ಹಣ ಹೆಚ್ಚಾದ್ರೆ ಹುಚ್ಚುತನ ಫ್ರೀ! 44 ನೇ ಮಹಡಿಗೆ ಬಹುಕೋಟಿ ಕಾರು... ಕಾರಣ ತಿಳಿದು ನಗಬೇಡಿ!

ಪ್ರಪಂಚದ ಶ್ರೀಮಂತ ವ್ಯಕ್ತಿಗಳ ಕೆಲ ಹುಚ್ಚು ಕಥೆಗಳನ್ನು ನೀವು ಕೇಳಿರಬೇಕು. ಹಣ ಹೆಚ್ಚಾದಾಗ ಖರ್ಚು ಮಾಡುವುದೇಗೆ ಎಂಬುದು ತಿಳಿಯದೇ ಮನಬಂದಂತೆ ವರ್ತಿಸುತ್ತಾರೆ. ಅಂತಹದ್ದೇ ಘಟನೆ ಇತ್ತೀಚೆಗೆ ವರದಿಯಾಗಿದೆ. ಇದನ್ನು ಸುಲಭವಾಗಿ ನಂಬಲು ಅಸಾಧ್ಯವಾದ್ರೂ ನಿಜ. ಚೀನಾದ ಶ್ರೀಮಂತ ವ್ಯಕ್ತಿಯೊಬ್ಬ ರೋಲ್ಸ್ ರಾಯ್ಸ್ ಕಾರನ್ನು ತನ್ನ 44 ನೇ ಮಹಡಿಗೆ ತರಿಸಿಕೊಂಡಿದ್ದಾನೆ.

ಈ ಕುರಿತ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ, ಚೀನಾದ ಫುಜಿಯಾನ್‌ನಲ್ಲಿರುವ ಚೀನೀ ಮಿಲಿಯನೇರ್ ತನ್ನ ಎಲ್ಲ ಸಹವರ್ತಿಗಳನ್ನು ಮೀರಿಸಲು ಹುಚ್ಚುತನದ ಕೆಲಸವನ್ನು ಮಾಡಿದ್ದಾನೆ. ತನ್ನ ಪೆಂಟ್‌ಹೌಸ್‌ನ 44 ನೇ ಮಹಡಿಗೆ ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಅನ್ನು ಕ್ರೇನ್ ಮೂಲಕ ಮೇಲಕ್ಕೆ ತರಿಸಿಕೊಂಡಿದ್ದಾನೆ. ಈ ಕಾರ್ಯಕ್ಕೆ ಖರ್ಚಾದ ಹಣದಿಂದ ಮತ್ತೊಂದು ಕಾರು ಖರೀದಿಸಬಹುದಿತ್ತು ಎಂದು ಮೂಲಗಳು ತಿಳಿಸಿವೆ.

china-richest-man-brought-a-multicrore-car-to-44th-floor

ಮತ್ತೊಂದೆಡೆ ತನ್ನ ಬಹುಕೋಟಿ ಕಾರಿಗೆ ಪಾರ್ಕಿಂಗ್ ಸಮಸ್ಯೆಯಿದ್ದ ಕಾರಣ ಹೀಗೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದುಕೊಂಡಷ್ಟು ಸುಲಭವಾಗಿ ಕಾರನ್ನು ಈ ಎತ್ತರಕ್ಕೆ ಸಾಗಿಸುವುದು ಅಷ್ಟು ಸುಲಭವಲ್ಲ. 44 ನೇ ಮಹಡಿಗೆ ಬರೋಬ್ಬರಿ 2.5 ಟನ್ ತೂಕದ ಐಷಾರಾಮಿ ಕಾರನ್ನು ಸಾಗಿಸುವುದು ಸವಾಲಿನ ಕೆಲಸವಾಗಿದ್ದು, ತುಸು ಯಾಮಾರಿದ್ರು 8 ಕೋಟಿ ರೂ. ಕಾರು ಕೆಳಗೆ ಬಿದ್ದು ನಜ್ಜುಗುಜ್ಜಾಗುತ್ತದೆ.

ಪಕ್ಕಾ ಪ್ಲಾನಿಂಗ್: ಕಾರನ್ನು 44 ನೇ ಮಹಡಿಗೆ ಸಾಗಿಸಲು ಮಾಲೀಕ ಸ್ಥಳೀಯ ಹೆಸರಾಂತ ಎಂಜಿನಿಯರ್‌ಗಳನ್ನು ನೇಮಿಸಿಕೊಂಡಿದ್ದಾನೆ. ಕಾರ್‌ಗೆ ಒಂದು ಕಬ್ಬಿಣದ ಪಂಜರವನ್ನು ನಿರ್ಮಿಸಿ ಸಾಗಿಸಲು ಕೋಟ್ಯಾಂತರ ರೂ. ಪಾವತಿಸಿರುವುದಾಗಿ ವರದಿಯಾಗಿದೆ. ಕ್ರೇನ್‌ ಮೂಲಕ ಮೂರು ಅತ್ಯಂತ ಬಲವಾದ ಮತ್ತು ಬಾಳಿಕೆ ಬರುವ ಕೇಬಲ್‌ಗಳನ್ನು ಬಳಸಿ ಮೇಲಕ್ಕೆತ್ತಲಾಗಿದೆ.

china-richest-man-brought-a-multicrore-car-to-44th-floor

ನಾವು ಇದನ್ನು ಮಾಡಲು ಅತ್ಯಂತ ಎಚ್ಚರಿಕೆಯಿಂದ ಸಾಕಷ್ಟು ಲೆಕ್ಕಾಚಾರಗಳು ಮತ್ತು ಪ್ರಯೋಗಗಳನ್ನು ಮಾಡಿದ್ದೆವು. ಆ ಬಳಿಕವಷ್ಟೇ ಕ್ರೇನ್ ಮೂಲಕ 44 ನೇ ಮಹಡಿಗೆ ಕಾರನ್ನು ಕೊಂಡೊಯ್ಯಲಾಯಿತು ಎಂದು ಎಂಜಿನಿಯರಿಂಗ್ ಕಂಪನಿ ಹೇಳಿದೆ. ಕೊನೆಗೂ ಯಾವುದೇ ಅಡೆ ತಡೆಗಳಿಲ್ಲದೇ ಕಾರನ್ನು ತನ್ನ ಮಹಿಡಿಗೆ ತರೆಸಿಕೊಂಡು ತನ್ನ ಬಾಲ್ಕನಿಯಲ್ಲಿ ಮಾಲೀಕ ಓಡಿಸಿದ್ದಾನೆ.

ಎಲ್ಲರಿಗೆ ಈಗ ಓಂದು ಪ್ರಶ್ನೆ ಕಾಡಬಹುದು. ಆತ ಮರಳಿ ರಸ್ತೆಯಲ್ಲಿ ಕಾರನ್ನು ಓಡಿಸಬೇಕೆಂದರೆ ಏನ್‌ ಮಾಡ್ತಾನೆ? ಮತ್ತೊಮ್ಮೆ ಹಣ ವ್ಯಯಿಸಿ ಅದೇ ಎಂಜಿನಿಯರಿಂಗ್ ತಂಡವನ್ನು ಕರೆಸಿ ಕ್ರೇನ್ ಮೂಲಕ ಕೆಳಗೆ ಇಳಿಸಬೇಕಷ್ಟೆ. ಈತನ ವರ್ತನೆಗೆ ಸ್ಥಳೀಯರು ಕೋಪಗೊಂಡಿದ್ದಾರೆ. ಎಷ್ಟೇ ಹಣವಿದ್ದರೂ ಇಂತಹ ಮೂರ್ಖತನದಿಂದ ವರ್ತಿಸುವವರನ್ನು ಸಮಾಜ ದ್ವೇಶಿಸುವುದರಲ್ಲಿ ಯಾವುದೇ ತಪ್ಪಿಲ್ಲ.

ಒಂದು ವೇಳೆ ಆತನಿಗೆ ನಿಜವಾಗಿಯೂ ಪಾರ್ಕಿಂಗ್ ಸಮಸ್ಯೆ ಇದ್ದಿದ್ದೇ ಆದರೆ, ಖರ್ಚಾದ ಹಣದಲ್ಲೇ ಹೊಸ ಗ್ಯಾರೆಜ್ ನಿರ್ಮಿಸಿ ಅದರಲ್ಲಿ ಇಡಬಹುದಿತ್ತು. ಆಸ್ಟ್ರೇಲಿಯಾದ ಉದ್ಯಮಿಯೊಬ್ಬರು ಇತ್ತೀಚೆಗೆ 57ನೇ ಮಹಡಿಯಲ್ಲಿರುವ ತನ್ನ ಪೆಂಟ್‌ಹೌಸ್‌ಗೆ $2 ಮಿಲಿಯನ್ ಮೆಕ್‌ಲಾರೆನ್ ಅನ್ನು ಸಾಗಿಸಲು ಅದೇ ಚಟುವಟಿಕೆಯನ್ನು ಮಾಡಿದ ಕೇವಲ ಒಂದು ತಿಂಗಳ ನಂತರ ಈ ಘಟನೆ ಸಂಭವಿಸಿದೆ.

ಈ ಶ್ರೀಮಂತನ ಹುಚ್ಚುತನಕ್ಕೆ ನೀವೇನಂತೀರಿ? ಕಮೆಂಟ್‌ನಲ್ಲಿ ತಿಳಿಸಿ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

Article Published On: Monday, July 24, 2023, 13:45 [IST]
English summary
China richest man brought a multicrore car to 44th floor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+