗಿಯೇ ಸಮುದ್ರ ತೀರ ಪ್ರದೇಶದ ಮರಳು ದಿಣ್ಣೆಯಲ್ಲಿ ಹಡಗನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದರು. ಆದರೆ ದುರದೃಷ್ಟವಶಾತ್ ಹಡಗು ತಲೆ ಕೆಳಗಾಗಿ ಮಗುಚಿ ಬಿದ್ದಿದೆ.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ಈ ಹಡಗಿನಲ್ಲಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ವ್ರೈತ್, 65 ಮಿನಿ ಹಾಗೂ 1200ರಷ್ಟು ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಸೇರಿದಂತೆ ಒಟ್ಟು 1,400 ದಷ್ಟು ವಾಹನಗಳನ್ನು ಸಾಗಿಸಲಾಗಿತ್ತು.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ತಕ್ಷಣಕ್ಕೆ ಸ್ಥಳಕ್ಕಾಗಮಿಸಿದ ಸಮುದ್ರ ತೀರ ಪ್ರದೇಶ ರಕ್ಷಣಾ ತಂಡವು ಎಲ್ಲ 25 ಸಿಬ್ಬಂದಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ಇದೀಗ ಘಟನೆಯ ಸಂಬಂಧ ವಿಸೃತ ತನಿಖೆಯನ್ನು ಆರಂಭಿಸಲಾಗಿದೆ. ಪ್ರಾಥಮಿಕ ತನಿಖಾ ವರದಿಯಲ್ಲಿ ಸಿಂಗಾಪುರಕ್ಕೆ ಸೇರಿದ ಈ ಹಡಗಿನಲ್ಲಿ 105 ಜೆಸಿಬಿ ಉಪಕರಣಗಳನ್ನು ಸಾಗಿಸಲಾಗಿತ್ತು.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ಹಡಗು ಮಗುಚುವುದರ ಹಿಂದೆ ಮಾನವ ಎಡವಟ್ಟು ಸಂಭವಿಸಲಾಗಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಆದರೆ ಖಂಡಿತ ಅಮಿತ ಭಾರದಿಂದ ಅವಘಡ ಸಂಭವಿಸಿಲ್ಲ ಎಂಬುದನ್ನು ತನಿಖೆ ತಂಡ ಸ್ಪಷ್ಟಪಡಿಸಿದೆ.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ಹಡಗು ಮಗುಚಿದ ತಕ್ಷಣ ತೀರಾ ಪ್ರದೇಶ ತಂಡವು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಚುರುಕು ಮುಟ್ಟಿಸಿದ್ದರು.

ಸಮುದ್ರ ತೀರದಲ್ಲಿ ಮಗುಚಿದ ಹಡಗು

ಒಟ್ಟಿನಲ್ಲಿ ಈ ಘಟನೆಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರಿಸಿದಂತೆಯೇ ಬಹಳ ವರ್ಷಗಳ ಹಿಂದೆ ನಡೆದ ಟೈಟಾನಿಕ್ ದುರಂತವನ್ನು ನೆನಪಿಸುವಂತಿತ್ತು.

More from DriveSpark

Article Published On: Wednesday, January 7, 2015, 16:41 [IST]
English summary
Cargo ship carrying over 1400 luxury cars stranded on a sandbank.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+