ಚೀನಾ ಗಾಜಿನ ಸೇತುವೆ ಎಷ್ಟು ಸುರಕ್ಷಿತ?

By Nagaraja

ಜಗತ್ತಿನ ಅತ್ಯಾಧುನಿಕ ವಿಸ್ಮಯಗಳಲ್ಲಿ ಒಂದಾಗಿರುವ ಚೀನಾದ ಗಾಜಿನ ಸೇತುವೆ ಈಗಾಗಲೇ ಜನಮನ್ನಣೆಗೆ ಪಾತ್ರವಾಗಿದೆ. ಇತ್ತೀಚೆಗಷ್ಟೇ ಚೀನಾ ಗಾಜಿನ ಸೇತುವೆಯ ಭದ್ರತೆಯನ್ನು ಪರಿಶೀಲಿಸುವ ಸಲುವಾಗಿ ಪತ್ರಕರ್ತರೋರ್ವರು ಸುತ್ತಿಗೆಯಿಂದ ಬಲವಾಗಿ ಒಡೆದ ಘಟನೆ ನಡೆದಿತ್ತು.

ಇದಾದ ಬಳಿಕವೀಗ ಕಾರಿನ ಸರದಿ. ಜಗತ್ತಿನ ಪ್ರತಿಷ್ಠಿತ ಸಂಸ್ಥೆಯಾಗಿರುವ ವೋಲ್ವೋ ಎರಡು ಟನ್ ಭಾರದ ಕಾರನ್ನು ಚೀನಾ ಗಾಜಿನ ಸೇತುವೆಯಲ್ಲಿ ಓಡಿಸುವ ಮೂಲಕ ಭದ್ರತೆಯನ್ನು ಖಾತ್ರಿಪಡಿಸಿದೆ.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

ಬಲ್ಲ ಮೂಲಗಳ ಪ್ರಕಾರ 11 ಪ್ರಯಾಣಿಕರನ್ನು ಕುಳ್ಳಿರಿಸಿ ವೋಲ್ವೋ ಎಕ್ಸ್ ಸಿ90 ಕ್ರೀಡಾ ಬಳಕೆಯ ಕಾರು ಚೀನಾ ಗಾಜಿನ ಸೇತುವೆಯ ಭದ್ರತೆಯನ್ನು ಪರಿಶೀಲಿಸಿದೆ.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

ಇನ್ನೇನು ಕೆಲವೇ ದಿನಗಳಲ್ಲಿ ಚೀನಾ ಗಾಜಿನ ಸೇತುವೆ ಲೋಕಾರ್ಪಣೆಯಾಗಲಿರುವಂತೆಯೇ ಸುರಕ್ಷತೆಯನ್ನು ಖಾತ್ರಿಪಡಿಸಲು ಆಯೋಜಕರಿಂದ ಈ ಎಲ್ಲ ಕಸರತ್ತುಗಳು ಮುಂದುವರಿದಿದೆ.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

ಚೀನಾದ ಝಾಂಗ್ಜಿಯಾಂಜಿ ರಾಷ್ಟ್ರೀಯ ಉದ್ಯಾನವನದ (Zhangjiajie Grand Canyon bridge) ಮೇಲ್ಗಡೆಯಲ್ಲಿ ಎರಡು ಬೃಹತ್ ಪರ್ವತ ಶಿಖರಗಳ ನಡುವೆ ಸೇತುವೆಯನ್ನು ಕಟ್ಟಲಾಗಿದೆ.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

ಚೀನಾದ ಹುನಾನ್ ಪ್ರಾಂತ್ಯದ ಝಾಂಗ್ಜಿಯಾಂಜಿ ಎಂಬ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಗಾಜಿನ ಸೇತುವೆಯಾಗಿರುವ ಝಾಂಗ್ಜಿಯಾಂಜಿ ಗ್ರಾಂಡ್ ಕ್ಯಾನಾನ್ ಸೇತುವೆ ನೆಲೆಗೊಂಡಿದೆ.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

ಸಮುದ್ರ ತಲದಿಂದ 900 ಅಡಿ ಮೇಲ್ಗಡೆಯಾಗಿ ಹಾದು ಹೋಗುವ ಪ್ರಸ್ತುತ ಸೇತುವೆ, ಜಗತ್ತಿನ ಅತಿ ಉದ್ದದ ಹಾಗೂ ಎತ್ತರದಲ್ಲಿರುವ ಗ್ಲಾಸ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

0.27 ಮೈಲು (1,410 ಅಡಿ) ಉದ್ದದ ಇಲ್ಲಿನ ಗಾಜಿನ ಸೇತುವೆಯಲ್ಲಿ ಏಕಕಾಲಕ್ಕೆ 800ರಷ್ಟು ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುವುದು.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

ಗಾಜಿನ ಪಾರದರ್ಶಕತೆಯೇ ಸೇತುವೆಯ ಪ್ರಮುಖ ಆಕರ್ಷಣೆಯಾಗಿದೆ. ಇಸ್ರೇಲ್ ವಾಸ್ತುಶಿಲ್ಪಿ ಹೈಮ್ ಡೋಟನ್ (Haim Dotan) ಎಂಬವರು 19 ಅಡಿ ಅಗಲದ ಈ ವಿಸ್ಮಯಕಾರಿ ಗಾಜಿನ ಸೇತುವೆಯ ಸೂತ್ರಧಾರಿಯಾಗಿದ್ದಾರೆ.

ಚೀನಾ ಗಾಜಿನ ಸೇತುವೆಯ ಭದ್ರತೆ ಪರಿಶೀಲಿಸಿದ ವೋಲ್ವೋ ಕಾರು

ಎರಡು ಬದಿಗಳಲ್ಲಿ ಸ್ಟೀಲ್ ಬೀಮ್ ಗಳನ್ನು ಹೊಂದಿರುವ ಸಸ್ಪೆನ್ಷನ್ ವ್ಯವಸ್ಥೆ, ಬದಿಯಲ್ಲಿ ಬೃಹತ್ತಾದ ಕೇಬಲ್ ಗಳನ್ನು ಲಗತ್ತಿಸಲಾಗಿದೆ. ಇದು ಬಲವಾಗಿ ಬೀಸುವ ಗಾಳಿ, ಭೂಕಂಪ ಹಾಗೂ ಹಿಮಪಾತಗಳನ್ನು ಎದುರಿಸುವಷ್ಟು ಸಮರ್ಥವಾಗಿದೆ.

More from DriveSpark

Article Published On: Tuesday, July 5, 2016, 10:22 [IST]
English summary
China proves glass bridge safety using Volvo XC90 SUV
Read more on ಚೀನಾ china
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+