ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಭಾರತದ ರಸ್ತೆಗಳಲ್ಲಿ ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತವೆ. ಕೆಲವು ಅಪಘಾತಗಳಲ್ಲಿ ಅಪಘಾತಕ್ಕೆ ಕಾರಣನಾಗುವ ವ್ಯಕ್ತಿ ಸ್ಥಳದಿಂದ ಪರಾರಿಯಾಗುತ್ತಾನೆ. ಇದೇ ರೀತಿಯ ಘಟನೆಯಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಈ ಕಾರು ಚಾಲಕ ಅಪಘಾತದ ಬಳಿಕ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಕಾರನ್ನು ಅಡಗಿಸಿಟ್ಟಿದ್ದ. ಆತ ತನ್ನ ಕಾರನ್ನು ರಿಪೇರಿ ಮಾಡಿಸಲು ತನ್ನ ಮನೆ ಬಳಿಯಿರುವ ಗ್ಯಾರೇಜಿಗೆ ತಂದಾಗ ಪೊಲೀಸರು ಬಂಧಿಸಿದ್ದಾರೆ. ಈ ಅಪಘಾತ ಸಂಭವಿಸಿದ್ದು 2020ರ ಡಿಸೆಂಬರ್ 6ರಂದು.

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಕೇರಳದ ತ್ರಿಶೂರ್ ಮೂಲದ ಕಾರು ಚಾಲಕ ನಿತೀಶ್, 32 ವರ್ಷದ ಸಂದೀಪ್ ಎಂಬ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದಿದ್ದ. ಅಪಘಾತದ ನಂತರ ನಿತೀಶ್ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದ. ಸಂದೀಪ್ ಚಾಲನೆ ಮಾಡುತ್ತಿದ್ದ ಹೋಂಡಾ ಗ್ರೇಸಿಯಾ ಸ್ಕೂಟರ್ ಅಪಘಾತದಲ್ಲಿ ಜಖಂಗೊಂಡಿದೆ. ಜೊತೆಗೆ ಸಂದೀಪ್ ಕೂಡ ಗಾಯಗೊಂಡಿದ್ದ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಅಲ್ಲಿದ್ದವರು ಸಂದೀಪ್‌ನನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಅಪಘಾತವೆಸಗಿದ್ದ ನಿತೀಶ್ ತನ್ನ ಕಾರನ್ನು ತನ್ನ ಮನೆಯ ಸಮೀಪ ಮುಚ್ಚಿಟ್ಟಿದ್ದ. ಸುಮಾರು 1 ತಿಂಗಳಿಗಿಂತ ಹೆಚ್ಚು ಕಾಲ ಕಾರನ್ನು ಹೊರತೆಗೆಯಲಿಲ್ಲ. ಪ್ರಕರಣದವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಆದರೆ ಅಪಘಾತಕ್ಕೆ ಕಾರಣವಾದ ಕಾರಿನ ರಿಜಿಸ್ಟ್ರೇಷನ್ ನಂಬರ್ ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಸಿಸಿಟಿವಿ ದೃಶ್ಯಗಳ ನೆರವಿನಿಂದ ಪೊಲೀಸರಿಗೆ ಕಾರು ಹಸಿರು ಬಣ್ಣವನ್ನು ಹೊಂದಿದ್ದು, ಕೆಎಲ್ 58 ರಿಜಿಸ್ಟ್ರೇಷನ್ ನಂಬರ್ ಹೊಂದಿರುವುದು ಪತ್ತೆಯಾಯಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಅಪಘಾತಕ್ಕೆ ಕಾರಣವಾದ ಕಾರನ್ನು ನಿತೀಶ್ ಮುಚ್ಚಿಟ್ಟಿದ್ದ ಕಾರಣ ಪೊಲೀಸರಿಗೆ ಕಾರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಅಪಘಾತದಲ್ಲಿ ಕಾರಿಗೂ ಕೂಡ ಹಾನಿಯಾಗಿದ್ದ ಕಾರಣ ಪೊಲೀಸರು ಗ್ಯಾರೇಜ್'ಗಳಲ್ಲೂ ತಪಾಸಣೆ ನಡೆಸಿದ್ದರು

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಅಪಘಾತವೆಸಗಿದ್ದ ಕಾರು ಗ್ಯಾರೇಜಿಗೆ ಬರುವುದು ಖಚಿತ ಎಂದು ಅರಿತಿದ್ದ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದರು. ಅಪಘಾತ ಸಂಭವಿಸಿ ಹಲವಾರುದಿನಗಳು ಕಳೆದಿದ್ದು, ಪೊಲೀಸರು ತನಿಖೆ ನಡೆಸುವುದನ್ನು ನಿಲ್ಲಿಸಿರುತ್ತಾರೆ ಎಂದು ಭಾವಿಸಿದ ನಿತೀಶ್ ಮುಚ್ಚಿಟ್ಟಿದ್ದ ಕಾರನ್ನು ಹೊರತೆಗೆದಿದ್ದಾನೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಪೊಲೀಸರಿಂದ ತಪ್ಪಿಸಿಕೊಳ್ಳಲು ನಿತೀಶ್ ತನ್ನ ಕಾರನ್ನು ತನ್ನ ಮನೆಯಿಂದ ಸುಮಾರು 12-15 ಕಿ.ಮೀ ದೂರದಲ್ಲಿ ನಿಲ್ಲಿಸಿದ್ದ. ಆದರೆ ಆತನ ಕ್ರಿಮಿನಲ್ ಯೋಜನೆಗಳು ಆತನ ನೆರವಿಗೆ ಬರಲಿಲ್ಲ.

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಹಸಿರು ಬಣ್ಣದ ಚೆವ್ರೊಲೆಟ್ ಬೀಟ್ ಕಾರು ನಂಬರ್ ಪ್ಲೇಟ್ ಇಲ್ಲದೆ ಗ್ಯಾರೇಜಿಗೆ ಹೋಗುವುದನ್ನು ಪೊಲೀಸರೊಬ್ಬರು ಗಮನಿಸಿದ್ದಾರೆ. ತನಿಖೆಯ ನಂತರ ಇದು 2020ರ ಡಿಸೆಂಬರ್ 6ರಂದು ಅಪಘಾತವೆಸಗಿದ್ದ ಕಾರು ಎಂದು ತಿಳಿದುಬಂದಿದೆ. ತಕ್ಷಣವೇ ಪೊಲೀಸರು ನಿತೀಶ್‌ನನ್ನು ಬಂಧಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಜೊತೆಗೆ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ. ಇದರ ನಡುವೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ಆದರೆ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ವೈದ್ಯಕೀಯ ಚಿಕಿತ್ಸೆಗಾಗಿ ಅವರು ಇದುವರೆಗೂ ರೂ.3 ಲಕ್ಷ ಖರ್ಚು ಮಾಡಿದ್ದಾರೆ.

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಅವರು ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಅಪಘಾತವೆಸಗಿ ತಪ್ಪಿಸಿಕೊಳ್ಳುವವರಿಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ವಿಧಿಸಲಾಗುತ್ತದೆ. ನಿತೀಶ್ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಮನೋರಮಾ ಆನ್‌ಲೈನ್ ಈ ಬಗ್ಗೆ ವರದಿ ಪ್ರಕಟಿಸಿದೆ. ಅಪಘಾತಗಳಾಗುವುದನ್ನು ತಪ್ಪಿಸಲು ವಾಹನಗಳನ್ನು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಚಾಲನೆ ಮಾಡಿದರೆ ಕ್ಷೇಮ. ಒಂದು ವೇಳೆ ಅಪಘಾತ ಸಂಭವಿಸಿದರೆ ಅಪಘಾತದಲ್ಲಿ ಗಾಯಗೊಳ್ಳುವವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ.

ಒಂದು ತಿಂಗಳ ನಂತರ ಸಿಕ್ಕಿ ಬಿದ್ದ ಹಿಟ್ ಅಂಡ್ ರನ್ ಕೇಸಿನ ಕಾರು ಚಾಲಕ

ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದರೆ ಹೆಚ್ಚು ತೊಂದರೆಯಾಗುವುದನ್ನು ತಪ್ಪಿಸಬಹುದು. ಅಪಘಾತವೆಸಗಿ ಓಡಿಹೋಗುವುದು ಸರಿಯಲ್ಲ. ಅಪಘಾತಗಳುಹೆಚ್ಚಾಗಿ ಅಜಾಗರೂಕತೆಯಿಂದ ಸಂಭವಿಸುತ್ತವೆ. ಈ ಕಾರಣಕ್ಕೆ ಸಂಚಾರ ನಿಯಮಗಳನ್ನು ಪಾಲಿಸುವುದು ಒಳ್ಳೆಯದು.

Most Read Articles

Kannada
English summary
Chevrolet Beat car driver arrested after one month in hit and run case. Read in Kannada.
Story first published: Thursday, February 4, 2021, 10:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X