ನಟಿ ನಯನತಾರ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ದ‍ಕ್ಷಿಣ ಭಾರತದ ಪ್ರಮುಖ ನಟಿ ನಯನತಾರ ಹಾಗೂ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಖಾಸಗಿ ಹೊಟೇಲ್ವೊಂದರಲ್ಲಿ ಅದ್ದೂರಿಯಾಗಿ ನಡೆದಿದೆ. ಈ ವಿವಾಹ ಮಹೋತ್ಸವಕ್ಕೆ ಭಾರತೀಯ ಚಿತ್ರರಂಗದ ಬಹು ದೊಡ್ಡ ತಾರಾಗಣವೇ ಆಗಮಿಸಿತ್ತು.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ಮದುವೆಯಲ್ಲಿ ತಮಿಳು ಚಿತ್ರರಂಗದ ಅನೇಕ ಪ್ರಸಿದ್ಧ ನಟ-ನಟಿಯರು ಸೇರಿದಂತೆ ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್‌ನ ಟಾಪ್ ಸೆಲೆಬ್ರಿಟಿಗಳು ಪ್ರಸಿದ್ಧ ಕಾರುಗಳಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. ವಿಘ್ನೇಶ್ ಶಿವನ್-ನಯನತಾರಾ ಮದುವೆಗೆ ಆಗಮಿಸಿದ ಪ್ರಮುಖ ಸೆಲೆಬ್ರಿಟಿಗಳು ಮತ್ತು ಅವರ ಕಾರುಗಳ ಪಟ್ಟಿ ಇಲ್ಲಿದೆ.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ರಜನಿಕಾಂತ್ - BMW X5

ನಯನತಾರಾ ಮದುವೆಗೆ ವಿಶೇಷ ಅತಿಥಿಯಾಗಿ ನಟ ರಜನಿಕಾಂತ್ ಆಗಮಿಸಿ ಮದುವೆ ಗಂಡಿಗೆ ತಾಳಿ ನೀಡಿ ಮದುವೆ ನೆರವೇರಿಸಿದರು. ಅವರು ತಮ್ಮ BMW X5 ಕಾರಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸೂಪರ್‌ ಸ್ಟಾರ್ ರಜಿನಿ ಅವರು 2017 ರಲ್ಲಿ ಈ ಕಾರನ್ನು ಖರೀದಿಸಿದ್ದರು.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ಈ ಕಾರು 2998 cc ಎಂಜಿನ್ 335.26 bhp ಮತ್ತು 450 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5 ಆಸನಗಳನ್ನು ಹೊಂದಿರುವ ಈ ಮಾದರಿಯ ಆರಂಭಿಕ ಬೆಲೆಯು 79.90 ಲಕ್ಷ ಮತ್ತು ಟಾಪ್‌ ಎಂಡ್ ಮಾದರಿಯ ಬೆಲೆ 95.90 ಲಕ್ಷ ರೂ. ಇದೆ. ಈ ಕಾರು ಪ್ರತಿ ಲೀಟರ್‌ಗೆ 11.24 ಕಿ.ಮೀ ಮೈಲೇಜ್ ನೀಡುತ್ತದೆ.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ಅಜಿತ್ ಕುಟುಂಬ - ಟೊಯೋಟಾ ಹೈಸ್

ನಟ ಅಜಿತ್ ತಮ್ಮ ಕುಟುಂಬ ಸಮೇತ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಅವರ ಪತ್ನಿ ಶಾಲಿನಿ ಮತ್ತು ಮಗಳು ಅನೋಷ್ಕಾ ಕಾರ್ಯಕ್ರಮಕ್ಕೆ ಟೊಯೊಟಾ ಹೈಸ್ ವ್ಯಾನ್‌ನಲ್ಲಿ ಆಗಮಿಸಿದ್ದರು. ನಟ ಅಜಿತ್ ಹೇಗೆ ಬಂದರೋ ಗೊತ್ತಿಲ್ಲ, ಆದರೆ ಅಜಿತ್ ಫ್ಯಾಮಿಲಿ ಬಂದಿದ್ದ ವ್ಯಾನ್ ಸ್ವಲ್ಪ ವಿಭಿನ್ನವಾಗಿತ್ತು.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ಟೊಯೊಟಾ 1967 ರಿಂದ ಈ ಹೈಸ್ ಕಾರನ್ನು ತಯಾರಿಸುತ್ತಿದೆ. ಈ ಕಾರನ್ನು ಕಾಲಕಾಲಕ್ಕೆ ಮಾರ್ಪಡಿಸಲಾಗುತ್ತಿದೆ. ಅಜಿತ್ ಕುಟುಂಬ ಬಂದಿದ್ದ ಕಾರು ತನ್ನ 6ನೇ ತಲೆಮಾರಿನದ್ದಾಗಿದ್ದು, ಇದನ್ನು 2019ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ 35 ಲಕ್ಷ ರೂ. ಇದೆ. ಟೊಯೊಟಾ ಈ ಸಂಪೂರ್ಣ ನಿರ್ಮಿತ ಕಾರನ್ನು ಭಾರತದಲ್ಲಿ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ವಿಜಯ್ - ರೋಲ್ಸ್ ರಾಯ್ಸ್

