ಚಿಕ್ಕಬಳ್ಳಾಪುರ: ಭೀಕರ ಅಪಘಾತದಲ್ಲಿ 13 ಜನರ ದುರ್ಮರಣ: ಮಂಜು ಕವಿದ ರಸ್ತೆಯಲ್ಲಿ ವಾಹನ ಚಾಲನೆಗೆ ಟಿಪ್ಸ್
ಸಿಮೆಂಟ್ ಲಾರಿ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) 13 ಜನರು ಸಾವನ್ನಪ್ಪಿ ಹಲವರಿಗೆ ಗಾಯಗಳಾದ ಘಟನೆಯು ಚಿಕ್ಕಬಳ್ಳಾಪುರ ಪಟ್ಟಣದ ಹೊರವಲಯದಲ್ಲಿರುವ ಚಿತ್ರಾವತಿ ಎಂಬಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ಇಂದು ಬೆಳಗಿನ ಜಾವ ಚಿತ್ರಾವತಿಯಲ್ಲಿ ರಸ್ತೆ ಪಕ್ಕದಲ್ಲಿ ಸಿಮೆಂಟ್ ಲಾರಿಯೊಂದು ನಿಂತಿತ್ತು. ಅದೇ ಮಾರ್ಗವಾಗಿ ಬಂದ ಟಾಟಾ ಸುಮೋ (Tata sumo) ಎಸ್‍ಯುವಿಯು ವೇಗವಾಗಿ ಬಂದು ಸಿಮೆಂಟ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋದಲ್ಲಿದ್ದ ಪ್ರಯಾಣಿಕರಲ್ಲಿ ಹಲವಾರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ 8 ಗಂಡಸರು, 4 ಹೆಂಗಸರು, 1 ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮೃತರ ಹೆಸರು ತಿಳಿದು ಬಂದಿಲ್ಲ.

ಮೃತಪಟ್ಟವರು ಆರು ಮಂದಿಯ ಗುರುತು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಅವರನ್ನು ದೊಡ್ಡಬಳ್ಳಾಪುರದ ಅರುಣಾ, ಅವರ ಪುತ್ರ ಋತ್ವಿಕ್, ಆಂಧ್ರಪ್ರದೇಶದ ಕೊತ್ತಚೆರುವಿನ ಪೆರುಮಾಳ್ ಪವನ್ ಕುಮಾರ್, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಬ್ಬಮ್ಮ, ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆಯ ನರಸಿಂಹಮೂರ್ತಿ, ಟಾಟಾ ಸುಮೋ ಚಾಲಕನಾದ ಆಂಧ್ರಪ್ರದೇಶದ ನರಸಿಂಹಪ್ಪ ಮೃತರು.
ಈ ಭಾಗದಲ್ಲಿ ದಟ್ಟವಾಗಿ ಮಂಜು ಕವಿದಿದ್ದ ಕಾರಣ ಜೀಪ್ ಚಾಲಕನಿಗೆ ತನ್ನ ಮುಂದೆ ನಿಶ್ಚಲ ಸ್ಥಿತಿಯಲ್ಲಿದ್ದ ಲಾರಿ ಕಂಡಿರಲಾರದು ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರತ್ಯಕ್ಷದರ್ಶಿ ನೀಡುವ ವಿವರಣೆ ಬೇರೆಯಾಗಿದೆ. ಅವರು ಅಪಘಾತಕ್ಕೀಡಾದ ಜೀಪಿನ ಹಿಂಭಾಗದಲ್ಲಿ ಬರುತ್ತಿದ್ದರಂತೆ. ಅವರು ಹೇಳುವ ಹಾಗೆ ಜೀಪಿನಲ್ಲಿ ಒಂದು ಮಗು ಸೇರಿದಂತೆ ಒಟ್ಟಿ 13ಜನ ಇದ್ದರು. ಅಪಘಾತ ನಡೆದ ಬಳಿಕ ಅವರಲ್ಲಿ ಕೇವಲ 2-3 ಜನ ಮಾತ್ರ ಉಸಿರಾಡುತ್ತಿದ್ದರು ಎಂದು ಅವರು ಹೇಳುತ್ತಾರೆ.

