Chandrayaan-3: ವಿಶ್ವದ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ ಭಾರತ.. ಚಂದ್ರಯಾನ-3 ಲ್ಯಾಂಡಿಂಗ್‌ ಯಶಸ್ವಿ

ಇಡೀ ದೇಶವೇ ತುದಿಗಾಲಿನಲ್ಲಿ ಎದುರು ನೋಡುತ್ತಿದ್ದ ಚಂದ್ರಯಾನ -3 (Chandrayaan-3) ಲ್ಯಾಂಡಿಂಗ್‌ ಯಶಸ್ವಿಯಾಗಿದ್ದು, ಕೋಟ್ಯಂತರ ಭಾರತೀಯರ ಪ್ರಾರ್ಥನೆಗೆ ಫಲ ಸಿಕ್ಕಿದೆ. ಇಂದು ಸಂಜೆ 6.4ರ ಸುಮಾರಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಳಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಜುಲೈ 14ರಂದು, ಚಂದ್ರಯಾನ -3 ಮಿಷನ್ ಭಾಗವಾಗಿ, ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಲ್ಯಾಂಡರ್ ಹಾಗೂ ರೋವರ್ ಹೊತ್ತ ರಾಕೆಟ್ ಅನ್ನು ಉಡಾವಣೆ ಮಾಡುವಲ್ಲಿ ಇಸ್ರೋ ಯಶಸ್ವಿಯಾಗಿತ್ತು. ಭೂಮಿಯಿಂದ 3.84 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಚಂದ್ರನ್ನು ತಲುಪಲು ವಿಕ್ರಮ್ ಲ್ಯಾಂಡರ್ 45 ದಿನ ತೆಗೆದುಕೊಂಡಿದೆ.

Chandrayaan 3: ವಿಶ್ವದ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ ಭಾರತ.. ಚಂದ್ರಯಾನ -3 ಲ್ಯಾಂಡಿಂಗ್‌ ಯಶಸ್ವಿ

ಸದ್ಯ, ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿದೆ. ಈ ಚಂದ್ರಯಾನ -3 ಮೂಲಕ ಇಸ್ರೋ, ಚಂದ್ರನ ಮಣ್ಣು ಹಾಗೂ ಮೇಲ್ಮೈಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಿದೆ. ಚಂದ್ರನ ಮೇಲೆ ಗುರುತ್ವಾಕರ್ಷಣ ಶಕ್ತಿ ಕಡಿಮೆಯಿರುವುದರಿಂದ 2019ರಲ್ಲಿ ಚಂದ್ರಯಾನ -2 ಯೋಜನೆ ಕಡೆ ಕ್ಷಣದಲ್ಲಿ ವಿಫಲವಾಗಿತ್ತು.

ಅದರಿಂದ ಸಾಕಷ್ಟು ಪಾಠ ಕಲಿತಿರುವ ವಿಜ್ಞಾನಿಗಳು, ಈ ಬಾರಿ ಸಾಕಷ್ಟು ಸಿದ್ದತೆ ಮಾಡಿಕೊಂಡಿದ್ದರು. ಆ ಕಾರಣಕ್ಕೆ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯವಾಗಿದೆ. ಇದರೊಂದಿಗೆ ಅಮೆರಿಕ, ರಷ್ಯಾ, ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಜೊತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ವಿಶ್ವದ ಏಕೈಕ ದೇಶ ಎಂಬ ಗೌರವಕ್ಕೂ ಪಾತ್ರವಾಗಿದೆ.

ವಿಕ್ರಮ್ ಲ್ಯಾಂಡರ್, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವುದರಿಂದ ಪ್ರಗ್ಯಾನ್ ರೋವರ್, ಅದರಿಂದ ಹೊರಬಂದು ಚಂದ್ರನ ಮೇಲೆ ವಿವಿಧ ಅಧ್ಯಯನ ನಡೆಸಲು ಸಾಧ್ಯವಾಗಲಿದೆ. ದೇಶದ ಖ್ಯಾತ ನಟ ನಟಿಯರು ಸೇರಿದಂತೆ ಅಮೆರಿಕ, ಬ್ರಿಟನ್ ಕೆನಡಾ ದೇಶದಲ್ಲಿ ನೆಲೆಸಿರುವ ಭಾರತೀಯರು ಕೂಡ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡಿದ್ದರು.

ಅಲ್ಲದೆ, ವಿಕ್ರಮ್‌ ಲ್ಯಾಂಡರ್‌ ಕ್ಯಾಮೆರಾ, ನಿನ್ನೆಯಷ್ಟೇ ಚಂದ್ರನ ಹೊಸ ಚಿತ್ರಗಳನ್ನು ಭೂಮಿಗೆ ಕಳುಹಿಸಿತ್ತು. ಇವೆಲ್ಲ ಕಾರಣಗಳಿಗೆ ಚಂದ್ರಯಾನ - 3 ಯಶಸ್ವಿಯಾಗುತ್ತದೆ ಹಲವು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚಂದ್ರಯಾನ - 3 ಯೋಜನೆಗೆ ಇಸ್ರೋ ಬರೋಬ್ಬರಿ 630 ರೂಪಾಯಿ ಕೋಟಿಯನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ. ಚಂದ್ರಯಾನ - 2ಕ್ಕೆ 978 ಕೋಟಿ ರೂಪಾಯಿ ವ್ಯಯಿಸಲಾಗಿತ್ತು.

ಚಂದ್ರಯಾನ ಎಂಬುದು ಭಾರತದ ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸಿನ ಕೂಸು. ಅದು 2008ರಲ್ಲಿ ಸಾಕಾರಗೊಂಡಿತ್ತು. ಆ ವರ್ಷದ ಅಕ್ಟೋಬರ್ ನಲ್ಲಿ ಚಂದ್ರಯಾನ 1 ಶುರುವಾಗಿ, 2009ರ ಆಗಸ್ಟ್ ತನಕ ಕಾರ್ಯನಿರ್ವಹಿಸಿತ್ತು. 2019ರಲ್ಲಿ ಚಂದ್ರಯಾನ -2 ಕೈಗೊಳ್ಳಲಾಗಿತ್ತು. ಆದರೆ ವೈಫಲ್ಯವಾಗಿತ್ತು. ಇವತ್ತಿಗೂ ಆರ್ಬಿಟರ್ ಚಂದ್ರನ ಸುತ್ತ ತಿರುಗುತ್ತಿದ್ದು, ಮಾಹಿತಿಯನ್ನು ಕಳುಹಿಸುತ್ತಿದೆ. ಈಗ ಚಂದ್ರಯಾನ -3ರಿಂದ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 23, 2023, 18:05 [IST]
English summary
Chandrayaan 3 vikram lander landing successfully details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+