ಸಲ್ಮಾನ್ ಖಾನ್ ಬಾರ್ಬರ್ ಖರೀದಿಸಿದ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?

ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು (BMW) ಜನಪ್ರಿಯ ಪ್ರೀಮಿಯಂ ಕಾರು ತಯಾರಕರಾಗಿ ವಿಶ್ವಾದ್ಯಂತ ಖ್ಯಾತಿ ಗಳಿಸಿದೆ. ಬಿಎಂಡಬ್ಲ್ಯು ಕಂಪನಿಯ ಅಂಗಸಂಸ್ಥೆಯಾಗಿರುವ ಬಿಎಂಡಬ್ಲ್ಯು ಮೊಟೊರಾಡ್ (BMW Motorrad), ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಐಷಾರಾಮಿ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಬಿಎಂಡಬ್ಲ್ಯು ತನ್ನ ಬಿಎಂಡಬ್ಲ್ಯು ಸಿಇ 02 (BMW CE 02) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿ ಹೊಸ ಸಂಚಲನ ಸೃಷ್ಟಿಸಿತು. ಈ ಹೊಸ ಬಿಎಂಡಬ್ಲ್ಯ್ ಎಲೆಕ್ಟ್ರಿಕ್ ಸ್ಕೂಟರ್ ಸೆಲೆಬ್ರಿಟಿಗಳನ್ನು ಸೆಳೆಯುದಿದ್ದಾರೆ.

ರಣಬೀರ್ ಕಪೂರ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಅವರ ಸ್ಟೈಲಿಂಗ್‌ಗೆ ಹೆಸರುವಾಸಿಯಾದ ಜನಪ್ರಿಯ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ (Aalim Hakim) ಇತ್ತೀಚೆಗೆ ಈ ಬಿಎಂಡಬ್ಲ್ಯ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದಾರೆ. ಬಿಎಂಡಬ್ಲ್ಯು ಮೊಟೊರಾಡ್‌ನಿಂದ ಈ ವಿಶಿಷ್ಟವಾದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್‌ಗೆ ವಿತರಣೆಯನ್ನು ನೀಡುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

BMW CE-02 Electric Scooter

ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಪ್ರೀಮಿಯಂ ಎಂಪಿವಿಯಲ್ಲಿ ತನ್ನ ಅಕಾಡೆಮಿಗೆ ಆಗಮಿಸುವುದರೊಂದಿಗೆ ಈ ವೀಡಿಯೋ ಪ್ರಾರಂಭವಾಗುತ್ತದೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಪ್ರುತ್ರರು ಸೇರಿದಂತೆ ಕುಟುಂಬದೊಂದಿಗೆ ಹೊಸ ಸ್ಕೂಟರ್ ವಿತರಣೆ ಪಡೆಯಲು ಆಗಮಿಸಿದರು. ಈ ಹೊಸ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿತರಣೆ ಪಡೆದು ಅದರಲ್ಲಿ ಅವರು ಕುಳಿತುಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ.

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಖರೀದಿಸಿದ ಹೊಸ ಬಿಎಂಡಬ್ಲ್ಯು ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಈ ಹೊಸ ಮಾದರಿಯು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಈ ಸ್ಕೂಟರ್ ನಲ್ಲಿ 3.5-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಯುಎಸ್‌‍ಬಿ-ಸಿ ಚಾರ್ಜಿಂಗ್ ಸಾಕೆಟ್ ಹಾಗೂ ರಿವರ್ಸ್ ಗೇರ್ ಸೇರಿದಂತೆ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿದೆ.

BMW CE-02 Electric Scooter

ವಿನ್ಯಾಸ: ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಬಹಳಷ್ಟು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ರೆಕ್ಟ್ಯಾಂಗುಲರ್ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್‌ಗಳು, ವಿಂಡ್‌ಸ್ಕ್ರೀನ್, 14-ಇಂಚಿನ ವೀಲ್‌ಗಳು, 120/80-ಆರ್14 & 150/70-ಆರ್14 ಅಳತೆಯ ಟೈರ್‌ಗಳು, ಫ್ಲಾಟ್ ಸೀಟ್‌, ಎಲ್ಇಡಿ ಲೈಟಿಂಗ್ ಸೆಟಪ್‌ & 2-ಗ್ರಾಬ್ ಹ್ಯಾಂಡಲ್‌ಗಳನ್ನು ಒಳಗೊಂಡಿವೆ.

ಬ್ಯಾಟರಿ ಪ್ಯಾಕ್: ಬಿಎಂಡಬ್ಲ್ಯು ಸಿಇ 02 ಎಲೆಕ್ಟ್ರಿಕ್ ಸ್ಕೂಟರ್, 3.92 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ ಬರೋಬ್ಬರಿ 108 ಕಿಲೋಮೀಟರ್ ದೂರವನ್ನು ಚಲಿಸುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 14.7 ಪಿಎಸ್ ಗರಿಷ್ಠ ಪವರ್ ಮತ್ತು 55 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋ, ಸರ್ಫ್ ಹಾಗೂ ಫ್ಲ್ಯಾಶ್ ಎಂಬ 3 ರೈಡಿಂಗ್ ಮೋಡ್‌ ಆಯ್ಕೆಯನ್ನು ಹೊಂದಿದೆ.

95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 50 ಕಿ.ಮೀ ವೇಗವನ್ನು ಹೊಂದಲಿದೆ. ಜೊತೆಗೆ 1,350 ಎಂಎಂ ಉದ್ದದ ವೀಲ್‌ಬೇಸ್‌ನ್ನು ಪಡೆದಿದೆ. ಬಿಎಂಡಬ್ಲ್ಯು ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) ಗೋಲ್ಡ್ ಫಿನಿಷ್ಡ್ ಅಪ್‌ಸೈಡ್‌-ಡೌನ್ ಫೋರ್ಕ್‌ಗಳು, ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 2, 2025, 8:30 [IST]
English summary
Celebrity hairstylist aalim hakim new bmw ce 02 electric scooter top things
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+