ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಅಪರಾಧವಾಗಿದೆ. ಈ ಹಿಂದೆ ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ ಅನೇಕ ವಾಹನ ಸವಾರರು ಭಾರೀ ಪ್ರಮಾಣದ ದಂಡ ಪಾವತಿಸಿದ್ದಾರೆ.

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಮೊಬೈಲ್ ಬಳಕೆಯು ಸವಾರನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ, ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ದ್ವಿಚಕ್ರ ವಾಹನ ಸವಾರರು ಹಾಗೂ ನಾಲ್ಕು ಚಕ್ರಗಳ ವಾಹನ ಸವಾರರು ವಾಹನ ಚಾಲನೆ ಮಾಡುವ ವೇಳೆಯಲ್ಲಿ ಮೊಬೈಲ್ ಬಳಸದಂತೆ ನಿಷೇಧ ಹೇರಲಾಗಿದೆ.

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಈಗ ಕೇಂದ್ರ ಸರ್ಕಾರವು ಈ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಕಾರು ಚಾಲಕರು ಎರಡು ನಿರ್ದಿಷ್ಟ ಅಪ್ಲಿಕೇಶನ್ ಗಳನ್ನು ಬಳಸಲು ಮೊಬೈಲ್ ಪೋನ್ ಗಳನ್ನು ಬಳಸಬಹುದು ಎಂದು ಹೇಳಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಇದಕ್ಕಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1989ಕ್ಕೆ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯಡಿಯಲ್ಲಿ ಕಾರು ಚಾಲಕರು ಜಿಪಿಎಸ್ ಹಾಗೂ ನ್ಯಾವಿಗೇಷನ್ ಬಳಕೆಗಾಗಿ ಮೊಬೈಲ್ ಪೋನ್ ಗಳನ್ನು ಬಳಸಬಹುದು.

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಹೊಸ ಮಾರ್ಗಗಳಲ್ಲಿ ಸಾಗುವಾಗ ವಾಹನ ಸವಾರರು ಮಾರ್ಗ ತಿಳಿಯದೇ ಪರದಾಡುತ್ತಿದ್ದರು. ಆಟೋ ಡ್ರೈವರ್‌ಗಳು ಗೂಗಲ್ ಮ್ಯಾಪ್ ಸಹಾಯದಿಂದ ಸವಾರಿ ಮಾಡುತ್ತಿದ್ದಾರೆ. ಈ ಅಪ್ಲಿಕೇಶನ್ ಬಳಸಲು ಕಾರು ಚಾಲಕರು ಮೊಬೈಲ್ ಫೋನ್ ಬಳಸಬಹುದು ಎಂದು ಸೂಚಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಇದೇ ವೇಳೆ ಮೊಬೈಲ್ ಫೋನ್ ಬಳಕೆಯು ಇತರರಿಗೆ ಯಾವುದೇ ತೊಂದರೆಯಾಗಬಾರದು. ಅಂದರೆ ಕಾರು ಚಾಲಕರು ಮೊಬೈಲ್ ಫೋನ್ ಬಳಸುವುದರಿಂದ ಬೇರೆ ವಾಹನ ಚಾಲಕರಿಗೆ ಹಾಗೂ ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಜಿಪಿಎಸ್ ಹಾಗೂ ನ್ಯಾವಿಗೇಷನ್ ಬಳಸುವಾಗ ಪೊಲೀಸರಿಗೆ ಸಿಕ್ಕಿ ಬಿದ್ದರೆ ವಾಹನ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಲು ಸೂಚಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಈ ಅಪ್ಲಿಕೇಶನ್ ಗಳನ್ನು ಬಿಟ್ಟು ಬೇರೆ ಕಾರಣಕ್ಕೆ ಮೊಬೈಲ್ ಫೋನ್ ಬಳಸಿ ಪೊಲೀಸರಿಗೆ ಸಿಕ್ಕಿ ಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಲಾಗಿದೆ. ಕಠಿಣ ಕ್ರಮಗಳಲ್ಲಿ ಭಾರೀ ಪ್ರಮಾಣದ ದಂಡ ವಿಧಿಸುವುದು ಸಹ ಸೇರಿದೆ.

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ವಾಹನ ಚಾಲನೆ ವೇಳೆ ಮೊಬೈಲ್ ಫೋನ್‌ ಬಳಸಿದ ಕಾರಣಕ್ಕೆ ಹಲವಾರು ಅಪಘಾತಗಳು ಸಂಭವಿಸಿವೆ. ಈ ಕಾರಣಕ್ಕೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ವಾಹನ ಸವಾರರಿಗೆ ಆಗುತ್ತಿರುವ ಅನಾನುಕೂಲವನ್ನು ಗಮನಿಸಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಈ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಯು ಕಾರು ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು.

ಷರತ್ತುಗಳೊಂದಿಗೆ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಅಕ್ಟೋಬರ್ 1ರಿಂದ ದೇಶಾದ್ಯಂತ ಏಕರೂಪದ ಆರ್‌ಸಿ ಹಾಗೂ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದು ಎಂದು ವರದಿಯಾಗಿದೆ. ಇದರಿಂದ ಹೆಚ್ಚುವರಿ ಮೂಲ ದಾಖಲೆಗಳನ್ನು ಜೊತೆಯಲ್ಲಿಟ್ಟು ಕೊಳ್ಳುವುದು ತಪ್ಪುತ್ತದೆ. ಜೊತೆಗೆ ವಾಹನಗಳ ದಾಖಲೆಗಳಿಗೆ ಸಂಬಂಧಿಸಿದ ಡಿಜಿಟಲ್ ವ್ಯವಸ್ಥೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

Most Read Articles

Kannada
English summary
Central transport ministry allows car drivers to use mobile phones. Read in Kannada.
Story first published: Wednesday, September 30, 2020, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X