ಬೆಳಗಿನ ಜಾವ ಚಿತ್ರಾವತಿಯಲ್ಲಿ ರಸ್ತೆಯಲ್ಲಿ ದಟ್ಟವಾಗಿ ಮಂಜು ಕವಿದಿದ್ದ ಕಾರಣ ಟಾಟಾ ಸೊಮೋ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದಿರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಎದುರೇ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಳಿಗಾಲದಲ್ಲಿ ಮಂಜಿನಿಂದ ಕೂಡಿದ ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವುದು ತುಂಬಾ ಕಷ್ಟಕರ. ಇದು ರಸ್ತೆಗಳಲ್ಲಿ ಅಪಘಾತದ ಅಪಾಯ ಹೆಚ್ಚಿರುವುದರಿಂದ ಅತ್ಯಂತ ಎಚ್ಚರಿಕೆ ಅಗತ್ಯ. ಕೆಲವೊಮ್ಮೆ ಅತ್ಯಂತ ಎಚ್ಚರಿಕೆಯಿಂದ ಇದ್ದರೂ ಕೂಡ ಅಪಘಾತಗಳು ಸಂಭವಿಸುತ್ತವೆ. ಅಜಾಗರೂಕತೆಯಿಂದ ಯಾವುದೇ ಸಮಯದಲ್ಲೂ ಬೇಕಾದಾರರೂ ಅಪಘಾತ ಸಂಭವಿಸಬಹುದು. ಆದ್ದರಿಂದ ಮಂಜು ಬಿದ್ದಾಗ ವಾಹನ ಚಲಾಯಿಸುವಾಗ ಈ ಟಿಪ್ಸ್ ಅನುಸರಿಸಿ.

ಅತಿ ವೇಗ, ಓವರ್‌ಟೇಕ್ ಮಾಡಬೇಡಿ: ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಈ ಅಂಶವನ್ನು ಪ್ರತಿಯೊಬ್ಬ ಚಾಲಕರು ಮುಖ್ಯವಾಗಿ ಗಮನಿಸಬೇಕು. ಮಂಜು ಬಿದ್ದಿರುವ ರಸ್ತೆಗಳು ಬಹುತೇಕ ಅಸಷ್ಟವಾಗಿ ಗೋಚರಿಸುತ್ತವೆ. ಅಂತಹ ಸಂದರ್ಭದಲ್ಲಿ ಅತಿ ವೇಗ ಅಥವಾ ಓವರ್ ಟೇಕ್ ಮಾಡುವಂತಹ ಕೆಲಸಗಳಿಗೆ ಎಂದಿಗೂ ಕೈ-ಹಾಕಬೇಡಿ. ಮಂಜಿನಲ್ಲಿ ವಾಹನಗಳನ್ನು ಓಡಿಸಲು ಉತ್ತಮ ಮಾರ್ಗವೆಂದರೆ ಅದು ತಾಳ್ಮೆಯ ಚಾಲನೆ. ತಾಳ್ಮೆಯಿಂದಿರಿ.. ಜೊತೆಗೆ ಸುರಕ್ಷಿತಯಿಂದ ನಿಮ್ಮ ಮನೆಗೆ ಹೋಗಲು ನಿಧಾನವಾಗಿ ಚಾಲನೆ ಮಾಡಿ.
ನಿರ್ದಿಷ್ಟ ಟ್ರ್ಯಾಕ್‍ನಲ್ಲಿಯೇ ವಾಹನ ಚಲಾಯಿಸಿ: ಮಂಜು ಬಿದ್ದ ರಸ್ತೆ ಅಪಘಾತಗಳ ಹಿಂದಿನ ಪ್ರಮುಖ ಕಾರಣವೆಂದರೆ ಅದು, ಗೋಚರತೆ ಕಡಿಮೆ ಇರುವುದು. ನಿಮ್ಮ ಸುರಕ್ಷತೆ ಖಚಿತಪಡಿಸಿಕೊಳ್ಳಲು, ಇತರೇ ವಾಹನಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಮುಖ್ಯ. ಮಂಜು ಬಿದ್ದ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ನಿಮ್ಮ ಟ್ರ್ಯಾಕ್‍ನಲ್ಲಿ ಉಳಿಯುವುದು ಸಹ ಅತ್ಯಗತ್ಯ. ಹಠಾತ್ ಟ್ರ್ಯಾಕ್ ಬದಲಾವಣೆಯು ಅಪಘಾತಕ್ಕೆ ಕಾರಣವಾಗಬಹುದು. ಗೋಚರತೆ ಕಳಪೆಯಾಗಿದ್ದರೆ, ವಾಹನವು ಟ್ರ್ಯಾಕ್‍ನಲ್ಲಿಯೇ ಇದೆ ಎಂಬುದನ್ನು ತಿಳಿದುಕೊಳ್ಳಲು ವೈಟ್ ಲೇನ್ ಗಮನಿಸಿ.

