ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

By Nagaraja

ನಿರೀಕ್ಷೆಯಂತೆಯೇ ಈ ಬಾರಿಯ ದೆಹಲಿ ಆಟೋ ಎಕ್ಸ್ ಪೋದಲ್ಲಿ ಸೆಲೆಬ್ರಿಟಿಗಳು ಪ್ರಮುಖ ಆಕರ್ಷಣೆಯಾಗಿದ್ದರು. ಐಷಾರಾಮಿ ಕಾರು, ಬೈಕ್‌ಗಳ ಜತೆ ಬಾಲಿವುಡ್‌ನ ಹೆಸರಾಂತ ನಟ-ನಟಿಯರು ತಮ್ಮ ಸೌಂದರ್ಯದ ಪ್ರದರ್ಶನ ನೀಡಿದ್ದರು.

2014 ಆಟೋ ಎಕ್ಸ್ ಪೋ

ಈ ನಡುವೆ ಕ್ರಿಕೆಟ್‌ನ ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್ ಸಹ ಭಾಗಿಯಾಗಿದ್ದರು. ಇದು ಸಚಿನ್ ಕಾರು ಪ್ರೇಮವನ್ನು ಬಿಂಬಿಸುವಂತಿತ್ತು. ಅಷ್ಟಕ್ಕೂ 2014 ಆಟೋ ಎಕ್ಸ್ ಪೋಗೆ ಯಾವೆಲ್ಲ ಸೆಲೆಬ್ರಿಟಿಗಳು ಆಗಮಿಸಿದ್ದರು? ಆಕರ್ಷಕ ಚಿತ್ರಗಳಿಗಾಗಿ ಸ್ಲೈಡರ್ ವೀಕ್ಷಿಸಿ

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಎಂಟ್ರಿ ಲೆವೆಲ್ ಎ3 1.8 ಟಿ ಲಗ್ಷುರಿ ಸೆಡಾನ್ ಕಾರನ್ನು ಪ್ರದರ್ಶಿಸಿದ್ದರು. ಈ ಸಂದರ್ಭದಲ್ಲಿ ಕೆಂಪು ಉಡುಗೆ ತೊಟ್ಟಿದ್ದ ದಕ್ಷಿಣ ಭಾರತದ ಹೆಸರಾಂತ ನಟಿ ಇಲಿಯಾನಾ ಪ್ರಮುಖ ಆಕರ್ಷಣೆಯಾಗಿದ್ದರು. ನಿಮ್ಮ ಮಾಹಿತಿಗಾಗಿ ಆಡಿ 1.8 ಟಿ ಎಂಟ್ರಿ ಲೆವೆಲ್ ಐಷಾರಾಮಿ ಸೆಡಾನ್ ಕಾರು ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಬಾಲಿವುಡ್‌ನ ಜನಪ್ರಿಯ ನಟ ಜಾನ್ ಅಬ್ರಹಾಂ ಸಹ 2014 ಆಟೋ ಎಕ್ಸ್ ಪೋದಲ್ಲಿ ಮೋಜು ಉಡಾಯಿಸಿದ್ದರು. ಚಿತ್ರದಲ್ಲಿ ಯಮಹಾ ಆರ್1 ಬೈಕ ಜತೆ ಅಬ್ರಹಾಂ ಸ್ಟೈಲ್

