ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಒಂದರ ನಂತರ ಒಂದರಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗ ದೆಹಲಿ ಸರ್ಕಾರವು ಚಾರ್ಜ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಇಇಎಸ್ಎಲ್ ನ ಅಂಗಸಂಸ್ಥೆಯಾದ ಸಿಇಎಸ್ಎಲ್ ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ದೆಹಲಿ ಸರ್ಕಾರವು ನಿನ್ನೆ (ಸೆಪ್ಟೆಂಬರ್ 7) ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ದೆಹಲಿ ಸಾರಿಗೆ ನಿಗಮವು (ಡಿಟಿಸಿ) ತನ್ನ ಅಧೀನದಲ್ಲಿರುವ ಜಾಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್‌ನೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದಕ್ಕೆ ಡಿಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಕುಮಾರ್ ಬಿಧುರಿ ಹಾಗೂ ಸಿಇಎಸ್ಎಲ್ ಅಧ್ಯಕ್ಷರಾದ ಸೌರಭ್ ಕುಮಾರ್ ರವರು ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ರವರ ಸಮ್ಮುಖದಲ್ಲಿ ಸಹಿ ಹಾಕಿದ್ದಾರೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಸಹಿ ಮಾಡಲಾದ ಎಂಒಯು ಪ್ರಕಾರ, ಇಇಎಸ್‌ಎಲ್ ತನ್ನ ಅಂಗಸಂಸ್ಥೆ ಸಿಇಎಸ್‌ಎಲ್ ಮೂಲಕ ಚಾರ್ಜಿಂಗ್ ಯುನಿಟ್ ಹಾಗೂ ಸಂಬಂಧಿತ ಮೂಲ ಸೌಕರ್ಯಗಳನ್ನು ಖರೀದಿಸಲು, ಸ್ಥಾಪಿಸಲು, ಕಾರ್ಯ ನಿರ್ವಹಿಸಲು ಹಾಗೂ ಅವುಗಳನ್ನು ನಿರ್ವಹಿಸಲು ಒಪ್ಪಿಕೊಂಡಿದೆ. ಜಾಗದ ಬಳಕೆಗಾಗಿ ಸಿಇಎಸ್‌ಎಲ್ ಪ್ರತಿ ಕಿ.ವ್ಯಾಗೆ ಪ್ರತಿ ಗಂಟೆಗೆ ರೂ. 1 ಶುಲ್ಕವನ್ನು ಪ್ರತಿ ತಿಂಗಳು ಡಿಟಿಸಿಗೆ ಪಾವತಿಸಲಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ರಿಯಾಯಿತಿದಾರರಿಗೆ ಅಗತ್ಯವಿರುವ ಸ್ಥಳವು 3 ಇಸಿ‌ಎಸ್ (ಇಕ್ವಿವಲೆಂಟ್ ಕಾರ್ ಸ್ಪೇಸ್) ಗಿಂತ ಹೆಚ್ಚಿದ್ದರೆ, ಪ್ರತಿ ಇಸಿ‌ಎಸ್'ಗೆ ತಿಂಗಳಿಗೆ ಹೆಚ್ಚುವರಿಯಾಗಿ ರೂ. 2,000 ಪಾವತಿಸಬೇಕಾಗುತ್ತದೆ. ಆರಂಭದಲ್ಲಿ ಈ ಒಪ್ಪಂದದ ಅವಧಿ 10 ವರ್ಷಗಳಾಗಿರುತ್ತದೆ. ನಿಯಮಗಳು ಹಾಗೂ ಷರತ್ತುಗಳ ಪ್ರಕಾರ ಸಿಇಎಸ್ಎಲ್ ತಕ್ಷಣವೇ ಕೆಲಸವನ್ನು ಆರಂಭಿಸಲಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಮುಂದಿನ 4 ತಿಂಗಳಲ್ಲಿ ಎಲ್ಲಾ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯನ್ನು ಪೂರ್ಣಗೊಳಿಸಲಿದೆ. ಡಿಟಿಸಿ ಹಾಗೂ ಇಇಎಸ್ಎಲ್ ಜಂಟಿ ಸ್ಥಳ ಸಮೀಕ್ಷೆಯನ್ನು ನಡೆಸಿದ ನಂತರ ದ್ವಾರಕಾ ಸೆಕ್ಟರ್ 8, ದ್ವಾರಕಾ ಸೆಕ್ಟರ್ 2 ಡಿಪೋ, ಮೆಹ್ರೌಲಿ ಟರ್ಮಿನಲ್, ನೆಹರು ಪ್ಲೇಸ್ ಟರ್ಮಿನಲ್, ಓಖ್ಲಾ ಸಿಡಬ್ಲ್ಯು 2, ಸುಖದೇವ್ ವಿಹಾರ್ ಡಿಪೋ ಹಾಗೂ ಕಲ್ಕಾಜಿ ಡಿಪೋಗಳಲ್ಲಿ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳು ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳು ತಲೆ ಎತ್ತಲಿವೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಈ 7 ಸ್ಥಳಗಳಲ್ಲಿ ಪ್ರತಿಯೊಂದು ಇವಿ ಚಾರ್ಜಿಂಗ್ ಕೇಂದ್ರಗಳು ಒಟ್ಟು 6 ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿರಲಿವೆ. ಅವುಗಳಲ್ಲಿ ಮೂರು ದ್ವಿಚಕ್ರ ವಾಹನಗಳಿಗೆ, ಮೂರು ತ್ರಿ ಚಕ್ರ ವಾಹನಗಳಿಗೆ ಹಾಗೂ ಇತರ ಎಲ್ಲಾ ಚಾರ್ಜಿಂಗ್ ಪಾಯಿಂಟ್‌ಗಳನ್ನು ಎಲೆಕ್ಟ್ರಿಕ್ ಕಾರುಗಳಿಗೆ ಕಾಯ್ದಿರಿಸಲಾಗುತ್ತದೆ. ಸ್ಥಾಪಿನೆಯಾದ ನಂತರ ಈ ಸ್ಥಳಗಳು ಅವುಗಳ ನೈಜ ಸಮಯದ ಸ್ಥಳ ಹಾಗೂ ಚಾರ್ಜಿಂಗ್ ಪಾಯಿಂಟ್‌ಗಳ ಲಭ್ಯತೆಯ ಬಗ್ಗೆ ದೆಹಲಿ ಸರ್ಕಾರದ ಒನ್ ದೆಹಲಿ ಆಪ್‌ನಲ್ಲಿ ಮಾಹಿತಿ ಲಭ್ಯವಿರಲಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಈ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಮೂಲಕ ಸಿಇಎಸ್ಎಲ್ ಪೆಟ್ರೋಲ್, ಡೀಸೆಲ್ ವಾಹನಗಳಿಂದ ಹೊರ ಬರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಮುಂದಾಗಿದೆ. ಜೊತೆಗೆ ಸಾಧ್ಯವಿರುವಲ್ಲಿ ಸೋಲಾರ್ ರೂಫ್ ಹಾಗೂ ಬ್ಯಾಟರಿ ಸ್ಟೋರೆಜ್ ಸಿಸ್ಟಂಗಳನ್ನು ತೆರೆದು ನವೀಕರಿಸಬಹುದಾದ ಶಕ್ತಿಯನ್ನು ಚಾರ್ಜಿಂಗ್ ಮೂಲಸೌಕರ್ಯಗಳಿಗೆ ನೀಡಲಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ರವರು, ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವಲ್ಲಿ ಕೇಜ್ರಿವಾಲ್ ಸರ್ಕಾರ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದೆ. ಸಿಇಎಸ್ಎಲ್ ನೊಂದಿಗಿನ ಈ ಪಾಲುದಾರಿಕೆಯು ದೆಹಲಿಯಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಹಾಗೂ ಇವಿ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಇವಿ ಚಾರ್ಜಿಂಗ್ ಮೂಲ ಸೌಕರ್ಯಗಳನ್ನು ಸುಧಾರಿಸಲು ಡಿಟಿಸಿಯ ಜಾಗ ಹಾಗೂ ಡಿಪೋಗಳನ್ನು ಸಿಇಎಸ್ಎಲ್ ಬಳಸಿಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತದೆ. ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಈ ಚಾರ್ಜಿಂಗ್ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ನಾವು ವಿವಿಧ ಮಾಲಿನ್ಯರಹಿತ ವಿಧಾನಗಳ ಬಳಕೆಯಲ್ಲಿ ತೊಡಗಿದ್ದೇವೆ ಎಂದು ಹೇಳಿದರು.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ದೆಹಲಿ ರಾಜ್ಯ ಸರ್ಕಾರವು ತನ್ನ ಎಲೆಕ್ಟ್ರಿಕ್ ವಾಹನ ನೀತಿಯಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳ ಖರೀದಿಗೆ ಸಬ್ಸಿಡಿ ನೀಡುತ್ತಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ದೆಹಲಿ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯನ್ನು 2020ರ ಆಗಸ್ಟ್ ತಿಂಗಳಿನಲ್ಲಿ ಜಾರಿಗೊಳಿಸಲಾಯಿತು.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಈ ನೀತಿ ಜಾರಿಯಾದ ನಂತರ 6,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲಾಗಿದೆ. ದೆಹಲಿ ಸರ್ಕಾರವನ್ನು ಹೊರತುಪಡಿಸಿ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿನ ವಾಯುಮಾಲಿನ್ಯದ ಸಮಸ್ಯೆಯನ್ನು ಕಡಿಮೆಗೊಳಿಸುವುದು ಮಾತ್ರವಲ್ಲದೆ ಕಚ್ಚಾ ತೈಲ ಆಮದು ಪ್ರಮಾಣವನ್ನು ಸಹ ಕಡಿಮೆಗೊಳಿಸಲು ನೆರವಾಗುತ್ತವೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಹೊಸ ಒಪ್ಪಂದಕ್ಕೆ ಸಹಿ ಹಾಕಿದ ದೆಹಲಿ ಸರ್ಕಾರ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ವಿವಿಧ ರೀತಿಯ ತೆರಿಗೆಗಳಿಂದಾಗಿ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮುಗಿಲು ಮುಟ್ಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಪಾರಾಗಲು ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ.

Most Read Articles

Kannada
English summary
Cesl to open charging stations at seven locations in delhi details
Story first published: Wednesday, September 8, 2021, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X