2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಪ್ರತಿಯೊಬ್ಬರಿಗೂ ತಮ್ಮಿಷ್ಟದ ಬೈಕ್, ಕಾರುಗಳನ್ನು ಕೊಳ್ಳುವ ಕನಸಿರುತ್ತದೆ. ಅದಕ್ಕಾಗಿ ವರ್ಷಾನುಗಟ್ಟಲೇ ಹಣ ಕೂಡಿಡುವುದು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ನಾವು ಹೇಳಲು ಹೊರಟಿರುವ ವ್ಯಕ್ತಿಗೆ ಎಲ್ಲರಂತೆ ಬೈಕ್ ಕೊಳ್ಳುವ ಆಸೆಯೇನೋ ಇದೆ. ಆದೆರೆ ಬೈಕ್ ಕೊಳ್ಳಲು ಆತ ಆಯ್ಕೆ ಮಾಡಿಕೊಂಡ ವಿಧಾನ ಎಲ್ಲರನ್ನು ಬೆರಗುಗೊಳಿಸತ್ತದೆ.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಹೌದು. ತಮಿಳುನಾಡಿನ ವಿ.ಭೂಪತಿ ಎಂಬ 29 ವರ್ಷದ ಯುಟ್ಯೂಬ್ ವ್ಲಾಗರ್‌ ಸೇಲಂನಲ್ಲಿರುವ ಬಜಾಜ್‌ ಶೋರೂಂಗೆ ಭೇಟಿ ನೀಡಿ, ಬರೋಬ್ಬರಿ 2.6 ಲಕ್ಷ ರೂಪಾಯಿಯಷ್ಟು 1 ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ತನ್ನ ಕನಸಿನ ಬೈಕ್‌ ಆದ ಬಜಾಜ್‌ ಡೋಮಿನಾರ್‌ ಅನ್ನು ಖರೀದಿಸಿದ್ದಾನೆ.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಈ ಹಿಂದೆಯೂ ಕೆಲ ವ್ಲಾಗರ್‌ಗಳು ನಾಣ್ಯಗಳನ್ನು ಪಾವತಿಸಿ ಹೊಸ ಕಾರುಗಳನ್ನು ಖರೀದಿಸಿರುವ ಬಗ್ಗೆ ಹಲವೆಡೆ ವರದಿಯಾಗಿದೆ. ಇದೀಗ ತಮಿಳುನಾಡಿನ ವಿ.ಭೂಪತಿ ತಮ್ಮ ಕನಸಿನ ಬೈಕ್ ಖರೀದಿಸಲು 1 ರೂಪಾಯಿಯ ನಾಣ್ಯಗಳನ್ನು ಬಳಸಿದ್ದಾರೆ. Bajaj Dominar ನ ಆನ್ ರೋಡ್ ಬೆಲೆ 2.6 ಲಕ್ಷ ರೂಪಾಯಿ ಇದೆ.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಯೂಟ್ಯೂಬರ್ ಆಗಿರುವ ವಿ.ಭೂಪತಿ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ತನ್ನ ಕನಸಿನ ಬೈಕ್ ಖರೀದಿಸಲು ಕಳೆದ ಮೂರು ವರ್ಷಗಳಿಂದ ಒಂದು ರೂಪಾಯಿ ನಾಣ್ಯಗಳನ್ನು ಉಳಿಸುತ್ತಿದ್ದಾರೆ. ಇದಕ್ಕಾಗಿ ವಿ.ಭೂಪತಿ ಆಗಾಗ್ಗೆ ದೇವಸ್ಥಾನಗಳು, ಟೀ ಅಂಗಡಿ ಮತ್ತು ಹೋಟೆಲ್‌ಗಳಲ್ಲಿ ನೋಟ್‌ಗಳನ್ನು ನೀಡಿ ಒಂದು ರೂಪಾಯಿ ನಾಣ್ಯಗಳನ್ನು ಪಡೆಯುತ್ತಿದ್ದರು.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವಿ.ಭೂಪತಿ "ಈ ಹಿಂದೆ ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಹಾಗಾಗಿ ಪರ್ಯಾಯ ಕೆಲಸಕ್ಕಾಗಿ ಯೂಟ್ಯೂಬ್ ಚಾನೆಲ್‌ ತೆರೆದು ಹಣವನ್ನು ಉಳಿಸಲು ನಿರ್ಧರಿಸಿದೆ. ಇತ್ತೀಚೆಗೆ ಬೈಕ್‌ನ ಬೆಲೆಯನ್ನು ಕೇಳಿದಾಗ 2.6 ಲಕ್ಷ ರೂ. ಇರುವುದು ತಿಳಿದುಬಂದಿದೆ. ಹೇಗೂ ವ್ಲಾಗ್‌ ಮಾಡಲು ನನಗೂ ಕಂಟೆಂಟ್‌ ಬೇಕು ಹಾಗೂ ನಾಣ್ಯಗಳ ಶೇಕರಣೆಯೂ ಆಗಿತ್ತು. ಹಾಗಾಗಿ ನಾಣ್ಯಗಳನ್ನು ನೀಡಿ ಬೈಕ್‌ ಖರೀದಿಸಿದ್ದೇನೆ.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಶೋರೂಂ ಮ್ಯಾನೇಜರ್ ಮಹಾವಿಕ್ರಾಂತ್ ಅವರು ಮೊದಲು ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದರು, ಏಕೆಂದರೆ ಅಷ್ಟು ಮೊತ್ತದ ಹಣ ಎಣಿಕೆ ಮಾಡುವುದು ಎಂದರೆ ಸುಲಭದ ಕೆಲಸವಲ್ಲ. ಸ್ಟಾಫ್‌ ಎಲ್ಲರೂ ದಿನವಿಡೀ ಎಣಿಕೆ ಮಾಡಬೇಕಾಗುತ್ತದೆ. ಇನ್ನು ಬ್ಯಾಂಕ್‌ಗಳಲ್ಲಿ 1 ಲಕ್ಷ ರೂಪಾಯಿ (2000 ರೂಪಾಯಿ ಮುಖಬೆಲೆಯಲ್ಲಿ) ಎಣಿಸಲು 140 ರೂ. ಕಮಿಷನ್ ವಿಧಿಸುತ್ತವೆ".

