ಬೆಂಗಳೂರು ಟ್ರಾಫಿಕ್‌ನಲ್ಲಿ ಅಪ್ಪನ ಮಡಿಲಿನಲ್ಲಿ ಕೂತು ಥಾರ್ ಓಡಿಸಿದ ಬಾಲಕ! ಅಪ್ಪನಿಗೆ ದಂಡದ ಶಿಕ್ಷೆ
ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಕಾನೂನು ಬಾಹಿರ. ಇದಕ್ಕಾಗಿ ಅಧಿಕಾರಿಗಳು ದಂಡ ಸೇರಿದಂತೆ ಕ್ರಮ ಕೈಗೊಳ್ಳಬಹುದು. ಆದರೆ ಇದನ್ನೆಲ್ಲಾ ಲೆಕ್ಕಿಸದೆ ಅನೇಕರು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುತ್ತಿದ್ದಾರೆ. ಇನ್ನೂ ಕೆಟ್ಟ ಸಂಗತಿಯೆಂದರೆ, ಮಕ್ಕಳು ಸಹ 18 ವರ್ಷಕ್ಕೆ ತಲುಪುವ ಮೊದಲೇ ವಾಹನಗಳನ್ನು ಓಡಿಸುತ್ತಿದ್ದಾರೆ.
ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ವಾಹನ ಚಲಾಯಿಸಲು ಪ್ರೋತ್ಸಾಹಿಸುತ್ತಾರೆ. ಕೆಲವು ಪೋಷಕರು ಮುಂದಾಗುವ ಅಪಾಯವನ್ನು ಅರಿತುಕೊಳ್ಳದಿರುವುದು ಮತ್ತು ಅದನ್ನು ಹೆಮ್ಮೆಯ ವಿಷಯವೆಂದು ಪರಿಗಣಿಸುವುದೇ ಇದಕ್ಕೆ ಕಾರಣ. ಮಕ್ಕಳು ವಾಹನಗಳನ್ನು ಓಡಿಸುವ ವಿಡಿಯೋಗಳು ಈ ಹಿಂದೆ ಹಲವು ಬಾರಿ ಕಾಣಿಸಿಕೊಂಡಿವೆ. ಕ್ಕಿರಿದ ಬೆಂಗಳೂರು ಟ್ರಾಫಿಕ್‌ನಲ್ಲಿ ಅಪ್ಪನ ಮಡಿಯಲ್ಲಿ ಕೂತು ಥಾರ್ ಓಡಿಸುವ ಪುಟ್ಟ ಬಾಲಕನ ವೀಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ಈ ವಿಡಿಯೋವನ್ನು ಬೆಂಗಳೂರಿನಲ್ಲಿ (Bengaluru) ಘಟನೆಯಾಗಿದೆ. ಅಲ್ಲಿನ ಮೆಟ್ರೋ ನಿಲ್ದಾಣದ ಬಳಿ ವಿಡಿಯೋ ತೆಗೆಯಲಾಗಿದೆ. ಈ ವೀಡಿಯೋದಲ್ಲಿ ಬಾಲಕನೊಬ್ಬ ಅತ್ಯಂತ ಕಿಕ್ಕಿರಿದ ರಸ್ತೆಯಲ್ಲಿ ಮಹೀಂದ್ರಾ ಥಾರ್ ( Mahindra Thar) ಓಡಿಸುತ್ತಿರುವುದನ್ನು ನೋಡಬಹುದು. ಹುಡುಗ ಕಾರನ್ನು ಪೂರ್ತಿಯಾಗಿ ಓಡಿಸಲಿಲ್ಲ. ಹಿರಿಯ ಹುಡುಗನ ತಂದೆ ಇರಬಹುದು ಎಂದು ಊಹಿಸಲಾಗಿದೆ. ಹಿರಿಯರ ಮಡಿಲಲ್ಲಿ ಕುಳಿತು ಸ್ಟೀರಿಂಗ್ ನಿಯಂತ್ರಿಸುವ ಹುಡುಗನನ್ನು ನೋಡಬಹುದು.
