ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

Written By:

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ ಗುರುತರ ಬದಲಾಣೆಗಳಾಗುತ್ತಿದ್ದು, ಚೀನಾದಲ್ಲಿ ವಿಶಿಷ್ಟ ರೈಲೊಂದನ್ನ ಲೋಕಾರ್ಪಣೆ ಮಾಡಲಾಗಿದೆ. ಹೀಗಾಗಿ ಇದನ್ನ ಜಗತ್ತಿನ ಮೊದಲ ಸ್ಮಾರ್ಟ್ ಟ್ರೇನ್ ಎಂದೇ ಕರೆಯಲಾಗುತ್ತಿದೆ.

ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ಕಳೆದ ಜೂನ್‍ನಲ್ಲೇ ಈ ವಿಶೇಷ ರೈಲುನ್ನು ಅನಾವರಣಗೊಳಿಸಲಾಗಿದ್ದು, ಕಳೆದ ವಾರವಷ್ಟೇ ಚೀನಾದ ಹುನಾನ್ ಪ್ರಾಂತ್ಯದ ಝಝೌನಲ್ಲಿ ಪ್ರಯೋಗಿಕ ಸಂಚಾರ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ಭವಿಷ್ಯ ಸಾರಿಗೆ ವ್ಯವಸ್ಥೆ ವ್ಯವಸ್ಥಿತವಾಗಿ ಬಳಸಿಕೊಳ್ಳುವ ಬಗ್ಗೆ ಚೀನಾ ಮಹತ್ವದ ಯೋಜನೆಗೆ ಚಾಲನೆ ನೀಡಿದೆ.

ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ಆಟೋನಾಮಸ್ ರೇಲ್ ರ‍್ಯಾಪಿಡ್ ಟ್ರಾನ್ಸಿಟ್ (ಎಆರ್‍ಟಿ) ಎಂದು ಕರೆಯಲ್ಪಡುವ ಈ ರೈಲು ಮೂರು ಬೋಗಿಗಳನ್ನು ಹೊಂದಿದ್ದು, ಸುಮಾರು 300 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು. ಜೊತೆಗೆ ಪ್ರತಿಗಂಟೆಗೆ ಗರಿಷ್ಠ 70 ಕಿ.ಮೀ ವೇಗದಲ್ಲಿ ಈ ರೈಲು ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ನಗರದ ಟ್ರಾಫಿಕ್ ಮಧ್ಯೆಯೂ ಸಂಚಾರ ಮಾಡಲು ನೆರವಾಗುವಂತೆ ರೈಲನ್ನು ವಿನ್ಯಾಸಗೊಳಿಸಲಾಗಿದ್ದು, ಕೇವಲ 10 ನಿಮಿಷ ಚಾರ್ಜ್ ಮಾಡಿದ್ರೆ 25 ಕಿಲೋಮೀಟರ್‍ವರೆಗೆ ರೈಲನ್ನು ಓಡಿಸಬಹುದಂತೆ ಎಂದು ಹೇಳಲಾಗಿದೆ.

Recommended Video - Watch Now!
[Kannada] TVS Jupiter Classic Launched In India - DriveSpark
ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ಇದಲ್ಲದೇ ಈ ಹೈಬ್ರಿಡ್ ರೈಲು ಆಧುನಿಕ ಟ್ರಾಮ್ ಮತ್ತು ಬಸ್‍ಗಳ ಅನುಕೂಲತೆಗಳ ಸಂಯೋಜನೆಯಾಗಿದ್ದು, ನಗರದ ರಸ್ತೆಗಳಲ್ಲಿ ಬಿಳಿ ಬಣ್ಣದ ಪೇಂಟ್‍ನಿಂದ ಗೆರೆಗಳಂತೆ ಮಾರ್ಕ್ ಮಾಡಲಾದ ವರ್ಚುವಲ್ ಹಳಿ ಮೇಲೆಯೇ ಈ ರೈಲು ಚಲಿಸುತ್ತದೆ.

ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ಕಡಿಮೆ ವೆಚ್ಚದ ಸಾರಿಗೆ

ಇನ್ನು ಚೀನಾ ಪರಿಚಯಿಸಿರುವ ಸ್ಮಾರ್ಟ್ ಟ್ರೈನ್‌ಗಳು ಕಡಿಮೆ ವೆಚ್ಚದ ವ್ಯವಸ್ಥೆಯಾಗಿದ್ದು, ಟ್ರ್ಯಾಕ್‍ಗಳ ಮೇಲೆ ಚಲಿಸುವ ಅರ್ಬನ್ ರೈಲು ಅಥವಾ ಟ್ರಾಮ್‍ಗೆ ಹೋಲಿಸಿದರೆ ಈ ವರ್ಚುವಲ್ ರೈಲ್ವೆ ವ್ಯವಸ್ಥೆಯ ನಿರ್ಮಾಣಕ್ಕೆ ತಗುಲುವ ವೆಚ್ಚ ತುಂಬಾ ಕಡಿಮೆಯಿದೆ ಎಂದು ಹೇಳಬಹುದು.

ತಪ್ಪದೇ ಓದಿ-100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ..!!

ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ಅಲ್ಲದೇ ಚೀನಾದಲ್ಲಿ 1 ಕಿ.ಮೀ ಟ್ರಾಮ್ ಹಳಿ ನಿರ್ಮಾಣಕ್ಕೆ 150ರಿಂದ 200 ಮಿಲಿಯನ್ ಯುವಾನ್ (ಅಂದಾಜು 145 ರಿಂದ 195 ಕೋಟಿ ರೂ.) ವೆಚ್ಚವಾಗುತ್ತಲ್ಲದೇ, ಹೈ ಟೆಕ್ ವರ್ಚುವಲ್ ಲೈನ್‍ಗೆ 50 ರಿಂದ 100 ಮಿಲಿಯನ್ ಯುವಾನ್(ಅಂದಜು 48 ಕೋಟಿಯಿಂದ 97 ಕೋಟಿ ರೂ) ವೆಚ್ಚವಾಗುತ್ತದೆ.

ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ಸೆನ್ಸಾರ್ ಆಧರಿಸಿ ಚಾಲನೆ

ಅಂದಹಾಗೆ ಚೀನಾದಲ್ಲಿ ಸಿದ್ಧಗೊಂಡಿರುವ ಈ ವಿಶೇಷ ರೈಲು ಪಾದಚಾರಿ ಮಾರ್ಗವನ್ನ ಗುರುತಿಸುತ್ತದೆ. ಜೊತೆಗೆ ಪ್ರಯಾಣದ ಮಾಹಿತಿ ಸಂಗ್ರಹಿಸಲು ಅನೇಕ ಸೆನ್ಸರ್ ಗಳನ್ನು ಹೊಂದುವ ಮೂಲಕ ಅಪಘಾತದ ಮುನ್ಸೂಚನೆಗಳನ್ನು ನೀಡಬಲ್ಲದಾಗಿದೆ.

ಚೀನಾದಲ್ಲಿ ರಸ್ತೆಗಿಳಿದ ಜಗತ್ತಿನ ಮೊದಲ ಸ್ಮಾರ್ಟ್ ಟ್ರೈನ್

ಚೀನಾದಲ್ಲಿ ಪ್ರಸ್ತುತವಾಗಿ ಇಂತಹ 3 ಎಲೆಕ್ಟ್ರಿಕ್ ರೈಲುಗಳನ್ನ ಝುಜೌ ನಲ್ಲಿ ಟೆಸ್ಟ್ ಮಾಡಲಾಗುತ್ತಿದ್ದು, ಕೇವಲ 4 ನಿಲ್ದಾಣಗಳೊಂದಿಗೆ ಸುಮಾರು 3.1 ಕಿಮೀ ದೂರ ಮಾತ್ರ ಸಂಚಾರ ಮಾಡುತ್ತಿದೆ. ಹೀಗಾಗಿ ಈ ಸ್ಮಾಟ್ ಟ್ರೈನ್ ಮುಂದಿನ ವರ್ಷದಿಂದ ನಿಯಮಿತ ಸೇವೆಗೆ ಬರಲಿದೆ ಎನ್ನಲಾಗಿದೆ.

Trending On DriveSpark Kannada:

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

English summary
Read in Kannada: World's First Smart Railway Trail Runs in Hunan Province Zhuzhou City China. Click for Details..
Story first published: Friday, November 3, 2017, 16:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark