ಅಟ್ಲಾಂಟಿಕ್ ಸಮುದ್ರದಲ್ಲಿ ಸಬ್‌ಮೆರಿನ್‌ನಲ್ಲಿ ಸ್ಪೋಟವಾಗಿದ್ದು ಹೇಗೆ?: ಸ್ಪೋಟದಲ್ಲಿ ಬಲಿಯಾಗಿದ್ದು ಯಾರು?
ಅಟ್ಲಾಂಟಿಕ್ ಸಾಗರದಲ್ಲಿಟೈಟಾನಿಕ್ ಅವಶೇಷಗಳನ್ನು ನೋಡಲು ಹೋಗಿದ್ದ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿ ಸುಮಾರು ಮೂರು ದಿನಗಳ ಬಳಿಕ ನೌಕೆಯಲ್ಲಿದ್ದ ಐವರೂ ಸಹ ದುರಂತ ಸಾವಿಗೀಡಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಶೋಧ ಕಾರ್ಯಕ್ಕೆ ಇಂದು ಕೊನೆಗೆ ದುರಂತ ಆಂತ್ಯದೊಂದಿಗೆ ತೆರೆ ಬಿದ್ದಿದೆ.
1912 ರಲ್ಲಿ ಮೊದಲ ಸಮುದ್ರಯಾನಕ್ಕೆ ತೆರಳಿದ್ದ ಟೈಟಾನಿಕ್ ಹಡಗು ಅಟ್ಲಾಂಟಿಕ್ ಸಾಗರದಲ್ಲಿ ನಡುಭಾಗದಲ್ಲಿದ್ದ ಮಂಜುಗಡ್ಡೆಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ ಸುಮಾರು 1500 ಜನ ದುರಂತ ಅಂತ್ಯ ಕಂಡಿದ್ದರು. ದುರಂತಕ್ಕೀಡಾಗಿದ್ದ ಈ ಟೈಟಾನಿಕ್ ಹಡಗಿನ ಅವಶೇಷಗಳು 1985 ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು.

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೊಡಲು ಓಶಿಯನ್ ಗೇಟ್ ಎಂಬ ಎಕ್ಸ್‌ಪಿಡೀಷನ್ ಸಂಸ್ಥೆ ಸಬ್‌ಮೆರಿನ್ (Titan Submarine) ಮೂಲಕ ಪ್ರವಾಸಿಗರನ್ನು ಹೊತ್ತೊಯ್ಯುತ್ತಿತ್ತು. ಹೀಗೆ ಕಳೆದ ಮೂರು ದಿನಗಳ ಹಿಂದೆ ಇದೇ ರೀತಿಯಲ್ಲಿ ಪ್ರವಾಸಿಗರನ್ನು ಕೊಂಡೊಯ್ದ ಸಬ್‌ಮೆರಿನ್ ಅಟ್ಲಾಂಟಿಕ್ ಸಮುದ್ರದ ಆಳದಲ್ಲಿ ನಾಪತ್ತೆಯಾಗಿತ್ತು. ಇದೀಗ ನೌಕೆಯು ಅಂತಃ ಸ್ಪೋಟಗೊಂಡಿದ್ದು ಅದರಲ್ಲಿದ್ದ ಐವರೂ ಸಾವಿಗೀಡಾಗಿದ್ದಾರೆ.