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಇನ್ನು 2.6 ಲಕ್ಷ ರೂ.ನಷ್ಟು ಮೊತ್ತವನ್ನು ನಾಣ್ಯಗಳಲ್ಲಿ ಬ್ಯಾಂಕ್‌ಗೆ ನೀಡಿದರೆ ಅವರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಮಹಾವಿಕ್ರಾಂತ್‌ ಪ್ರಶ್ನಿಸಿದರು. ಆದರೂ ಹೇಗೋ ಮಹಾವಿಕ್ರಾಂತ್‌ ಅವರನ್ನು ನಾಣ್ಯ ಎಣಿಕೆಗೆ ಒಪ್ಪಿಸಿ ಬೈಕ್‌ ಖರೀದಿಸಲು ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಾಗ ಅವರೂ ಸಹ ಒಪ್ಪಿರುವುದಾಗಿ ವಿ.ಭೂಪತಿ ಸಂದರ್ಶನದಲ್ಲಿ ತಿಳಿಸಿದರು.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಇನ್ನು ಬೈಕ್‌ ಖರೀದಿಗೆ ಎಲ್ಲಾ ಸಿದ್ದತೆ ನಡೆದ ಮೇಲೆ ಶೋರೂಂ ಸಿಬ್ಬಂದಿಗೆ 2.6 ಲಕ್ಷ ರೂ. ನಾಣ್ಯಗಳನ್ನು ನೀಡಲಾಯಿತು. ಪೂರ್ಣ ಮೊತ್ತವನ್ನು ಎಣಿಸಲು ಸಿಬ್ಬಂದಿ 10 ಗಂಟೆಗಳ ಸಮಯ ತೆಗೆದುಕೊಂಡರು, ಕೊನೆಗೂ ವಿ.ಭೂಪತಿ ಅವರು ತಮ್ಮ ಕನಸಿನ ಬೈಕು ಬಜಾಜ್ ಡೊಮಿನಾರ್ ಅನ್ನು ಡೆಲಿವರಿ ಪಡೆದರು.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಈ ಹಿಂದೆ ವ್ಯಕ್ತಿಯೊಬ್ಬರು ಸುಮಾರು 12 ಲಕ್ಷ ರೂ. ಬೆಲೆಯ ಮಹೀಂದ್ರಾ ಬೊಲೆರೊವನ್ನು ಖರೀದಿಸಲು ನಿರ್ಧರಿಸಿ ನಾಣ್ಯ ತುಂಬಿದ ಚೀಲಗಳಿಂದ ಶೋರೂಂಗೆ ಭೇಟಿ ನೀಡಿ ಕಾರನ್ನು ಖರೀದಿಸಿ ಆಶ್ಚರ್ಯಗೊಳಿಸಿದ್ದರು. ಅಲ್ಲದೆ, ಇತ್ತೀಚೆಗೆ ಫೆಬ್ರವರಿ ತಿಂಗಳಿನಲ್ಲಿ ಯುಟ್ಯೂಬ್ ವ್ಲಾಗರ್ ಒಬ್ಬರು ನಾಣ್ಯಗಳನ್ನು ಬಳಸಿ ಸುಜುಕಿ ಅವೆನಿಸ್ ಸ್ಕೂಟರ್ ಅನ್ನು ಖರೀದಿಸಿದ್ದರು.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಆದರೆ, ಸ್ಕೂಟರ್‌ಗೆ ಸಂಪೂರ್ಣ ಹಣ ನೀಡಿಲ್ಲ. ಬದಲಾಗಿ ನಾಣ್ಯಗಳನ್ನು ಬಳಸಿ 22,000 ರೂ. ಡೌನ್‌ಪೇಮೆಂಟ್ ಮಾಡಿ ಉಳಿದ ಹಣವನ್ನು ಫೈನಾನ್ಸ್ ಮೂಲಕ ಪಾವತಿಸಿದರು. ಬಜಾಜ್ ಡೊಮಿನಾರ್ 400 ಬಜಾಜ್‌ ಕಂಪನಿಯ ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಕಂಪನಿಯು ಕಳೆದ ವರ್ಷ ಈ ಬೈಕ್‌ ಅನ್ನು ನವೀಕರಿಸಿದೆ.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಡೋಮಿನಾರ್ 400 ಬೈಕ್ CFD ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಎತ್ತರದ ವಿಂಡ್‌ಶೀಲ್ಡ್‌ನೊಂದಿಗೆ ಬರುತ್ತದೆ. ಇದು ಗಾಳಿಯಿಂದ ರಕ್ಷಣೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. 2022ರ ಬಜಾಜ್ ಡೋಮಿನಾರ್ 400 ಬೈಕ್ ಫ್ಲೆಕ್ಸಿ-ವಿಂಗ್‌ಲೆಟ್‌ಗಳೊಂದಿಗೆ ಜೆಟ್-ಫೈಟರ್ ಪ್ರೇರಿತ ಹ್ಯಾಂಡ್‌ಗಾರ್ಡ್ ಅನ್ನು ಹೊಂದಿದೆ, ಇದು ಗರಿಷ್ಠ ಗಾಳಿಯಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