ಪ್ರಾಯಶಃ ಬ್ರೇಕ್ ಮತ್ತು ಎಕ್ಸಿಲೇರೆಶನ್ ಪೆಡಲ್‌ಗಳನ್ನು ವಯಸ್ಸಾದವರು ನಿಯಂತ್ರಿಸುತ್ತಾರೆ. ಹುಡುಗನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ್ದು ತಪ್ಪಾಗಿದೆ. ರಸ್ತೆ ತುಂಬಾ ಜನದಟ್ಟಣೆಯಿಂದ ಕೂಡಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಅಂತಹ ಸ್ಥಳದಲ್ಲಿ, ಶೌರ್ಯದ ಹೆಸರಿನಲ್ಲಿ ಹೀಗೆ ಮಾಡುವುದು ಮಾಡುವುದು ಖಂಡಿತ ತಪ್ಪು ಆಗುತ್ತದೆ.

ಹಾಗಾಗಿ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಬಾಲಕನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ವಯಸ್ಕನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಕಟ್ಟುನಿಟ್ಟಿನ ಕ್ರಮಗಳ ಮೂಲಕ ಮಾತ್ರ ಇಂತಹ ಘಟನೆಗಳನ್ನು ತಡೆಯಬಹುದು ಎಂದು ನಾವು ನಂಬುತ್ತೇವೆ. ಇಂತಹ ಮುಂದುವರಿಸಲು ಅವಕಾಶ ನೀಡಿದರೆ, ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ತೀವ್ರವಾಗಿ ಏರುವ ಸಾಧ್ಯತೆಯಿದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಗಮನಿಸಬೇಕು.
ವರದಿಗಳ ಪ್ರಕಾರ, ಬಾಲಕನ ಅಪ್ಪನಿಂಗೆ ದಂಡ ವಿಧಿಸಲಾಗಿದೆ. ಇನ್ನು ಬಾಲಕ ಓಡಿಸಿದ ಮಹೀಂದ್ರಾ ಥಾರ್ ಬಗ್ಗೆ ಹೇಳುವುದಾದರೆ, ಈ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಆಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಆಫ್-ರೋಡ್ ವಾಹನಗಳು ಎಂದಾಗ ಮೊದಲು ನೆನಪಿಗೆ ಬರುವುದು ಥಾರ್ ಎಸ್‍ಯುವಿಯಾಗಿದೆ.

ಇನ್ನು ಈ ಥಾರ್ ಎಸ್‍ಯುವಿಯ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯದಿಂದಾಗಿ ಹೆಚ್ಚಿನ ವಾಹನ ಪ್ರಿಯರು ಥಾರ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಹೀಂದ್ರಾ ಥಾರ್ ತನ್ನ ಆಫ್-ರೋಡ್ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ ಎಸ್‍ಯುವಿಯಾಗಿದೆ. ಆದರೆ ಕಠಿಣವಾದ ಅಥವಾ ಹೆಚ್ಚು ಜಾರುವ ಸ್ಥಳಗಳಲ್ಲಿ ಎಸ್‍ಯುವಿಯನ್ನು ಡ್ರೈವ್ ಮಾಡುವಾಗ ಹೆಚ್ಚಿನ ಕೌಶಲ್ಯವನ್ನು ಹೊಂದಿರಬೇಕು.
ಇನ್ನು ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಅತ್ಯಂತ ಕೈಗೆಟುಕುವ ಲ್ಯಾಡರ್-ಆನ್-ಫ್ರೇಮ್ 4X4 ಎಸ್‍ಯುವಿಯಾಗಿದೆ. ಅತ್ಯುನ್ನತ ಆಫ್-ರೋಡಿಂಗ್ ಸಾಮರ್ಥ್ಯಗಳು, ಪವರ್ ಫುಲ್ ಎಂಜಿನ್ ಆಯ್ಕೆಗಳು ಮತ್ತು ಪ್ರಾಯೋಗಿಕ ಕ್ಯಾಬಿನ್‌ಗೆ ಹೆಚ್ಚು ಜನಪ್ರಿಯವಾಗಿದೆ. ಮಹೀಂದ್ರಾ ಥಾರ್ ದೇಶದ ಅತ್ಯಂತ ಜನಪ್ರಿಯ ಲೈಫ್ ಸ್ಟೈಲ್ ವಾಹನಗಳಲ್ಲಿ ಒಂದಾಗಿದೆ ಮತ್ತು ಕೆಲವು ಗ್ರಾಹಕರು ಈ ಎಸ್‍ಯುವಿಯನ್ನು ಮಾಡಿಫೈ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications