ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಕಬಾಬ್ ಅನ್ನು ಇಷ್ಟಪಡದ ಮಾಂಸಾಹಾರಿಗಳೇ ಇಲ್ಲವೇನೋ ಎಂದು ಹೇಳಬಹುದು. ಕಬಾಬ್ ಹಲವು ಮಾಂಸಾಹಾರಿಗಳ ನೆಚ್ಚಿನ ಆಹಾರವಾಗಿದೆ. ಈ ಖಾದ್ಯವನ್ನು ತಯಾರಿಸಲು ಪ್ರಯತ್ನಿಸಿದ ಚೀನಾದ ವ್ಯಕ್ತಿಯೊಬ್ಬನಿಗೆ ಕೆಟ್ಟ ಅನುಭವವಾಗಿದೆ.

ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಮನೆಯಲ್ಲಿರುವ ಸ್ಟವ್ ಬಳಸದೆ ಕಬಾಬ್ ತಯಾರಿಸಲು ಆತ ತಮ್ಮ ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಸೂಪರ್ ಕಾರ್ ಅನ್ನು ಬಳಸಿದ್ದಾನೆ. ಇದರಿಂದಾಗಿ ಆತನಿಗೆ ಭಾರೀ ಪ್ರಮಾಣದ ನಷ್ಟವಾಗಿದೆ. ಸಾಮಾನ್ಯವಾಗಿ ಲ್ಯಾಂಬೊರ್ಗಿನಿ ಕಂಪನಿಯ ಎಲ್ಲಾ ವಾಹನಗಳು ಹೆಚ್ಚಿನ ಪರ್ಫಾಮೆನ್ಸ್'ಗೆ ಹೆಸರುವಾಸಿಯಾಗಿವೆ.

ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಈ ಚೀನಾ ಯುವಕ ಕಬಾಬ್ ಬೇಯಿಸಲು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ಆತ ಮಾಂಸದ ತುಂಡೋದನ್ನು ಕೋಲಿನ ಮೇಲೆ ಸೇರಿಸಿ ಕಾರಿನ ಆಕ್ಸಲರೇಟರ್ಚಾಲನೆ ಮಾಡಿದ್ದಾನೆ. ನಂತರ ಎಕ್ಸಾಸ್ಟ್ ಪೈಪ್ ಮೂಲಕ ಹೊರಬಂದ ಬೆಂಕಿಯಿಂದ ಮಾಂಸವನ್ನು ಸುಡಲು ಶುರು ಮಾಡಿದ್ದಾನೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಕಬಾಬ್ ಅನ್ನು ಬೇಗ ಸಿದ್ಧಪಡಿಸಲು ಆತ ಕಾರಿನ ಆಕ್ಸಲರೇಟರ್ ಅನ್ನು ಒತ್ತುತ್ತಲೇ ಇದ್ದ. ನಿರಂತರವಾಗಿ ಆಕ್ಸಲರೇಟರ್ ಒತ್ತಿದ ಕಾರಣ ಕಾರಿನಿಂದ ಹಠಾತ್ ಹೊಗೆ ಸ್ಫೋಟಗೊಂಡಿದೆ. ತಕ್ಷಣವೇ ಕಾರು ಮಾಲೀಕ ಎಂಜಿನ್ ಹಾಗೂ ಎಲ್ಲಾ ಪ್ಯಾನೆಲ್'ಗಳನ್ನು ತೆರೆದಿದ್ದಾನೆ.

ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಆದರೆ ಎಂಜಿನ್‌ನಿಂದ ಆಯಿಲ್ ಹೊರ ಬಂದಿದೆ. ಕೆಂಪು ಬಣ್ಣದಲ್ಲಿದ್ದ ಎಂಜಿನ್ ಆಯಿಲ್, ಎಂಜಿನ್ ಆಯಿಲ್ ಅನ್ನು ತಣ್ಣಗಾಗಿಸಲು ನೆರವಾಗುತ್ತದೆ ಎಂದು ಹೇಳಲಾಗಿದೆ. ಕೆಲವು ಇಂಟರ್ ನೆಟ್ ಬಳಕೆದಾರರು ಯುವಕನ ಕಾರ್ಯಕ್ಕೆ ವಿಷಾದ ವ್ಯಕ್ತ ಪಡಿಸಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಇನ್ನೂ ಕೆಲವರು ಆತನ ಬಗ್ಗೆ ಅನುಕಂಪ ತೋರಿದ್ದಾರೆ. ಕಾರಿನಿಂದ ಎಂಜಿನ್ ಆಯಿಲ್ ಹೊರ ಬಂದಿರುವುದರಿಂದ ಕಾರಿನ ಎಂಜಿನ್ ಹಾನಿಗೊಳಗಾಗಬಹುದು ಎಂದು ವಾಹನ ಪರಿಣಿತರು ಹೇಳಿದ್ದಾರೆ.

ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಈ ಸ್ಫೋಟದಿಂದ ಕಾರಿಗೆ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗುವುದಿಲ್ಲವೆಂದು ಅವರು ಹೇಳಿದಾರೆ. ಈ ಚೀನಾ ಯುವಕ ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರ್ ಅನ್ನು ಕಬಾಬ್ ತಯಾರಿಸಲು ಬಳಸಿದ್ದಾನೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಭಾರತದಲ್ಲಿ ಈ ಕಾರಿನ ಬೆಲೆ ರೂ.5 ಕೋಟಿಗಳಾಗಿದೆ. ಈ ಕಾರ್ ಅನ್ನು ಅವೆಂಟಡಾರ್ ಎಸ್, ಅವೆಂಟಡಾರ್ ಎಸ್ ರೋಡ್ ಸ್ಟರ್ ಹಾಗೂ ಅವೆಂಟಡಾರ್ ಎಸ್‌ವಿಜೆ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರಿನಲ್ಲಿ 6.5 ಲೀಟರ್ ವಿ 12 ಎಂಜಿನ್ ಅಳವಡಿಸಲಾಗಿದೆ.

ಸೂಪರ್ ಕಾರಿನ ಎಕ್ಸಾಸ್ಟ್ ಪೈಪ್ ಮೂಲಕ ಕಬಾಬ್ ತಯಾರಿಸಲು ಹೋಗಿ ಯಡವಟ್ಟು ಮಾಡಿಕೊಂಡ ಚೀನಾ ಯುವಕ

ಈ ಎಂಜಿನ್ 697 ಬಿ‌ಹೆಚ್‌ಪಿ ಪವರ್ ಹಾಗೂ 690 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 350 ಕಿ.ಮೀಗಳಾಗಿದೆ. ಚೀನಾ ಯುವಕ ಇಂತಹ ಸೂಪರ್ ಪವರ್ ಹೊಂದಿರುವ ಕಾರು ಬಳಸಿ ಕಬಾಬ್ ತಯಾರಿಸಲು ಮುಂದಾಗಿದ್ದಾನೆ. ಈ ವೀಡಿಯೊವನ್ನು ಕ್ವೆನ್ ಹೂಸೊಂಗ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ.

Most Read Articles

Kannada
English summary
China man uses Lamborghini car to prepare kabab. Read in Kannada.
Story first published: Monday, June 7, 2021, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X