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಯಮಹಾ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿರುವ ಜಾನ್, ರೇ ಸ್ಕೂಟರ್‌ನಲ್ಲೂ ಕಾಣಿಸಿಕೊಂಡಿದ್ದರು.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಬಾಲಿವುಡ್‌ ನಟಿ ಕರೀನಾ ಕಪೂರ್, ಹೆಸರಾಂತ ಕಸ್ಟಮೈಸ್ಡ್ ಕಂಪನಿ ಡಿಸಿ ಡಿಸೈನ್ ಪರ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಡಿಸಿ ಡಿಸೈನ್ ಎಲೆರಾನ್ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶಿಸುತ್ತಿರುವ ಕರೀನಾ.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ವರದಿಗಳ ಪ್ರಕಾರ ಕರೀನಾ 20 ನಿಮಿಷಗಳ ಕಾರ್ಯಕ್ರಮಕ್ಕಾಗಿ 30 ಲಕ್ಷ ರು. ಸಂಭಾವನೆ ಪಡೆದಿದ್ದರು. ಚಿತ್ರದಲ್ಲಿ ಡಿಸಿ ಡಿಸೈನ್ ಟಿಯಾ ಕಾನ್ಸೆಪ್ಟ್.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಲ್ಯಾಂಡ್ ರೋವರ್, ನೂತನ ರೇಂಜ್ ರೋವರ್ ಲಾಂಗ್ ವೀಲ್ ಬೇಸ್ ದುಬಾರಿ ಮಾದರಿ ಪ್ರದರ್ಶಿಸಿತ್ತು. ಈ ಸಂದರ್ಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕಪ್ಪು ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಈ ಎಲ್ಲದರ ನಡುವೆಯೂ ಸಚಿನ್ ತೆಂಡೂಲ್ಕರ್ ಕಾರು ಪ್ರೇಮ ವಿಶಿಷ್ಟ ಆಕರ್ಷಣೆಯನ್ನು ಪಡೆದಿತ್ತು. ಈ ಸಂದರ್ಭದಲ್ಲಿ ಬಿಎಂಡಬ್ಲ್ಯು ಐ8 ಎಲೆಕ್ಟ್ರಿಕ್ ಹೈಬ್ರಿಡ್ ಸೂಪರ್ ಕಾರನ್ನು ಸಚಿನ್ ಅನಾವರಣಗೊಳಿಸಿದ್ದರು.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಈ ಮೂಲಕ ಬಿಎಂಡಬ್ಲ್ಯು ಐ8 ಎಲೆಕ್ಟ್ರಿಕ್ ಹೈಬ್ರಿಡ್ ಸೂಪರ್ ಕಾರು ಅಧಿಕೃತ ಪ್ರವೇಶ ಪಡೆದಿತ್ತು.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಬಾಲಿವುಡ್‌ನ ಆಕ್ಷನ್ ನಟ ಅಕ್ಷಯ್ ಕುಮಾರ್ ಕೂಡಾ ಆಟೋ ಎಕ್ಸ್ ಪೋದಲ್ಲಿ ಸಕತ್ ಸ್ಟೈಲಿಷ್ ಲುಕ್‌ನಲ್ಲಿ ಆಗಮಿಸಿದ್ದರು. ಇಲ್ಲಿ ಹೋಂಡಾ ಬೈಕುಗಳನ್ನು ಪ್ರದರ್ಶಿಸುತ್ತಿರುವ ಅಕ್ಷಯ್ ಕುಮಾರ್

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಹೀರೊದ ನೂತನ ಸ್ಕೂಟರುಗಳನ್ನು ಅನಾವರಣಗೊಳಿಸುತ್ತಿರುವ ಬಾಲಿವುಡ್ ನಟ ರಣಬೀರ್ ಕಪೂರ್

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ಒಟ್ಟಿನಲ್ಲಿ 2014 ಆಟೋ ಎಕ್ಸ್ ಪೋದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಯಶಸ್ವಿಯಾಗಿದ್ದಾರೆ.

ಆಟೋ ಎಕ್ಸ್‌ಪೋದಲ್ಲಿ ಸೆಲೆಬ್ರಿಟಿಗಳ ಕಲರವ

ವಾರ್ಡೆಂಚಿ ಮೋಟಾರು ಸೈಕಲ್ ಪ್ರದರ್ಶಿಸುತ್ತಿರುವ ಸಮೀರಾ ರೆಡ್ಡಿ

More from DriveSpark

Article Published On: Tuesday, February 11, 2014, 6:02 [IST]
English summary
Several celebrities like Ranbir Kapoor, Priyanka Chopra, Sameera Reddy, Ileana Dcruze, Ravi Shasthri, Akshay Kumar, John Abraham and Sachin Tendulkar were spotted at the Auto Expo 2014. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+