ನಟ ವಿಜಯ್ ಕೂಡ ಮದುವೆಗೆ ಬಂದಿದ್ದರು. ವಿಜಯ್ ಈ ಮದುವೆಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಆಗಮಿಸಿದ್ದರು. ಕಳೆದ ವರ್ಷ ಅವರು ರೋಲ್ಸ್ ರಾಯ್ಸ್ ಕಾರು ಖರೀದಿಗೆ ತೆರಿಗೆ ವಿನಾಯಿತಿ ಕೇಳಿ ಸುದ್ದಿಯಾಗಿದ್ದರು. ಆ ವೇಳೆ ಅವರ ಬಳಿ ರೋಲ್ಸ್ ರಾಯ್ಸ್ ಇದೆಯೆಂಬುದು ಎಲ್ಲರಿಗು ಗೊತ್ತಾಯಿತು. ಬಳಿಕ ಬೀಸ್ಟ್ ಚಿತ್ರದ ಚಿತ್ರೀಕರಣದ ವೇಳೆ ಸಹ ನಟರೊಂದಿಗೆ ಇದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ನಟ ವಿಜಯ್ ರೋಲ್ಸ್ ರಾಯ್ಸ್ ಘೋಸ್ಟ್ ಎಡಿಷನ್ ಕಾರನ್ನು ಹೊಂದಿದ್ದಾರೆ. ಅವರು 2012 ರಲ್ಲಿ ಈ ಕಾರನ್ನು ಖರೀದಿಸಿದ್ದರು. ಕಾರಿನ ಬೆಲೆ 2.7 ಕೋಟಿ ರೂ. ಇದೆ. ವಿಜಯ್ ಅವರು ನಯನತಾರಾ ವಿಘ್ನಶಿವನ ಮದುವೆಗೆ ಬಂದಿದ್ದು ಇದೇ ಕಾರಿನಲ್ಲಿ.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ಕೃತಿಕಾ ಉದಯನಿಧಿ - ಇನ್ನೋವಾ ಕ್ರಿಸ್ಟಾ

ನಟ ಮತ್ತು ಚೆನ್ನೈ ಚೆಪಾಕ್ಕಂ ಕ್ಷೇತ್ರದ ಶಾಸಕ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಕೃತಿಕಾ ಉದಯನಿಧಿ ನಯನತಾರಾ ವಿಘ್ನೇಶ್ ಶಿವನ್ ಮದುವೆಗೆ ಹಾಜರಾಗಿದ್ದರು. ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಮದುವೆಗೆ ಆಗಮಿಸಿದ್ದರು. ತುಂಬಾ ಸೈಲೆಂಟ್ ಆಗಿ ಯಾವುದೇ ಐಷಾರಾಮಿ ವ್ಯವಸ್ಥೆ ಇಲ್ಲದೆ ಸರಳವಾಗಿ ಬಂದು ಹೋದರು.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ಅವರು ಕಂಡ ಕಾರು ಬಹಳ ಜನಪ್ರಿಯವಾಗಿತ್ತು. ಅದರಲ್ಲೂ ಅನೇಕ ರಾಜಕಾರಣಿಗಳು ಖರೀದಿಸಲು ಇಷ್ಟಪಡುವ ಕಾರು. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಬರುತ್ತದೆ. ಈ ಕಾರಿಗೆ 2694 ಸಿಸಿ ಎಂಜಿನ್ ಅಳವಡಿಸಲಾಗಿದ್ದು, ಇದು 148 bhp ಪವರ್ ಮತ್ತು 360 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಪ್ರತಿ ಲೀಟರ್‌ಗೆ 12 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ನಟ ಸೂರ್ಯ-BMW 730LD

