ಚೀನಾ ಬ್ರಾಂಡ್ ಅಂದ್ರೆ ನೊ ಗ್ಯಾರಂಟಿ, ನೊ ವಾರಂಟಿ!
ಚೀನಾ ಐಟೆಮ್ ಎಂದಾಕ್ಷಣ ಅಂತಹ ಬ್ರಾಂಡ್‌ಗಳನ್ನು ಖರೀದಿಸಲು ಜನರು ಹಿಂದು ಮುಂದು ನೋಡುವುದು ಸಹಜ. ಯಾಕೆಂದರೆ ಆಧುನಿಕ ಜಗತ್ತಿನಲ್ಲಿ ಕಂಪನಿಗಳ ಬ್ರಾಂಡ್ ಹೆಸರುಗಳು ಬೆಲೆಬಾಳುವ ಆಸ್ತಿಯಾಗಿದೆ. ಇದಕ್ಕಾಗಿಯೇ ಚೀನಾ ಉತ್ಪಾದಿತ ಉತ್ಪನ್ನಗಳು 'ನೊ ಗ್ಯಾರಂಟಿ, ನೊ ವಾರಂಟಿ'ಗಳೆಂಬ ವಿಚಾರಗಳು ಮನದಲ್ಲಿ ಹೊಳೆಯುವುದರಿಂದ ಅಲ್ಲಿನ ಬ್ರಾಂಡ್‌ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಅಷ್ಟಕ್ಕೂ ಇಲ್ಲಿ ಚೀನಾ ಹೆಸರನ್ನು ಪದೇ ಪದೇ ಉಲ್ಲೇಖಿಸಲು ಕಾರಣ ಏನೆಂದರೆ, ನೂತನ ತಂತ್ರಜ್ಞಾನ ಅವಿಷ್ಕಾರ ಮಾಡುವುದರಲ್ಲಿ ಒಂದು ಹೆಜ್ಜೆ ಮುಂದಿರುವ ಚೀನಾ ಇದೀಗ ಹೊಸ ಟ್ರಿಕ್ ಕಂಡುಹಿಡಿದಿದೆ.
ಕೆಲವು ವಾಹನ ಚಾಲಕರಿಗೆ ಸೀಟ್ ಬೆಲ್ಟ್ ಧರಿಸುವುದಂತೂ ತುಂಬಾನೇ ಕಿರಿಕಿರಿಯನ್ನುಂಟು ಮಾಡುತ್ತದೆ. ಆದರೆ ಟ್ರಾಫಿಕ್ ಕಟ್ಟುನಿಟ್ಟಿನ ನಿಯಮದಿಂದಾಗಿ ಸುರಕ್ಷಿತ ಸೀಟ್ ಬೆಲ್ಟ್ ಧರಿಸುವಲ್ಲಿ ಪ್ರೇರಿತರಾಗುತ್ತಾರೆ.
ಆದರೆ ಇಲ್ಲಿದೆ ನೋಡಿ ಚೀನಾದ ಹೊಸ ಟೆಕ್ನಿಕ್- ಟಿ-ಶರ್ಟ್ ಉತ್ಪನ್ನಗಳಲ್ಲಿ ಸೀಟ್ ಬೆಲ್ಟ್ ಪಟ್ಟಿ (ಕೆಳಗಡೆ ತೋರಿಸಿರುವಂತೆಯೇ) ಬಳಸುವ ಮೂಲಕ ದಂಡನೆಯಿಂದ ಪಾರಾಗುತ್ತಾರೆ. ಮೊದಲ ನೋಟಕ್ಕೆ ಹೊರಗಿನಿಂದ ನೋಡುವವರಿಗೆ ಇದು ಸೀಟ್ ಬೆಲ್ಟ್ ತರಹನೇ ಕಾಣಿಸಿಕೊಳ್ಳುತ್ತಿದೆ.

ಕಾರು ಚಾಲಕ ಸೇರಿದಂತೆ ಎದುರುಗಡೆಯ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕಾಗಿರುವುದು ಬಹುತೇಕ ದೇಶಗಳಲ್ಲಿ ಕಡ್ಡಾಯವಾಗಿದೆ. ಆದರೆ ಆಲಸೀ ಚೀನಿ ಚಾಲಕರು, ಸೀಟ್ ಬೆಲ್ಟ್ ಧರಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಇಂತಹ ಟಿ-ಶರ್ಟ್ ಮಾದರಿಯನ್ನು ಅನುಸರಿಸುತ್ತಾರೆ.

ಈ ಮೂಲಕ ಟ್ರಾಫಿಕ್ ಪೋಲೀಸರ ದಂಡನೆಯಿಂದ ಪಾರಾಗಲು ಕಪ್ಪು ಪಟ್ಟಿ ಹೊಂದಿರುವ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ. ಇದರಿಂದ ಪೊಲೀಸರು ಸುಲಭವಾಗಿ ಮೋಸ ಹೋಗುತ್ತಾರೆ.

ಚೀನಾದಲ್ಲಿ ಸಮರ್ಪಕವಾಗಿ ಸೀಟ್ ಬೆಲ್ಟ್ ಧರಿಸದೇ ಇರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಹಾಗಿದ್ದರೂ ಸೀಟ್ ಬೆಲ್ಟ್ ಅಗತ್ಯದ ಬಗ್ಗೆ ಚಾಲಕರು ಇನ್ನು ಎಚ್ಚೆತ್ತುಕೊಂಡಿಲ್ಲ. ಒಬ್ಬ ಚಾಲಕ ಹೇಳುವ ಪ್ರಕಾರ, ಇದು ಉಪಯುಕ್ತವಾಗಿದ್ದು, ಮೊದಲೇ ತಿಳಿದಿರಬೇಕಾಗಿತ್ತು ಎಂದಿದ್ದಾರೆ.

ಇದೀಗ ಎಚ್ಚೆತ್ತುಕೊಂಡಿರುವ ಚೀನಾ ಪೊಲೀಸ್, ಅಂತರ್ಜಾಲದಲ್ಲಿ ಮಾರಾಟವಾಗುತ್ತಿರುವ ಇಂತಹ ಟಿ-ಶರ್ಟ್‌ಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿವೆ. ಅಂದ ಹಾಗೆ ಮುಂದಿನ ದಿನಗಳಲ್ಲಿ ಭಾರತದಲ್ಲೂ ಇದು ಬಳಕೆಯಾದರೆ ಅಚ್ಚರಿಯೇನಿಲ್ಲ.


Click it and Unblock the Notifications








