ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಚೀನಾ ದೇಶವು ಪ್ರಪಂಚದಲ್ಲಿಯೇ ಉದ್ದವಾದ ಬುಲೆಟ್ ರೈಲು ಮಾರ್ಗಗಳನ್ನು ಹೊಂದಿದೆ. ಚೀನಾದಲ್ಲಿರುವ ಬುಲೆಟ್ ರೈಲುಗಳು ಪ್ರತಿ ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಚೀನಾದ ರಾಜಧಾನಿ ಬೀಜಿಂಗ್‍‍‍ನಿಂದ ಚೀನಾದ ಪ್ರಮುಖ ನಗರಗಳಿಗೆ ಬುಲೆಟ್ ರೈಲಿನ ಸೇವೆಯನ್ನು ಒದಗಿಸಲಾಗಿದೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಈಗ ಚೀನಾ ಬುಲೆಟ್ ರೈಲಿನ ಸೇವೆಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದೆ. ಚೀನಾದಲ್ಲಿ ಈಗಾಗಲೇ ಡ್ರೈವರ್‍‍ಲೆಸ್ ಮೆಟ್ರೋ ರೈಲುಗಳಿವೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಆದರೆ ಮೆಟ್ರೊ ರೈಲುಗಳ ವೇಗವು ಕಡಿಮೆಯಾಗಿದೆ. ಡ್ರೈವರ್‍‍ಲೆಸ್ ಬುಲೆಟ್ ರೈಲುಗಳ ವೇಗವು ಪ್ರತಿ ಗಂಟೆಗೆ 350 ಕಿ.ಮೀಗಳಾಗಿದೆ. ಈ ಡ್ರೈವರ್‍‍ಲೆಸ್ ಬುಲೆಟ್ ರೈಲಿನ ಸೇವೆಯನ್ನು ಬೀಜಿಂಗ್‍‍ನಿಂದ ಜಿಯಾನ್‍‍ಜಿಯಾವೊವರೆಗೂ ಆರಂಭಿಸಲಾಗಿದೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

