ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಚೀನಾದ ಆಟೋಮೊಬೈಲ್ ಕಂಪನಿಯಾದ ಗೀಲಿ ಗ್ರಾಹಕರ ಜೊತೆಗೆ ನೇರ ಸಂಪರ್ಕವನ್ನು ಹೊಂದದೇ, ಗ್ರಾಹಕರ ಮನೆ ಬಾಗಿಲಿಗೇ ಕಾರುಗಳನ್ನು ತಲುಪಿಸುವ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯನ್ನು ಚೀನಾದಲ್ಲಿ ಜಾರಿಗೆ ತಂದಿದೆ.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಈ ಹೊಸ ವಿತರಣಾ ವ್ಯವಸ್ಥೆಗೆ ಗೀಲಿ ಕಂಪನಿಯು ಡ್ರೋನ್ ಬಳಸಲಿದೆ. ಡೆಲಿವರಿ ಮಾಡಲಾಗುವ ಕಾರಿನ ಕೀಯನ್ನು ಡ್ರೋನ್ ಮೂಲಕ ತಲುಪಿಸಲಾಗುತ್ತದೆ. ಅಂದ ಹಾಗೆ ಗೀಲಿ ಕಂಪನಿಯ ಈ ಉಪಕ್ರಮಕ್ಕೆ ಮುಖ್ಯ ಕಾರಣ ಕರೋನಾ ವೈರಸ್.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಚೀನಾದ ವುಹಾನ್‌ ನಗರದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಪತ್ತೆಯಾದ ಈ ವೈರಸ್ ಎಲ್ಲ ದೇಶಗಳಿಗೂ ಹರಡಿದೆ. ವೇಗವಾಗಿ ಹರಡುವ ಈ ವೈರಸ್ ನಿಂದಾಗಿ ಇಡೀ ಜಗತ್ತು ತತ್ತರಿಸಿದೆ. ಇದರಿಂದ ಆಟೋಮೊಬೈಲ್ ಉದ್ಯಮವು ಹೊರತಾಗಿಲ್ಲ.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಫೆಬ್ರವರಿ 10 ರಂದು, ಗೀಲಿ ಕಂಪನಿಯು ತನ್ನ ಗ್ರಾಹಕರಿಗೆ ಕಾರುಗಳನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡುವ ಅವಕಾಶವನ್ನು ನೀಡಿತ್ತು. ಇದರಲ್ಲಿ ಗ್ರಾಹಕರು ಆನ್‌ಲೈನ್ ಹಣಕಾಸು, ಇನ್ಶೂರೆನ್ಸ್ ಸೇರಿದಂತೆ ತಮ್ಮ ಕಾರಿನಲ್ಲಿ ತಮಗೆ ಬೇಕಾಗಿರುವ ಮಾರ್ಪಾಡುಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಹೆಚ್ಚುವರಿ ಆಯ್ಕೆಯಾಗಿ, ಹೋಂ ಡೆಲಿವರಿಯನ್ನು ನೀಡಲಾಗಿತ್ತು. ಕರೋನಾ ವೈರಸ್‌ ಹಾವಳಿ ಹೆಚ್ಚಾಗಿರುವ ಕಾರಣಕ್ಕೆ ಹೋಂ ಡೆಲಿವರಿ ಕಡ್ಡಾಯವಾಗಿದೆ. ಗೀಲಿ ಈ ಹೋಂ ಡೆಲಿವರಿಯನ್ನು ಡ್ರೋನ್ ಮೂಲಕ ನೀಡುತ್ತಿದೆ.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಚೀನಾದಲ್ಲಿ ಇನ್ನೂ ಮುಂದೆ ಗೀಲಿ ಕಂಪನಿಯ ವಾಹನಗಳನ್ನು ಖರೀದಿಸಲು ಬಯಸುವವರು ಕಂಪನಿಯ ಶೋರೂಂಗಳಿಗೆ ಭೇಟಿ ನೀಡಿ ಡೆಲಿವರಿ ಪಡೆಯುವ ಅವಶ್ಯಕತೆಯಿಲ್ಲ. ಗ್ರಾಹಕರು ಆಯ್ಕೆ ಮಾಡುವ ಕಾರು ಅವರ ಮನೆ ಬಾಗಿಲಿಗೆ ಬರುತ್ತದೆ.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಫೆಬ್ರವರಿಯಲ್ಲಿ ಪರಿಚಯಿಸಲಾದ ಗೀಲಿ ಕಂಪನಿಯ ಈ ಹೊಸ ವ್ಯವಸ್ಥೆಗೆ ಈಗಾಗಲೇ 10,000 ಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. 1,10,000ಕ್ಕೂ ಹೆಚ್ಚು ಗ್ರಾಹಕರು ಗೀಲಿ ಕಂಪನಿಯ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಹೋಂ ಡೆಲಿವರಿಯನ್ನು ನಂತರ ಸ್ಥಳೀಯ ಡೀಲರ್ ಗಳಿಗೆ ಕಳುಹಿಸಲಾಗುತ್ತದೆ. ಹೋಂ ಡೆಲಿವರಿ ಮಾಡಲಾಗುವ ವಾಹನಗಳ ಮೇಲೆ ಆಂಟಿಸೇಪ್ಟಿಕ್ ಗಳನ್ನು ಸಿಂಪಡಿಸಿ ನಂತರ ಗ್ರಾಹಕರಿಗೆ ವಿತರಿಸಲಾಗುತ್ತದೆ. ಇದಕ್ಕಾಗಿ ಗೀಲಿ ಕಂಪನಿಯು ಡೀಲರ್ ಗಳಿಗೆ ಆರ್‌ಎಂ 370 ಮಿಲಿಯನ್ ಗಳನ್ನು ನೀಡಿದೆ.

ಕಾರುಗಳ ಹೋಂ ಡೆಲಿವರಿ ನೀಡಲಿದೆ ಈ ಕಂಪನಿ

ಇದರಿಂದಾಗಿ ಕಂಪನಿಯು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಿರುವ ಕಾರುಗಳು ಸ್ವಚ್ವವಾಗಿರಲಿವೆ. ಇಂತಹ ಕಾರುಗಳಲ್ಲಿ ಕ್ಯಾಬಿನ್ ಏರ್ ಹಾಗೂ ಆಂಟಿಮೈಕ್ರೊಬಿಯಲ್ ಗಳನ್ನು ಬಳಸಲಾಗುತ್ತದೆ. ಇಂತಹ ಆಂಟಿಬಯೊಟಿಕ್ ಫಿಲ್ಟರ್ ಗಳನ್ನು ಹೊಂದಿದ ಗೀಲಿ ಕಂಪನಿಯ ಮೊದಲ ವಾಹನವನ್ನು ಕಳೆದ ತಿಂಗಳು ಅನಾವರಣಗೊಳಿಸಲಾಗಿದೆ.

Most Read Articles

Kannada
English summary
Chinese car brand Geely delivers keys through a drone based contactless system. Read in Kannada.
Story first published: Friday, March 27, 2020, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X