ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಭಾರತದಲ್ಲಿ ಪಾದಚಾರಿಗಳ ಓಡಾಟಕ್ಕಾಗಿ ಪಾದಚಾರಿ ಮೇಲ್ಸೆತುವೆಗಳನ್ನು ನಿರ್ಮಿಸಲಾಗುತ್ತದೆ. ಮೆಟ್ರೋ ನಗರಗಳಲ್ಲಿ, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಇವುಗಳ ಮೇಲೆ ದ್ವಿಚಕ್ರ ವಾಹನಗಳು ಓಡಾಡುವುದನ್ನು ಸಹ ಕಾಣಬಹುದು.

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ದ್ವಿಚಕ್ರ ವಾಹನಗಳು ಇವುಗಳ ಮೇಲೆ ಓಡಾಡುವುದು ಸಾಮಾನ್ಯವಾದರೂ ನಾಲ್ಕು ಚಕ್ರದ ವಾಹನಗಳು ಓಡಾಡುವುದನ್ನು ಕಾಣುವುದು ಕಷ್ಟ. ಆದರೆ ಚಾಲಕನೊಬ್ಬ ತನ್ನ ಸುಜುಕಿ ಜಿಮ್ನಿ ಕಾರ್ ಅನ್ನು ಈ ಪಾದಚಾರಿ ಮೇಲ್ಸೆತುವೆ ಮೇಲೆ ಚಾಲನೆ ಮಾಡಿದ್ದಾನೆ.

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಈ ಸೇತುವೆಯ ಮೇಲೆ ಹತ್ತಿ, ಇಳಿದಿರುವುದು ಮೂರನೇ ತಲೆಮಾರಿನ ಸುಜುಕಿ ಜಿಮ್ನಿ ಕಾರು. ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಚಲಿಸುವ ಸಲುವಾಗಿ ಕಾರಿನ ಚಾಲಕ ಈ ಕೆಲಸಕ್ಕೆ ಕೈ ಹಾಕಿದ್ದಾನೆ. ಚೀನಾದಲ್ಲಿ ನಡೆದ ಈ ವಿಲಕ್ಷಣ ಘಟನೆಯ ವಿಡಿಯೋ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಈ ಘನಂದಾರಿ ಕೆಲಸ ಮಾಡಿದ ಚಾಲಕನಿಗೆ ಪೊಲೀಸರು 200 ಯುವಾನ್ ದಂಡ ವಿಧಿಸಿ, ಡ್ರೈವಿಂಗ್ ಲೈಸೆನ್ಸ್‌ನ ಅಂಕಗಳನ್ನು ಕಡಿಮೆ ಮಾಡಿದ್ದಾರೆ. ಜಿಮ್ನಿಯ ಕ್ಲೈಂಬಿಂಗ್ ಹಾಗೂ ಡಿಸೆಂಡಿಂಗ್ ಮಾದರಿಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವು ಕಾಲದಿಂದ ವಿವಿಧ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಜಿಮ್ನಿ ಮಾದರಿ ಕಾರುಗಳನ್ನು ಆಫ್-ರೋಡ್ ಬಳಕೆಗೆ ತಕ್ಕಂತೆ ತಯಾರಿಸಿರಲಾಗುತ್ತದೆ. ಜಿಮ್ನಿ ಮಾದರಿಗಳು ಕಡಿಮೆ ತೂಕವನ್ನು ಹೊಂದಿರುವುದರ ಜೊತೆಗೆ ಆಕ್ಟೀವ್ ಆಗಿರುತ್ತವೆ. ಈ ವೀಡಿಯೊದಲ್ಲಿರುವ ಮೂರನೇ ತಲೆಮಾರಿನ ಸುಜುಕಿ ಜಿಮ್ನಿ ಯಾವುದೇ ತೊಂದರೆಗಳಿಲ್ಲದೆ ಮೆಟ್ಟಿಲುಗಳ ಮೇಲೆ ಸುಲಭವಾಗಿ ಚಲಿಸುವುದನ್ನು ಕಾಣಬಹುದು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಜಿಮ್ನಿ ಕಾರು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಈ ಕಾರಣಕ್ಕೆ ಚಿಕ್ಕ ಸೇತುವೆಯ ಮೇಲೆ ಚಲಿಸುವಾಗಲೂ ಯಾವುದೇ ಸಮಸ್ಯೆ ಎದುರಾಗಿಲ್ಲ. ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಇರುವ ಕಾರಣಕ್ಕೆ ಕಾರಿನ ಕೆಳಭಾಗಕ್ಕೆ ಯಾವುದೇ ತೊಂದರೆಯಾಗದಂತೆ ಮೆಟ್ಟಿಲುಗಳನ್ನು ಏರಿದೆ. ಮೂರನೇ ತಲೆಮಾರಿನ ಜಿಮ್ನಿ ಕಾರ್ ಅನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು.

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದ ಮಾರಾಟವಾಗುತ್ತಿದೆ. ಭಾರತದಲ್ಲಿ ಸುಜುಕಿ ಕಂಪನಿಯು ಎರಡನೇ ತಲೆಮಾರಿನ ಜಿಮ್ನಿ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಇದನ್ನು ಜಿಪ್ಸಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಜಿಪ್ಸಿ ಕಾರು ಹೆಚ್ಚು ಜನಪ್ರಿಯವಾಗಿತ್ತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಮಿಲಿಟರಿ ಸೇರಿದಂತೆ ವಿವಿಧ ಭದ್ರತಾ ಪಡೆಗಳಲ್ಲಿ ಜಿಪ್ಸಿ ಕಾರ್ ಅನ್ನು ಹೆಚ್ಚು ಬಳಸಲಾಗುತ್ತದೆ. ಆಫ್-ರೋಡ್ ಸಾಮರ್ಥ್ಯ ಹಾಗೂ ಹಗುರವಾಗಿರುವ ಕಾರಣಕ್ಕೆ ಭದ್ರತಾ ಪಡೆಗಳು ಜಿಪ್ಸಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತವೆ. ಸುರಕ್ಷತಾ ನಿಯಮ ಹಾಗೂ ಬಿಎಸ್ 6 ನಿಯಮಗಳ ಕಾರಣದಿಂದಾಗಿ ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷ ಜಿಪ್ಸಿ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಫೆಬ್ರವರಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿಯು ನಾಲ್ಕನೇ ತಲೆಮಾರಿನ ಹೊಸ ಜಿಮ್ಮಿ ಕಾರ್ ಅನ್ನು ಅನಾವರಣಗೊಳಿಸಿತ್ತು. ಈ ಕಾರು 2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪಾದಚಾರಿ ಮೇಲ್ಸೇತುವೆ ಮೇಲೆ ದುಸ್ಸಾಹಸಕ್ಕೆ ಕೈಹಾಕಿದ ಚಾಲಕ

ಮೇಲ್ಸೇತುವೆ ಮೇಲೆ ಜಿಮ್ನಿ ಕಾರು ಸಂಚರಿಸುತ್ತಿರುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರೇ ಆಗಲಿ ಈ ರೀತಿಯ ದುಸ್ಸಾಹಸಕ್ಕೆ ಕೈಹಾಕುವುದು ಸರಿಯಲ್ಲ. ಇದು ತೀರಾ ಅಪಾಯಕಾರಿಯಾಗಿದ್ದು, ರಸ್ತೆಯಲ್ಲಿ ಸಂಚರಿಸುವವರ ಪ್ರಾಣಕ್ಕೆ ಕುತ್ತು ತರಬಹುದು.

ಚಿತ್ರಕೃಪೆ: ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ / ಯೂಟ್ಯೂಬ್

Most Read Articles

Kannada
English summary
China man drives Jimny up down a pedestrian bridge. Read in Kannada.
Story first published: Saturday, April 18, 2020, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X