ಅಂತರ್ಗಾಮಿ ನೌಕೆಯಲ್ಲಾದ Catastrophic Implosion ಸ್ಪೋಟಗೊಳ್ಳಲು ಕಾರಣ ಎಂದು ಅಮೇರಿಕಾದ ಕರಾವಳಿ ಕಾವಲು ವಿಭಾಗ ಖಚಿತಪಡಿಸಿದೆ. ಇನ್ನು ಈ ಟೈಟಾನ್ ಸಬ್‌ಮೆರಿನ್ ನ ಪ್ರಯಾಣಿಕರನ್ನು ಓಶಿಯನ್ ಗೇಟ್‌ನ ಸಿಇಒ ಸ್ಟಾಕ್ಟನ್ ರಷ್, ಬ್ರಿಟೀಷ್-ಪಾಕಿಸ್ಥಾನಿ ಅನ್ವೇಷಕ ಶಹ್ಝಾದ್ ದಾವೂದ್ ಮತ್ತು ಆತನ ಮಗ ಸುಲೇಮಾನ್, ಬ್ರಿಟೀಷ್ ಬ್ಯುಸಿನೆಸ್‌ಮೆನ್ ಹ್ಯಾಮಿಷ್ ಹಾರ್ಡಿಂಗ್ ಮತ್ತು ಪಾಲ್ ಹೆನ್ರೀ ನಾಜೋಲೆಟ್ ಎಂದು ತಿಳಿದು ಬಂದಿದೆ.

ಟೈಟಾನಿಕ್ ನ ಅವಶೇಷಗಳನ್ನು ತೋರಿಸಲು ಹೊತ್ತೊಯ್ದ ಈ ಜಲಾಂತರಗಾಮಿ ನೌಕೆಯಲ್ಲಿ ಪ್ರಯಣ ಮಾಡುವ ಟಿಕೆಟ್ ದರ ಸುಮಾರು 250000 ಡಾಲರ್‌ಗಳು. ಅಂದರೆ ಸುಮಾರು 2,04,84,875 ರೂಪಾಯಿಗಳು. ಇಷ್ಟು ದೊಡ್ಡ ಮೊತ್ತದ ಟಿಕೇಟನ್ನು ಖರೀದಿಸಿದ ಐದು ಮಂದಿ ಇಂದು ಅಟ್ಲಾಂಟಿಕ್ ಆಳ ಸಮುದ್ರದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಏನಿದು ಕ್ಯಾಟೋಸ್ಟ್ರೋಫಿಕ್ ಇಂಪ್ಲೋಷನ್: ಒಂದು ಮುಚ್ಚಿದ ಸ್ಥಳದಲ್ಲಿ ವಿಪರೀತವಾದ ಆಂತರಿಕ ಒತ್ತಡದ ಪರಿಣಾಮವಾಗಿ ಸ್ಪೋಟಗೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಮುಚ್ಚಿದ ಸ್ಥಳದ ಒಳಭಾದಗಲ್ಲಿನ ಒತ್ತಡದ ತೀವ್ರತೆಯು ಅಲ್ಲಿನ ರಚನೆ ತಡೆಯುವುದಕ್ಕೂ ಮೀರಿದಷ್ಟು ಶಕ್ತಿಶಾಲಿಯಾಗಿರುವುದರ ಪರಿಣಾಮವಾಗಿ ಅಲ್ಲಿ ಕ್ಯಾಟೋಸ್ಟ್ರೋಫಿಕ್ ಇಂಪ್ಲೋಷನ್ ಸಂಭವಿಸಿ ಸ್ಪೋಟ ಸಂಭವಿಸುತ್ತದೆ.
ಇನ್ನು ಜಲಾಂತರ್ಗಾಮಿ ನೌಕೆಯೊಳಗೆ ಸಂಭವಿಸಿದ ಒಳ ಸಿಡಿತಕ್ಕೆ ನಿರ್ದಿಷ್ಟವಾದ ಕಾರಣವನ್ನು ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ. ನೌಕೆಯ ಕವಚದ ದೋಷ ಅಥವಾ ಇತರ ಕೆಲವು ತಾಂತ್ರಿಕ ದೋಷಗಳಿಂದ ಅಂತಃ ಸ್ಪೋಟ ಸಂಭವಿಸಿರಬಹುದು. ಓಷಿಯನ್ ಗೇಟ್ ಟೈಟಾನ್ ಜಲಾಂತರ್ಗಾಮಿ ನೌಕೆಯು ಈ ಹಿಂದೆ ಹಲವು ಬಾರಿ ಟೈಟಾನಿಕ್ ಅವಶೇಷಗಳನ್ನು ವೀಕ್ಷಿಸುವವರನ್ನು ಹೊತ್ತೊಯ್ದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications