ಚೀನಾಗೆ ಜಗತ್ತಿನ ಮೊದಲ ವಿದ್ಯುತ್ ಚಾಲಿತ ವಿಮಾನದ ಹಿರಿಮೆ
ಜಗತ್ತಿನ ಮೊತ್ತ ಮೊದಲ ವಿದ್ಯುತ್ ಚಾಲಿತ ವಿಮಾನ ನಿರ್ಮಾಣದ ಹಿರಿಮೆ ನೆರೆಯ ಚೀನಾ ದೇಶವು ಗಿಟ್ಟಿಸಿಕೊಂಡಿದೆ. ಅದುವೇ 14.5 ಮೀಟರ್ ಉದ್ದವಾದ ರೆಕ್ಕಗಳನ್ನು ಹೊಂದಿರುವ 'ಬಿಎಕ್ಸ್1ಇ'.
ಪೈಲಟ್ ತರಬೇತಿ, ಪ್ರವಾಸೋದ್ಯಮ, ಹವಾಮಾನ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಇದನ್ನು ಬಳಕೆ ಮಾಡಲಾಗುವುದು ಎಂದು ಕ್ಸಿನ್ಹುವಾ ವಾರ್ತಾ ಸಂಸ್ಥೆ ತಿಳಿಸಿದೆ.

ಬಾನೆತ್ತರಕ್ಕೆ...
ಜಗತ್ತಿನ ಮೊತ್ತ ಮೊದಲ ವಿದ್ಯುತ್ ಚಾಲಿತ ವಿಮಾನವು 3,000 ಮೀಟರ್ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಚಾರ್ಜಿಂಗ್ ಸಮಯ
ಬಿಎಕ್ಸ್1ಇ ವಿದ್ಯುತ್ ಚಾಲಿತ ವಿಮಾನವನ್ನು ಎರಡು ತಾಸಿನಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಸಬಹುದಾಗಿದೆ.

ಗರಿಷ್ಠ ವೇಗ
ಪ್ರಸ್ತುತ ಎಲೆಕ್ಟ್ರಿಕ್ ವಿಮಾನ ಗಂಟೆಗೆ ಗರಿಷ್ಠ 160 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಭಾರ
230 ಕೆ.ಜಿಗಳಷ್ಟು ಭಾರವನ್ನು ಇದರಲ್ಲಿ ತುಂಬಿಕೊಂಡು ಹೋಗಬಹುದಾಗಿದೆ.

ಪ್ರಮಾಣ ಪತ್ರ
ವಿಮಾನ ಹಾರಾಟಕ್ಕೆ ಸಂಬಂಧಪಟ್ಟಂತೆ ಯೋಗ್ಯತಾ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿರುವ ಈ ವಿಮಾನವು 14.5 ಮೀಟರ್ ಉದ್ದದ ರೆಕ್ಕೆಗಳನ್ನು ಹೊಂದಿದೆ.

ವಿನ್ಯಾಸ
ಶೆಗ್ಯಾಂಗ್ ಏರೋಸ್ಪೇಸ್ ವಿಶ್ವವಿದ್ಯಾಲಯ ಮತ್ತು ನೈಋತ್ಯ ಚೀನಾದ ಲಿಯನಿಂಗ್ ಪ್ರಾಂತ್ಯದ ಲಿಯನಿಂಗ್ ಜನರಲ್ ವಿಮಾನಯಾನ ಅಕಾಡೆಮಿ ಜಂಟಿಯಾಗಿ ಬಿಎಕ್ಸ್1ಇ ವಿನ್ಯಾಸವನ್ನು ರಚಿಸಿದೆ.

ವಿತರಣೆ
ಇದರಂತೆ ಮೊದಲೆರಡು ವಿಮಾನಗಳನ್ನು ಲಿಯನಿಂಗ್ ರುಯಿಕ್ಸಿಂಗ್ ಜನರಲ್ ಎವಿಯೇಷನ್ ಕಂಪನಿ ಲಿಮಿಟೆಡ್ ಗೆ ಹಸ್ತಾಂತರಿಸಲಾಗುವುದು. ಇದನ್ನು ಪೈಲಟ್ ತರಬೇತಿ, ಪ್ರವಾಸೋದ್ಯಮ, ಹವಾಮಾನ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಬಳಕೆ ಮಾಡಲಾಗುವುದು.

ಬೆಲೆ
ಪ್ರತಿಯೊಂದು ವಿದ್ಯುತ್ ಚಾಲಿತ ವಿಮಾನದ ನಿರ್ಮಾಣ ವೆಚ್ಚವು ಒಂದು ಕೋಟಿ ರು.ಗಿಂತಲೂ (USD 163,000) ಹೆಚ್ಚು ದುಬಾರಿಯೆನಿಸಿದೆ.

ಒಟ್ಟಿನಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮೇಡ್ ಇನ್ ಚೀನಾ ಅಂದ್ರೆ ನೊ ಗ್ಯಾರಂಟಿ, ನೊ ವಾರಂಟಿ ಎನ್ನುವ ಹಾಗೆ ಚೀನಾದ ಎಲೆಕ್ಟ್ರಿಕ್ ವಿಮಾನ ಯಶ ಸಾಧಿಸಲಿದೆಯೇ ಎಂಬುದೇ ಕಾಡುತ್ತಿರುವ ಪ್ರಶ್ನೆ.


Click it and Unblock the Notifications