2022ರ ಚಳಿಗಾಲದ ಒಲಂಪಿಕ್ಸ್ ಈ ಎರಡೂ ನಗರಗಳಲ್ಲಿ ನಡೆಯಲಿರುವ ಕಾರಣಕ್ಕೆ ಈ ಬುಲೆಟ್ ರೈಲಿಗೆ ಚಾಲನೆ ನೀಡಲಾಗಿದೆ. ಈ ಮೊದಲು ಈ ಎರಡು ನಗರಗಳ ಮಧ್ಯೆಯ ಪ್ರಯಾಣಕ್ಕಾಗಿ ಹಲವು ಗಂಟೆಗಳು ಬೇಕಾಗಿದ್ದವು.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಹೊಸ ಬುಲೆಟ್ ರೈಲಿನಿಂದಾಗಿ ಈ ಎರಡು ನಗರಗಳ ಮಧ್ಯದ ಪ್ರಯಾಣವು ಕೇವಲ 47 ನಿಮಿಷಗಳಿಗೆ ಇಳಿಯಲಿದೆ. ಈ ಬುಲೆಟ್ ಟ್ರೇನ್‍‍ನಲ್ಲಿ ಅಳವಡಿಸಿರುವ ಟೆಕ್ನಾಲಜಿಯು ರೈಲ್ವೆ ಸ್ಟೇಷನ್‍‍ಗಳು ಬಂದಾಗ ಆಟೋಮ್ಯಾಟಿಕ್ ಆಗಿ ನಿಧಾನಗೊಳ್ಳುವುದರ ಜೊತೆಗೆ, ಪ್ರಯಾಣಿಕರನ್ನು ಇಳಿಸಿ ನಂತರ ವೇಗವನ್ನು ಹೆಚ್ಚಿಸಿಕೊಂಡು ಚಲಿಸುತ್ತವೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಈ ಉದ್ದೇಶಕ್ಕಾಗಿ ಈ ಟ್ರೇನ್‍‍ನಲ್ಲಿ 2,500 ಸೆನ್ಸಾರ್ ಹಾಗೂ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾವುದಾದರೂ ತಾಂತ್ರಿಕ ಸಮಸ್ಯೆಗಳು ಎದುರಾದರೆ ಅವುಗಳನ್ನು ನಿಭಾಯಿಸಲು ಹಲವಾರು ಸುರಕ್ಷತಾ ಫೀಚರ್‍‍ಗಳನ್ನು ನೀಡಲಾಗಿದೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಗಮನಿಸಬೇಕಾದ ಸಂಗತಿಯೆಂದರೆ ಎಮರ್ಜೆನ್ಸಿ ಸಂದರ್ಭಗಳನ್ನು ನಿಭಾಯಿಸಲು ಯಾವುದೇ ಡ್ರೈವರ್‍‍ಗಳಿರುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಆಧುನಿಕ ಟೆಕ್ನಾಲಜಿಗಳನ್ನು ಈ ಚಾಲಕರಹಿತ ಬುಲೆಟ್ ರೈಲಿನಲ್ಲಿ ಅಳವಡಿಸಲಾಗಿದೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಹೊರದೇಶಗಳಿಂದ ಬರುವ ಅಥ್ಲೀಟ್‍‍ಗಳು ಹಾಗೂ ಪತ್ರಕರ್ತರು ತಮ್ಮ ಜೊತೆಗಿರುವ ಎಕ್ವಿಪ್‍‍ಮೆಂಟ್‍‍ಗಳನ್ನು ಇಟ್ಟುಕೊಳ್ಳಲು ಅನುಕೂಲವಾಗುವಂತಹ ಸೌಲಭ್ಯಗಳನ್ನು ಈ ರೈಲಿನಲ್ಲಿ ನೀಡಲಾಗಿದೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಈ ಬುಲೆಟ್ ಟ್ರೇನಿನಲ್ಲಿ 5ಜಿ ಇಂಟರ್‍‍ನೆಟ್ ಸೌಲಭ್ಯವನ್ನೂ ಸಹ ನೀಡಲಾಗಿದೆ. ಇದರ ಜೊತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ, ಲೈಟ್ಸ್, ಟಚ್‍‍ಸ್ಕ್ರೀನ್ ಕಂಟ್ರೋಲ್ ಬಟನ್, ವೈರ್‍‍ಲೆಸ್ ಚಾರ್ಜರ್‍‍ಗಳಿವೆ. ಈ ಸೌಲಭ್ಯಗಳನ್ನು ನೀಡಲು ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಚಳಿಗಾಲದ ಒಲಂಪಿಕ್ಸ್ ಚೀನಾದಲ್ಲಿ 2022ರ ಫೆಬ್ರವರಿ 4ರಿಂದ 22ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಚಾಲಕರಹಿತ ಬುಲೆಟ್ ಟ್ರೇನ್ ಸಹ ಸೇರಿದೆ.

ಪ್ರಪಂಚದ ಅತಿ ವೇಗದ ಡ್ರೈವರ್‍‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

ಚೀನಾ ಈಗಾಗಲೇ ವ್ಹೀಲ್‍‍ಗಳಿಲ್ಲದೇ ಮ್ಯಾಗ್ನೆಟಿಕ್‍‍ನೊಂದಿಗೆ ಚಲಿಸುವ ಹೈ ಸ್ಪೀಡ್‍‍ನ ಮ್ಯಾಕ್ಲೇವ್ ರೈಲುಗಳನ್ನು ಹೊಂದಿದೆ. ಇದರ ಜೊತೆಗೆ ಬುಲೆಟ್ ಟ್ರೇನ್‍‍ಗಳನ್ನು 600ರಿಂದ 800 ಕಿ.ಮೀ ವೇಗದಲ್ಲಿ ಚಲಾಯಿಸಲು ಮುಂದಾಗಿದೆ.

Most Read Articles

Kannada
English summary
China launches world's fastest driverless bullet train. Read in Kannada.
Story first published: Saturday, January 11, 2020, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X