ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ರೂ.250 ಕೋಟಿಗಳ ವೆಚ್ಚದಲ್ಲಿ ಅತ್ಯಾಧುನಿಕ ವಿಮಾನವನ್ನು ಖರೀದಿಸುವ ಯೋಜನೆಯನ್ನು ಪ್ರಕಟಿಸಿದೆ. ಹವಾಮಾನವನ್ನು ನಿಖರವಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಈ ವಿಮಾನವನ್ನು ಖರೀದಿಸಲಾಗುವುದು.

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ಈ ವಿಮಾನದ ಮೂಲಕ ನಿಖರವಾದ ಹವಾಮಾನ ಮಾತ್ರವಲ್ಲದೆ ಮಾಲಿನ್ಯದ ಬಗೆಗಿನ ಎಲ್ಲಾ ಮಾಹಿತಿಯನ್ನು ಸಹ ತಿಳಿದುಕೊಳ್ಳಬಹುದು ಎಂಬುದು ಗಮನಾರ್ಹ. ಕಳೆದ ಶುಕ್ರವಾರ ನಡೆದ ಲೋಕಸಭೆಯಲ್ಲಿ ಇದರ ಬಗ್ಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಹರ್ಷ್ ವರ್ಧನ್ ಖಚಿತಪಡಿಸಿದ್ದಾರೆ. ಈ ವಿಮಾನವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳಲ್ಲಿನ ಹವಾಮಾನವನ್ನು ನಿಖರವಾಗಿ ಊಹಿಸಬಲ್ಲದು ಎಂದು ಅವರು ಹೇಳಿದರು.

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ಹವಾಮಾನ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಸರ್ಕಾರವು ವಿಶೇಷ ವಿಮಾನವನ್ನು ಖರೀದಿಸಲು ಬಯಸಿದೆಯೇ ಎಂದು ಸಂಸತ್ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಮಾಹಿತಿ ನೀಡಿದರು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ತಮ್ಮ ಇಲಾಖೆಯು ದೇಶದಲ್ಲಿ ವಾಯುಮಂಡಲದ ಪ್ರಕ್ರಿಯೆ ಅಧ್ಯಯನಕ್ಕಾಗಿ ವಿಶೇಷ ಸಂಶೋಧನಾ ವಿಮಾನವನ್ನು ಖರೀದಿಸಲು ಪರಿಗಣಿಸುತ್ತಿದೆ. ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ಈ ವಿಮಾನದ ಬೆಲೆ ರೂ.250 ಕೋಟಿಗಳಾಗಿದೆ ಎಂದು ಅವರು ಹೇಳಿದರು.

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ದೇಶದ ವಿವಿಧ ಭಾಗಗಳ ಹವಾಮಾನ ಮತ್ತು ವಾತಾವರಣದ ಸಮಸ್ಯೆಗಳನ್ನು ಅನ್ವೇಷಿಸಲು ಮತ್ತು ತಕ್ಷಣದ ಪರಿಹಾರಗಳನ್ನು ಕಂಡುಹಿಡಿಯಲು ಈ ವಿಮಾನವನ್ನು ಬಳಸಲಾಗುವುದು ಎಂದು ಹರ್ಷ್ ವರ್ಧನ್ ಹೇಳಿದರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ವಿಮಾನವನ್ನು ವಾಯುಮಾಲಿನ್ಯ, ನೈರ್ಮಲ್ಯ ಮತ್ತು ಹೈಡ್ರಾಲಿಕ್ ಸಂಶೋಧನೆಗೆ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಈ ವಿಷಯಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವ ಮೂಲಕ, ಅಗತ್ಯ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವ ಮೂಲಕ ಸಮಸ್ಯೆಗಳನ್ನು ಮುಂಚಿತವಾಗಿ ಬಗೆಹರಿಸಬಹುದು.

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ಪುಣೆ ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿ (ಐಐಟಿಎಂ) ಇಡೀ ಯೋಜನೆಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಚಿವ ಹರ್ಷ್ ವರ್ಧನ್ ಹೇಳಿದ್ದಾರೆ. ಈ ಸಂಸ್ಥೆ ಭೂ ವಿಜ್ಞಾನ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ಈ ಸಂಸ್ಥೆ ವಿಶೇಷ ಹಾರಾಟಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಹೇಳಲಾಗಿದೆ. ಇದರಿಂದ ಭವಿಷ್ಯದ ಹವಾಮಾನ ಮುನ್ಸೂಚನೆಗಳಿಗಿಂತ ಭಾರತೀಯ ಹವಾಮಾನ ಇಲಾಖೆಯು ಹೆಚ್ಚು ನಿಖರವಾದ ಮಾಹಿತಿಯನ್ನು ಒದಗಿಸುವ ನಿರೀಕ್ಷೆಗಳಿವೆ.

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ವಿಮಾನವನ್ನು ಸಾಮಾನ್ಯವಾಗಿ ನಗರದಿಂದ ನಗರಕ್ಕೆ ಹಾಗೂ ದೇಶದಿಂದ ದೇಶಕ್ಕೆ ಪ್ರಯಾಣಿಸಲು ಬಳಸಲಾಗುತ್ತದೆ. ಈ ಸಂದರ್ಭದಲ್ಲಿ, ಹವಾಮಾನ ಮತ್ತು ವಾಯು ದ್ರವ್ಯರಾಶಿಯನ್ನು ಅಳೆಯಲು ವಿಮಾನಗಳಿಗೆ ಸಾಧ್ಯವೇ ಎಂಬ ಪ್ರಶ್ನೆ ಅನೇಕರಲ್ಲಿ ಉದ್ಭವಿಸುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ಈ ವಿಮಾನವು ಸಾಮಾನ್ಯ ವಿಮಾನದಂರಿವುದಿಲ್ಲ ಎಂದು ಹೇಳಲಾಗಿದೆ. ಈ ವಿಮಾನವು ಬಾಹ್ಯಾಕಾಶ ಪರಿಶೋಧನೆಗೆ ಬಳಸುವಂತಹ ವಿಶೇಷ ವಿಮಾನ ಆಕಾರವನ್ನು ಹೊಂದಿರಬಹುದು ಎಂದು ಊಹಿಸಲಾಗಿದೆ.

ರೂ.250 ಕೋಟಿ ವೆಚ್ಚದ ವಿಶೇಷ ವಿಮಾನ ಖರೀದಿಸಲು ಮುಂದಾದ ಕೇಂದ್ರ ಸರ್ಕಾರ

ಭವಿಷ್ಯದಲ್ಲಿ ಹವಾಮಾನದ ಬಗ್ಗೆ ತಿಳಿದುಕೊಳ್ಳಲು ಹಾಗೂ ನಾವು ಯಾವ ರೀತಿಯ ಕಲುಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಶೇಷ ವಿಮಾನ ನೆರವಾಗಲಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಮೀನುಗಾರರು ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಗಳಿವೆ.

Most Read Articles

Kannada
English summary
Central Government to buy special Aeroplane for accurate weather forecast. Read in Kannada.
Story first published: Tuesday, September 22, 2020, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X