2.60 ಲಕ್ಷ ರೂ. ಚಿಲ್ಲರೆ ನಾಣ್ಯಗಳನ್ನು ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ ಯುವಕ!

ಬಜಾಜ್ ಡೋಮಿನಾರ್ 400 ಬೈಕಿನ ಇತರ ಪ್ರಮುಖ ಲಕ್ಷಣಗಳೆಂದರೆ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್, ಪೊಸಿಷನ್ ಲ್ಯಾಂಪ್, ಲೋ ಬೀಮ್ ಮತ್ತು ಹೈ ಬೀಮ್ ಅನ್ನು ಒಳಗೊಂಡಿದೆ. ಅಂತರ್ನಿರ್ಮಿತ ಸ್ಟೇರ್ಪ್ಸ್ ಸಹ ಒದಗಿಸಲಾಗಿದೆ, ಇದು ಬೈಕಿನ ಟೂರಿಂಗ್ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಈ ಬೈಕ್ ವಿಶಾಲವಾದ ಹ್ಯಾಂಡಲ್‌ಬಾರ್‌ಗಳೊಂದಿಗೆ ಆರಾಮದಾಯಕ, ನೇರವಾದ ಸವಾರಿ ನಿಲುವನ್ನು ಹೊಂದಿದೆ, ಇದು ದೂರ ಪ್ರವಾಸದ ಉದ್ದೇಶಗಳಿಗೆ ಸೂಕ್ತವಾಗಿದೆ.

Most Read Articles

Kannada
English summary
Chennai man buys bajaj dominar 400 with 1 rupee coins
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X