ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಚೀನಾ ಶುಕ್ರವಾರ ತನ್ನ ಮೊದಲ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆಯನ್ನು ಹಿಮಾಲಯದ ಬಳಿಯಿರುವ ಟಿಬೆಟ್‌ನಲ್ಲಿ ಆರಂಭಿಸಿದೆ. ಈ ರೈಲಿನ ಮೂಲಕ ಟಿಬೆಟ್‌ನ ರಾಜಧಾನಿ ಲಾಸಾ ಹಾಗೂ ನೈಂಗ್ಚಿ ನಗರಗಳು ಸಂಪರ್ಕ ಸಾಧಿಸಲಿವೆ.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ನೈಂಗ್ಚಿ ಅರುಣಾಚಲ ಪ್ರದೇಶದ ಬಳಿಯಿರುವ ಚೀನಾದ ಗಡಿ ಪ್ರದೇಶವಾಗಿದೆ. ವರದಿಗಳ ಪ್ರಕಾರ, ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ) 2014ರಲ್ಲಿ 435 ಕಿ.ಮೀ ಉದ್ದದ ಲಾಸಾ-ನೈಂಗ್ಚಿ ರೈಲ್ವೆ ಮಾರ್ಗದ ಕಾಮಗಾರಿಯನ್ನು ಆರಂಭಿಸಿತು.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಈ ಬುಲೆಟ್ ರೈಲು ಈ ಮಾರ್ಗದಲ್ಲಿ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಬುಲೆಟ್ ರೈಲಿನ ಮೂಲಕ ಲಾಸಾದಿಂದ ನೈಂಗ್ಚಿಯನ್ನು 3.5 ಗಂಟೆಗಳಲ್ಲಿ ತಲುಪಬಹುದು. ಈ ರೈಲ್ವೆ ಮಾರ್ಗದ 90%ನಷ್ಟು ಮಾರ್ಗವನ್ನು ಸಮುದ್ರ ಮಟ್ಟದಿಂದ 3000 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನ್ಹುವಾ ಪ್ರಕಾರ, ಈ ರೈಲ್ವೆ ಮಾರ್ಗವು ಟಿಬೆಟ್‌ನ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಹೈಸ್ಪೀಡ್ ರೈಲ್ವೆ ಮಾರ್ಗವಾಗಿದೆ.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಮೂಲಗಳ ಪ್ರಕಾರ ಟಿಬೆಟ್ ಪ್ರಾಂತ್ಯದಲ್ಲಿ ಸಂಪರ್ಕ ಸಾಧಿಸುವುದೇ ಈ ರೈಲ್ವೆ ಮಾರ್ಗ ನಿರ್ಮಾಣದ ಮುಖ್ಯ ಉದ್ದೇಶವಾಗಿದೆ. ಟಿಬೆಟ್ ಹಾಗೂ ಅರುಣಾಚಲ ಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಪೂರ್ಣಗೊಂಡಿರುವ ಚೀನಾದ ಕೆಲವು ಪ್ರಮುಖ ಯೋಜನೆಗಳಲ್ಲಿ ಲಾಸಾ-ನೈಂಗ್ಚಿ ರೈಲ್ವೆ ಮಾರ್ಗವೂ ಸಹ ಸೇರಿದೆ.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಕಳೆದ ತಿಂಗಳು ಚೀನಾ ಯಾರ್ಲುಂಗ್ ಜಾಂಗ್ಬೊ ನದಿ (ಬ್ರಹ್ಮಪುತ್ರ) ಬಳಿ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿತು. ಈ ರೈಲ್ವೆ ಮಾರ್ಗವು ಅರುಣಾಚಲ ಪ್ರದೇಶದ ಗಡಿ ಬಳಿ ಚೀನಾ ನಿರ್ಮಿಸಿದ ಎರಡನೇ ಪ್ರಮುಖ ಮಾರ್ಗವಾಗಿದೆ.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಲಾಸಾ-ನೈಂಗ್ಚಿ ರೈಲು ಮಾರ್ಗವು ಎರಡು ಪ್ರಾಂತೀಯ ರಾಜಧಾನಿಗಳನ್ನು ಸಂಪರ್ಕಿಸುವ ಸಿಚುವಾನ್-ಟಿಬೆಟ್ ರೈಲ್ವೆ ಮಾರ್ಗದ ಒಂದು ಭಾಗವಾಗಿದೆ. ಚೀನಾದ ಮಾಧ್ಯಮಗಳ ಪ್ರಕಾರ, ಈ ರೈಲ್ವೆ ಮಾರ್ಗವನ್ನು ರಾಷ್ಟ್ರೀಯ ಏಕತೆಯ ರಕ್ಷಣೆಯಲ್ಲಿ ಒಂದು ದೊಡ್ಡ ಹೆಜ್ಜೆ ಎಂದು ಬಣ್ಣಿಸಲಾಗಿದೆ.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಈ ರೈಲು ಮಾರ್ಗವು ಪಶ್ಚಿಮ ಪ್ರದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಪ್ರಮುಖ ಹೆಜ್ಜೆ ಎಂದು ವಿವರಿಸಲಾಗಿದೆ. ಭಾರತವು ತೀವ್ರವಾಗಿ ವಿರೋಧಿಸುತ್ತಿದ್ದರೂ ಸಹ ಚೀನಾ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಹೇಳಿ ಕೊಳ್ಳುತ್ತಿದೆ.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಭಾರತ-ಚೀನಾ ನಡುವೆ 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಗೆ ಸಂಬಂಧಿಸಿದಂತೆ ಗಡಿ ವಿವಾದವಿದೆ. ಆಗಾಗ್ಗೆ ಭಾರತ-ಚೀನಾ ನಡುವೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚಕಮಕಿ ನಡೆಯುತ್ತಲೇ ಇರುತ್ತದೆ.

ಭಾರತದ ಗಡಿ ಬಳಿ ಎಲೆಕ್ಟ್ರಿಕ್ ಬುಲೆಟ್ ರೈಲು ಸೇವೆ ಆರಂಭಿಸಿದ ಚೀನಾ

ಕ್ಸಿನ್ಹುವಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾರ್ಯತಂತ್ರ ಸಂಸ್ಥೆಯ ಸಂಶೋಧನಾ ವಿಭಾಗದ ನಿರ್ದೇಶಕ ಕಿಯಾನ್ ಫೆಂಗ್ ಈ ಹಿಂದೆ ಗ್ಲೋಬಲ್ ಟೈಮ್ಸ್ ದಿನಪತ್ರಿಕೆಗೆ ಹೇಳಿಕೆ ನೀಡಿ, ಭಾರತ-ಚೀನಾ ಗಡಿಯಲ್ಲಿ ಬಿಕ್ಕಟ್ಟಿನ ಸನ್ನಿವೇಶ ಉಂಟಾದಲ್ಲಿ ಚೀನಾಗೆ ಕಾರ್ಯತಂತ್ರದ ವಸ್ತುಗಳನ್ನು ಪೂರೈಸಲು ಈ ರೈಲಿನಿಂದ ಸಹಾಯವಾಗಲಿದೆ ಎಂದು ತಿಳಿಸಿದ್ದರು.

ಗಮನಿಸಿ: ಕೊನೆಯ ಮೂರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
China starts electric bullet train service near Indian border. Read in Kannada.
Story first published: Sunday, June 27, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X