ಜಾಗೃತೆ ಅಗತ್ಯ: ಮಂಜು ಬಿದ್ದಾಗ ರಸ್ತೆಗಳು ಕಣ್ಣಿಗೆ ಗೋಚರಿಸುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಕಿವಿಗಳನ್ನು ಅಲರ್ಟ್ ಇಟ್ಟುಕೊಳ್ಳಿ. ಇದಕ್ಕಾಗಿ ನಿಮ್ಮ ವಾಹನದಲ್ಲಿ ಮ್ಯೂಸಿಕ್ ವಾಲ್ಯೂಮ್ ಕಡಿಮೆ ಮಾಡಿರಿ. ಜೊತೆಗೆ ಫೋನ್ ಕರೆಗಳನ್ನು ಅಟೆಂಡ್ ಮಾಡುವುದನ್ನು ತಪ್ಪಿಸಿ. ಮಂಜು ಬಿದ್ದ ರಸ್ತೆಯಲ್ಲಿ ಚಾಲನೆ ಕಡೆಗೆ ಹೆಚ್ಚಿನ ಗಮನವಿರಲಿ. ಇದು ಎಚ್ಚರದಿಂದಿರಲೂ, ಎದುರಿನಿಂದ ಬರುವ ವಾಹನಗಳ ಬಗ್ಗೆ ಗಮನಹರಿಸಲು ಸಹಾಯ ಮಾಡುತ್ತದೆ.
ಲೈಟ್, ವಿಂಡ್‌ಶೀಲ್ಡ್ & ವಿಂಡೋಗಳನ್ನು ಸ್ವಚ್ಛಗೊಳಿಸಿ: ವಿಂಡೋ, ಲೈಟ್ ಮತ್ತು ವಿಂಡ್‌ಶೀಲ್ಡ್ ಅನ್ನು ಸ್ವಚ್ಛವಾಗಿಡಬೇಕು. ಮಂಜು ಬಿದ್ದ ರಸ್ತೆಯಲ್ಲಿ ಚಲಿಸುವಾಗ ವಿಂಡ್‌ಸ್ಕ್ರೀನ್ ಕೊಳಕಾಗಿದ್ದರೆ, ಅದರಿಂದ ರಸ್ತೆಯ ಗೋಚರತೆ ಕಡಿಮೆ ಇರುತ್ತದೆ. ಹೀಗಾಗಿ, ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಅದನ್ನು ತಪ್ಪಿಸಲು ವಿಂಡ್‌ಶೀಲ್ಡ್ & ವಿಂಡೋಗಳನ್ನು ಕ್ಲಿನ್ ಮಾಡಿರಿ. ಮಂಜು ಬಿದ್ದ ರಸ್ತೆಗಳಲ್ಲಿ ವಾಹನ ಚಲಾಯಿಸಬೇಕಾದರೆ ತೀವ್ರ ಎಚ್ಚರಿಕೆ ಅಗತ್ಯ.


Click it and Unblock the Notifications