ನಟ ಸೂರ್ಯ, ನಯನತಾರಾ - ವಿಘ್ನೇಶ್ ಶಿವನ್ ಮದುವೆಗೆ ಬಿಎಂಡಬ್ಲ್ಯು 730 ಎಲ್‌ಡಿ ಕಾರಿನಲ್ಲಿ ಆಗಮಿಸಿದ್ದರು. ಆದವನ್, ಮಾಸು ಸೇರಿದಂತೆ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿರುವ ನಯನತಾರಾ ಮತ್ತು ಸೂರ್ಯ ಮೊದಲಿನಿಂದಲು ಸ್ನೇಹಿತರು. ಈ ನಡುವೆ ವರ ವಿಘ್ನೇಶ್‌ಶಿವನ್ ಅವರು ಸೂರ್ಯ ಅವರ ಥಾನಾ ಕ್ರೌಡ್ ಮೈ ಚಿತ್ರದ ನಿರ್ದೇಶಕರಾಗಿದ್ದರಿಂದ ಅವರಿಬ್ಬರೂ ಕೂಡ ಸ್ನೇಹಿತರಾಗಿದ್ದಾರೆ.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ನಿರ್ದೇಶಕ ಅಟ್ಲಿ, ಶಾರುಖ್ ಖಾನ್-ರೋಲ್ಸ್ ರಾಯ್ಸ್

ಬಾಲಿವುಡ್‌ ಬಾದ್‌ಷಾ ಹಾಗೂ ನಿರ್ದೇಶಕ ಅಟ್ಲಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಆಗಮಿಸಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ಅತಿಥಿ ಕಾರುಗಳನ್ನು ನಿಲ್ಲಿಸಿ ಸಮಾರಂಭದ ಸ್ಥಳಕ್ಕೆ ಅತಿಥಿಗಳನ್ನು ಕರೆದೊಯ್ಯಲು ಬ್ಯಾಟರಿ ಕಾರನ್ನು ಸಿದ್ಧಪಡಿಸಲಾಗಿತ್ತು. ಸ್ಥಳದಲ್ಲಿ ಸೆಲ್ ಫೋನ್ ಬಳಕೆ ಸೇರಿದಂತೆ ಹಲವನ್ನು ನಿಷೇಧಿಸಲಾಗಿತ್ತು.

ನಟಿ ನಯನತಾರಾ ಮದುವೆಯಲ್ಲಿ ಪ್ರಮುಖ ಆಕರ್ಷಣೆಯಾದ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಅದ್ದೂರಿಯಾಗಿ ನಡೆಯುವ ನಟ-ನಟಿಯರ ಮದುವೆಗಳಿಗೆ ಅಥಿತಿಗಳಾಗಿ ಆಗಮಿಸುವ ಸೆಲೆಬ್ರಿಟಿಗಳು ತಮ್ಮ ಪರ್ತಿಷ್ಟೆಯನ್ನು ಬಿಂಬಿಸುವಂತೆ ತಮ್ಮ ಐಷಾರಾಮಿ ಕಾರುಗಳಲ್ಲಿ ಆಗಮಿಸಿತ್ತಾರೆ. ಇಂತಹ ಕಾರುಗಳ ಆಗಮನದಿಂದ ಸಮಾರಂಭಗಳು ಮತ್ತಷ್ಟು ವಿಜೃಂಭಣೆ ಪಡೆದುಕೊಳ್ಳುತ್ತವೆ. ಸದ್ಯ ನಯನತಾರ ಮದುವೆ ಕೂಡ ಅದ್ದೂರಿಯಾಗಿ ನಡೆದಿದ್ದು, ಕಾರು ಪಾರ್ಕಿಂಗ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

Article Published On: Friday, June 10, 2022, 12:36 [IST]
English summary
Celebrity luxury cars are the main attraction at the actress Nayanatara wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+